ದೇಶದಲ್ಲಿ ೧೧,೦೩೯ ಜನರಿಗೆ ಕೊರೋನಾ ಪಾಸಿಟಿವ್‌, ೧೧೦ ಸಾವು

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ  11,039 ಹೊಸ  ಕೊರೋನಾ ವೈರಸ್ಪ್ರ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ  ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಬುಧವಾರ ಬೆಳಿಗ್ಗೆ ತಿಳಿಸಿದೆ. ಇದರೊಂದಿಗೆ ಪ್ಯಾನ್-ಇಂಡಿಯಾ ಒಟ್ಟಾರೆ ಪ್ರಕರಣ 1,07,77, 284 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಮೂಕವಾಗುತ್ತಿದ್ದು, ದೇಶದಲ್ಲಿ ಒಟ್ಟಾರೆ   1,60,057 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ. ಈ … Continued

ರಿಲಯನ್ಸ್, ಟಾಟಾ, ಮಹೀಂದ್ರಾ ಒಂದುಗೂಡಿಸಲಿರುವ ಹಸಿರು ಇಂಧನ?

ಭಾರತವು ಭೂಮಿಯ ಮೇಲಿನ ಹೇರಳವಾಗಿರುವ ಅಂಶಗಳಲ್ಲಿ ಒಂದಾದ ಹೈಡ್ರೋಜನ್ ಅನ್ನು ಬಂಡವಾಳವಾಗಿಸಲು ಯೋಜಿಸುತ್ತಿದೆ. ಸಾರ್ವತ್ರಿಕವಾಗಿ ಲಭ್ಯವಿರುವ ಈ ಅಂಶದಿಂದ ಲಾಭ ಪಡೆಯಲು ಹಣಕಾಸು ಸಚಿವರಾದ ನಿರ್ಮಲಾ  ಸೀತಾರಾಮನ್‌  2021-22ರ ಬಜೆಟ್ ಸಮಯದಲ್ಲಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಿಸಿದ್ದಾರೆ. ಹಸಿರು ಇಂಧನ ಮೂಲವು ಭಾರತದ ಕೆಲವು ದೊಡ್ಡ ಕಂಪನಿಗಳಾದ ರಿಲಯನ್ಸ್, ಟಾಟಾ, ಮಹೀಂದ್ರಾ ಮತ್ತು ಇಂಡಿಯನ್ ಆಯಿಲ್ … Continued

ದೆಹಲಿ ಪ್ರತಿಭಟನೆಗೆ ರಾಜ್ಯದಿಂದಲೂ ರೈತರು

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಹೊರವಲಯ ಸಿಂಗುದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಜ್ಯದಿಂದ ಸಾವಿರಾರು ರೈತರು ಮಂಗಳವಾರದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಗಡಿ ಭಾಗಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, … Continued

ಫೆ.೨೮ಕ್ಕೆ ಎಫ್‌ಡಿಎ ಪರೀಕ್ಷೆ

ಬೆಂಗಳೂರು : ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಂದೂಡಲಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‍ಡಿಎ)  ಪರೀಕ್ಷೆಯನ್ನು ಫೆ. 28ಕ್ಕೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ. ಕೆಪಿಎಸ್‍ಸಿ ಕಚೇರಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣದಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಜ.24ಕ್ಕೆ ಎಫ್‍ಡಿಎ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು   ಮುಂದೂಡಲಾಗಿತ್ತು. … Continued

ಸೇತುವೆ ನಿರ್ಮಿಸಬೇಕೇ ಹೊರತು ಗೋಡೆಗಳನ್ನಲ್ಲ:ರಾಹುಲ್‌

ನವ ದೆಹಲಿ: ದೆಹಲಿ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನ ಸ್ಥಳದಲ್ಲಿ ಪೊಲೀಸರು  ಬ್ಯಾರಿಕೇಡ್‍ಗಳು ಮತ್ತು ರಸ್ತೆ ತಡೆಗಳನ್ನು ನಿರ್ಮಿಸುತ್ತಿರುವುದನ್ನು  ಕಾಂಗ್ರೆಸ್‌ ನಾಯಕ   ರಾಹುಲ್ ಗಾಂಧಿ ಖಂಡಿಸಿದ್ದಾರೆ. , ಕೇಂದ್ರ ಸರ್ಕಾರ ರೈತರ ನಡುವೆ ಸೇತುವೆಗಳನ್ನು ನಿರ್ಮಿಸಬೇಕೇ  ಹೊರತು ಈ ರೀತಿ ಗೋಡೆಗಳನ್ನು ನಿರ್ಮಿಸುವುದಲ್ಲ ಎಂದು ರಾಹುಲ್‌ ಹೇಳಿದ್ದಾರೆ. ದೆಹಲಿ ಗಡಿ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ … Continued

ಎಟಿಎಂ ಹಲ್ಲೆ ಪ್ರಕರಣ: ಆರೋಪಿಗೆ ೧೦ ವರ್ಷ ಶಿಕ್ಷೆ

ಬೆಂಗಳೂರು :  2013ರಂದು  ರಾಜ್ಯವನ್ನೇ ಕಂಗಾಲು ಮಾಡಿದ್ದ   ಎಟಿಎಂ ಹಲ್ಲೆ ಪ್ರಕರಣದ ಅಪರಾಧಿ ಮಧುಕರಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನಾಲ್ಕು ವರ್ಷಗಳ ಕಾಲ ಸುದೀರ್ಘ ವಾದ ಆಲಿಸಿದ ನ್ಯಾಯಾಲಯ  ಮಧುಕರ್ ಅಪರಾಧಿ ಎಂದು ಹೇಳಿತ್ತು ಹಾಗೂ ಶಿಕ್ಷೆ ಪ್ರಕಟಿಸುವುದನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು.  ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ ನ ಕಾರ್ಪೋರೇಷನ್ ಎಟಿಎಂನಲ್ಲಿ ಮಹಿಳೆಯ … Continued

ದಕ್ಷಿಣ ಏಶಿಯಾ ರಾಷ್ಟ್ರಗಳ ಜೊತೆ ಪ್ರತಿ ಮಿಲಿಯನ್‌ಗೆ ಸಾವಿನ ಹೋಲಿಕೆ ಸೂಕ್ತವಲ್ಲ

ನವ ದೆಹಲಿ: ಪ್ರತಿ ದಶ ಲಕ್ಷ ಜನಸಂಖ್ಯೆಗೆ ದಕ್ಷಿಣ ಏಷ್ಯಾದ ಇತರ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗಿಂತ ಹೆಚ್ಚಿನ COVID-19 ಸಂಬಂಧಿತ ಸಾವುಗಳು ವರದಿಯಾಗಲು  ಅನೇಕ ಅಂಶಗಳು ಕಾರಣವಾಗಿರಬಹುದು ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ವೈವಿಧ್ಯಮಯ ಭೌಗೋಳಿಕತೆ, ಪ್ರಕರಣದ ವ್ಯಾಖ್ಯಾನಗಳು,  ಪರೀಕ್ಷೆ ಮತ್ತು ವರದಿ ಮಾಡುವ ಪ್ರೋಟೋಕಾಲ್‌ಗಳಂತಹ ಅಂಶಗಳು ಇರುವುದರಿಂದ  ಎಂದು ಆರೋಗ್ಯ ಸಚಿವ … Continued

ಹರ್ಯಾಣ:ಟೋಲ್‌ ಪ್ಲಾಜಾಗಳಲ್ಲಿ ರೈತರ ಧರಣಿ

ಚಂಡಿಗಡ: ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಬೆಂಬಲವಾಗಿ   ಮಂಗಳವಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಧರಣಿ ನಡೆಸಿದರು. ಹಿಸಾರ್ ಬಳಿಯ ಹಿಸಾರ್-ಸಿರ್ಸಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲ್ಯಾಂಡ್ರಿ ಟೋಲ್ ಪ್ಲಾಜಾದಲ್ಲಿ, ಸಾವಿರಾರು ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಸುದೀರ್ಘ ಯುದ್ಧಕ್ಕೆ ಪ್ರತಿಜ್ಞೆ ಮಾಡಿದರು. ಈ ಸಭೆಯಲ್ಲಿ ರೈತ ಮುಖಂಡರಾದ ಅಶೋಕ್ ಧವಾಲೆ, … Continued

ಘರ್ಷಣೆ: ಅಕಾಲಿ ದಳ ಮುಖಂಡ ಬಾದಲ್‌ ಕಾರಿಗೆ ಹಾನಿ

ಚಂಡಿಗಡ: ಮಂಗಳವಾರ ಪಂಜಾಬ್‌ನ ಜಲಾಲಾಬಾದ್‌ನಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಇದರಲ್ಲಿ ಎಸ್‌ಎಡಿ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾದಲ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರೂ, ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.ಫೆಬ್ರವರಿ 14 ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು … Continued

ಪತ್ರಕರ್ತ ಪುನಿಯಾಗೆ ಜಾಮೀನು

ನವ ದೆಹಲಿ: :ಸಿಂಗು ಗಡಿಯಲ್ಲಿ ಪೊಲೀಸರ  ಕರ್ತವ್ಯಕ್ಕೆ ಅಡ್ಡಿ   ಮತ್ತು ಪೊಲೀಸ್ ಸಿಬ್ಬಂದಿಗೆ ನೋವುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದ  ಸ್ವತಂತ್ರ ಪತ್ರಕರ್ತ (ಫ್ರೀಲ್ಯಾನ್ಸ್ ‌ಜರ್ನಲಿಸ್ಟ್)  ಮಂದೀಪ್ ಪುನಿಯಾ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಆದೇಶದಲ್ಲಿ, ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ರೋಹಿಣಿ ನ್ಯಾಯಾಲಯ) ಸತ್ವೀರ್ ಸಿಂಗ್ ಲಂಬಾ … Continued