ಹೊಸ ಮೈಲಿಗಲ್ಲು ; ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಮೂತ್ರ, ಬೆವರಿನಿಂದ 98%ರಷ್ಟು ಕುಡಿಯುವ ನೀರು ಉತ್ಪಾದಿಸಿದ ನಾಸಾ | ವೀಡಿಯೊ

ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಗಗನಯಾತ್ರಿಗಳು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಬಾಹ್ಯಾಕಾಶದಲ್ಲಿ ನಾಸಾ ಗಗನಯಾತ್ರಿಗಳು ಮೂತ್ರ ಮತ್ತು ಬೆವರಿನಿಂದ ಶೇಕಡಾ 98 ರಷ್ಟು ಕುಡಿಯುವ ನೀರು ಮರುಉತ್ಪಾದಿಸುವ ಗುರಿ ಸಾಧಿಸಿದ್ದಾರೆ. ಇದು ಬಾಹ್ಯಾಕಾಶದಲ್ಲಿ ನೀರಿನ ಕೊರತೆ ನೀಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ನಾಸಾ ಆಹಾರ, ಗಾಳಿ ಮತ್ತು ನೀರಿನಂತಹ ಉಪಭೋಗ್ಯ ವಸ್ತುಗಳನ್ನು ಪುನರುತ್ಪಾದಿಸುವ ಅಥವಾ … Continued

ಯೂಟ್ಯೂಬ್ ಹೊಸ ಟೂಲ್ಸ್‌…: ಶೀಘ್ರವೇ ಇತರ ಭಾಷೆಗಳಲ್ಲಿ ವೀಡಿಯೊಗಳನ್ನು ಉಚಿತವಾಗಿ ʼಡಬ್ʼ ಮಾಡುವ ಸೌಲಭ್ಯ…!

ಇತರ ಭಾಷೆಗಳಲ್ಲಿ ವೀಡಿಯೊಗಳನ್ನು ಡಬ್ ಮಾಡಲು ರಚನೆಕಾರರಿಗೆ ಅನುಮತಿಸುವ ಮೂಲಕ ಅನುವಾದಿಸಿದ ಸಬ್‌ ಟೈಟಲ್‌ ಮೀರಿ ಹೋಗಲು YouTube ಯೋಜಿಸಿದೆ. ವಿಡ್‌ಕಾನ್‌ನಲ್ಲಿ, ಗೂಗಲ್‌ನ ಏರಿಯಾ 120 ಇನ್ಕ್ಯುಬೇಟರ್‌ನಲ್ಲಿ ಅಭಿವೃದ್ಧಿಪಡಿಸಲಾದ ಅಲೌಡ್ ಎಂಬ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚಾಲಿತ (AI-powered) ಡಬ್ಬಿಂಗ್ ಸೇವೆಯನ್ನು ಪರೀಕ್ಷಿಸುತ್ತಿದೆ ಎಂದು ಕಂಪನಿಯು ಶನಿವಾರ ಘೋಷಿಸಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಈ … Continued

ಪ್ರಧಾನಿ ಮೋದಿಗೆ ಈಜಿಪ್ಟ್‌ನ ಅತ್ಯುನ್ನತ ಗೌರವ ʼಆರ್ಡರ್ ಆಫ್ ದಿ ನೈಲ್ʼ ಪ್ರದಾನ

ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಈಜಿಪ್ಟ್‌ನ ಅತ್ಯುನ್ನತ ಸರ್ಕಾರಿ ಗೌರವವಾದ ‘ದಿ ಆರ್ಡರ್ ಆಫ್ ದಿ ನೈಲ್’ ಪುರಸ್ಕಾರ ಪ್ರದಾನ ಮಾಡಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಕೈರೋದಲ್ಲಿ ಪ್ರಧಾನಿ ಮೋದಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಳೆದ ಒಂಬತ್ತು ವರ್ಷಗಳಲ್ಲಿ ವಿಶ್ವದ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ … Continued

ಪಾಕಿಸ್ತಾನದಲ್ಲಿ ಗುಂಡು ಹಾರಿಸಿ ಸಿಖ್ ವ್ಯಾಪಾರಿ ಹತ್ಯೆ ಮಾಡಿದ ಬೈಕಿನಲ್ಲಿ ಬಂದ ಅಪರಿಚಿತರು : ವರದಿ

ಪೇಶಾವರ: ಪೇಶಾವರದ ಕಕ್ಷಾಲ್ ಪ್ರದೇಶದಲ್ಲಿ ಮನಮೋಹನ್ ಸಿಂಗ್ ಎಂದು ಗುರುತಿಸಲಾದ ಸಿಖ್ ವ್ಯಾಪಾರಿಯನ್ನು ಅಪರಿಚಿತ ಮೋಟಾರು ಸೈಕಲ್ ಸವಾರರು ಶನಿವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮೂಲದ ಇಂಗ್ಲಿಷ್ ಪತ್ರಿಕೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಅಬ್ದುಲ್ ಸಲಾಮ್ ಖಾಲಿದ್ ಪ್ರಕಾರ, ಈ ಘಟನೆಯು ಶನಿವಾರ ರಾತ್ರಿ 8 ಗಂಟೆಗೆ … Continued

ಜನರನ್ನು ನೆಲಕ್ಕೆ ಉರುಳಿಸಿದ ಶಕ್ತಿಯುತ ಜೆಟ್ ಬ್ಲಾಸ್ಟ್ ? ಅದರ ಶಕ್ತಿ ಎಷ್ಟೆಂದು ಈ ವೈರಲ್ ವೀಡಿಯೊದಲ್ಲಿ ನೋಡಿ

ಏರ್‌ಪ್ಲೇನ್ ಎಂಜಿನ್‌ನ ಸಂಭಾವ್ಯ ಶಕ್ತಿಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಪ್ರಚಂಡ ಪ್ರಮಾಣದ ವಾಯುಯಾನ ಇಂಧನವು ಬಲವಾದ ಯಂತ್ರಶಾಸ್ತ್ರದೊಂದಿಗೆ ಸೇರಿ ಅಪಾರ ಶಕ್ತಿಯನ್ನು ಉಂಟುಮಾಡುತ್ತದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ, ಜೆಟ್ ಎಂಜಿನ್‌ಗಳ ಬಲವನ್ನು ಪ್ರದರ್ಶಿಸುವ ಮತ್ತು ಅದರ ಗಾಳಿಯ ಬಲವು ಜನರನ್ನು ಎಸೆಯುವುದನ್ನು ಚಿತ್ರಿಸುವ ವೀಡಿಯೊ ವೈರಲ್ ಆಗಿದೆ. “ಕ್ಯಾಲಮ್ ಹಾಡ್ಗ್ಸನ್” ಎಂಬ ಟ್ವಿಟ್ಟರ್ ಖಾತೆಯಿಂದ ಹಂಚಿಕೊಂಡ … Continued

ರಷ್ಯಾದಲ್ಲಿ ಪುತಿನ್‌ ವಿರುದ್ಧ ವ್ಯಾಗ್ನರ್ ಗುಂಪಿನ ಸಶಸ್ತ್ರ ದಂಗೆ: ದಂಗೆ ಹತ್ತಿಕ್ಕಲು ಪುತಿನ್ ಪ್ರತಿಜ್ಞೆ

ಮಾಸ್ಕೋ: ರಷ್ಯಾದಲ್ಲಿ ಸಶಸ್ತ್ರ ದಂಗೆ ಎಂದು ಅಧಿಕಾರಿಗಳ ಹೇಳಿಕೆ ನೀಡಿರುವ ಮಧ್ಯೆಯೇ ದೇಶದ ಮಿಲಿಟರಿ ನಾಯಕತ್ವವನ್ನು ಪದಚ್ಯುತಗೊಳಿಸುವ ಪ್ರಯತ್ನದ ಭಾಗವಾಗಿ ರಷ್ಯಾದ ನಗರವಾದ ರೋಸ್ಟೊವ್-ಆನ್-ಡಾನ್ ಅನ್ನು ತಾನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇನೆ ಎಂದು ಬಂಡಾಯ ಎದ್ದಿರುವ ರಷ್ಯಾದ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೊಜಿನ್ ಶನಿವಾರ (ಜೂನ್‌ 24 ) ಹೇಳಿದ್ದಾರೆ. ದಕ್ಷಿಣ ರಷ್ಯಾದ ನಗರವಾದ ರೋಸ್ಟೋವ್-ಆನ್-ಡಾನ್‌ನ ಮಿಲಿಟರಿ … Continued

‘ಸ್ಟೋನ್ಹೆಂಜ್ ಆಫ್ ದಿ ನೆದರ್‌ಲ್ಯಾಂಡ್ಸ್’..: ನಾಲ್ಕು ಫುಟ್‌ಬಾಲ್ ಮೈದಾನಗಳ ವಿಸ್ತೀರ್ಣದ 4,000 ವರ್ಷಗಳಷ್ಟು ಹಿಂದಿನ ಸಮಾಧಿ ಸ್ಥಳ ಪತ್ತೆ ಮಾಡಿದ ಡಚ್ ಪುರಾತತ್ತ್ವಜ್ಞರು…!

ಡಚ್ ಪುರಾತತ್ವಶಾಸ್ತ್ರಜ್ಞರು ಬುಧವಾರ ಸುಮಾರು 4,000 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ಮಹತ್ವ ಪಡೆದ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಇದನ್ನು “ಸ್ಟೋನ್ಹೆಂಜ್ ಆಫ್ ನೆದರ್ಲ್ಯಾಂಡ್ಸ್” ಎಂದು ಕರೆಯುತ್ತಾರೆ. ಇದು ಸೌರ ಕ್ಯಾಲೆಂಡರ್ ಆಗಿ ಕಾರ್ಯನಿರ್ವಹಿಸಬಲ್ಲ ಸಮಾಧಿ ದಿಬ್ಬವನ್ನೂ ಒಳಗೊಂಡಿದೆ. ಸುಮಾರು 60 ಪುರುಷರು, ಮಹಿಳೆಯರು ಮತ್ತು ಮಕ್ಕಳ ಅವಶೇಷಗಳನ್ನು ಒಳಗೊಂಡಿರುವ ಸಮಾಧಿ ದಿಬ್ಬವು ಹಲವಾರು ಮಾರ್ಗಗಳನ್ನು ಹೊಂದಿತ್ತು, ಅಲ್ಲದೆ, … Continued

10 ವರ್ಷಗಳಿಂದ ಪತ್ನಿಗೆ ಪ್ರತಿದಿನ ರಾತ್ರಿ ಡ್ರಗ್ಸ್​ ನೀಡಿ, ಪರ ಪುರುಷರ ಕರೆಸಿ ಆಕೆ ಮೇಲೆ ಅತ್ಯಾಚಾರ ಮಾಡಿಸಿ ವೀಡಿಯೊ ಮಾಡ್ತಿದ್ದ ಗಂಡ ; ವರದಿ

ಫ್ರಾನ್ಸ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಪ್ರತಿ ರಾತ್ರಿ ಮಾದಕ ದ್ರವ್ಯವನ್ನು ನೀಡಿ ನಂತರ ಅವಳನ್ನು ಅತ್ಯಾಚಾರ ಮಾಡಲು ಪುರುಷರನ್ನು ಆಹ್ವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ದಿ ಟೆಲಿಗ್ರಾಫ್‌ನಲ್ಲಿನ ವರದಿಯ ಪ್ರಕಾರ, ಹೆಂಡತಿಯೊಂದಿಗೆ ಆಘಾತಕಾರಿ ಅಭ್ಯಾಸವು 10 ವರ್ಷಗಳ ಕಾಲ ಮುಂದುವರೆಯಿತು, ಈ ಸಮಯದಲ್ಲಿ ತನಿಖಾಧಿಕಾರಿಗಳು 92 ಅತ್ಯಾಚಾರ ಪ್ರಕರಣಗಳನ್ನು ಗುರುತಿಸಿದ್ದಾರೆ. ಹಾಗೂ 26 ಮತ್ತು 73 ವರ್ಷದೊಳಗಿನ … Continued

ಎಲ್‌ಪಿಜಿ ಸೋರಿಕೆಯಿಂದ ಚೀನಾ ರೆಸ್ಟೋರೆಂಟ್‌ನಲ್ಲಿ ಸ್ಫೋಟ: 31 ಮಂದಿ ಸಾವು

ವಾಯುವ್ಯ ಚೀನಾದ ಯಿಂಚುವಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಸೋಟದಲ್ಲಿ ಕನಿಷ್ಠ 31 ಜನರು ಸಾವಿಗೀಡಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಗುರುವಾರ ತಿಳಿಸಿದೆ. “ದ್ರವೀಕೃತ ಪೆಟ್ರೋಲಿಯಂ ಅನಿಲ(LPG)ದ ಸೋರಿಕೆಯು ಬಾರ್ಬೆಕ್ಯೂ ರೆಸ್ಟೋರೆಂಟ್ ನಲ್ಲಿ ಸ್ಫೋಟಕ್ಕೆ ಕಾರಣವಾಯಿತು” ಎಂದು ಪ್ರಾದೇಶಿಕ ಕಮ್ಯುನಿಸ್ಟ್ ಪಕ್ಷದ ಸಮಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ಬುಧವಾರ ಸಂಜೆ ಸ್ಫೋಟದ ಬಗ್ಗೆ ಹೇಳಿದೆ. ಏಳು … Continued

ಹೊಂಡುರಾಸ್ ಮಹಿಳಾ ಜೈಲು ಹಿಂಸಾಚಾರ: 46 ಮಹಿಳಾ ಕೈದಿಗಳ ಸಾವು

ಹೊಂಡುರಾಸ್‌ನ ಮಹಿಳಾ ಜೈಲಿನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವೆ ನಡೆದ ಘರ್ಷಣೆಯಲ್ಲಿ 46 ಮಹಿಳಾ ಕೈದಿಗಳು ಸಾವಿಗೀಡಾಗಿದ್ದಾರೆ ಎಂದು ಪ್ರಾಸಿಕ್ಯೂಟರ್ ಕಚೇರಿ ಬುಧವಾರ ತಿಳಿಸಿದೆ. ಮಂಗಳವಾರ ರಾಜಧಾನಿ ತೆಗುಸಿಗಲ್ಪಾದಿಂದ ಉತ್ತರಕ್ಕೆ 25 ಕಿಲೋಮೀಟರ್ (15 ಮೈಲುಗಳು) ಜೈಲಿನಲ್ಲಿ ಹಿಂಸಾಚಾರ ಭುಗಿಲೆದ್ದಿತು, ಗ್ಯಾಂಗ್‌ನ ಸದಸ್ಯರು ಪ್ರತಿಸ್ಪರ್ಧಿ ಗುಂಪಿರುವ ಪ್ರದೇಶಕ್ಕೆ ಏಕಾಏಕಿ ನುಗ್ಗಿ, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ಅವರ ಮೇಲೆದಾಳಿ … Continued