ವೀಡಿಯೊ…| ಪಶ್ಚಿಮ ಬಂಗಾಳದಲ್ಲಿ ‘ಬೀದಿ ನ್ಯಾಯʼದಲ್ಲಿ ನಡು ರಸ್ತೆಯಲ್ಲೇ ಮಹಿಳೆಗೆ ದೊಣ್ಣೆಯಿಂದ ಥಳಿತ ; ವಿಪಕ್ಷಗಳಿಂದ ಮಮತಾ ವಿರುದ್ಧ ವಾಗ್ದಾಳಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಅನಾಗರಿಕ ಘಟನೆಯಲ್ಲಿ ಜನಸಂದಣಿ ಮುಂದೆಯೇ ನಡು ರಸ್ತೆಯಲ್ಲಿಯೇ ವ್ಯಕ್ತಿಯೊಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಥಳಿಸುತ್ತಿರುವ ದೃಶ್ಯದ ವೀಡಿಯೊ ವೈರಲ್‌ ಆಗಿದ್ದು, ಪಶ್ಚಿಮ ಬಂಗಾಳದ ಪ್ರತಿಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ವಿಪಕ್ಷಗಳಾದ ಸಿಪಿಎಂ ಮತ್ತು ಬಿಜೆಪಿ ಈ ವೀಡಿಯೊ ಉತ್ತರ ಬಂಗಾಳದ ಉತ್ತರ ದಿನಾಜಪುರ … Continued

ಬಾಲಿವುಡ್‌ ಹಿರಿಯ ನಟ-ಸಂಸದ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು

ಮುಂಬೈ : ಬಾಲಿವುಡ್‌ ಹಿರಿಯ ನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪುತ್ರ ಲವ್ ಸಿನ್ಹಾ ಅವರು ಭಾನುವಾರ ಬಹಿರಂಗಪಡಿಸಿದ್ದಾರೆ. ಶಾಟ್ ಗನ್ ಎಂದು ಕರೆಯಲ್ಪಡುವ ನಟ ಕಳೆದ ಎರಡು ದಿನಗಳಿಂದ ಜ್ವರ ಮತ್ತು ದುರ್ಬಲತೆಯಿಂದ ಬಳಲುತ್ತಿದ್ದರು, ಈ ಕಾರಣದಿಂದಾಗಿ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. … Continued

ಐಸಿಸಿ ʼಟಿ20 ವಿಶ್ವಕಪ್ 2024ʼ ಪ್ರಶಸ್ತಿ ಗೆದ್ದ ಭಾರತದ ಕ್ರಿಕೆಟ್‌ ತಂಡಕ್ಕೆ 125 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ…!

ನವದೆಹಲಿ: ಭಾನುವಾರ (ಜೂನ್ 30) ಐಸಿಸಿ (ICC) ಪುರುಷರ T20 ವಿಶ್ವಕಪ್ 2024 ಅನ್ನು ಗೆದ್ದ ಟೀಮ್ ಇಂಡಿಯಾಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 125 ಕೋಟಿಗಳ ಬೃಹತ್ ಬಹುಮಾನವನ್ನು ಘೋಷಿಸಿದೆ. ಶನಿವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿದ ನಂತರ ಐಸಿಸಿ T20 ವಿಶ್ವಕಪ್ ಟ್ರೋಫಿ … Continued

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಂತರ ಟಿ20ಐ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜಾ

ನವದೆಹಲಿ: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಭಾನುವಾರ ನಿವೃತ್ತಿ ಘೋಷಿಸಿದ್ದಾರೆ. ಬಾರ್ಬಡೋಸ್‌ನಲ್ಲಿ ಭಾರತದ T20 ವಿಶ್ವಕಪ್ ವಿಜಯದ ನಂತರ ಸ್ಟಾರ್ ಬ್ಯಾಟರಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟಿ20 ಸ್ವರೂಪದಿಂದ ನಿವೃತ್ತಿ ಘೋಷಿಸಿದ ಒಂದು ದಿನದ ನಂತರ ಜಡೇಜಾ ಸಹ ನಿವೃತ್ತಿ ಘೋಷಿಸಿದ್ದಾರೆ. ಇನ್ಸ್ಟಾಗ್ರಾಂ(Instagram)ನಲ್ಲಿ ಅವರು ತಮ್ಮ … Continued

ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ, ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ನಿಧನ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ಉಂಟಾಗಿದೆ. ಮೊಯಿಲಿ ಪುತ್ರಿ, ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 46 ವರ್ಷದ ಹಂಸ ಮೊಯ್ಲಿ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ನಿಧನರಾಗಿದ್ದಾರೆ ಎಂದು … Continued

ಜುಲೈ 2ರ ವರೆಗೆ ಕರ್ನಾಟಕದ 6 ಜಿಲ್ಲೆಗಳಲ್ಲಿ ಅಧಿಕ ಮಳೆಯ ಮುನ್ಸೂಚನೆ

ಬೆಂಗಳೂರು : ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರದ ಕರಾವಳಿಯ ಸಮುದ್ರತೀರಗಳಲ್ಲಿ ದಟ್ಟಮೋಡ ಇರುವುದರಿಂದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿಯೂ ಹಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, … Continued

ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಇದೇ ಮೊದಲ ಸಲ ಒಂದೇ ಬಾರಿಗೆ ಸೇನೆ-ನೌಕಾಪಡೆ ಮುಖ್ಯಸ್ಥರಾದ ಕ್ಲಾಸ್ ಮೇಟ್ಸ್…!

ನವದೆಹಲಿ : ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ತರಗತಿಯಲ್ಲಿ ಓದಿದ್ದ ಇಬ್ಬರು ಭಾರತೀಯ ಭೂ ಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಹಾಗೂ ನೌಕಾಪಡೆ ಮುಖ್ಯಸ್ಥರಾಗಿ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ನೇಮಕಗೊಂಡಿರುವುದು ವಿಶೇಷವಾಗಿದೆ. ಇವರಿಬ್ಬರೂ 70ರ ದಶಕದಲ್ಲಿ ಮಧ್ಯಪ್ರದೇಶದ ರೇವಾ ಸೈನಿಕ … Continued

T20 ವಿಶ್ವಕಪ್ 2024 : ಪ್ರಶಸ್ತಿ ಗೆದ್ದ ಭಾರತಕ್ಕೆ ಸಿಕ್ಕ ಟಿ20 ವಿಶ್ವಕಪ್ ಬಹುಮಾನದ ಮೊತ್ತ..ವಿವಿಧ ವಿಭಾಗದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿದ ನಂತರ ಭಾರತೀಯ ಕ್ರಿಕೆಟ್ ತಂಡ T20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತದ 11 ವರ್ಷಗಳ ಕಾಯುವಿಕೆಯ ನಂತರ ರೋಹಿತ್ ಶರ್ಮಾ ನಾಯಕತ್ವದಡಿ ಭಾರತದ ತಂಡವು ತನ್ನ ಎರಡನೇ ಟಿ 20 ವಿಶ್ವಕಪ್‌ ಪ್ರಶಸ್ತಿ ಗೆದ್ದುಕೊಂಡಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಾಸ್ ಗೆದ್ದು … Continued

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದು ಭಾನುವಾರ (ಜೂನ್‌ 30)ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಗಾಳಿಯ … Continued

ವೀಡಿಯೊ..| ಭಾರತದ T20 ವಿಶ್ವಕಪ್ ವಿಜಯದ ನಂತರ ಬಾರ್ಬಡೋಸ್ ಪಿಚ್‌ ನ ಮಣ್ಣು ತಿಂದ ನಾಯಕ ರೋಹಿತ್ ಶರ್ಮಾ

ಭಾರತದ ನಾಯಕ ರೋಹಿತ್ ಶರ್ಮಾ ಶನಿವಾರ ವಿಶಿಷ್ಟ ರೀತಿಯಲ್ಲಿ ತಂಡದ T20 ವಿಶ್ವಕಪ್ 2024 ಗೆಲುವನ್ನು ಆಚರಿಸಿಕೊಂಡಿದ್ದಾರೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಜಯಸಾಧಿಸಿ T20 ವಿಶ್ವಕಪ್ 2024 ರೋಹಿತ್ ನೇತೃತ್ವದ ಟೀಮ್‌ ಏಳು ರನ್‌ಗಳಿಂದ ಜಯಸಾಧಿಸಿತು. ಐಸಿಸಿ ಪ್ರಶಸ್ತಿಗಾಗಿ 11 ವರ್ಷಗಳ ಬರವನ್ನು ಇದು ಕೊನೆಗೊಳಿಸಿತು. ಭಾರತೀಯ ತಂಡದಲ್ಲಿ … Continued