ವೀಡಿಯೊ..| ವಿಮಾನದ ಬಾಲ, ಟೇಬಲ್‌ಗಳ ಮೇಲೆ ಊಟ: ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ವೈದ್ಯರ ಹಾಸ್ಟೆಲ್‌ ದೃಶ್ಯಗಳು

ಅಹಮದಾಬಾದ್ : ಗುರುವಾರ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ Ai-171 ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದ್ದು, ಹಲವರು ಸಾವಿಗೀಡಾಗಿದ್ದಾರೆ. ಹಲವರು ಮೃತಪಟ್ಟಿರುವ ಶಂಕೆಯ ವರದಿಗಳಿವೆ. ವಿಮಾನದಲ್ಲಿ ಒಟ್ಟು 242 ಜನರಿದ್ದರು. ವರದಿಗಳ ಪ್ರಕಾರ, ವಿಮಾನವು ಮೇಘಾನಿ ನಗರದ ಬಿಜೆ ವೈದ್ಯಕೀಯ ಕಾಲೇಜು … Continued

ಅಹಮದಾಬಾದ್ ವಿಮಾನ ಪತನ | ವಿಮಾನದಲ್ಲಿದ್ದವರು ಯಾವ್ಯಾವ ದೇಶಕ್ಕೆ ಸೇರಿದವರು ಎಂಬ ಮಾಹಿತಿ ನೀಡಿದ ಏರ್‌ ಇಂಡಿಯಾ

ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ ಏರ್‌ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. AI-171 ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ರಾಷ್ಟ್ರೀಯತೆಗಳ ಕುರಿತು ಏರ್ ಇಂಡಿಯಾ ವಿವರವಾದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಬೋಯಿಂಗ್ 787-8 ವಿಮಾನವು ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರನ್ನು ಹೊತ್ತೊಯ್ಯುತ್ತಿತ್ತು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ … Continued

ವೀಡಿಯೊ..| ಅಹಮದಾಬಾದ್‌ : ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ ; ಅಂತಿಮ ಕ್ಷಣದ ದೃಶ್ಯ ಸೆರೆ

ಅಹಮದಾಬಾದ್ : 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯಿದ್ದ ಅಹಮದಾಬಾದಿನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿ ನಗರ ಬಳಿ ಪತನಗೊಂಡಿದ್ದು, ಆ ಪ್ರದೇಶದಲ್ಲಿ ಬೃಹತ್‌ ಬೆಂಕಿ … Continued

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ಭೇದಿಸಲು ಸಹಾಯ ಮಾಡಿದ ಮಂಗಳಸೂತ್ರ…!

ಸೋಹ್ರಾ ಹೋಂಸ್ಟೇಯಲ್ಲಿ ಮಂಗಳಸೂತ್ರ ಮತ್ತು ಉಂಗುರವಿದ್ದ ಸೂಟ್‌ಕೇಸ್ ಪೊಲೀಸರಿಗೆ ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿದ್ದ ರಾಜಾ ರಘುವಂಶಿ ಅವರ ಕೊಲೆಯ ಪ್ರಕರಣವನ್ನು ಭೇದಿಸಲು ಸುಳಿವು ನೀಡಿತು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಐ ನೊಂಗ್ರಾಂಗ್ ಹೇಳಿದ್ದಾರೆ. “ಸೋನಮ್ ಅವರ ಮಂಗಳಸೂತ್ರ ಮತ್ತು ಹೋಂಸ್ಟೇಯಲ್ಲಿ ಬಿಟ್ಟು ಹೋಗಿದ್ದ ಸೂಟ್‌ಕೇಸ್‌ನಿಂದ ಉಂಗುರವನ್ನು ನಾವು ವಶಪಡಿಸಿಕೊಂಡಿದ್ದೇವೆ. ಅಂತಹ ಸಾಂಕೇತಿಕ ಆಭರಣಗಳನ್ನು … Continued

ವ್ಯಾಪಕ ಮಳೆ | ಇಂದು ಧಾರವಾಡ ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಧಾರವಾಡ : ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಧಾರವಾಡ ಜಿಲ್ಲೆಗೆ ರೆಡ್ ಅಲರ್ಟ್ ಇರುವುದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಸಂಜೆಯಿಂದ ವ್ಯಾಪಕವಾಗಿ ಮಳೆ ಆಗುತ್ತಿರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ಜೂ.12 ರಂದು ಒಂದು … Continued

ಭಾರಿ ಮಳೆ : ಇಂದು (ಜೂನ್ 12) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಖಾಸಗಿ, ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜೂನ್ 12ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.

ಭಾರಿ ಮಳೆ ; ಇಂದು (ಜೂನ್ 12) ಉತ್ತರ ಕನ್ನಡ ಜಿಲ್ಲೆ ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದರಲ್ಲಿಯೂ ವಿಶೇಷವಾಗಿ ಕರಾವಳಿ ತಾಲೂಕುಗಳಲ್ಲಿ ಗುರುವಾರ (ಜೂನ್ 12) ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಗುರುವಾರ (ಜೂನ್ 12) ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ … Continued

ಅತಿ ಭಾರಿ ಮಳೆ ಮುನ್ಸೂಚನೆ, ರೆಡ್‌ ಅಲರ್ಟ್‌ ಘೋಷಣೆ ; ಇಂದು ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹವಮಾನ ಇಲಾಖೆ ಗುರುವಾರ (ಜೂನ್ 12) ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಗುರುವಾರ (ಜೂನ್ 12) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ … Continued

ಮದುವೆ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ಬಂದ ವರನ ಕುಟುಂಬಕ್ಕೆ ಆಘಾತ; ಅಲ್ಲಿ ವಧು-ಮನೆಯವರೇ ಇರಲಿಲ್ಲ..! ಆಗಿದ್ದೇನು..?

ಮೋಗಾ: ಧ್ವನಿವರ್ಧಕಗಳಿಂದ ಹಾಡುಗಳು ಕೇಳಿಬರುತ್ತಿತ್ತು. ʼಮದುವೆ ಮೆರವಣಿಗೆ’ ಸಂಭ್ರಮದಿಂದ ಕೂಡಿತ್ತು, ಮದುಮಗ ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧನಾಗಿದ್ದ. ಆದರೆ ವರನ ಕಡೆಯ ಮದುವೆ ಮೆರವಣಿಗೆಯು ತಮ್ಮ ಗಮ್ಯಸ್ಥಾನವನ್ನು ಸಮೀಪಿಸುತ್ತಿದ್ದಂತೆ ಈ ಸಂತೋಷವು ಮಾಯವಾಯಿತು. ಮದುವೆ ನಡೆಯಬೇಕಾದ ಸ್ಥಳದಲ್ಲಿ ಅಲಂಕಾರಿಕ ದೀಪಗಳಿಲ್ಲ, ಸಂಗೀತವಿಲ್ಲ, ಮತ್ತು ಅತಿಥಿಗಳು ಇರಲಿಲ್ಲ. ಅವರು ಹೋಗಬೇಕಾದ ಮನೆಯ ಹೊರಗೆ ಬೀಗ … Continued

ಏರ್‌ ಕಂಡಿಶನ್‌ ವ್ಯವಸ್ಥೆ ಇಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ಮದುಮಗಳು..! ವರನ ಕುಟುಂದ ವಿರುದ್ಧ ವರದಕ್ಷಿಣೆ ಪ್ರಕರಣವೂ ದಾಖಲು…!!

ಉತ್ತರ ಪ್ರದೇಶದ ಆಗ್ರಾದ ಶಂಶಾಬಾದ್ ಪಟ್ಟಣದಲ್ಲಿ ನಡೆದ ಒಂದು ಅಸಾಮಾನ್ಯ ಘಟನೆಯಲ್ಲಿ, ವರನ ಕುಟುಂಬದವರು ಏರ್ಪಡಿಸಿದ್ದ ಮದುವೆ ಸ್ಥಳದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ವಧುವು ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾಳೆ…! ಆರಂಭದಲ್ಲಿ ತೀವ್ರವಾದ ಉಷ್ವಾಣತೆಯಿಂದ ಉಂಟಾದ  ವಾಗ್ವಾದವು ನಂತರ ವರದಕ್ಷಿಣೆ ಬೇಡಿಕೆ ಮತ್ತು ನಿಂದನೆಯ ಆರೋಪಗಳಾಗಿ ಪರಿಣಮಿಸಿತು. ವರದಿಗಳ ಪ್ರಕಾರ, ಸಮಾರಂಭದ ಸಮಯದಲ್ಲಿ ವಧುವು ವರನ … Continued