ವ್ಯಾಲೆಂಟೈನ್ ಡೇ ಆಚರಣೆ: ವಿಕೃತಿಯ ವ್ಯಾಪಾರೀಕರಣದ ಹುನ್ನಾರ, ಹಿಂದೂ ಸಂಸ್ಕೃತಿಗೆ ಧಕ್ಕೆ,

ಫೆ.೧೪ರಂದು ವಿಶ್ವದಾದ್ಯಂತ ವ್ಯಾಲೈಂಟೇನ್‌ ಡೇ ಆಚರಿಸುತ್ತಾರೆ. ಇದರ ಹಾವಳಿ ವಿರುದ್ಧ ಕಳೆದ ಅನೇಕ ವರ್ಷಗಳಿಂದ ಹೋರಾಡುತ್ತ ಜನಜಾಗೃತಿ ಮೂಡಿಸುತ್ತ ಬರುತ್ತಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು ಇದರ ಬದಲು ತಂದೆ-ತಾಯಿ  ಪೂಜಾದಿನ ಆಚರಿಲು ಜಾಗೃತಿ ಮೂಡಿಸುತ್ತಿದ್ದಾರೆ. ವ್ಯಾಲೆಂಟೈನ್‌ ಡೇ ಹಿಂದಿರುವ ಹುನ್ನಾರ, ಸಂಸ್ಕೃತಿ ನಾಶ, ವ್ಯಾಪಾರೀಕರಣ, ಡ್ರಗ್‌ ಮಾಫಿಯಾ ಇತ್ಯಾದಿಗಳ ಕುರಿತು ಜಾಗೃತಿ … Continued

ರೈತ ವಿರೋಧಿ ಕಾನೂನುಗಳು ದೇಶವಾಸಿಗಳ ಮೇಲೆ ನಡೆಸಿದ ದಾಳಿ: ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ದಾಳಿ ಮುಂದುವರೆಸಿದ ರಾಹುಲ್‌ ಗಾಂಧಿ, ರೈತ ವಿರೋಧಿ ಮೂರು ಕಾನೂನುಗಳು ಕೇವಲ ರೈತರ ಮೇಲಷ್ಟೇ ಅಲ್ಲ, ದೇಶದ ಶೇ.೪೦ರಷ್ಟು ಜನರ ಮೇಲೆ ನಡೆಸಿದ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ. ಅವರು ರಾಜಸ್ಥಾನದಲ್ಲಿ ರೈತರ ಆಂದೋಲನ ಬೆಂಬಲಿಸಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಉತ್ತಮ ಭವಿಷ್ಯ ಖಚಿತಪಡಿಸಿಕೊಳ್ಳಲು … Continued

ಪ್ರೇಮಿಗಳ ದಿನಾಚರಣೆ ಬದಲು ಮಾತಾ-ಪಿತಾ ಪೂಜಾ ದಿನಾಚರಣೆ: ಪ್ರಮೋದ ಮುತಾಲಿಕ

ಬೆಂಗಳೂರು: ಫೆಬ್ರವರಿ ೧೪ರಂದು ಪ್ರೇಮಿಗಳ ದಿನಾಚರಣೆ ಮಾಡುವ ಬದಲು ಮಾತಾ-ಪಿತಾ ಪೂಜಾದಿನವನ್ನಾಗಿ ಆಚರಿಸುವುದಾಗಿ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ತಿಳಿಸಿದ್ದಾರೆ. ಶ್ರೀರಾಮ ಸೇನೆ ಕಾರ್ಯಕರ್ತರು ನಗರ ಪ್ರದೇಶಗಳಲ್ಲಿ ವಿವಿಧೆಡೆ ನಿಯೋಜನೆಗೊಳ್ಳಲಿದ್ದು, ಪ್ರೇಮಿಗಳ ದಿನಾಚರಣೆ ಮಾಡುವವರ ಮೇಲೆ ನಿಗಾವಹಿಸಲಿದ್ದಾರೆ. ಯುವಕರಿಗೆ ತಂದೆ-ತಾಯಿ ಪೂಜಿಸುವಂತೆ ಸಲಹೆ ನೀಡಲಿದ್ದಾರೆ. ನಾವು ೫೦-೬೦ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರೇಮಿಗಳ ದಿನಾಚರಣೆ … Continued

ರೈತರ ಪ್ರತಿಭಟನಾ ಸ್ಥಳದಲ್ಲಿ ಪ್ರತ್ಯೇಕ ಇಂಟರ್‌ನೆಟ್‌, ಸಿಸಿಟಿವಿ ಅಳವಡಿಕೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಪ್ರತ್ಯೇಕ ಇಂಟರ್‌ನೆಟ್‌ ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳುವ ಮೂಲಕ ಕೇಂದ್ರ ಸರಕಾರಕ್ಕೆ ಪ್ರತಿಭಟನಾನಿರತ ರೈತರು ಸವಾಲೆಸೆದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಇಂಟರ್‌ನೆಟ್‌ ಕಡಿತಗೊಳಿಸಿದ ಕ್ರಮವನ್ನು ಖಂಡಿಸಿದ ಹೋರಾಟಗಾರರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕಾನೂನು ರದ್ದುಪಡಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ … Continued

ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಿ: ಕೇಂದ್ರಕ್ಕೆ ಶಿವಸೇನಾ ಆಗ್ರಹ

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶ್ಯಾರಿ ಬಿಜೆಪಿ ದಾರಿಯಲ್ಲಿ ಸಾಗುತ್ತಿದ್ದು, ಸಂವಿಧಾನ ಎತ್ತಿಹಿಡಿಯಬೇಕಾದರೆ ಕೇಂದ್ರ ಸರಕಾರ ಕೂಡಲೇ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಬೇಕೆಂದು ಮಹಾರಾಷ್ಟ್ರ ಆಡಳಿತ ನಡೆಸುತ್ತಿರುವ ಶಿವಸೇನೆ ಆಗ್ರಹಿಸಿದೆ. ಮಹಾವಿಕಾಸ್‌ ಅಘಾಡಿ ಸರಕಾರ ಸ್ಥಿರ ಮತ್ತು ದೃಢವಾಗಿದೆ. ರಾಜ್ಯ ಸರಕಾರವನ್ನು ಗುರಿಯಾಗಿಸಲು ಕೇಂದ್ರವು ರಾಜ್ಯಪಾಲರ ಹೆಗಲು ಬಳಸುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ರಾಜ್ಯಪಾಲ ಭಗತ್‌ಸಿಂಗ್‌ ಕೋಶ್ಯಾರಿ … Continued

ಪೆಟ್ರೋಲ್‌, ಡೀಸೆಲ್‌ ಮತ್ತೆ ತುಟ್ಟಿ

ನವದೆಹಲಿ: ಸತತ ೫ನೇ ದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ೯೫ರೂ. ತಲುಪಿದೆ. ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿ ಅಧಿಸೂಚನೆನ್ವಯ ಶನಿವಾರ ಪೆಟ್ರೋಲ್‌ ದರ ಲೀಟರ್‌ಗೆ ೩೦ ಪೈಸೆ ಹಾಗೂ ಡೀಸೆಲ್‌ ಪ್ರತಿ ಲೀಟರ್‌ಗೆ ೩೬ ಪೈಸೆ ಹೆಚ್ಚಳಗೊಂಡಿದೆ. ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ ೯೪.೯೩ ರೂ. ತಲುಪಿದ್ದರೆ, ಡೀಸೆಲ್‌ … Continued

ಪ್ರತಿಭಟಿಸುವ ಸ್ವಾತಂತ್ರ್ಯ ಎಲ್ಲ ಸಮಯದಲ್ಲಿ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಪ್ರತಿಭಟಿಸುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಎಲ್ಲ ಸಮಯದಲ್ಲಿ ಮತ್ತು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಪೌರತ್ವ ಕಾಯಿದೆ ವಿರೋಧಿಸಿ ದೆಹಲಿಯ ಶಹೀನ್‌ಭಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ಕಾನೂನುಬಾಹಿರ ಎಂದು ಹೇಳಿತ್ತು. ಇದನ್ನು ಮರುಪರಿಶೀಲನೆ ಮಾಡುವಂತೆ ಕೋರಿ 12 ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ ಮೊರೆ … Continued

ವೀರಶೈವ-ಲಿಂಗಾಯತರನ್ನು ಒಬಿಸಿ ಸೇರ್ಪಡೆಗೆ ಒತ್ತಾಯ

ಬೆಂಗಳೂರು:ನಗರದಲ್ಲಿ ನಿವಾರ ಸಭೆ ಸೇರಿದ್ದ ವೀರಶೈವ- ಲಿಂಗಾಯಿತ ಸಮುದಾಯ ನೂರಾರು ಸ್ವಾಮೀಜಿಗಳು ವೀರಶೈವ ಲಿಂಗಾಯಿತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಬಲ ಹಕ್ಕೊತ್ತಾಯ ಮಂಡಿಸಿದರು. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳ ಒಬಿಸಿಗೆ ಸೇರಿಸುವ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ಅವರಿಗೆ ಸ್ವಾಮೀಜಿಗಳು ಪತ್ರದ ಪ್ರತಿಯನ್ನು … Continued

ಭಾರತದ ಮೊದಲ ಸಿಎನ್‍ಜಿ ಟ್ರ್ಯಾಕ್ಟರ್ ಬಿಡುಗಡೆ

ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ದೇಶದಲ್ಲೇ ಮೊದಲ ಬಾರಿಗೆ ಡೀಸೆಲ್ ಟ್ರ್ಯಾಕ್ಟರ್ ಅನ್ನು ಎಂಅರ್‍ಎನ್ ಸಮೂಹ ಸಂಸ್ಥೆಯು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ವಾಹನವಾಗಿ ಪರಿವರ್ತಿಸುವತ್ತ ಹೆಜ್ಜೆ ಇಟ್ಟಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮೊದಲ ಸಿಎನ್‍ಜಿ ಟ್ರ್ಯಾಕ್ಟರ್‍ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ … Continued

ಗಾಲ್ವಾನ್‌ ಕಣಿಗೆ ಭೇಟಿ ನೀಡಲಿರುವ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ

ನವದೆಹಲಿ: ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ ಭಾರತ ಹಾಗೂ ಚೀನಾ ಪಡೆಗಳ ಮಧ್ಯೆ ಅಹಿತಕರ ಘಟನೆ ನಡೆದ ಪೂರ್ವ ಲದಾಖ್‌ನ ಗಾಲ್ವಾನ್‌ ಕಣಿವೆ ಹಾಗೂ ಪಾಂಗಾಂಗ್‌ ಸರೋವರಕ್ಕೆ ಭೇಟಿ ನೀಡಲು ನಿರ್ಧರಿಸಿದೆ. ಗಾಲ್ವಾನ್‌ ಹಾಗೂ ಪಾಂಗಾಂಗ್‌ಗೆ ಭೇಟಿ ನೀಡುವ ಮುನ್ನ ಸರ್ಕಾರದ ಅನುಮತಿಯನ್ನು ಪಡೆಯಬೇಕಿದೆ. ಮಾಜಿ ಕೇಂದ್ರ ಸಚಿವ ಜುವಾಲ್‌ ಓರಮ್‌ ಅಧ್ಯಕ್ಷತೆಯ ಕಾಂಗ್ರೆಸ್‌ ಮುಖಂಡ … Continued