ಭಾರತದಲ್ಲಿ ಈ ಕೋವಿಡ್‌-19 ಅಲೆ ಫೆಬ್ರವರಿ 6ರ ವೇಳೆಗೆ ಉತ್ತುಂಗಕ್ಕೇರುವ ಸಾಧ್ಯತೆ, ಆರ್‌-ಮೌಲ್ಯ ಮತ್ತಷ್ಟು ಕುಸಿಯಲಿದೆ: ಐಐಟಿ ಮದ್ರಾಸ್ ಅಧ್ಯಯನ

ನವದೆಹಲಿ: ಐಐಟಿ ಮದ್ರಾಸ್‌ನ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ದೇಶದಲ್ಲಿ ಪ್ರಸ್ತುತ ಕೋವಿಡ್-19 ಸೋಂಕಿನ ಅಲೆಯು ಮುಂದಿನ 14 ದಿನಗಳಲ್ಲಿ ಅಂದರೆ ಫೆಬ್ರವರಿ 6ರೊಳಗೆ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ಕೋವಿಡ್‌-19 ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನು ಸೂಚಿಸುವ ಭಾರತದ R- ಮೌಲ್ಯವು ಜನವರಿ 14 ರಿಂದ 21ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಕಡಿಮೆಯಾಗಿದೆ ಎಂದು … Continued

ಒಂದು ನಿಮಿಷದಲ್ಲಿ 109 ಪುಶ್-ಅಪ್‌ ಮಾಡಿ ಮಣಿಪುರ ಯುವಕನ ಗಿನ್ನೆಸ್ ವಿಶ್ವ ದಾಖಲೆ…ವೀಕ್ಷಿಸಿ

ಇಂಫಾಲ: ಮಣಿಪುರದ 24 ವರ್ಷದ ತೌನೊಜಮ್ ನಿರಂಜೋಯ್ ಸಿಂಗ್, ಒಂದು ನಿಮಿಷದಲ್ಲಿ ತನ್ನ ಬೆರಳುಗಳ ತುದಿಯಲ್ಲಿ ಅತಿ ಹೆಚ್ಚು ಪುಷ್-ಅಪ್‌ಗಳನ್ನು ಮಾಡಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಎರಡು ಬಾರಿ ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವಸಿಂಗ್, ಒಂದು ನಿಮಿಷದಲ್ಲಿ 109 ಪುಷ್-ಅಪ್‌ಗಳನ್ನು ಮಾಡುವ ಮೂಲಕ 105 ಪುಷ್-ಅಪ್‌ಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. … Continued

ಸಂಸತ್ತಿನ 875 ಸಿಬ್ಬಂದಿಗೆ ಕೊರೊನಾ ಸೋಂಕು

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ಇದುವರೆಗೆ ಒಟ್ಟು 875 ಸಿಬ್ಬಂದಿ ಕೋವಿಡ್-19 ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಅಧಿಕೃತ ಮೂಲಗಳ ಪ್ರಕಾರ, ಜನವರಿ 20 ರವರೆಗೆ 2,847 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ 875 ಸಂಸತ್‌ ಸಿಬ್ಬಂದಿ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಇವುಗಳಲ್ಲಿ, ರಾಜ್ಯಸಭಾ ಸಚಿವಾಲಯವು ಒಟ್ಟು 915 … Continued

ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ: ತನಿಖೆಗೆ ಕೋಲಾರ ಜಿಲ್ಲಾಧಿಕಾರಿ ಆದೇಶ

ಕೋಲಾರ: ಮುಸ್ಲಿಂ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ ಶಾಲೆ ವಿರುದ್ಧ ಕೋಲಾರ ಜಿಲ್ಲಾಧಿಕಾರಿ ಉಮೇಶಕುಮಾರ ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಉಮೇಶಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಅವರಿಂದ ವಿವರವಾದ ವರದಿ ಕೇಳಿದ್ದಾರೆ ಎನ್ನಲಾಗುತ್ತಿದೆ. ಮುಳಬಾಗಿಲು ನಗರದ ಸೋಮೇಶ್ವರಪಾಳ್ಯದ ಶ್ರೀಬಳೆಚಂಗಪ್ಪ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ … Continued

ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೊಲೋಗ್ರಾಮ್ ಪ್ರತಿಮೆ ಅನಾವರಣ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆ ಅನಾವರಣಗೊಳಿಸಿದರು. ಈ ಸ್ಥಳದಲ್ಲಿ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸುವ ವರೆಗೆ ಹೊಲೋಗ್ರಾಮ್ ಪ್ರತಿಮೆ ಇರಲಿದೆ. ಅನಾವರಣ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಇದೊಂದು ಐತಿಹಾಸಿಕ ಸ್ಥಳ … Continued

ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 50,210 ಜನರಿಗೆ ಕೊರೊನಾ ಸೋಂಕು…!

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಭಾನುವಾರ ಹೊಸ ಪ್ರಕರಣ ಅರ್ಧ ಲಕ್ಷ ದಾಟಿದೆ..! ಕಳೆದ 24 ಗಂಟೆಯಲ್ಲಿ ಹೊಸದಾಗಿ 50,210 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವಿಟ್ಟರಿನಲ್ಲಿ ಮಾಹಿತಿ ಹಂಚಿಕಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರು, ಕಳೆದ 24 ಗಂಟೆಯಲ್ಲಿ ಸೋಂಕಿನಿಂದಾಗಿ ಬೆಂಗಳೂರಿನಲ್ಲಿ 8 ಮಂದಿ ಸೇರಿದಂತೆ ಕರ್ನಾಟಕದಲ್ಲಿ 19 … Continued

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಎರಡನೇ ಬಾರಿ ಕೊರೊನಾ

ನವದೆಹಲಿ:ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದೆ. ಭಾನುವಾರ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೈದರಾಬಾದ್‌ನಲ್ಲಿ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದರು. ಅವರು ಒಂದು ವಾರ ಪ್ರತ್ಯೇಕವಾಗಿರುತ್ತಾರೆ ಎಂದು ಅವರ ಸಚಿವಾಲಯ ಟ್ವಿಟರ್ ಮೂಲಕ ತಿಳಿಸಿದೆ. ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ತಮ್ಮನ್ನು ಪ್ರತ್ಯೇಕಿಸಲು ಮತ್ತು … Continued

ಬೆಂಗಳೂರು: ಈ ಬೆಕ್ಕು ಹುಡುಕಿಕೊಟ್ಟವರಿಗೆ ಸಿಗಲಿದೆ 35,000 ರೂ ಬಹುಮಾ‌ನ…!

ಬೆಂಗಳೂರು: ತಮ್ಮ ಸಾಕು ಪ್ರಾಣಿಗಳು ಸತ್ತಾಗ, ಅವುಗಳು ಕಳೆದುಹೋದರೆ ಮಾಲೀಕರು ಪಡುವ ಪಾಡು ಅಷ್ಟಿಷ್ಟಲ್ಲ. ಆದರೆ ನಗರದಲ್ಲಿ ಬೆಕ್ಕೊಂದನ್ನು ಕಳೆದುಕೊಂಡ ಮಾಲೀಕರೊಬ್ಬರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ, ಬೆಕ್ಕು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಜೊತೆಗೆ ಹುಡುಕಿಕೊಟ್ಟವರಿಗೆ 35 ಸಾವಿರ ರೂ.ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬವರು, … Continued

ಮರಕ್ಕೆ ಗುದ್ದಿದ ಬಸ್: ರೈತ-ಭಿಕ್ಷುಕ ಸಾವು

ಕೊರಟಗೆರೆ: ಚಾಲಕನ ಅಜಾಗರೂಕತೆಯಿಂದ ಸಾರಿಗೆ ಬಸ್ ಮರಕ್ಕೆ ಗುದ್ದಿದ ಪರಿಣಾಮ ರೈತ ಹಾಗೂ ಭಿಕ್ಷುಕ ಮೃತಪಟ್ಟು, 10 ಜನ ಗಾಯಗೊಂಡಿರುವ ಘಟನೆ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ಭಿಕ್ಷುಕ ಸ್ಥಳದಲ್ಲೇ ಮೃತಪಟ್ಟರೆ ರೈತ ಗೋಪಾಲಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು-ಮಧುಗಿರಿ-ಶಿರಾ ಮಾರ್ಗವಾಗಿ ತಿರುಪತಿಗೆ ತೆರಳುತ್ತಿದ್ದ ಸರ್ಕಾರಿ … Continued

ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ

ಧಾರವಾಡ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಧಾರವಾಡದ ಎಸ್ ಡಿಎಂ ಅಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಚೆನ್ನವೀರ ಕಣವಿ ಅವರ ಆರೋಗ್ಯದ ಬಗ್ಗೆ ಎಸ್‌ಡಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಚೆನ್ನವೀರ ಕಣವಿ ಅವರ ರಕ್ತದೊತ್ತಡ ಸಹಜ ಸ್ಥಿತಿಗೆ ಬಂದಿದೆ. … Continued