ಇಸ್ರೇಲ್‌ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಮಾಸ್ ಉಪ ಸೇನಾ ನಾಯಕ : ವರದಿ

ಗಾಜಾದಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಉಪ ಕಮಾಂಡರ್ ಮತ್ತು ದಕ್ಷಿಣ ಇಸ್ರೇಲ್‌ನ ಅಕ್ಟೋಬರ್ 7 ರ ದಾಳಿಯ ಮಾಸ್ಟರ್‌ಮೈಂಡ್ ಆಗಿರುವ ಮಾರ್ವಾನ್ ಇಸ್ಸಾ ಒಂದು ವಾರದ ಹಿಂದೆ ಇಸ್ರೇಲಿ ವೈಮಾನಿಕ ದಾಳಿಯ ನಂತರ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಹಮಾಸ್‌ನ ಅತ್ಯುನ್ನತ ಶ್ರೇಣಿಯ ಅಧಿಕಾರಿಗಳಲ್ಲಿ ಒಬ್ಬರಾದ ಮಾರ್ವಾನ್ ಇಸ್ಸಾ ಮಾರ್ಚ್ 11 ರಂದು ಇಸ್ರೇಲಿ ಮಿಲಿಟರಿ ಯುದ್ಧವಿಮಾನಗಳು ಇಸ್ಸಾ ಮತ್ತು ಇನ್ನೊಬ್ಬ ಹಿರಿಯ ಹಮಾಸ್ ಅಧಿಕಾರಿಯನ್ನು ಕೇಂದ್ರ ಗಾಜಾದ ನೆಲ ಮಾಳಿಗೆಯಲ್ಲಿ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ರಿಯರ್ ಅಡ್ಮ್ ಡೇನಿಯಲ್ ಹಗರಿ ಹೇಳಿದರು.
ಅವರ ಸಾವಿನೊಂದಿಗೆ, ಇಸ್ರೇಲ್‌ನ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಮಾರ್ವಾನ್ ಇಸ್ಸಾ ಗಾಜಾದಲ್ಲಿ ಕೊಲ್ಲಲ್ಪಟ್ಟ ಹಿರಿಯ-ಹಮಾಸ್ ನಾಯಕರಾದರು. ಇಸ್ರೇಲಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಗಾಜಾದಲ್ಲಿ ಹಮಾಸ್ ನಾಯಕತ್ವವನ್ನು ಅಳಿಸಿಹಾಕುವ ತಮ್ಮ ಅಭಿಯಾನದಲ್ಲಿ ಒಂದು ಪ್ರಗತಿ ಎಂದು ಬಣ್ಣಿಸಿದ್ದಾರೆ. ಆದರೆ ಅವರ ಸಾವು ಹಮಾಸ್‌ನ ನಾಯಕತ್ವ ರಚನೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುವುದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಇಸ್ರೇಲ್ ಈ ಹಿಂದೆ ಹಮಾಸ್‌ನ ರಾಜಕೀಯ ಮತ್ತು ಮಿಲಿಟರಿ ನಾಯಕರನ್ನು ಕೊಂದಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು...| ದಿಗ್ಭ್ರಮೆಗೊಳಿಸುವ ಅಪರೂಪದ ವರ್ಣರಂಜಿತ ಬೆಳಕಿನ ಪ್ರದರ್ಶನಕ್ಕೆ ಕಾರಣವಾಯ್ತು ʼಪ್ರಬಲʼ ಸೌರ ಚಂಡಮಾರುತ : ವೀಕ್ಷಿಸಿ

ಹಮಾಸ್‌ನಲ್ಲಿ ಮಾರ್ವಾನ್ ಇಸ್ಸಾ ಪಾತ್ರವೇನು?
ಅವರ ಮರಣದ ಸಮಯದಲ್ಲಿ 58 ಅಥವಾ 59 ವರ್ಷ ವಯಸ್ಸಿನವರಾಗಿದ್ದ ಮಾರ್ವಾನ್ ಇಸ್ಸಾ 2012 ರಿಂದ ಹಮಾಸ್‌ನ ಮಿಲಿಟರಿ ವಿಭಾಗವಾದ ಕಸ್ಸಾಮ್ ಬ್ರಿಗೇಡ್ಸ್‌ನ ನಾಯಕ ಮೊಹಮ್ಮದ್ ಡೀಫ್‌ಗೆ ಉಪನಾಯಕರಾಗಿ ಸೇವೆ ಸಲ್ಲಿಸಿದ್ದರು. ಮತ್ತೊಬ್ಬ ಉನ್ನತ ಕಮಾಂಡರ್ ಅಹ್ಮದ್ ಅಲ್-ಜಬಾರಿಯ ಹತ್ಯೆಯ ನಂತರ ಇಸ್ಸಾ ಈ ಹುದ್ದೆಯನ್ನು ವಹಿಸಿಕೊಂಡರು.
ಇಸ್ಸಾ ಅವರನ್ನು ಪ್ಯಾಲೇಸ್ಟಿನಿಯನ್ ವಿಶ್ಲೇಷಕರು ಮತ್ತು ಮಾಜಿ ಇಸ್ರೇಲಿ ಭದ್ರತಾ ಅಧಿಕಾರಿಗಳು ಹಮಾಸ್‌ನ ಮಿಲಿಟರಿ ಮತ್ತು ರಾಜಕೀಯ ನಾಯಕರ ನಡುವಿನ ಸಂಪರ್ಕದ ಕೊಂಡಿಯಾಗಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಕಾರ್ಯತಂತ್ರಗಾರ ಎಂದು ಹೇಳಿದ್ದಾರೆ. ಹಮಾಸ್‌ಗೆ ನಿಕಟವಾಗಿರುವ ಪ್ಯಾಲೇಸ್ಟಿನಿಯನ್ ವಿಶ್ಲೇಷಕ ಸಲಾಹ್ ಅಲ್-ದಿನ್ ಅಲ್-ಅವವ್ಡೆಹ್ ಅವರ ಪ್ರಕಾರ, ಗುಂಪಿನಲ್ಲಿ ಮಾರ್ವಾನ್ ಇಸ್ಸಾ ಅವರ ಸ್ಥಾನವನ್ನು “ಮಿಲಿಟರಿ ವಿಭಾಗದ ನಾಯಕತ್ವದ ಮುಂಚೂಣಿ ಶ್ರೇಣಿಯ ನಾಯಕ” ಎಂದು ವಿವರಿಸಿದ್ದಾರೆ.
ಮಾಜಿ ಇಸ್ರೇಲಿ ಮಿಲಿಟರಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ತಮಿರ್ ಹೇಮನ್ ಅವರು, ಮಾರ್ವಾನ್ ಇಸ್ಸಾ ಹಮಾಸ್‌ನ “ರಕ್ಷಣಾ ಮಂತ್ರಿ,” ಅದರ ಉಪ ಮಿಲಿಟರಿ ಕಮಾಂಡರ್ ಮತ್ತು ಅದರ “ಕಾರ್ಯತಂತ್ರದ ಮನಸ್ಸು” ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು...| ದಿಗ್ಭ್ರಮೆಗೊಳಿಸುವ ಅಪರೂಪದ ವರ್ಣರಂಜಿತ ಬೆಳಕಿನ ಪ್ರದರ್ಶನಕ್ಕೆ ಕಾರಣವಾಯ್ತು ʼಪ್ರಬಲʼ ಸೌರ ಚಂಡಮಾರುತ : ವೀಕ್ಷಿಸಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement