ಪ್ರಾರ್ಥನಾ ಕೇಂದ್ರದ ಮೇಲೆ ಬಲವಂತದ ಮತಾಂತರ ಯತ್ನದ ಆರೋಪ: ಪೊಲೀಸರಿಂದ ನಿರಾಕರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಧಾರ್ಮಿಕ ಮತಾಂತರದ ಪ್ರಯತ್ನಗಳು ನಡೆದಿಲ್ಲ ಮತ್ತು ಜನರು ಸ್ವಯಂಪ್ರೇರಣೆಯಿಂದ ಸೇರಿದ್ದಾರೆ ಎಂದು ದಕ್ಷಿಣ ಕನ್ನಡ … Continued

ಐವರು ಬಾಲಕಿಯರು ಸೇರಿ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವು

ಕಡಲೂರು: ತಮಿಳುನಾಡಿನ ಕಡಲೂರು ಜಿಲ್ಲೆಯ ಕೆದಿಲಂ ಚೆಕ್ ಡ್ಯಾಂ ಬಳಿ ಭಾನುವಾರ ಮಧ್ಯಾಹ್ನ ಕೆಸರಿನಲ್ಲಿ ಸಿಲುಕಿ ಐವರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ ಏಳು ಜನ ಸಾವಿಗೀಡಾಗಿದ್ದಾರೆ. ಅಲ್ಲಿ ಕೆಲ ವರ್ಷಗಳ ಹಿಂದೆ ಮರಳು ತೆಗೆದ ನಂತರ ಗುಂಡಿ ನಿರ್ಮಾಣವಾಗಿದ್ದು, ಅದನ್ನು ಹಾಗಿಯೇ ಬಿಡಲಾಗಿದೆ ಎಂದು ಅವರ ಸಂಬಂಧಿಕರು ದೂರಿದ್ದಾರೆ. ಎ ಕೂಚಿಪಾಳ್ಯಂ ಗ್ರಾಮದ ಎಂ … Continued

ಬಂಧನದಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಮನೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿಯ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಮನೆ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಕೋಲ್ಕತ್ತಾ ಮೂಲದ ಕಂಪನಿಗೆ ಸಂಬಂಧಿಸಿದಂತೆ ಅಕ್ರಮ ಹಣದ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮೇ 30ರಂದು ಬಂಧಿಸಿತ್ತು. … Continued

ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವು: ಮೃತರ ಕುಟುಂಬಗಳಿಗೆ ಐದು ಲಕ್ಷ ರೂ ಪರಿಹಾರ, ಪ್ರಕರಣದ ತನಿಖೆ – ಸಿಎಂ ಬೊಮ್ಮಾಯಿ

 ಬೆಂಗಳೂರು/ರಾಯಚೂರು: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವಿಗೀಡಾಗಿದ್ದು, ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐದು ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಕಲುಷಿತ ನೀರು ಕುಡಿದು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 20ಕ್ಕೂ ಹೆಚ್ಚಿನ ಪರಿಸ್ಥಿತಿ ಹದಗೆಟ್ಟಿದೆ. ಕೆಲವರ ಕಿಡ್ನಿಗೂ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ. ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿರುವ ಹಲವರಿಗೆ ಡಯಾಲಿಸಿಸ್ ಮಾಡಬೇಕಿದೆ … Continued

ನೈಜೀರಿಯಾ: ಕ್ಯಾಥೋಲಿಕ್ ಚರ್ಚ್‌ ಮೇಲೆ ಬಂದೂಕುಧಾರಿಗಳಿಂದ ಗುಂಡಿನ ದಾಳಿ ; ಕನಿಷ್ಠ 50 ಮಂದಿ ಸಾವು

ಭಾನುವಾರ, ಜೂನ್ 5 ರಂದು ನೈಜೀರಿಯಾದ ಒಂಡೋ ರಾಜ್ಯದ ಕ್ಯಾಥೋಲಿಕ್ ಚರ್ಚ್‌ನಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಐವತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಹತ್ಯಾಕಾಂಡದ ನಿಖರವಾದ ಸಾವಿನ ಸಂಖ್ಯೆ ಇನ್ನೂ ಪತ್ತೆಯಾಗಿಲ್ಲ. ಆದಾಗ್ಯೂ, ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ದಾಳಿಕೋರರು … Continued

ಪ್ರವಾದಿ ಮಹಮ್ಮದ್‌ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಅರಬ್ ರಾಷ್ಟ್ರಗಳ ಆಕ್ಷೇಪ, ಬಿಜೆಪಿ ವಕ್ತಾರರ ಅಮಾನತು ಕ್ರಮಕ್ಕೆ ಸ್ವಾಗತ

ನವದೆಹಲಿ: ಅಮಾನತುಗೊಂಡಿರುವ ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಯನ್ನು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳು ಖಂಡಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕತಾರ್ ಪ್ರವಾಸದ ನಡುವೆಯೇ ಈ ವಿವಾದ ಭುಗಿಲೆದ್ದಿದೆ. ಸೌದಿ ಅರೇಬಿಯಾವು ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರ ಕಾಮೆಂಟ್‌ಗಳನ್ನು “ಅವಮಾನಕರ” ಎಂದು ಬಣ್ಣಿಸಿದೆ ಮತ್ತು “ನಂಬಿಕೆಗಳು ಮತ್ತು … Continued

25,000 ದಾಟಿದ ಭಾರತದ ಸಾಪ್ತಾಹಿಕ ಕೋವಿಡ್ ಪ್ರಕರಣಗಳು, ಇದು 3 ತಿಂಗಳಲ್ಲಿ ಅತಿ ಹೆಚ್ಚು

ನವದೆಹಲಿ: ಭಾರತವು 4,518 ಹೊಸ ಕೊರೊನಾ ವೈರಸ್ ಸೋಂಕನ್ನು ದಾಖಲಿಸಿದ್ದು, ಕೋವಿಡ್‌-19 ಪ್ರಕರಣಗಳ ಸಂಖ್ಯೆಯನ್ನು 4,31,81,335 ಕ್ಕೆ ಒಯ್ದಿದೆ. ಸಕ್ರಿಯ ಪ್ರಕರಣಗಳು 25,782 ಕ್ಕೆ ಏರಿದೆ ಎಂದು ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಒಂಬತ್ತು ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,24,701 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ … Continued

ಆಮ್‌ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರ್ ನೇಮಕ, ಬೆಂಗಳೂರು ನಗರಾಧ್ಯಕ್ಷರ ಹುದ್ದೆ ಮೋಹನ್‌ ದಾಸರಿ ಹೆಗಲಿಗೆ

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿ (AAP)ಯ ರಾಜ್ಯ ಹಾಗೂ ಬೆಂಗಳೂರು ನಗರ ಪದಾಧಿಕಾರಿಗಳ ತಂಡದ ಪುನರ್‌ ರಚನೆಯಾಗಿದ್ದು, ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರಾಧ್ಯಕ್ಷರಾಗಿ ಮೋಹನ್‌ ದಾಸರಿ ಪುನರಾಯ್ಕೆಯಾಗಿದ್ದಾರೆ. ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿರ್ದೇಶನದಂತೆ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ರಾಜ್ಯ ಪದಾಧಿಕಾರಿಗಳ ತಂಡದ … Continued

ಪೆಸಿಫಿಕ್ ಸಾಗರದಾದ್ಯಂತ ಏಕಾಂಗಿಯಾಗಿ ತಡೆಯಿಲ್ಲದ ಪ್ರಯಾಣ ಪೂರ್ಣಗೊಳಿಸಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಕೆನಿಚಿ ಹೋರಿ…!

ಟೋಕಿಯೊ: 83 ನೇ ವಯಸ್ಸಿನಲ್ಲಿ ಜಪಾನಿನ ಸಾಹಸಿ ಕೆನಿಚಿ ಹೋರಿ ಅವರು ಪೆಸಿಫಿಕ್ ಮಹಾಸಾಗರದಾದ್ಯಂತ ಒಬ್ಬರೇ ಒಬ್ಬರು ತಡೆರಹಿತ ಪ್ರಯಾಣವನ್ನು ಪೂರ್ಣಗೊಳಿಸಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಿಹಾರ ನೌಕೆ ಬಂದರನ್ನು ತೊರೆದ ನಂತರ 69 ದಿನಗಳಲ್ಲಿ ತನ್ನ ಟ್ರಾನ್ಸ್-ಪೆಸಿಫಿಕ್ ಪ್ರಯಾಣವನ್ನು ಪೂರ್ಣಗೊಳಿಸಿದ ಹೋರಿ ಅವರು … Continued

ಕೊಪ್ಪಳ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು

ಕೊಪ್ಪಳ: ಕೊಪ್ಪಳ ಜಿಲ್ಲಾದ್ಯಂತ ಭಾನುವಾರ ಗುಡುಗು- ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ಸಿಡಿಲಿಗೆ ರೈತ ಮಹಿಳೆಯರಿಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ದೇವಮ್ಮ (55) ಮತ್ತು ರೇಷ್ಮಾ (27) ಎಂದು ಗುರುತಿಸಲಾಗಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಮಹಿಳೆಯರಿಬ್ಬರು ಭಾನುವಾರ ಹೊಲದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮಳೆ ಬಂದ ಕಾರಣ … Continued