ಬಿಟ್‌ ಕಾಯಿನ್‌ನಲ್ಲಿ ೧.೫ ಹೂಡಿಕೆ ಮಾಡಿದ ಟೆಸ್ಲಾ

ವಿದ್ಯುತ್‌ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾ ಕ್ರಿಪ್ಟೊಕರೆನ್ಸಿ ಬಿಟ್‌ಕಾಯಿನ್‌ (ಬಿಟಿಸಿ)ದಲ್ಲಿ ೧.೫ ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಮುಂದಾಗಿದೆ. ಎಲೋನ್‌ ಮಸ್ಕ್‌ ಅವರ ಸಂಸ್ಥೆ ಟೆಸ್ಲಾ ಡಿಜಿಟಲ್‌ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದ ನಂತರ ಬಿಟ್‌ ಕಾಯಿನ್‌ ಪ್ರತಿ ಬಿಟಿಸಿಗೆ ೪೭,೫೧೩ ಡಾಲರ್‌ ಮುಟ್ಟಿದೆ. ಕಂಪನಿಯು ಒಂದು ಹಂತದಲ್ಲಿ ಬಿಟಿಸಿಯನ್ನು ಕರೆನ್ಸಿಯಾಗಿ ಸ್ವೀಕರಿಸುತ್ತದೆ ಎಂದು ಅಂದಾಜಿಸಲಾಗಿದೆ. … Continued

ರಾಕೇಶ ಅಸ್ತಾನೆಗೆ ಸಿಬಿಐ ಕ್ಲೀನ್‌ಚಿಟ್‌

ನವ ದೆಹಲಿ: ಸ್ಟರ್ಲಿಂಗ್ ಬಯೋಟೆಕ್ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ ಮುಖ್ಯಸ್ಥ ಹುದ್ದೆಗೆ ಮುಂಚೂಣಿಯಲ್ಲಿರುವ ಶ್ರೀ ಅಸ್ತಾನಾ, ಸಂದೇಸರ ಸಹೋದರರು ನಿರ್ವಹಿಸುತ್ತಿರುವ ಸ್ಟರ್ಲಿಂಗ್‌ ಬಯೋಟೆಕ್‌ ಅವ್ಯವಹಾರದಲ್ಲಿ ಹಣ ಪಡೆದುಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಕೈಬರಹದ ಡೈರಿಗಳಲ್ಲಿ, … Continued

ಪ್ರಧಾನಿಯವರೇ ನಾವು ಆಂದೋಳನ ಜೀವಿಯಾಗಲು ಹೆಮ್ಮೆ ಪಡುತ್ತೇವೆ, ಯಾಕೆಂದರೆ ಇದು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದೆ 

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಾಜ್ಯಸಭೆಯಲ್ಲಿ ಭಾಷಣ ಮಾತನಾಡಿದ ಸಂರ್ಭದಲ್ಲಿ ಬಳಸಿದ “ಆಂದೋಳನ ಜೀವಿʼ ಎಂಬ ಪದ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸುವ ಸಂರ್ಭದಲ್ಲಿ ಈಗ ʼಆಂದೋಳನ ಜೀವಿʼಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿದ್ದಾರೆ ಹಾಗೂ ಎಲ್ಲಿ ಯಾವುದೇ … Continued

ಮೋದಿ-ಬಿಡೆನ್‌ ಮಾತುಕತೆ: ಇಂಡೋ ಪೆಸಿಫಿಕ್‌ ಪ್ರದೇಶದ ಸುರಕ್ಷತೆಗೆ ಒತ್ತು

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಮರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಮಾತನಾಡಿದರು. ಬಿಡೆನ್ ಜನವರಿ 20ರಂದು ಅಧಿಕಾರ ವಹಿಸಿಕೊಂಡ ನಂತರ ಇದು ಇಬ್ಬರು ನಾಯಕರ ನಡುವಿನ ಮೊದಲ ಸಂಭಾಷಣೆಯಾಗಿದೆ. ನಾವು ಪ್ರಾದೇಶಿಕ ಸಮಸ್ಯೆಗಳು ಮತ್ತು ನಮ್ಮ ಹಂಚಿಕೆಯ ಆದ್ಯತೆಗಳನ್ನು ಚರ್ಚಿಸಿದ್ದೇವೆ. ಹವಾಮಾನ ಬದಲಾವಣೆಯ ವಿರುದ್ಧ ನಮ್ಮ ಸಹಕಾರವನ್ನು ಹೆಚ್ಚಿಸಲು ನಾವು … Continued

ಕೆಂಪುಕೋಟೆ ಹಿಂಸಾಚಾರ: ಕೊನೆಗೂ ದೀಪ್‌‌ಸಿಧು ಸೆರೆ, ೭ ದಿನ ಪೊಲೀಸ್‌ ಕಸ್ಟಡಿಗೆ

ನವ ದೆಹಲಿ: ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿರುವ ಪಂಜಾಬಿ ನಟ-ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರನ್ನು ದೆಹಲಿ ಪೊಲೀಸ್ ವಿಶೇಷ ಕೋಶವು ಮಂಗಳವಾರ ಬೆಳಿಗ್ಗೆ ಬಂಧಿಸಿದೆ. ಅವರನ್ನು  ದೆಹಲಿ ಮೆಟ್ರೊಪಅಲಿಟಿನ್‌ ನ್ಯಯಾಲಯಕ್ಕೆ ಹಾಜರುಪಡಿಸಲಾಗಿದ್ದ ಅವರನ್ನು ಕೋರ್ಟ್‌  ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಕೆಂಪು ಕೋಟೆಯಲ್ಲಿ … Continued

ಕೆಂಪುಕೋಟೆ ಹಿಂಸಾಚಾರ: ಜೆಪಿಸಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ನವ ದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ಪೆರೇಡ್ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸೋಮವಾರ ಒತ್ತಾಯಿಸಿದರು. ಹಾಗೂ ಸ್ಮಾರಕವನ್ನು ‘ಅಪವಿತ್ರಗೊಳಿಸಲು’ ಸರ್ಕಾರವು ಸುಸಂಘಟಿತ ಸಂಚು ಮಾಡಿದೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ … Continued

೨೦೨೨ರ ಆರಂಭದಲ್ಲಿ ೫ಜಿ ಸೇವೆ ರೋಲ್‌ ಔಟ್‌

ನವ ದೆಹಲಿ: ಆರು ತಿಂಗಳ ನಂತರ ನಡೆಯಲಿರುವ ಮತ್ತೊಂದು ಸುತ್ತಿನ ಸ್ಪೆಕ್ಟ್ರಮ್ ಹರಾಜಿನ ನಂತರ 5 ಜಿ ಸೇವೆಗಳ ರೋಲ್ ಔಟ್‌ 2022 ರ ಆರಂಭದಲ್ಲಿ ಪ್ರಾರಂಭವಾಗಲಿದೆ ಎಂದು ಸರ್ಕಾರ ನಿರೀಕ್ಷಿಸುತ್ತದೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಮುಂದಿನ ಪೀಳಿಗೆಯ ತಂತ್ರಜ್ಞಾನವನ್ನು ಹಲವಾರು ದೇಶಗಳು ವಾಣಿಜ್ಯಿಕವಾಗಿ ಹೊರತಂದಾಗ 5 ಜಿ ಸೇವೆಗಳನ್ನು … Continued

ಪರಿಷತ್ತಿನಲ್ಲೂ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ತಿನಲ್ಲಿ ಸೋಮವಾರ ಅಂಗೀಕಾರ ದೊರೆಯಿತು. ಕಾಯ್ದೆ ಮಂಡನೆ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಗದ್ದಲ ಮಾಡಿದರೂ ಕೊನೆಗೆ ಧ್ವನಿ ಮತಕ್ಕೆ ಹಾಕಿದಾಗ ಅಂಗೀಕಾರ ದೊರೆಯಿತು. ಮಸೂದೆ ಮಂಡಿಸಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಕಾಯ್ದೆಗೆ ಸದನ ಒಪ್ಪಿಗೆ ನೀಡುವಂತೆ ಮನವಿ … Continued

ಜಮ್ಮು-ಕಾಶ್ಮೀರ ತಿದ್ದುಪಡಿ ಮಸೂದೆಗೆ ಅನುಮೋದನೆ

ನವ ದೆಹಲಿ: ರಾಜ್ಯಸಭೆಯು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು 2021 ರಲ್ಲಿ ಅನುಮೋದನೆ ನೀಡಿತು. ಇದು ನಾಗರಿಕ ಸೇವಾ ಅಧಿಕಾರಿಯ ಜಮ್ಮು ಮತ್ತು ಕಾಶ್ಮೀರ ( ಕೇಡರ್ ಅನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶದೊಂದಿಗೆ (ಎಜಿಎಂಯುಟಿ) ವಿಲೀನಗೊಳಿಸುವ ಸುಗ್ರೀವಾಜ್ಞೆಯನ್ನು ಬದಲಿಸಲು ಪ್ರಯತ್ನಿಸುತ್ತದೆ. ಕಳೆದ ವಾರ ಸಂಸತ್ತಿನ ಮೇಲ್ಮನೆಯಲ್ಲಿ ಈ ಮಸೂದೆಯನ್ನು … Continued

ಅಂಗನವಾಡಿಗೆ ದಾಖಲಾಗುವವರ ಸಂಖ್ಯೆ ಕುಸಿತ

ನವ ದೆಹಲಿ: ಸರ್ಕಾರದ ಅಂಗನವಾಡಿ ಕಾರ್ಯಕ್ರಮದ ಫಲಾನುಭವಿಗಳ ಸಂಖ್ಯೆಯಲ್ಲಿ ಸುಮಾರು ಎರಡು ಕೋಟಿ ಇಳಿಕೆ ಕಂಡಿದೆ ಎಂದು ಇತ್ತೀಚೆಗೆ ಸಂಸತ್ತಿನಲ್ಲಿ ಸಲ್ಲಿಸಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. 2014-2015ರಲ್ಲಿ ಆರು ತಿಂಗಳಿನಿಂದ 10.45 ಕೋಟಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳು ಸುಮಾರು 14 ಲಕ್ಷ ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಿದ್ದರು. ಈ ಸಂಖ್ಯೆ ಸ್ಥಿರವಾದ ಕುಸಿತ … Continued