ಅಮೆರಿಕದಲ್ಲಿ ಕೊವಿಡ್‌-19 ಪ್ರತಿಕಾಯಗಳೊಂದಿಗೆ ಮಗು ಜನನ…

ಫ್ಲೋರಿಡಾ: ಕೊವಿಡ್‌-೧೯ ಪ್ರತಿಕಾಯಗಳನ್ನು ಹೊಂದಿರುವ  ಮಗು ಇತ್ತೀಚೆಗೆ ಅಮೆರಿಕದಲ್ಲಿ ಜನಿಸಿದೆ. ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಕೊವಿಡ್‌-19 ಲಸಿಕೆಯ ಒಂದು ಡೋಸ್ ಪಡೆದಿದ್ದ ಮಹಿಳೆಗೆ ಜನಿಸಿದ ಮಗು ಇದಾಗಿದ್ದು, ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೇಕಾಗಿರುವ ಪ್ರತಿಕಾಯಗಳೊಂದಿಗೆ ಮಗು ಜನಿಸಿದೆ ಎಂದು ಹೇಳಲಾಗಿದೆ. ಕೊವಿಡ್‌-19 ಪ್ರತಿಕಾಯಗಳೊಂದಿಗೆ ಜನಿಸಿದ ವಿಶ್ವದ ಮೊದಲ ಮಗುವಿನ ಬಗ್ಗೆ ಸಂಶೋಧನೆಗಳು ಕೂಡ ನಡೆಯುತ್ತಿದೆ … Continued

ಮತ್ತೆ ವಿಶ್ವದ ನಂ.1 ಶ್ರೀಮಂತನ ಪಟ್ಟ ಅಲಂಕರಿಸಿದ ಎಲೋನ್​ ಮಸ್ಕ್‌

ಸ್ಯಾನ್ ​​ ಫ್ರಾನ್ಸಿಸ್ಕೋ : ರಾತ್ರೋ ರಾತ್ರಿ ತಮ್ಮ ಕಂಪನಿ ಶೇರುಗಳ ಮೌಲು ಹೆಚ್ಚಾದ ಕಾರಣ ಮತ್ತೆ ಎಲೋನ್​ ಮಸ್ಕ್‌ ವಿಶ್ವದ ನಂ.1 ಶ್ರೀಮಂತನಾಗಿದ್ದಾನೆ. 2020ರ ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಬಹು ದಿನಗಳಿಂದ ಜಗತ್ತಿನ ನಂಬರ್ 1 ಸಿರಿವಂತ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ ಜೆಫ್​ ಬೆಜೋಸ್ ಅವರನ್ನುಕೆಲವು ವಾರಗಳ ಹಿಂದೆ ಎಲೋನ್​ … Continued

ಫ್ರಾನ್ಸ್‌ನಲ್ಲಿ ಮತ್ತೊಂದು ಕೊರೊನಾ ರೂಪಾಂತರಿ ಪತ್ತೆ..!

ವಿಶ್ವಾದ್ಯಂತ ಈಗಾಗಲೇ ಕೊರೋನಾ ವೈರಸ್ ಹೆಚ್ಚುತ್ತಲೇ ಇದೆ. ಜೊತೆಗೆ ಕೊರೊನಾ ರೂಪಾಂತರಿ ಕಾಟವು ಶುರುವಾಗಿದೆ. ಈಗ ಫ್ರಾನಿಸನಲ್ಲಿ ಮತ್ತೊಂದು ರೀತಿಯ ಕೊರಿನಾ ವೈರಸ್‌ ಪತ್ತೆಯಾಗಿರುವುದು ಭೀತಿಗೆ ಕಾರಣವಾಗಿದೆ. ಇದು ಬ್ರಿಟಾನಿಯ ಫ್ರೆಂಚ್ ಪ್ರದೇಶದಲ್ಲಿ ಹೊಸ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಫ್ರೆಂಚ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆರಂಭಿಕ ವಿಶ್ಲೇಷಣೆಯು ಈ ಹೊಸ ರೂಪಾಂತರವು ಇತರಕ್ಕಿಂತ … Continued

ಸ್ಟೆಮ್ ಸೆಲ್ ಮೂಲಕ ಅಪ್ರಬುದ್ಧ ಮಾನವ ಅಂಡಾಣು ಸೃಷ್ಟಿ: ಜಪಾನ್ ವಿಜ್ಞಾನಿಗಳ ಮಹತ್ತರ ಸಾಧನೆ

ಪ್ರಯೋಗಶಾಲೆಯಲ್ಲಿ ಮಾನವ ಅಂಡಾಣುಗಳನ್ನು ಸೃಷ್ಟಿಸುವತ್ತ ವಿಜ್ಞಾನಿಗಳು ಹೆಜ್ಜೆ ಇಟ್ಟಿದ್ದಾರೆ.ಜಪಾನಿನ ವಿಜ್ಞಾನಿಗಳ ಒಂದು ತಂಡ ಮಾನವ ರಕ್ತ ಕಣಗಳನ್ನು ಸ್ಟೆಮ್ ಸೆಲ್ ಆಗಿ ಪರಿವರ್ತಿಸಿ, ನಂತರ ಅವು ಅಪ್ರಬುದ್ಧ ಮಾನವ ಅಂಡಾಣುಗಳಾಗಿ ಪರಿವರ್ತನೆ ಮಾಡಿದಂತಹದ ಪ್ರಯೋಗ ಮಾಡಿದ್ದಾರೆ. ಈಗ ಸೃಷ್ಟಿಯಾದ ಅಂಡಾಣುಗಳು ಮಗುವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮಾನವ ಸಂತಾನೋತ್ಪತ್ತಿಗೆ ಉಪಯುಕ್ತ ಮತ್ತು ಸುರಕ್ಷಿತವಾದ ಅಂಡಾಣುಗಳನ್ನು ಸೃಷ್ಟಿಸಲು ಇನ್ನೂ … Continued

ನಾನ್‌ವೆಜ್‌ ಪಿಜ್ಜಾ ಪೂರೈಕೆ : ೧ ಕೋಟಿ ರೂ. ಪರಿಹಾರಕ್ಕೆ ಕೋರ್ಟ್‌ ಮೆಟ್ಟಿಲೇರಿದ ಸಸ್ಯಾಹಾರಿ ಮಹಿಳೆ

ವೆಜ್‌ ಪಿಜ್ಜಾ ಆರ್ಡರ್‌ ಮಾಡಿದ್ದರೂ ನಾನ್‌ ವೆಜ್‌ ಪಿಜ್ಜಾ ಸರಬರಾಜು ಮಾಡಿದ್ದಕ್ಕಾಗಿ ಮಹಿಳೆ ೧ ಕೋಟಿ ರೂ. ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಗಾಜಿಯಾಬಾದ್‌ನಲ್ಲಿನ ಸಸ್ಯಾಹಾರ ಸೇವನೆ ಮಾಡುವ ಮಹಿಳೆ ದೀಪಾಲಿ ತ್ಯಾಗಿ ಅಮೆರಿಕದ ರೆಸ್ಟೋರೆಂಟ್‌ನಿಂದ ಸಸ್ಯಾಹಾರಿ ಪಿಜ್ಜಾ ಆರ್ಡರ್‌ ಮಾಡಿದ್ದಾರೆ. ಆದರೆ ರೆಸ್ಟೊರೆಂಟ್‌ನವರು ಮಾಂಸಾಹಾರಿ ಪಿಜ್ಜಾವನ್ನು ನೀಡಿದ್ದಾರೆ. ದೀಪಾಲಿ ಪಿಜ್ಜಾ ತಿನ್ನುವಾಗ ಅದು … Continued

ಶ್ರೀಲಂಕಾದಲ್ಲಿ ಬುರ್ಖಾ, ಮದರಸಾ ನಿಷೇಧ…!?

ತನ್ನ ದೇಶದಲ್ಲಿ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಲಾಗುವುದು ಹಾಗೂ ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ ಶಾಲೆಗಳನ್ನು ಮುಚ್ಚಲಾಗುವುದು ಎಂದು ಸರ್ಕಾರದ ಸಚಿವರೊಬ್ಬರ ಹೇಳಿಕೆ ಉಲ್ಲೇಖಿಸಿ ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆಲವು ಮುಸ್ಲಿಂ ಮಹಿಳೆಯರು ಧರಿಸುತ್ತಿದ್ದ ಬುರ್ಖಾವನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ನಿಷೇಧಿಸಲು ಶುಕ್ರವಾರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಾಗಿ ಸಾರ್ವಜನಿಕ ಭದ್ರತಾ ಸಚಿವ ಶರತ್ … Continued

ಅಮೆರಿಕ ವಿಸಾ ನೀತಿ ಮರುಪರಿಷ್ಕರಣೆ

ವಾಷಿಂಗ್ಟನ್;ಅಮೆರಿಕಾರದಲ್ಲಿ ಕೆಲಸ ಮಾಡುವ ಲಕ್ಷಾಂತರ ವಿದೇಶಿ ವೃತ್ತಿಪರ ನೌಕರರಿಗೆ ಅನುಕೂಲವಾಗುವಂತೆ ಎಚ್-1ಬಿ ವಿಸಾ ನೀತಿ ಮರುಪರಿಷ್ಕರಣೆ ಮಾಡುವುದಾಗಿ ಜೋ ಬೈಡೆನ್ ಸರ್ಕಾರ ತಿಳಿಸಿದೆ. ಹಿಂದಿನ ಟ್ರಂಪ್ ಆಡಳಿತದಲ್ಲಿ ರದ್ದುಗೊಂಡಿದ್ದ ಮೂರು ನಿಯಮಗಳನ್ನು ಮರು ಜಾರಿಗೊಳಿಸಲಾಗುತ್ತಿದೆ. ಇದರಿಂದ ಬಿಗಿಗೊಳಿಸಲಾಗಿರುವ ವಿಸಾ ನೀತಿ ಸಡಿಲಗೊಂಡಿದೆ ಎಂದು ಶ್ವೇತ ಭವನ ಹೇಳಿದೆ. ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳ (ಯುಎಸ್‍ಸಿಐಎಸ್) … Continued

ಭೂಮಿ ಸಮೀಪ ಹಾದುಹೋಗಲಿರುವ ಬೃಹತ್ ಕ್ಷುದ್ರಗ್ರಹ

ವಾಷಿಂಗ್ಟನ್: ಬೃಹತ್ ಕ್ಷುದ್ರಗ್ರಹವೊಂದು ಮಾರ್ಚ್ 21ರಂದು ಭೂಮಿಯ ಪಕ್ಕದಲ್ಲಿಯೇ ಹಾದು ಹೋಗಲಿದೆ. ಇದು ಈ ವರ್ಷ ಭೂಮಿಯ ಸಮೀಪ ಬರಲಿರುವ ಅತಿ ದೊಡ್ಡ ಕ್ಷುದ್ರಗ್ರಹವಾಗಿದೆ ಎಂದು ನಾಸಾ ಹೇಳಿದೆ. ಈ ಕ್ಷುದ್ರಗ್ರಹವು ಭೂಮಂಡಲದಿಂದ 1.25 ಮಿಲಿಯನ್ ಮೈಲು (ಎರಡು ಮಿಲಿಯನ್ ಕಿಮೀ) ದೂರದಲ್ಲಿ ಸಾಗಲಿದೆ ಎಂದು ತಿಳಿಸಿರುವ ನಾಸಾ ಅಪರೂಪದ ಕ್ಷುದ್ರಗ್ರಹ ನೋಡಲು ಖಗೋಳ ವೀಕ್ಷಕರಿಗೆ … Continued

ಗಂಡಂದಿರ ಹೆಗಲ ಮೇಲೆ ಹೊತ್ತು ಓಡಿದ ಪತ್ನಿಯರು..!

ಮಹಿಳಾ ದಿನಾಚರಣೆಯಂದು ನೇಪಾಲದಲ್ಲಿ ನಡೆದ ಕಾರ್ಯಕ್ರಮವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ನೇಪಾಳದ ದೇವ್ಘಾಟ್ ಗ್ರಾಮ ಸಭೆ ಆಯೋಜಿಸಿದ್ದ ಸ್ಫರ್ಧೆಯೊಂದರಲ್ಲಿ ಮಹಿಳೆಯರು ತಮ್ಮ ಪತಿಯಂದಿರನ್ನು ಹೆಗಲ ಮೇಲೆ ಹೊತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ.ವಿವಿಧ ವಯೋಮಾನಕ್ಕೆ ಸೇರಿದ 16 ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. … Continued

ಕೋವಿಡ್ ಅಮೆರಿಕಕ್ಕೆ ಕಾಲಿಟ್ಟು 1 ವರ್ಷ: 1.9 ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಅವರು 1.9 ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಪ್ರೋತ್ಸಾಹಕ ಮಸೂದೆಗೆ ಸಹಿ ಹಾಕಿದ್ದಾರೆ. ಶ್ವೇತಭವನದ ಒವಲ್ ಕಚೇರಿಯಲ್ಲಿ ಆರ್ಥಿಕ ಪ್ರೋತ್ಸಾಹಕಕ್ಕೆ ಸಹಿ ಹಾಕಿದರು.ಅಮೆರಿಕ ಕಾಂಗ್ರೆಸ್ ಮಸೂದೆಗೆ ಅನುಮೋದನೆ ನೀಡಿತ್ತು. ನಿರುದ್ಯೋಗ … Continued