ವಿಜಯಪುರ ಜ್ಞಾನ ಯೋಗಾಶ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ

ವಿಜಯಪುರ: ಸಿಂದಗಿಯಲ್ಲಿ ಆಯೋಜನೆಗೊಂಡ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದ ಜ್ಞಾನ ಯೋಗಾಶ್ರಮಕ್ಕೆ ಶನಿವಾರ ಭೇಟಿ ನೀಡಿದರು. ನಡೆದಾಡುವ ದೇವರು ಪರಮಪೂಜ್ಯ ಲಿಂ.ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದ ಅವರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಗದ್ದುಗೆಗೆ ನಮಿಸಿದರು. ಸಿದ್ದೇಶ್ವರ ಶ್ರೀಗಳು ಕೊನೆಯ ದಿನಗಳನ್ನು ಕಳೆದ ಕೋಣೆಗೆ … Continued

ಸಿಂದಗಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ ಹೃದಯಾಘಾತದಿಂದ ನಿಧನ

ವಿಜಯಪುರ : ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶುಕ್ರವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಶಿವಾನಂದ ಪಾಟೀಲ ಅವರು ಪತ್ನಿ, ಪುತ್ರ … Continued

ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ: 20 ಆರೋಪಿಗಳ ವಿರುದ್ಧ 1500 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಎನ್ಐಎ

ಬೆಂಗಳೂರು: ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಮೂಲಭೂತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಗೆ ಸಂಪರ್ಕ ಹೊಂದಿರುವ 20 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ. ಎನ್​ಐಎ ಶುಕ್ರವಾರ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ 1500 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದು, 240 ಸಾಕ್ಷಿಗಳ ಹೇಳಿಕೆಗಳು ಸೇರಿ ಒಟ್ಟು … Continued

ಕುಮಟಾ : ಮುಳುಗುತ್ತಿದ್ದ ಬೋಟ್‌ನಿಂದ 17 ಮೀನುಗಾರರ ರಕ್ಷಣೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಬಳಿ ಸಮುದ್ರದಲ್ಲಿ ಮುಳಗುತ್ತಿದ್ದ ಪರ್ಸಿನ್‌ ಬೋಟ್‌ನಿಂದ 17 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಕುಮಟಾ ತಾಲುಕಿನ ಕಡ್ಲೆ ಬಳಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಶ್ರೀದೇವಿ ಅನುಗ್ರಹ ಹೆಸರಿನ ಬೋಟ್ ಬಂಡೆಗೆ ಬಡಿದು ಮುಳುಗಡೆಯಾಗಿದೆ. ಕರಾವಳಿ ಕಾವಲು ಪಡೆಯವರು ಹಾಗೂ ಅಕ್ಕಪಕ್ಕದ ಬೋಟ್‌ನಲ್ಲಿದ್ದವರು ಸೇರಿ ಎಲ್ಲ … Continued

ಬೊಲೆರೊ ಡಿಕ್ಕಿ: ಮೂವರು ಮಹಿಳೆಯರು ಸಾವು

ಕಾರವಾರ : ಭೀಕರ ಅಪಘಾತವೊಂದರಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಸೀತಾವಾಡದಲ್ಲಿ ನಡೆದ ವರದಿಯಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಖಾನಾಪುರದ ಫಾರ್ಲಿಯ ಪಾರ್ವತಿ ಗಾವಡಾ (55), ದುರ್ಗೆ ಕೋಲ್ಸೇಕರ್ (55), ತುಳಸಿ ಗಾವಡಾ (50) ಎಂದು ಗುರುತಿಸಲಾಗಿದೆ. ಬಿಪಿನ್‌ ತಾಳ್ವೆ ಎಂಬ … Continued

ಎಸ್‌ಎಸ್‌ಸಿ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್‌ಸಿ) 2023ರ ಏಪ್ರಿಲ್‌ನಲ್ಲಿ ನಡೆಸುವ 11,409 ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಗಳನ್ನು ಬರೆಯವುದಕ್ಕೆ ಅವಕಾಶ ಕಲ್ಪಿಸಲಾಗಿದೆ. 11,409 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಅಭ್ಯರ್ಥಿಗಳು ಕನ್ನಡವನ್ನು ಆಯ್ಕೆ ಮಾಡಿಕೊಳ್ಳಲು 08 ಕೋಡ್‌ ಬಳಸಬಹುದು. ಕಂಪ್ಯೂಟರ್‌ ಆಧಾರಿತ … Continued

ಬೆಳಗಾವಿ ಗ್ರಾಮೀಣದಲ್ಲಿ ರಮೇಶ ಜಾರಕಿಹೊಳಿ ಅಭಿಮಾನದ ಕಾರ್ಯಕರ್ತರ ಬೃಹತ್‌ ಸಮಾವೇಶ : ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಗುಡುಗಿದ ರಮೇಶ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಲ್ಲಿರುವ ಸರ್ವ ಪಕ್ಷದ ಮುಖಂಡರನ್ನು ಒಂದುಗೂಡಿಸುವ ಮೂಲಕ ಬಿಜೆಪಿಗೆ ಕರೆತರುವ ಕಾರ್ಯ ಭರದಿಂದ ಸಾಗಿದ್ದು, 2023 ರಲ್ಲಿ ಬೆಳಗಾವಿ ಗ್ರಾಮೀಣ ಸೇರಿ ಜಿಲ್ಲೆಯ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಗೋಕಾಕ ಶಾಸಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಂಕಲ್ಪ ಮಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ರಮೇಶ … Continued

ಮೈಸೂರು: ಚಿರತೆ ದಾಳಿಗೆ ಮೂರನೇ ಸಾವು ; ಸೌದೆ ತರಲು ಮನೆಯಿಂದ ಹೊರ ಹೋಗಿದ್ದ ವೃದ್ಧೆ ಮೇಲೆ ಎರಗಿದ ಚಿರತೆ

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ. ಟಿ.ನರಸೀಪುರ ತಾಲೂಕಿನಲ್ಲಿ ಈವರೆಗೆ ಚಿರತೆ ದಾಳಿಯಿಂದ ಮೂವರು ಮೃತಪಟ್ಟಿದ್ದಾರೆ. ಕನ್ನನಾಯಕನಹಳ್ಳಿ ನಿವಾಸಿ ಸಿದ್ದಮ್ಮ (60) ಚಿರತೆ ದಾಳಿಯಿಂದ ಮೃತಪಟ್ಟ ಮಹಿಳೆಯಾಗಿದ್ದು, ಮನೆಯ ಹೊರಗಿದ್ದ ಸೌದೆ ಎತ್ತಿಕೊಳ್ಳಲು ಹೋಗಿದ್ದ ವೇಳೆ ಸಿದ್ದಮ್ಮ ಅವರ ಮೇಲೆ ಚಿರತೆ ದಾಳಿ ನಡೆಸಿ ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು … Continued

ಬೆಂಗಳೂರು : ಕಾರಿನ ಬಾನೆಟ್‌ ಮೇಲೆ ವ್ಯಕ್ತಿ ಜೋತು ಬಿದ್ದಾಗಲೂ ಒಂದು ಕಿಮೀ ಕಾರು ಚಾಲನೆ ಮಾಡಿದ ಮಹಿಳೆ | ವೀಕ್ಷಿಸಿ

ಬೆಂಗಳೂರು: ಮತ್ತೊಂದು ವಿದ್ಯಮಾನದಲ್ಲಿ ವ್ಯಕ್ತಿಯೊಬ್ಬನನ್ನು ಕಾರಿನ ಬಾನೆಟ್ ಮೇಲೆ ಸುಮಾರು 1 ಕಿಲೋಮೀಟರ್ ಎಳೆದೊಯ್ದಿರುವ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕಾರಿನ ಬಾನೆಟ್‌ಗೆ ಅಂಟಿಕೊಂಡಿದ್ದರೂ ಚಾಲಕ ಕಾರನ್ನು ಓಡಿಸುವುದನ್ನು ಮುಂದುವರೆಸಿರುವುದು ಕಂಡುಬರುತ್ತದೆ. ಜ್ಞಾನಭಾರತಿ ಪಿಎಸ್ ವ್ಯಾಪ್ತಿಯ ಉಳ್ಳಾಲ ಮುಖ್ಯರಸ್ತೆ ಬಳಿ ಘಟನೆ ನಡೆದಿದೆ. ಘಟನೆಯ ನಂತರ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ … Continued

ಫೆಬ್ರವರಿ 10ರಿಂದ ವಿಧಾನಮಂಡಲ‌ ಅಧಿವೇಶನ ಆರಂಭ: 17ರಂದು ರಾಜ್ಯ ಬಜೆಟ್ ಮಂಡನೆ

ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನವನ್ನು ಫೆಬ್ರವರಿ 10ರಿಂದ ನಡೆಸಲು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗೂ ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ್‌ ಬಜೆಟ್‌ ಮಂಡಿಸಲಿದ್ದಾರೆ. ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಫೆಬ್ರವರಿ 10ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ … Continued