ಚಲಿಸುತ್ತಿರುವ-ನಿಂತ ರೈಲುಗಳ ಮಧ್ಯದ ಕಿರಿದಾದ ಜಾಗದಲ್ಲಿ ಓಡಿದ ಕುದುರೆ, ಮುಂದೇನಾಯ್ತು..? ದೃಶ್ಯ ವಿಡಿಯೊದಲ್ಲಿ ಸೆರೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ಚಲಿಸುವ ರೈಲು ಮತ್ತು ನಿಂತಿರುವ ಗಾಡಿಗಳ ನಡುವೆ ಕುದುರೆಯೊಂದು ಓಡುತ್ತಿರುವುದನ್ನು ತೋರಿಸುತ್ತದೆ. ವಿ ಇದನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ (ಐಪಿಎಸ್) ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ, ಪ್ರಮುಖ ಪ್ರಶ್ನೆಯೆಂದರೆ ಕುದುರೆಯು ಗಾಯಗೊಳ್ಳದೆ ಪಾರಾಗಿದೆಯೇ? ಅದೃಷ್ಟವಶಾತ್, ಪಾರಾಗಿದೆ. ಈ ವಿಡಿಯೋ ಈಜಿಪ್ಟ್‌ನದ್ದು ಎಂದು ಡೈಲಿ … Continued

ಲಸಿಕೆ ಬೇಡವೆಂದು ಮನೆ ಏರಿ ಕುಳಿತಿದ್ದ ಯುವಕ.. ಮನವೊಲಿಸಿದ ತಹಶೀಲ್ದಾರ..!

ಚಿತ್ರದುರ್ಗ: ಕೊರೊನಾ ಲಸಿಕೆ ಬೇಡವೆಂದು ಮನೆ ಏರಿ ಕುಳಿತಿದ್ದ ಯುವಕನೊಬ್ಬನ ಮನವೊಲಿಸಿ ಕೊರೊನಾ ಲಸಿಕೆ ನೀಡುವಲ್ಲಿ ಚಳ್ಳಕೆರೆ ತಹಶೀಲ್ದಾರ್ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್. ದೇವರಹಳ್ಳಿ ಗ್ರಾಮದಲ್ಲಿ ಇಂದು, ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ … Continued

ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಅಂಕೋಲಾ : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಅಂಕೋಲಾ ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಜೈಹಿಂದ ಕ್ರೀಡಾಂಗೆಣದಲ್ಲಿ ಆರಂಭವಾಯಿತು. ಒಟ್ಟಾರೆ 16 ತಂಡಗಳು ಈ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲು ಇಂತಹ ಪಂದ್ಯಾವಳಿ ಅಗತ್ಯ ಎಂದರು. ಪತ್ರಕರ್ತ ವಿಠ್ಠಲದಾಸ … Continued

ಜೇಮ್ಸ್ ವೆಬ್ ಟೆಲಿಸ್ಕೋಪಿನಿಂದ ಇಂದು 15,00,000-ಕಿಮೀ-ದೂರದ ಪ್ರಯಾಣ ಪೂರ್ಣ, ಬ್ರಹ್ಮಾಂಡದ ಜನ್ಮರಹಸ್ಯ ನೋಡಲು ಕಕ್ಷೆ ಪ್ರವೇಶ

ನವದೆಹಲಿ: ಭೂಮಿಯಿಂದ ಹೊರಟುಹೋದ ಸುಮಾರು ಒಂದು ತಿಂಗಳ ನಂತರ, ಜೇಮ್ಸ್ ವೆಬ್ ಟೆಲಿಸ್ಕೋಪ್ ತನ್ನ ಗಮ್ಯಸ್ಥಾನಕ್ಕೆ 15,00,000-ಕಿಲೋಮೀಟರ್ ದೂರದ ಪ್ರಯಾಣವನ್ನು ಪೂರ್ಣಗೊಳಿಸಲು ಸಿದ್ಧವಾಗಿದೆ, ಅಲ್ಲಿಂದ ಅದು ನಮ್ಮ ಬ್ರಹ್ಮಾಂಡದ ಜನ್ಮವನ್ನು ವೀಕ್ಷಿಸುತ್ತದೆ. ಪ್ರಪಂಚದ ಅತ್ಯಂತ ಶಕ್ತಿಶಾಲಿ ವೀಕ್ಷಣಾಲಯವು ಎರಡನೇ ಲ್ಯಾಗ್ರೇಂಜ್ ಪಾಯಿಂಟ್ (L2) ಗೆ ಆಗಮಿಸಲು ಸಿದ್ಧವಾಗಿದೆ, ಅದು ಅದನ್ನು ಬಯಸಿದ ಕಕ್ಷೆಯಲ್ಲಿ ಇರಿಸುತ್ತದೆ. ಮಿಡ್-ಕೋರ್ಸ್ … Continued

ನೀವೂ ಗೆಲ್ಲಬಹುದು ಕೃತಿ ಬಿಡುಗಡೆ- ಮಕ್ಕಳಲ್ಲಿ ಚೈತನ್ಯ ಬಿತ್ತುವ ಕೃತಿ : ಪ್ರಕಾಶ ಕಡಮೆ

ಹುಬ್ಬಳ್ಳಿ :ಹದಿಹರೆಯದವರ ಕನಸು ಮತ್ತು ಕನವರಿಕೆಗೆ ಇಂಬು ಕೊಡುತ್ತಲೇ ಅವರನ್ನು ಕೀಳರಿಮೆಯಿಂದ ಹೊರ ತರುವ ಪ್ರಯತ್ನದಲ್ಲಿ ನೀವೂ ಗೆಲ್ಲಬಹುದು ಕೃತಿಯ ಮೂಲಕ ಲೇಖಕರು ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರಕಾಶ ಕಡಮೆ ಹೇಳಿದರು. ಅವರು ಭಾನುವಾರ ಪುಸ್ತಕ ಬಳಗದ ವತಿಯಿಂದ ಏರ್ಪಡಿಸಿದ್ದ ಲೇಖಕಿ- ಶಿಕ್ಷಕಿ ಕವಿತಾ ಹೆಗಡೆ ಅಭಯಂ ಅವರ ನೀವೂ ಗೆಲ್ಲಬಹುದು ಎಂಬ ಕೃತಿಯನ್ನು … Continued

‘ತನ್ನ ಅನುಮತಿ’ ಇಲ್ಲದೆ ಫೋನ್ ಖರೀದಿಸಿದ್ದ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ ಪತಿರಾಯ..!

ಕೋಲ್ಕತ್ತಾದ 40 ವರ್ಷದ ತನ್ನ ಹೆಂಡತಿಯನ್ನು ಹತ್ಯೆ ಮಾಡಲು ಸುಪಾರಿ (ಗುತ್ತಿಗೆ) ಕೊಲೆಗಾರನನ್ನು ನೇಮಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕಾರಣ – ಅವನ ಅನುಮತಿಯಿಲ್ಲದೆ ಅವಳು ಸ್ಮಾರ್ಟ್‌ಫೋನ್ ಖರೀದಿಸಿದ್ದಾಳೆ..! ಆರೋಪಿಗಳು ಚೂಪಾದ ವಸ್ತುಗಳಿಂದ ಮಹಿಳೆಯ ಗಂಟಲಿಗೆ ಇರಿದಿದ್ದಾರೆ. ಮಹಿಳೆಯ ಗಂಟಲಿಗೆ ಏಳು ಹೊಲಿಗೆ ಹಾಕಲಾಗುತ್ತಿದೆ. ಕೋಲ್ಕತ್ತಾದ ದಕ್ಷಿಣ ಹೊರವಲಯದಲ್ಲಿರುವ ನರೇಂದ್ರಪುರದಲ್ಲಿ ಗುರುವಾರ ತಡರಾತ್ರಿ ಈ … Continued

ಭಾರತದಲ್ಲಿ 3.06 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 8.2% ಕಡಿಮೆ, ಕರ್ನಾಟಕದಲ್ಲೇ ಅತಿ ಹೆಚ್ಚು ದೈನಂದಿನ ಸೋಂಕು

ನವದೆಹಲಿ: ಸೋಮವಾರ ಬೆಳಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,06,064 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಇದು ನಿನ್ನೆಗಿಂತ 8.2 ಶೇಕಡಾ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕನಿಷ್ಠ 439 ಸಾವುಗಳು ವರದಿಯಾಗಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆಯನ್ನು 4,89,848 … Continued

ಮದುವೆ ಆಗುವಂತೆ ಒತ್ತಾಯಿಸಿ ನಾದಿನಿಯನ್ನೇ ಕಿಡ್ನಾಪ್ ಮಾಡಿದ ಅಕ್ಕನ ಗಂಡ…!

ಬೆಂಗಳೂರು: ಬಾವನಿಂದಲೇ ನಾದಿನಿ ಅಪಹರಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ವರದಿಯಾಗಿದೆ. ದೇವರಾಜ್ ಸೇರಿ ಮೂವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೊಡುಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದೇವರಾಜ್ ಎಂಬಾತ ಅಪಹರಿಸಿದ ಯುವತಿಯ ಅಕ್ಕನನ್ನು ಮದುವೆಯಾಗಿದ್ದ. ನಂತರ ತಂಗಿಯನ್ನು ಮದುವೆ ಆಗುವಂತೆ ಒತ್ತಾಯಿಸಿದ್ದ. ಆದರೆ ನಾದಿನಿ ಬಾವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ದೇವರಾಜ್ ಯುವತಿಯನ್ನು ಅಪಹರಿಸಿ … Continued

ಹಾವೇರಿ: ಹಿರಿಯ ಪತ್ರಕರ್ತ ಜಿ.ಎಂ.ಕುಲಕರ್ಣಿ ನಿಧನ

ಹಾವೇರಿ: ಕವಿ ಹಾಗೂ ಪತ್ರಕರ್ತ, ನಗರದ ಜಿ.ಎಂ.ಕುಲಕರ್ಣಿ(58) ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನವಾಗಿದ್ದಾರೆ. ಕುಲಕರ್ಣಿ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತಮ್ಮ ಸಿಂಚನ ಪ್ರಕಾಶನದ ಮೂಲಕ ಅನೇಕ ಲೇಖಕರ ಪುಸ್ತಕ ಪ್ರಕಟಿಸಿದ್ದಾರೆ. ಅಲ್ಲದೆ, ಅವರು ‘ಕತ್ತಲಲ್ಲಿ … Continued

ಭಾರತದಲ್ಲಿ ಈ ಕೋವಿಡ್‌-19 ಅಲೆ ಫೆಬ್ರವರಿ 6ರ ವೇಳೆಗೆ ಉತ್ತುಂಗಕ್ಕೇರುವ ಸಾಧ್ಯತೆ, ಆರ್‌-ಮೌಲ್ಯ ಮತ್ತಷ್ಟು ಕುಸಿಯಲಿದೆ: ಐಐಟಿ ಮದ್ರಾಸ್ ಅಧ್ಯಯನ

ನವದೆಹಲಿ: ಐಐಟಿ ಮದ್ರಾಸ್‌ನ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ದೇಶದಲ್ಲಿ ಪ್ರಸ್ತುತ ಕೋವಿಡ್-19 ಸೋಂಕಿನ ಅಲೆಯು ಮುಂದಿನ 14 ದಿನಗಳಲ್ಲಿ ಅಂದರೆ ಫೆಬ್ರವರಿ 6ರೊಳಗೆ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ಕೋವಿಡ್‌-19 ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನು ಸೂಚಿಸುವ ಭಾರತದ R- ಮೌಲ್ಯವು ಜನವರಿ 14 ರಿಂದ 21ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಕಡಿಮೆಯಾಗಿದೆ ಎಂದು … Continued