ಪಿಎಂ ಆವಾಸ್ ಯೋಜನೆ: 15 ದಿನದಲ್ಲಿ ಲೀಡ್ ಬ್ಯಾಂಕ್ ಅರ್ಜಿ ಸಲ್ಲಿಕೆಗೆ ಸೂಚನೆ

ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು 15 ದಿನದೊಳಗಾಗಿ ಆಯಾ ಜಿಲ್ಲೆಗಳ ಲೀಡ್ ಬ್ಯಾಂಕ್ ಗಳಿಗೆ ಸಲ್ಲಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಆಯಾ ಜಿಲ್ಲಾ ಲೀಡ್ ವ್ಯವಸ್ಥಾಪಕರು ಅರ್ಜಿಗಳನ್ನು ವಿವಿಧ ಬ್ಯಾಂಕ್ ಗಳಿಗೆ ಕಳುಹಿಸಿ, ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಗುರುವಾರ ಪ್ರಧಾನ ಮಂತ್ರಿ ಆವಾಸ್ ಮತ್ತು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗಳ ಪ್ರಗತಿ … Continued

ಎಫ್‍ಡಿಎ ಪ್ರಶ್ನೆಪತ್ರಿಕೆ ಸೋರಿಕೆ :ಮತ್ತೊಬ್ಬನ ಸೆರೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸುವ ಎಫ್‍ಡಿಎ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ನಿವಾಸಿ ವೆಂಕಟೇಶ್ ಬಂಧಿತ ಆರೋಪಿ. ಈತ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪನ ಚಿಕ್ಕಪ್ಪನ ಮಗ. ಆರೋಪಿ ವೆಂಕಟೇಶ್ ಸಹ ಎಫ್‍ಡಿಎ ಪರೀಕ್ಷೆ ತೆಗೆದುಕೊಂಡಿದ್ದ. ಈತನ … Continued

ಬಿಡೆನ್-ಕ್ಸಿ ಮಾತುಕತೆ: ಚೀನಾ ಆರ್ಥಿಕ ನೀತಿಗಳ ಬಗ್ಗೆ ಬಿಡೆನ್ ಕಳವಳ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಬುಧವಾರ ಸಂಜೆ (ವಾಷಿಂಗ್ಟನ್ ಸಮಯ) ಚೀನಾದ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾತನಾಡಿದರು. ಬಿಡೆನ್ ಜನವರಿ 20 ರಂದು ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ದೂರವಾಣಿ ಕರೆ ಇದಾಗಿದೆ. ಮುಕ್ತ ಇಂಡೋ-ಪೆಸಿಫಿಕ್  ಸಂರಕ್ಷಿಸುವ ತನ್ನ ಆದ್ಯತೆಯನ್ನು ದೃಢೀಕರಿಸುವಾಗ  ಬೀಜಿಂಗ್‌ನ ಆರ್ಥಿಕ ಅಭ್ಯಾಸಗಳು, ಅದರ … Continued

ಸಾಲುಸಾಲು ಮೀಸಲು ಬೇಡಿಕೆಗಳ ಸವಾಲಿನ ಮಧ್ಯೆ ಸಿಎಂ ಬಿಎಸ್‌ವೈ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ತಮ್ಮ ನಾಲ್ಕನೇ ಅವಧಿಯಲ್ಲಿಯೂ ಒಂದಿಲ್ಲ ಎಂದು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಲೇ  ಇದ್ದಾರೆ. ಬಿಜೆಪಿಗೆ ಬೇರೆ ಪಕ್ಷಗಳಿಂದ ಬಂದ ಬಹುತೇಕ ಎಲ್ಲ ಶಾಸಕರಿಗೆ ಸಚಿವ ಸ್ಥಾನ ಕೊಟ್ಟ ನಂತರದಲ್ಲಿಯೂ ಅವರಿಗೆ ಸವಾಲು ಅಥವಾ ಬಿಕ್ಕಟ್ಟಿನ ಪರಿಸ್ಥಿತಿ ತಪ್ಪಿಲ್ಲ. ಯಡಿಯೂರಪ್ಪ ಅಧಿಕಾರದಲ್ಲಿರುವಾಗಲೆಲ್ಲ ಅವರಿಗೆ ಇಂಥ ಸವಾಲುಗಳು ಎದುರಾಗುತ್ತಲೇ ಇರುತ್ತವೆ.  ಅದಕ್ಕೇ ಅವರು ಇತ್ತೀಚಿಗೆ ವಿಧಾನಸಭೆಯಲ್ಲಿ … Continued

ರಾಜ್ಯಪಾಲರ ಕಚೇರಿ ಖಚಿತ ಪಡಿಸದ ಕಾರಣ ಗೊಂದಲ

ಮುಂಬೈ: ಸರಕಾರಿ ವಿಮಾನ ಬಳಕೆಯನ್ನು ರಾಜಭವನ ಸಚಿವಾಲಯ ಖಚಿತಪಡಿಸದ ಕಾರಣದಿಂದಾಗಿಯೇ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರ ಉತ್ತರಾಖಂಡ ಪ್ರಯಾಣಕ್ಕೆ ವಿಳಂಬವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.. ಉತ್ತರಾಖಂಡದ ಡೆಹ್ರಾಡೂನ್‌ಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಸಂವಹನ ಕೊರತೆಯಿಂದಾಗಿ ರಾಜ್ಯಪಾಲರು ಸರಕಾರಿ ವಿಮಾನದಲ್ಲಿ ತೆರಳಲು ಸಾಧ್ಯವಾಗಲಿಲ್ಲ. ರಾಜ್ಯಪಾಲರು ವಿಮಾನ ಹತ್ತುವ ಮುನ್ನ ಅನುಮತಿಗಾಗಿ ಕೋರಲಾಗಿತ್ತು. … Continued

ರಾಜ ಭವನ ಚಲೋ ವೇಳೆ ಕೊಲ್ಕತ್ತಾದಲ್ಲಿ ಹಿಂಸಾಚಾರ

ಕೊಲ್ಕತ್ತ: ಎಡ ಪಕ್ಷಗಳ ವಿದ್ಯಾರ್ಥಿಗಳ ಸಂಘಟನೆ ಆಯೋಜಿಸಿದ್ದ ರಾಜಭವನ ಚಲೋ ಮೆರವಣಿಗೆಯಲ್ಲಿ  ಕೊಲ್ಕತ್ತಾದಲ್ಲಿ ಹಿಂಸಾಚಾರ ನಡೆದಿದೆ. ತೃಣಮೂಲ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಯುವಕರಿಗೆ “ಉದ್ಯೋಗ” ನೀಡುವಂತೆ ಒತ್ತಾಯಿಸಲು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು.ಅಲ್ಲದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎದುರು ಕೆಂಪು ಕಾರ್ಡ್‌ ಪ್ರದರ್ಶಿಸುವುದು ಅವರ ಉದ್ದೇಶವಾಗಿತ್ತು. ಕೋಲ್ಕತ್ತದಡೊರಿನಾ ಕ್ರಾಸಿಂಗ್‌ನಲ್ಲಿ ಹಿಂಸಾಚಾರ ಆರಂಭಗೊಂಡ ನಂತರ ಪ್ರತಿಭಟನಾ ನಿರತರನ್ನು … Continued

ಸಿರಿವಂತರಿಂದ ಸಿರಿವಂತರಿಗಾಗಿ ಸಿರಿವಂತರು ಮಂಡಿಸಿದ ಬಜೆಟ್‌

ನವದೆಹಲಿ: ಇತ್ತೀಚಿಗೆ ಮಂಡಿಸಲಾದ ಆಯವ್ಯಯ ಕುರಿತು ನಿರಾಸೆ ವ್ಯಕ್ತಪಡಿಸಿದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಪ್ರಸ್ತುತ ಬಜೆಟ್‌ ಸಿರಿವಂತರಿಂದ ಸಿರಿವಂತರಿಗಾಗಿ ಸಿರಿವಂತರು ಮಂಡಿಸಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ರಾಜ್ಯಸಭೆಯಲ್ಲಿ ಬಜೆಟ್‌ ಕುರಿತ ಚರ್ಚೆಯಲ್ಲಿ ಮಾತನಾಡಿ, ಪ್ರಸ್ತುತ ಬಜೆಟ್‌ ಆರ್ಥಿಕತೆಯನ್ನು ಸ್ಪರ್ಧಾತ್ಮಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂಷಿಸಿದರು. ಬಜೆಟ್‌ನಲ್ಲಿ ಬಡವರಿಗಾಗಿ ಏನೂ ಇಲ್ಲ. ಬಡವರು ಬಡತನದಲ್ಲಿಯೇ … Continued

ಕೊರೋನಾ ಲಸಿಕೆ ಪಡೆದವರಲ್ಲಿ ಕರ್ನಾಟಕದಲ್ಲಿ ಮಹಿಳೆಯರೇ ಹೆಚ್ಚು

ಬೆಂಗಳೂರು: ರಾಜ್ಯದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಮೊದಲ ಹಂತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಸಿಬ್ಬಂದಿಗೆ ಲಸಿಕೆ ಹಾಕಲಾಗಿದ್ದು, ಈವರೆಗೆ ೨,೮೯,೭೮೭ ಮಹಿಳೆಯರು ಲಸಿಕೆ ಪಡೆದರೆ ೧,೭೪,೫೪೫ ಪುರುಷರು ಲಸಿಕೆ ಹಾಕಿಸಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು, ಎಎನ್‌ಎಂ ಶುಶ್ರೂಷಕಿಯರ ಸಂಖ್ಯೆ ಹೆಚ್ಚಾಗಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಪುರುಷರು ಲಸಿಕೆ ಪಡೆದುಕೊಳ್ಳಲು ಆಸಕ್ತಿ … Continued

ಸರ್ಕಾರಿ ವಿಮಾನದಲ್ಲಿ ರಾಜ್ಯಪಾಲರ ಪ್ರಯಾಣಕ್ಕೆ ಅನುಮತಿ ಕೊಡದ ಮಹಾ ಸರ್ಕಾರ

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಸರ್ಕಾರಿ ವಿಮಾನದಲ್ಲಿ ತೆರಳುವುದಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಫೆ.11ರಂದು ರಾಜ್ಯಪಾಲ ಕೋಶಿಯಾರಿಯವರು ಉತ್ತರಾಖಂಡ್ ನ ಡೆಹ್ರಾಡೂನ್ ಗೆ ಪ್ರಯಾಣ ಮಾಡಬೇಕಿತ್ತು, ಇದಕ್ಕಾಗಿ ಸರ್ಕಾರಿ ವಿಮಾನವನ್ನೂ ಕಾಯ್ದಿರಿಸಲಾಗಿತ್ತು. ಆದರೆ ರಾಜ್ಯಪಾಲರಿಗೆ ಅನುಮತಿ ಸಿಗದ ಕಾರಣ ವಾಣಿಜ್ಯ ಪ್ರಯಾಣಿಕರ ವಿಮಾನವನ್ನೇ ಬಳಸಿ ಪ್ರಯಾಣ ಮಾಡಿದ್ದಾರೆ. ಬಿಜೆಪಿ ಈ … Continued

ಕೆಂಪುಕೋಟೆ ಹಿಂಸಾಚಾರ:ಎಫ್ಐಆ‌ರ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲು ಕೋರ್ಟ್‌ ಸೂಚನೆ

ದೆಹಲಿ: ದೆಹಲಿಯಲ್ಲಿ ಜನವರಿ ೨೬ರಂದು ನಡೆದ ಹಿಂಸಾಚಾರ ಘಟನೆಗಾಗಿ ಬಂಧಿತ ಆರೋಪಿಗಳು ಪೊಲೀಸ್‌ ಠಾಣೆಗೆ ಅಲೆದಾಡುವುದನ್ನು ತಪ್ಪಿಸಲು ಅಂದಿನ ಎಲ್ಲ ಎಫ್‌ಐಆರ್‌ಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ. ಬಂದಿತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ನಂಗ್ಲೊಯಿ ಪೊಲೀಸ್‌ ಠಾಣೆ ಜನವರಿ ೨೬ರ ಹಿಂಸಾಚಾರದ ಕುರಿತ ಆರೋಪಿಗಳ ಎಫ್‌ಐಆರ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ … Continued