ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ : ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿ ಸೀಜ್‌ ಮಾಡಲು ಕ್ರಮ ಕೈಗೊಳ್ತೇವೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಆಸ್ತಿ ಸೀಜ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಡಿಜಿಪಿ ಅಲೋಕಕುಮಾರ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್‌ ಮುಖಾಂತರ ವಾರೆಂಟ್‌ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತೇವೆ. … Continued

ಶಿರಸಿ: ಕರಡಿ ದಾಳಿಯಿಂದ ಉಪ್ಪಾಗೆ ಹಣ್ಣು ಸಂಗ್ರಹಕ್ಕೆ ಕಾಡಿಗೆ ಹೋಗಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

ಶಿರಸಿ: ಕರಡಿ ದಾಳಿಗೆ ವ್ಯಕ್ತಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಸುಂಡಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕರಡಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯನ್ನು ಓಂಕಾರ ಜೈನ್(52) ಎಂದು ಗುರುತಿಸಲಾಗಿದೆ. ಓಂಕಾರ್ ಅವರು ಮನೆಯ ಸಮೀಪದ ಕಾಡಿಗೆ ಉಪ್ಪಾಗೆ ಕಾಯಿ ಸಂಗ್ರಹಿಸಲು ಕಾಡಿಗೆ ಹೋದ ಸಂದರ್ಭದಲ್ಲಿ … Continued

ಪ್ರವಾದಿ ಕುರಿತ ಹೇಳಿಕೆ: ನೂಪುರ್ ಶರ್ಮಾ ವಿರುದ್ಧದ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಿದ ಸುಪ್ರೀಂಕೋರ್ಟ್‌, ಬಂಧನದಿಂದ ರಕ್ಷಣೆ ಮುಂದುವರಿಕೆ

ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲಾ 10 ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲಾಗುವುದು ಮತ್ತು ದೆಹಲಿ ಪೊಲೀಸರು ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ. ಇದು ಅಮಾನತುಗೊಂಡಿರುವ ಬಿಜೆಪಿ ನಾಯಕರಿಗೆ ಭಾರಿ ನಿರಾಳತೆ ತಂದಿದೆ . ನೂಪುರ್ ಶರ್ಮಾ ಅವರು ಪ್ರವಾದಿ … Continued

ಜಿಮ್‌ನಲ್ಲಿ ವರ್ಕ್‌ ಔಟ್‌ ಮಾಡುವಾಗ ಹೃದಯಾಘಾತಕ್ಕೊಳಗಾದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್, ಏಮ್ಸ್ ಐಸಿಯುಗೆ ದಾಖಲು

ನವದೆಹಲಿ: ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಅವರಿಗೆ ನಿನ್ನೆ ಮಂಗಳವಾರ ರಾತ್ರಿ ಹೃದಯಾಘಾತವಾಗಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜು ಶ್ರೀವಾಸ್ತವ ಅವರು ದಕ್ಷಿಣ ದೆಹಲಿಯ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಪ್ರಜ್ಞಾಹೀನರಾದರು. ಅವರು ತೀವ್ರ ಎದೆನೋವು ಅನುಭವಿಸಿದರು ಮತ್ತು ನಂತರ ಕುಸಿದರು. ಅವರನ್ನು ತರಬೇತುದಾರರು ಆಸ್ಪತ್ರೆಗೆ ಕರೆತಂದರು … Continued

ಹೊನ್ನಾವರದಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ: ಮುನ್ನೆಚ್ಚರಿಕೆಗಾಗಿ ವಾಹನ ಸಂಚಾರಕ್ಕೆ ನಿರ್ಬಂಧ

ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ-17 ರಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಉರುಳಿ ಬಿದ್ದು ಆತಂಕಕ್ಕೆ ಕಾರಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಕಾಲೇಜ್ ಸರ್ಕಲ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಈ ಟ್ಯಾಂಕರ್ ಹೋಗುತ್ತಿತ್ತು ಎಂದು ಹೇಳಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಹೊನ್ನಾವರ ನಗರದ ಶರಾವತಿ ಸರ್ಕಲ್ ಬಳಿ ಹೆದ್ದಾರಿಯಲ್ಲಿ … Continued

ಕುಮಟಾ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ, ಸಿಎಂ ಬೊಮ್ಮಾಯಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ತ್ರಿ-ವರ್ಣದ ಬೆಳಕಿನಲ್ಲಿ ಅದ್ಭುತವಾಗಿ ಕಾಣುವ 16ನೇ ಶತಮಾನದ ಮಿರ್ಜಾನ್‌ ಕೋಟೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯು ತನ್ನ ವಾಸ್ತುಶಿಲ್ಪದ ಸೊಬಗಿಗೆ ಹೆಸರುವಾಸಿಯಾಗಿದೆ, 16ನೇ ಶತಮಾನದ ಕೋಟೆಯು ಅನೇಕ ಐತಿಹಾಸಿಕ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ನೆನಪಿಗಾಗಿ ಈಗ ತ್ರಿ-ವರ್ಣದ ಬೆಳಕಿನಲ್ಲಿ ಪ್ರಕಾಶಿಸಲ್ಪಟ್ಟಿದೆ . ತ್ರಿ-ವರ್ಣದ ಬೆಳಕಿನಲ್ಲಿ ಪ್ರಕಶಮಾನವಾಗಿ ಬೆಳಗುತ್ತಿರುವ ಈ ಕೋಟೆಯ ನಯನಮನೋಹರ ಬೆಳಕಿನ ಸುಂದರ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ … Continued

ಕೊರೊನಾ ವೈರಸ್‌ ಪತ್ತೆಯಾದ ನಂತರ ಚೀನಾದಲ್ಲಿ ಮತ್ತೊಂದು ಅಪಾಯಕಾರಿ ಲಾಂಗ್ಯಾ ವೈರಸ್‌ ಪತ್ತೆ…! ಏನಿದು ಲಾಂಗ್ಯಾ ವೈರಸ್..?

ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾದ ಸುಮಾರು ಮೂರು ವರ್ಷಗಳ ನಂತರ, ದೇಶದ ಪೂರ್ವ ಭಾಗದ ಎರಡು ಪ್ರಾಂತ್ಯಗಳಲ್ಲಿ ಹೊಸ ಝೂನೋಟಿಕ್ ವೈರಸ್ ಪತ್ತೆಯಾಗಿದೆ ಮತ್ತು ಇದುವರೆಗೆ ಇದರ 35 ಸೋಂಕುಗಳನ್ನು ಗುರುತಿಸಲಾಗಿದೆ. ಈ ಹೊಸ ರೀತಿಯ ಹೆನಿಪಾವೈರಸ್ ಅನ್ನು ಲ್ಯಾಂಗ್ಯಾ ಹೆನಿಪವೈರಸ್ ಅಥವಾ ಲೇವಿ ಎಂದೂ ಕರೆಯುತ್ತಾರೆ. ಚೀನಾದಲ್ಲಿ ಕಂಡುಬಂದ ಹೊಸ ವೈರಸ್ ಈಗ ಏಕಾಏಕಿ … Continued

ಹರ್ ಘರ್ ತಿರಂಗ ಅಭಿಯಾನ ಬಹಿಷ್ಕರಿಸಿ, ಆಗಸ್ಟ್‌ 15ರಂದು ಸಿಖ್ ಧ್ವಜ ಹಾರಿಸಿ: ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಅಕಾಲಿದಳ ಸಂಸದ ಸಿಮ್ರನ್‌ಜಿತ್ ಸಿಂಗ್ ಮಾನ್

ಚಂಡೀಗಡ: ಶಿರೋಮಣಿ ಅಕಾಲಿದಳ (ಅಮೃತಸರ) ಮುಖ್ಯಸ್ಥ ಸಿಮ್ರನ್‌ ಜಿತ್ ಸಿಂಗ್ ಮಾನ್ ಕೇಂದ್ರದ ‘ಹರ್ ಘರ್ ತಿರಂಗ’ ಅಭಿಯಾನವನ್ನು ಬಹಿಷ್ಕರಿಸುವಂತೆ ಕರೆ ನೀಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಆಗಸ್ಟ್ 14-15 ರಂದು ಮನೆ ಮತ್ತು ಕಚೇರಿಗಳಲ್ಲಿ ನಿಶಾನ್ ಸಾಹಿಬ್ ಅನ್ನು ಹಾರಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಮ್ಮ ನಡುವೆ ಇಲ್ಲದ ದೀಪ್ ಸಿಧು, ಸಿಖ್ಖರು … Continued

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿಗೆ ಕೊರೊನಾ ಸೋಂಕು

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮತ್ತೆ ಕೋವಿಡ್ -19 ಗೆ ಮತ್ತೆ ಧನಾತ್ಮಕ ಪರೀಕ್ಷೆ ನಡೆಸಿರುವುದಾಗಿ  ಬುಧವಾರ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ತಾವು ಮನೆಯಲ್ಲಿ ಪ್ರತ್ಯೇಕವಾಗಿರುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿಯೂ ಪ್ರಿಯಾಂಕಾ ಗಾಂಧಿ ಕೋವಿಡ್-19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರು. “ಇಂದು (ಮತ್ತೆ!) ನಾನು ಕೋವಿಡ್‌ಗೆ … Continued

ಆನ್ಲೈನ್ ಗೇಮ್ ಮೂಲಕ ಕೋಟ್ಯಂತರ ಹಣ ಗೆದ್ದವನ ಕಿಡ್ನ್ಯಾಪ್‌ ಮಾಡಿ 1 ಕೋಟಿ‌ ರೂ. ಬೇಡಿಕೆ ಇಟ್ಟಿದ್ದ ಅಪಹರಣಕಾರರ ಬಂಧನ

ಹುಬ್ಬಳ್ಳಿ: ಆನ್‌ಲೈನ್‌ ಗೇಮ್‌ನಲ್ಲಿ ಹಣ ಗೆದ್ದಿದ್ದ ಹುಬ್ಬಳ್ಳಿಯ ಮಂಟೂರ ರಸ್ತೆಯ ನ್ಯಾಷನಲ್ ಟೌನ್ ನಿವಾಸಿ ಗರೀಬ್ ನವಾಜ್ ಮುಲ್ಲಾ ಅಪಹರಣ‌‌‌ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಮುಲ್ಲಾ ಅವರನ್ನು ಆಗಸ್ಟ್ 6 ರಂದು ಅಪಹರಿಸಿ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಏಳು ಆರೋಪಿಗಳನ್ನೂ ಹುಬ್ಬಳ್ಳಿ ಪೊಲೀಸರು … Continued