ಉಕ್ರೇನ್‌ನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನಿ ವಿದ್ಯಾರ್ಥಿಗಳಿಂದ ಭಾರತದ ಧ್ವಜ ಬಳಕೆ, ‘ಭಾರತ್ ಮಾತಾ ಕೀ ಜೈ’ ಘೋಷಣೆ… ವೀಡಿಯೊ ವೈರಲ್.. ವೀಕ್ಷಿಸಿ

ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ಯುದ್ಧ ಪೀಡಿತ ವಲಯದಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನಿ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸದೇ ಇದ್ದುದಕ್ಕಾಗಿ ವಾಗ್ದಾಳಿ ಎದುರಿಸುತ್ತಿದ್ದರೆ, ಬಿಕ್ಕಟ್ಟಿನಿಂದ ಪಾರಾಗಲು ಪಾಕಿಸ್ತಾನಿ ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಬಳಸುತ್ತಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ- ತಮ್ಮ ವಾಹನದ ಮೇಲೆ ತಮ್ಮ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರೆ ಭಾರತೀಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ರಷ್ಯನ್ನರು ನೀಡಿದ್ದರಿಂದ … Continued

ಬಿಬಿಎಂಪಿ ಕಚೇರಿಗಳ ಮೇಲೆ ಮುಂದುವರಿದ ಎಸಿಬಿ ದಾಳಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆಯಲು ಬುಧವಾರವೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಿಬಿಎಂಪಿಯ ಹಲವು ಕಚೇರಿಗಳಿಗೆ ಮೇಲೆ ದಾಳಿ ಮುಂದುವರೆಸಿದ್ದಾರೆ. ಕೇಂದ್ರ ಕಚೇರಿ ಸೇರಿ ಇತರ ವಿಭಾಗಗಳಲ್ಲಿ ಎಸಿಬಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಎಂಟು ವಲಯಗಳಲ್ಲೂ ಎಸಿಬಿಯ 10 ತಂಡಗಳು … Continued

ಜಿಇಇ ಮೇನ್‌ ಪರೀಕ್ಷೆ-2022ರ ವೇಳಾಪಟ್ಟಿ ಪ್ರಕಟ, ನೋಂದಣಿಗಳು ಆರಂಭ

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆಯ ಮೊದಲ ಹಂತದ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಹಾಗೂ ಎರಡನೇ ಹಂತದ ಪರೀಕ್ಷೆ ಮೇ 24 ರಿಂದ 29ರ ವರೆಗೆ ನಡೆಸಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ. ಜೆಇಇ ಮುಖ್ಯ ಪರೀಕ್ಷೆ 2022 ರ ( JEE-Main 2022 ) ಅರ್ಜಿಗಳ ಸಲ್ಲಿಕೆ ಮಾರ್ಚ್ … Continued

10 ನಿಮಿಷದಲ್ಲಿ 11.71 ಲಕ್ಷ ಹಣತೆ ದೀಪ ಬೆಳಗಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಉಜ್ಜಯಿನಿ..! ವೀಕ್ಷಿಸಿ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ದೇಗುಲ ಪಟ್ಟಣವು ಮಂಗಳವಾರ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ‘ಶಿವಜ್ಯೋತಿ ಅರ್ಪಣಂ ಮಹೋತ್ಸವ’ದ ಅಂಗವಾಗಿ ಮಹಾಕಾಳೇಶ್ವರ ದೇವಸ್ಥಾನ, ಕ್ಷಿಪ್ರಾ ನದಿಯ ದಡ ಮತ್ತು ಉಜ್ಜಯಿನಿಯ ಇತರ ಧಾರ್ಮಿಕ, ಸಾರ್ವಜನಿಕ ಸ್ಥಳಗಳು ಮತ್ತು ವೈಯಕ್ತಿಕ ಮನೆಗಳಲ್ಲಿ ಏಕಕಾಲದಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು (ಹಣತೆಗಳು) ಬೆಳಗಿಸುವುದರ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಗಿನ್ನೆಸ್ ಬುಕ್ … Continued

ಕೀವ್​​ನ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ; 5 ಮಂದಿ ಸಾವು, ಹಲವು ಚಾನಲ್​​ಗಳು ಸ್ಥಗಿತ

ಕೀವ್:‌ ಉಕ್ರೇನ್​​ನ ಕೀವ್​​ನಲ್ಲಿರುವ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ ನಡೆಸಿದ್ದು, ಇದರಿಂದಾಗಿ ಇಡೀ ದೇಶಾದ್ಯಂತ ಟಿವಿ ಚಾನಲ್​​ಗಳ ಪ್ರಸಾರ ನಿಂತಿದೆ. ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಹಾಗೂ ಕೆಲವು ಟಿವಿ ಚಾನೆಲ್ಗಳು ಪ್ರಸಾರಗಳೇ ಸ್ಥಗಿತಗೊಂಡಿವೆ. ಅಷ್ಟೇ ಅಲ್ಲ, 2ನೇ ಮಹಾಯುದ್ಧ ಕಾಲದಲ್ಲಿ ಸಾಮೂಹಿಕ ಹತ್ಯೆಯಾಗಿದ್ದ ಯಹೂದಿಗಳ ಸ್ಮರಣಾರ್ಥ ನಿರ್ಮಿಸಿದ್ದ ಸ್ಮಾರಕ ಕೇಂದ್ರಕ್ಕೂ … Continued

ಫೆಬ್ರವರಿ ತಿಂಗಳ ಜಿಎಸ್​ಟಿ ಸಂಗ್ರಹ 1,33,026 ಕೋಟಿ ರೂ.ಗಳು

ನವದೆಹಲಿ: 2022ರ ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​ಟಿ ಆದಾಯವು 1,33,026 ಕೋಟಿ ರೂ.ಗಳಾಗಿವೆ. ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್​ಟಿ 24,435 ಕೋಟಿ ರೂ.ಗಳು, ಎಸ್​ಜಿಎಸ್​ಟಿ 30,779 ಕೋಟಿ ರೂ.ಗಳು, ಐಜಿಎಸ್​ಟಿ 67,471 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 33,837 ಕೋಟಿ ರೂ.ಗಳೂ ಸೇರಿದಂತೆ) ಮತ್ತು ಸೆಸ್ 10,340 ಕೋಟಿ ರೂ.ಗಳು ಒಳಗೊಂಡಿದೆ. ಸರ್ಕಾರವು … Continued

ಶಿವಲಿಂಗ ಶುದ್ಧೀಕರಣ ವಿಚಾರವಾಗಿ ಆಳಂದದಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್

ಕಲಬುರಗಿ: ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಶುದ್ಧೀಕರಣ ವಿಚಾರದ ಗದ್ದಲ ವಿಕೋಪಕ್ಕೆ ಹೋಗಿ ಪೊಲೀಸರು ಲಾಠಿಚಾರ್ಜ್‌ ಮಾಡಿದ ಘಟನೆ ನಡೆದಿದೆ. ಶಿವಲಿಂಗದ ಶುದ್ಧೀಕರಣಕ್ಕೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದು, ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಲಬುರಗಿಯಿಂದ ಆಳಂದ ಚಲೋಗೆ ಕರೆ ಕೊಟ್ಟಿದ್ದರು. ಆದರೆ ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಶಿವರಾತ್ರಿ … Continued

ಯುರೋಪಿಯನ್‌ ಯೂನಿಯನ್‌ ಸಂಸತ್ತಿನಲ್ಲಿ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿಗೆ ಸ್ಟ್ಯಾಂಡಿಂಗ್ ಓವೇಶನ್.. ವೀಕ್ಷಿಸಿ

ಇಂದು, ಯುರೋಪಿನ ಸಂಸತ್ತಿನ ತುರ್ತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೊದಲು ಮತ್ತು ನಂತರ ಯುರೋಪಿಯನ್ ಸಂಸತ್ತಿನ ಸದಸ್ಯರು ಸುಮಾರು ಒಂದು ನಿಮಿಷ ನಿಂತುಕೊಂಡು ಉಕ್ರೇನ್ ಅಧ್ಯಕ್ಷ ವೊಲ್ಡೊಮಿರ್ ಝೆಲೆನ್ಸ್ಕಿ ಅವರನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಜೆಲೆನ್ಸ್ಕಿ ಫೀಡ್ ದೈತ್ಯ ಪರದೆಯ ಮೇಲೆ ಪ್ರಜ್ವಲಿಸಿದ ತಕ್ಷಣ, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ನೇತೃತವದಲ್ಲಿ … Continued

ಉಕ್ರೇನ್-ರಷ್ಯಾ ಯುದ್ಧ: ಕೀವ್‌ ಟಿವಿ ಟವರ್‌ ಮೇಲೆ ರಷ್ಯಾ ಪಡೆಗಳಿಂದ ದಾಳಿ

ಕೀವ್‌: ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ. ಇಂದು ಮಂಗಳವಾರ, ಯುದ್ಧದ ಆರನೇ ದಿನ ರಷ್ಯಾದ ಪಡೆಗಳು ಉಕ್ರೇನಿಯನ್ ರಾಜಧಾನಿ ಕೀವ್‌ನಲ್ಲಿರುವ ಮುಖ್ಯ ಟಿವಿ ಗೋಪುರವನ್ನು ಗುರಿಯಾಗಿರಿಸಿಕೊಂಡಿವೆ. ಈ ದಾಳಿಯಿಂದ ಹಲವು ಟಿವಿ ಚಾನೆಲ್‌ಗಳ ಪ್ರಸಾರಕ್ಕೆ ತೊಂದರೆಯಾಗಿದೆ. ಉಕ್ರೇನ್ ಗೃಹ ಸಚಿವರು ಈ ಮಾಹಿತಿ ನೀಡಿದ್ದಾರೆ. ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಅನ್ನು ರಷ್ಯಾ … Continued

ಉಕ್ರೇನ್‌ನಲ್ಲಿ ಮದುವೆ.. ರಷ್ಯಾ ದಾಳಿಯ ನಂತರ ಹೈದರಾಬಾದ್​ಗೆ ಬಂದು ರಿಸೆಪ್ಷನ್​…

ಹೈದರಾಬಾದ್: ಉಕ್ರೇನ್‌ನಲ್ಲಿ ಘರ್ಷಣೆ ವೇಗವಾಗಿ ಹೆಚ್ಚುತ್ತಿರುವ ನಡುವೆ, ಹೈದರಾಬಾದ್‌ ಹುಡುಗ ಮತ್ತು ಉಕ್ರೇನಿಯನ್ ಯುವತಿ ಯುದ್ಧ ಪೀಡಿತ ಉಕ್ರೇನಿನಿಂದ ಗಂಟುಮೂಟೆ ಕಟ್ಟಿಕೊಂಡು ಭಾರತಕ್ಕೆ ದೌಡಾಯಿಸಿದರು ಹಾಗೂ ಫೆಬ್ರವರಿ 27 ರಂದು ನಗರದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆರತಕ್ಷತೆ ಮಾಡಿಕೊಂಡರು..! ಪ್ರತೀಕ್ ಮತ್ತು ಲ್ಯುಬೊವ್ ಅವರ ವಿವಾಹವು ಬಾಲಿವುಡ್ ಚಲನಚಿತ್ರದ ಕಥಾವಸ್ತುಕ್ಕಿಂತ ಏನೂ ಕಡಿಮೆಯಿಲ್ಲ. ಮೊದಲ … Continued