ಬ್ರಿಟನ್‌ ಹೆದರಿಸುತ್ತಿರುವ ಮತ್ತೊಂದು ರೂಪಾಂತರಿ ವೈರಸ್‌

ಲಂಡನ್: ಬ್ರಿಟನ್‍ನಲ್ಲಿ ಕೊರೊನಾ ವೈರಸ್‍ಗಿಂತ ಮಾರಣಾಂತಿಕವಾದ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ. ಮಧ್ಯ ವಯಸ್ಕರ ಮೇಲೂ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಬಿ.1.1.7 ರೂಪಾಂತರ ವೈರಸ್ ಹಿಂದಿನ ಕೊರೊನಾ ಸೋಂಕಿಗಿಂತಲೂ ಮಾರಣಾಂತಿಕ ಎಂದು ಬ್ರಿಟನ್ ತಜ್ಞರು ಹೇಳಿದ್ದಾರೆ. ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ 54,906 ಸೋಂಕಿತರ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 227 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್ ಮೆಡಿಕಲ್ … Continued

ಭಾರತದ ಆಕ್ಷೇಪದ ನಡುವೆಯೂ ಬ್ರಹ್ಮಪುತ್ರ ನದಿಗೆ ಅಣೆಕಟ್ಟುನಿರ್ಮಾಣಕ್ಕೆ ಚೀನಾ ಸಂಸತ್ತು ಒಪ್ಪಿಗೆ

ಟಿಬೆಟ್ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಗೆ ಚೀನಾ ಸಂಸತ್ತು ಅನುಮೋದನೆ ನೀಡಿದೆ. ಕಳೆದ ವರ್ಷ ಕಮ್ಯುನಿಸ್ಟ್‌ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಯೋಜನೆಗಳನ್ನು ಗುರುವಾರ (ಮಾ.೧೧) ಚೀನಾದ ಸಂಸತ್ತಿನಲ್ಲಿ ಮಂಡಿಸಲಾಯಿತು. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಎಂದು ಹೇಳಲ್ಪಡುವ ಚೀನಾದ ಸಂಸತ್ ಗುರುವಾರ 14ನೇ ಪಂಚವಾರ್ಷಿಕ ಯೋಜನೆಗೆ ಅನುಮೋದನೆ ನೀಡಿದ್ದು, ಇದರಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು … Continued

ಟಿಬೆಟ್ ಸಂಸ್ಕೃತಿ ನಾಶ ಮಾಡುತ್ತಿರುವ ಚೀನಾ: ಅಮೆರಿಕ

ವಾಷಿಂಗ್ಟನ್: ಟಿಬೆಟ್‍ ಸಂಸ್ಕೃತಿ-ಇತಿಹಾಸವನ್ನು ನಾಶಪಡಿಸುವಲ್ಲಿ ಚೀನಾನಿರತವಾಗಿದೆ ಎಂದು ಅಮೆರಿಕ ಹೇಳಿದೆ ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಟಿಬೆಟಿಯನ್ನರ ಪರ ಅಮೆರಿಕ ನಿಲ್ಲಬೇಕು ಎಂದು ಹೌಸ್ ಆಫ್ ರೆಪ್ರೆಸೆಂಟೀವ್‍ನ ಸ್ಪೀಕರ್ ನ್ಯಾನ್ಸಿ ಫೆಲೋಸಿ ಒತ್ತಾಯಿಸಿದ್ದಾರೆ. ಟಿಬೆಟ್‍ನ ಹಿಮಾಲಯ ಭೂಭಾಗ ಅತಿಕ್ರಮಿಸಿರುವ ಚೀನಾ ಧೋರಣೆ ಖಂಡಿಸಿ ಆಯೋಜಿಸಲಾಗಿದ್ದ 62ನೆ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, 62 ವರ್ಷಗಳ … Continued

ಮ್ಯಾನ್ಮಾರ್: ಸೈನ್ಯದ ಮುಂದೆ ಮಂಡಿಯೂರಿ ಮಕ್ಕಳನ್ನು ಬಿಟ್ಟುಬಿಡಿ ನನ್ನ ಕೊಂದು ಬಿಡಿ ಎಂದ ಸಿಸ್ಟರ್

ಯಾಂಗೂನ್ : ಉತ್ತರ ಮ್ಯಾನ್ಮಾರ್ ನ ನಗರವೊಂದರಲ್ಲಿ ಮಂಡಿಯೂರಿ ಕುಳಿತ ಸಿಸ್ಟರ್ ಆನ್ ರೋಸ್ ನು ತವಾಂಗ್ ಅವರು ಭಾರಿ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳ ಮುಂದೆ ಮಕ್ಕಳನ್ನು’ ಬಿಟ್ಟು ತಮ್ಮ ಪ್ರಾಣ ತೆಗೆಯುವಂತೆ ಬೇಡಿಕೊಂಡಿರುವ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ಕ್ಯಾಥೋಲಿಕ್ ಸನ್ಯಾಸಿನಿ ಪ್ರತಿಭಟನಾ ನಿರತರ ಮೇಲೆ ದಾಳಿ ನಡೆಸಲು ಸಿದ್ಧವಾಗಿದ್ದ ಮಿಲಿಟರಿ ಎದುರು ಆಕೆ … Continued

ಝಾಕೀರ್‌ ನಾಯ್ಕ್‌ ಪ್ರಕಾರ ಮದರ ಥೆರೆಸಾ ನರಕಕ್ಕೆ ಹೋಗುತ್ತಾರೆ ಯಾಕೆಂದರೆ…

ಭಾರತದಿಂದ ಪರಾರಿಯಾಗಿರುವ ಇಸ್ಲಾಮಿಸ್ಟ್ ಬೋಧಕ ಝಾಕಿರ್ ನೈಕ್‌, ಭಾನುವಾರ ಕ್ರೈಸ್ತ ಸಂತರಾದ ಮದರ್ ತೆರೇಸಾ ಮುಸ್ಲಿಮೇತರಳಾಗಿರುವುದರಿಂದ ನರಕಕ್ಕೆ ಹೋಗುತ್ತಾಳೆ ಎಂದು ಹೇಳಿದ್ದಾರೆ. ಮದರ್ ತೆರೇಸಾ ಅವರಂತಹ ‘ನೀತಿವಂತರು’ ಮತ್ತು ‘ಒಳ್ಳೆಯ’ ಮುಸ್ಲಿಮೇತರರು ಸಹ ನರಕಕ್ಕೆ ಹೋಗುತ್ತಾರೆಯೇ ಎಂದು ಸಭಿಕರೊಬ್ಬರು ಪ್ರಶ್ನೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದ್ದಾರೆ. ಇದನ್ನು ಓಪ್‌ ಇಂಡಿಯಾ ಸುದ್ದಿ ಪೋರ್ಟಲ್‌ ವರದಿ … Continued

ಮತ್ತೆ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ..!

ಪೆಟ್ರೋಲ್, ಡೀಸೆಲ್ ದರ ತೀವ್ರ ಹೆಚ್ಚಾಗಿರುವ ಸಂದರ್ಭದಲ್ಲಿ ಮತ್ತೆ ಕಚ್ಚಾ ತಐಲ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಚ್ಚಾ ತೈಲ ಬೆಲೆಯು 20 ತಿಂಗಳ ಬಳಿಕ ಮತ್ತೆ ಗರಿಷ್ಠ ಮಟ್ಟ ತಲುಪಿದೆ. ಸೌದಿ ಅರೇಬಿಯಾದ ಇಂಧನ ದೈತ್ಯ ಅರಾಮ್ಕೊ ಒಡೆತನದ ಸಂಸ್ಕರಣಾ ಕೇಂದ್ರದ ಮೇಲೆ ಕ್ಷಿಪಣಿ ದಾಳಿಯ ನಂತರ ಹಾಗೂ … Continued

ಸ್ವಿಟ್ಜರ್‌ಲ್ಯಾಂಡ್‌ :ಜನಮತ ಗಣನೆಯಲ್ಲಿ ಬುರ್ಖಾ ನಿಷೇಧ ಪ್ರಸ್ತಾಪಕ್ಕೆ ಜಯ

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಬುರ್ಖಾ ಅಥವಾ ಪರದೆ ನಿಷೇಧಿಸುವ ಪ್ರಸ್ತಾಪವು ಭಾನುವಾರ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಲ್ಪಮತದಿಂದ ಜಯ ಗಳಿಸಿತು. ಶೇ.51.2-48.8 ಅಂತರದಿಂದ ಅಂಗೀಕರಿಸಲ್ಪಟ್ಟು ಸ್ವಿಸ್ ಸಂವಿಧಾನ ತಿದ್ದುಪಡಿ ಮಾಡುವ ಕ್ರಮಕ್ಕೆ ಬೆಂಬಲಿಸಿದೆ.ನೇರ ಪ್ರಜಾಪ್ರಭುತ್ವದ ಸ್ವಿಸ್ ವ್ಯವಸ್ಥೆಯಡಿಯಲ್ಲಿನ ಪ್ರಸ್ತಾಪವು ಇಸ್ಲಾಂ ಧರ್ಮವನ್ನು ನೇರವಾಗಿ ಉಲ್ಲೇಖಿಸುವುದಿಲ್ಲ ಮತ್ತು ಹಿಂಸಾತ್ಮಕ ಬೀದಿ ಪ್ರತಿಭಟನಾಕಾರರನ್ನು ,ಮುಖವಾಡ ಧರಿಸುವುದನ್ನು ತಡೆಯುವ ಗುರಿ ಹೊಂದಿದೆ, ಆದರೂ … Continued

ಶ್ರೀಲಂಕಾದಲ್ಲೂ ಬಿಜೆಪಿ ಶಾಖೆ ತೆರೆದಿದೆಯೇ? ಶ್ರೀಲಂಕಾ ಭಾರತೀಯ ಜನತಾ ಪಕ್ಷಕ್ಕೂ ಬಿಜೆಪಿಗೂ ಸಂಬಂಧವಿದೆಯೇ..?

ಕೇಂದ್ರದ ಆಡಳಿರೂಢ ಪಕ್ಷವಾದ ಭಾರತೀಯ ಜನತಾ ಪಕ್ಷವು ಶ್ರೀಲಂಕಾದಲ್ಲಿ ‘ಶಾಖೆ’ ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಒಂದು ಚಿತ್ರ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ…! ಈ ಚಿತ್ರವು ವಿ.ಮುತ್ತುಸ್ವಾಮಿಯವರಾಗಿದ್ದು, ಅವರನ್ನು ಶ್ರೀಲಂಕಾ ಭಾರತೀಯ ಜನತಾ ಪಕ್ಷದ ನಾಯಕ ಎಂದು ಬಣ್ಣಿಸಲಾಗಿದೆ. ಇದರಿಂದ ಶ್ರೀಲಂಕಾದಲ್ಲಿ ಬಿಜೆಪಿ ಶಾಖೆ ತೆರೆದಿದೆಯೇ ಎಂದು ಹಲವರು ಆಶ್ಚರ್ಯಪಡುವಷ್ಟರ ಮಟ್ಟಿಗೆ ಈ ಚಿತ್ರ ವೈರಲ್‌ … Continued

ಮಂಗಳನ ನೆಲದಲ್ಲಿ ಸಂಚರಿಸಿದ ಪರ್ಸವರೆನ್ಸ್

ವಾಶಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿರುವ ಬಾಹ್ಯಾಕಾಶ ನೌಕೆ ಪರ್ಸವರೆನ್ಸ್ ಮಾರ್ಚ್ 4ರಂದು ಮಂಗಳನ ನೆಲದಲ್ಲಿ ಮೊದಲ ಬಾರಿಗೆ ಸಂಚರಿಸಿದೆ. ಪರ್ಸವರೆನ್ಸ್ ಸುಮಾರು 6.5 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕ್ರಮಿಸಿತು. ಪರ್ಸವರೆನ್ಸ್ ರೋವರ್ ನೌಕೆಯು 33 ನಿಮಿಷಗಳ ಕಾಲದ ಸಂಚರಿಸಿದ್ದು, 3 ಮೀಟರ್‌ವರೆಗೆ ಮುಂದಡಿಯಿಟ್ಟಿತು. ಆನಂತರ ಅದು ಎಡಕ್ಕೆ 150 ಡಿಗ್ರಿಗಳಷ್ಟು … Continued

ಒಂದು ವರ್ಷದಲ್ಲಿ ಅತಿ ಹೆಚ್ಚು ಇಂಟರ್ನೆಟ್‌ ಸ್ಥಗಿತ: ವಿಶ್ವದಲ್ಲಿ ಭಾರತ ನಂ.೧…!

ಒಂದು ವರ್ಷದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಸಲ ಇಂಟರ್‌ನೆಟ್‌ ಸ್ಥಗಿತಗೊಳಿಸಿದ್ದು ಮಾಡಿದ್ದು ಭಾರತ…! ಲಾಭರಹಿತ ಸಂಸ್ಥೆ ಆಕ್ಸೆಸ್ ನೌ ಅವರ ವರದಿಯ ಪ್ರಕಾರ, 2020ರ ಅವಧಿಯಲ್ಲಿ 29 ದೇಶಗಳಲ್ಲಿ ಕನಿಷ್ಠ 155 ಸಲ ಅಂತರ್ಜಾಲ ಸ್ಥಗಿತಗೊಳಿಸುವಿಕೆ ದಾಖಲಿಸಲಾಗಿದೆ. ಮತ್ತು ಒಟ್ಟಾರೆ ಸಂಖ್ಯೆ 2019ಕ್ಕಿಂತ ಕಡಿಮೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ, ಎರಡೂ ವರ್ಷಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ ಎಂದು … Continued