ಸುಪ್ರೀಂ ಕೋರ್ಟ್‌ಗೆ ನೇಮಕವಾದ ಮೂವರು ಹೊಸ ಮಹಿಳಾ ನ್ಯಾಯಮೂರ್ತಿಗಳು..ಅವರಲ್ಲಿ ಒಬ್ಬರು 2027ರಲ್ಲಿ ಸಿಜೆಐ ಆಗಬಹುದು

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಉನ್ನತೀಕರಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಎಲ್ಲ ಒಂಬತ್ತು ಹೆಸರುಗಳನ್ನು ಕೇಂದ್ರವು ಅನುಮೋದಿಸಿದೆ. ಅವರಲ್ಲಿ , ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಬೇಲಾ ತ್ರಿವೇದಿ ಮತ್ತು ಹಿಮಾ ಕೊಹ್ಲಿ -ಈ ಮೂವರನ್ನು ಒಂದೇ ಬಾರಿಗೆ ಕೊಲಿಜಿಯಂ ಶಿಫಾರಸು ಮಾಡಿದೆ. ಇವರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲು ಸಜ್ಜಾಗಿದ್ದಾರೆ. … Continued

1ರಿಂದ 8 ನೇ ತರಗತಿ ವರೆಗೆ ಶಾಲೆ ಆರಂಭ: ಆಗಸ್ಟ್ 30ರ ಸಭೆಯಲ್ಲಿ ತೀರ್ಮಾನ

ಬೆಳಗಾವಿ: 1 ರಿಂದ 8ನೇ ತರಗತಿಯವರೆಗೆ ಶಾಲೆಗಳು ಆರಂಭಿಸುವ ಕುರಿತು ಆಗಸ್ಟ್ 30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಶಾಲೆ ಆರಂಭಕ್ಕೆ ಪೋಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಸಮಿತಿಯಲ್ಲಿರುವ ಡಾ. ದೇವಿ ಪ್ರಸಾದ್ ಶೆಟ್ಟಿಯವರು 6 … Continued

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಅವಳಿ ಸ್ಫೋಟದಲ್ಲಿ 11 ಅಮೆರಿಕ ಸೈನಿಕರು ಸೇರಿದಂತೆ 60 ಮಂದಿ ಸಾವು, ಮತ್ತೆ ಎರಡು ಸ್ಫೋಟಗಳು;ವರದಿ

ಕಾಬೂಲ್‌ನಲ್ಲಿ ಗುರುವಾರ ಸಂಭವಿಸಿದ ನಾಲ್ಕು ಸ್ಫೋಟಗಳಲ್ಲಿ ಕನಿಷ್ಠ 60 ಜನರು ಮೃತಪಟ್ಟಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗುರುವಾರ ಸಂಜೆ ಕಿಕ್ಕಿರಿದ ಕಾಬೂಲ್ ವಿಮಾನ ನಿಲ್ದಾಣದ ಹೊರಗಿನಿಂದ ಎರಡು ಹಅಗೂ ಹಿಂದಿನಿಂದ ಎರಡು ಸ್ಫೋಟಗಳು ವರದಿಯಾದವು, ಇನ್ನೊಂದು ರಾತ್ರಿಯ ನಂತರ ಸ್ಫೋಟಗೊಂಡಿತು. ಕಾಬೂಲ್ ವಿಮಾನ ನಿಲ್ದಾಣದ ದಾಳಿಯಲ್ಲಿ 11 ಅಮೆರಿಕ ಸೈನಿಕರು, ಇಬ್ಬರು … Continued

ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಗೆ ತೊಂದರೆ ನೀಡಿದ ದುಷ್ಕರ್ಮಿಗಳು: ದೂರು

ಹೊಸಪೇಟೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಅವರಿಗೆ ದುಷ್ಕರ್ಮಿಗಳು ತೊಂದರೆ ನೀಡಿದ್ದಾರೆ. ಗುರುವಾರ ಮಲ್ಲಿಕಾರ್ಜುನ ಅವರ ಕುಟುಂಬವು ಐತಿಹಾಸಿಕ ಪುಣ್ಯಕ್ಷೇತ್ರವಾದ ಶ್ರೀ ತೇರಿನ ಹನುಮಪ್ಪ, ಶ್ರೀ ತಿರುಗಲ್ ತಿಮ್ಮಪ್ಪ ಮತ್ತು ಶ್ರೀ ಲಕ್ಷ್ಮೀ ದೇವಿ ಮಂದಿರ ದರ್ಶನ ಮಾಡಿ ವಾಪಸ್ಸು ಊರಿಗೆ ತೆರಳುವಾಗ ಅವರಿಗೆ ದುಷ್ಕರ್ಮಿಗಳು ತೊಂದರೆ ನೀಡಿದ್ದಾರೆ. ಈ ದೇವಸ್ಥಾನಗಳ … Continued

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ನಿಧನ

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಗುಡಿಹಳ್ಳಿ ನಾಗರಾಜ್(66) ಬೆಂಗಳೂರಿನಲ್ಲಿ ನಿಧನರಾದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದ ಗುಡಿಹಳ್ಳಿ, ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀರ್ಘ ಅವಧಿಗೆ ಕೆಲಸ ಮಾಡಿದ್ದಾರೆ. ಪತ್ರಕರ್ತರ ಸಂಘಟನೆಯಲ್ಲಿ ಸಕ್ರಿಯವಾಗಿ … Continued

ಕೃಷಿ ಶಾಸನಗಳ ವಿರುದ್ಧ 9 ತಿಂಗಳ ಪ್ರತಿಭಟನೆ: 2 ದಿನಗಳ ರಾಷ್ಟ್ರೀಯ ಸಮಾವೇಶಕ್ಕೆ ಸಿಂಗು ಗಡಿಯಲ್ಲಿ ಸೇರುತ್ತಿರುವ ರೈತರು

ನವದೆಹಲಿ: ಕಳೆದ ವರ್ಷ ಜಾರಿಗೆ ತರಲಾದ ಮೂರು ಹೊಸ ಕೃಷಿ ಶಾಸನಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಒಂಬತ್ತು ತಿಂಗಳುಗಳನ್ನು ಗುರುತಿಸಿ, ರೈತರು, ಮೀನುಗಾರರು, ರೈತ ಮಹಿಳೆಯರು, ಬುಡಕಟ್ಟು ಜನಾಂಗದವರಿಗೆ ರಾಷ್ಟ್ರೀಯ ವೇದಿಕೆಯನ್ನು ಸೃಷ್ಟಿಸುವ ಪ್ರಮುಖ ಕಸರತ್ತಿನಲ್ಲಿ ನೂರಾರು ರೈತರು ಗುರುವಾರ ರಾಷ್ಟ್ರೀಯ ರಾಜಧಾನಿಯ ಸಿಂಗು ಗಡಿಯಲ್ಲಿ ಜಮಾಯಿಸಿದ್ದಾರೆ. ಹನ್ನನ್ ಮೊಲ್ಲಾ ಮತ್ತು ರಾಕೇಶ್ ಟಿಕೈಟ್ ಸೇರಿದಂತೆ … Continued

ಕರ್ನಾಟಕದಲ್ಲಿ ಗುರುವಾರ 1,213 ಹೊಸ ಕೊರೊನಾ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ಹೊಸ ಪ್ರಕರಣಗಳು ಸತತ ಮೂರನೇ ದಿನ ಇಳಿಕೆಯಾಗಿದೆ. ಗುರುವಾರ 1,213 ಮಂದಿಗೆ ಸೋಂಕು ವರದಿಯಾಗಿದ್ದು, ಇದೇ ವೇಳೆ 25 ಸೋಂಕಿತರು ಮೃತಪಟ್ಟಿದ್ದಾರೆ. 1,206 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಮಾತ್ರ ಸತತ ಮೂರನೇ ದಿನ ಶೇ.0.6ರಷ್ಟಿದ್ದು, ಮರಣ ದರ ಶೇ.2 ಆಸುಪಾಸಿನಲ್ಲಿದೆ. ಗುರುವಾರ ಅತಿ ಹೆಚ್ಚು ಬೆಂಗಳೂರು … Continued

ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಟ ಇಟಲಿ ವಿಮಾನಕ್ಕೆ ಗುಂಡಿನ ದಾಳಿ..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ವಾಧೀನದಲ್ಲಿ ಅಸ್ಥಿರ ಪರಿಸ್ಥಿತಿಯ ನಡುವೆ, ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುತ್ತಿರುವಾಗ ಅಪರಿಚಿತ ಬಂದೂಕುಧಾರಿ ಗುರುವಾರ ಇಟಾಲಿಯನ್ ವಿಮಾನ C130 ಮೇಲೆ ಕಾಬೂಲ್‌ನ ಉತ್ತರದಲ್ಲಿರುವ ಬೆಟ್ಟದಿಂದ ಗುಂಡು ಹಾರಿಸಿದ್ದಾನೆ. ಯಾವುದೇ ಪರಿಣಾಮವಿಲ್ಲದೆ ವಿಮಾನವು ಕುವೈತ್‌ಗೆ ಸುರಕ್ಷಿತವಾಗಿ ಬಂದಿತ್ತಾದರೂ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಎರಡು ಬೃಹತ್ ಸ್ಫೋಟಗಳು ಕಾಬೂಲ್ … Continued

ಆ.28 ರಿಂದ ಕರ್ನಾಟಕದ 530 ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಒಟ್ಟು 530 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ- ಸಿ.ಇ.ಟಿ.-2021 ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿದ್ದು, ಕೋವಿಡ್ ಗಮನದಲ್ಲಿರಿಸಿಕೊಂಡು ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸಲು … Continued

ಕಾಬೂಲ್‌ ವಿಮಾನ ನಿಲ್ದಾಣದ ಗೇಟ್ ಹೊರಗೆ ನಡೆದ ಆತ್ಮಾಹುತಿ ದಾಳಿ: 13 ಸಾವು; 3 ಅಮೆರಿಕ ಸೈನಿಕರು,ಹಲವರಿಗೆ ಗಾಯ

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ವಿಮಾನ ನಿಲ್ದಾಣದ ಅಬ್ಬೆ ಗೇಟ್ ಬಳಿ ಸ್ಫೋಟದ ಸದ್ದು ಕೇಳಿಸಿತು. ಇತ್ತೀಚಿನ ವರದಿಗಳು ದಾಳಿಕೋರರಲ್ಲಿ ಒಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡರು ಮತ್ತು ಮತ್ತೊಬ್ಬರು ವಿಮಾನ ನಿಲ್ದಾಣದ ಹೊರಗೆ ಗುಂಪಿನ ಮೇಲೆ … Continued