ತುಮಕೂರು ವಿಶ್ವ ವಿದ್ಯಾಲಯದಲ್ಲಿ ವೀರ್‌ ಸಾವರ್ಕರ್ ಅಧ್ಯಯನ ಪೀಠ

ತುಮಕೂರು: ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತುಮಕೂರು ವಿಶ್ವ ವಿದ್ಯಾಲಯ ಶುಕ್ರವಾರ ಒಪ್ಪಿಗೆ ಸೂಚಿಸಿದೆ. ಪ್ರಸಕ್ತ ಸಾಲಿನ 6ನೇ ಸಿಂಡಿಕೇಟ್ ಸಭೆಯಲ್ಲಿ ಸಾವರ್ಕರ್ ಅಧ್ಯಯನ ಪೀಠಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ ಆಂತರಿಕ ನಿಧಿ ಬಳಸಿಕೊಳ್ಳಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ವಿವಿ ಸಿಂಡಿಕೇಟ್ ಸದಸ್ಯ ವಿನಯ್ ಸಭೆಯ ಅಜೆಂಡಾದಲ್ಲಿ ಸಾವರ್ಕರ್ ಪೀಠ … Continued

ಬಿಜೆಪಿ ಸಂಘಟನೆ, ರಾಜ್ಯದ ಮುಂಬರುವ ಚುನಾವಣೆ ಬಗ್ಗೆ ನಡ್ಡಾ ಜೊತೆ ಚರ್ಚೆ: ಬಿಎಸ್‌ವೈ

ನವದೆಹಲಿ: ಮುಂದಿನ 8 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ … Continued

ಲಾರಿಗೆ ಅಪ್ಪಳಿಸಿದ ಕಾರು : ಮೂವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ರಸ್ತೆ ವಿಭಜಕಕ್ಕೆ ಬಡಿದ ಕಾರು ನಂತರ ಲಾರಿಗೆ ಅಪ್ಪಳಿಸಿ ಸಂಭವಿಸಿದ ಅಪಘಾತ ಚಿತ್ರದುರ್ಗದ ಹೊರವಲಯದಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಚಿತ್ರದುರ್ಗದ ಹೊರವಲಯದ ಸೀಬಾರ ಬಳಿ ಈ ಅಪಘಾತ ಸಂಭವಿಸಿದ್ದು, ಇನ್ನೊವಾ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಬಳಿಕ ಲಾರಿಗೆ ಅಪ್ಪಳಿಸಿ ಇಬ್ಬರು ಮಹಿಳೆಯರು ಹಾಗೂ ಪುರುಷ ಮೃತಪಟ್ಟಿದ್ದಾರೆ … Continued

ಕರ್ನಾಟಕ ಗಣಿಗಾರಿಕೆ: ಬಳ್ಳಾರಿ, ಚಿತ್ರದುರ್ಗ, ತುಮಕೂರಿನ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿ ಹೆಚ್ಚಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಕಬ್ಬಿಣದ ಅದಿರು ಗಣಿಗಾರಿಕೆಯ ಮಿತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೆಚ್ಚಿಸಿದೆ. ಅದು ಪರಿಸರ ಮತ್ತು ಪರಿಸರದ ಸಂರಕ್ಷಣೆಯು ಆರ್ಥಿಕ ಅಭಿವೃದ್ಧಿಯ ಮನೋಭಾವದ ಜೊತೆಗೆ ಸಾಗಬೇಕು ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಕಬ್ಬಿಣದ ಅದಿರು ಗಣಿಗಾರಿಕೆಯ ಮಿತಿಯನ್ನು ಬಳ್ಳಾರಿ ಜಿಲ್ಲೆಗೆ 28 ​​MMT ನಿಂದ 35 MMT … Continued

ಬೆಳಗಾವಿಯಲ್ಲಿ ಸಿಗದ ಚಿರತೆ: ಬೋನಿಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆಗೆ ಮುಂದಾದ ಅರಣ್ಯ ಇಲಾಖೆ

ಬೆಳಗಾವಿ: ಬೆಳಗಾವಿಯಲ್ಲಿ 20 ದಿನ ಕಳೆದರೂ ಕೈಗೆ ಸಿಗದೆ ಓಡಾಡುತ್ತ ಸ್ಥಳೀಯರ ನಿದ್ದೆಗೆಡಿಸಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಸುಸ್ತಾಗಿದ್ದಾರೆ. ಈ ನಡುವೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು `ಲೈಂಗಿಕ ಆಕರ್ಷಣೆ’ ತಂತ್ರ ಅನುಸರಿಸಲು ಮುಂದಾಗಿದ್ದು, ನಗರ ಸಮೀಪದ ಭೂತರಾಮನಹಟ್ಟಿ … Continued

ಸೇತುವೆ ಕುಸಿತ: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಡಾ. ಪರಮೇಶ್ವರ

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ನಾಯಕ ಡಾ.ಜಿ.ಪರಮೇಶ್ವರ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ವಿದ್ಯಮಾನವೊಂದು ನಡೆದಿದೆ. ಅವರು ಭಾಗಶಃ ಕುಸಿದಿದ್ದ ಸೇತುವೆಯೊಂದನ್ನು ವೀಕ್ಷಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ನಿನ್ನೆ, ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗೊರವನಹಳ್ಳಿ-ತೀತಾ ರಸ್ತೆಯಲ್ಲಿನ ಸೇತುವೆಯೊಂದು ಭಾಗಶಃ ಕುಸಿದಿತ್ತು. ಮಾಹಿತಿ ಗೊತ್ತಾಗಿ ಸೇಉವೆ ಪರಿಸ್ಥಿತಿಯನ್ನು … Continued

ವೀಳ್ಯದೆಲೆ ಸುಣ್ಣದ ಟ್ಯೂಬ್‌ ನಿಷೇಧಿಸಿ ಇಲ್ಲವೇ ಸುರಕ್ಷಿತ ಪ್ಯಾಕ್‌ ಮಾಡಿ ಮಾರಾಟ ಮಾಡಲು ಕ್ರಮ ಕೈಗೊಳ್ಳಿ: ಡಾ.ಶ್ರೀನಿವಾಸ ಜೋಶಿ ಒತ್ತಾಯ

ಹುಬ್ಬಳ್ಳಿ: ವೀಳ್ಯದೆಲೆಗೆ ಬಳಸುವ ಸುಣ್ಣ ಆಕಸ್ಮಿಕವಾಗಿ ಮಕ್ಕಳ ಕಣ್ಣಿಗೆ ತಗುಲಿದರೆ, ಅವರು ಶಾಶ್ವತವಾಗಿ ಅಂಧತ್ವಕ್ಕೆ ಒಳಗಾಗಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ, ಹೀಗಾಗಿ ಸುಣ್ಣವನ್ನು ಸುರಕ್ಷಿತವಾಗಿ ಪ್ಯಾಕ್‌ ಮಾಡಿ ಮಾರಾಟ ಮಾಡುವಂತೆ ಮಾಡಬೇಕು ಅಥವಾ ಸರ್ಕಾರ ಈ ತರಹದ ಮಾರಾಟಕ್ಕೆ ನಿಷೇಧ ಹೇರಲು ಸರ್ಕಾರ ಮುಂದಾಗಬೇಕು ಎಂದು ಡಾ. ಎಂ.ಎಂ. ಜೋಶಿ … Continued

ರಾಜ್ಯದ ಈ ಪ್ರದೇಶಗಳಲ್ಲಿಇನ್ನೂ 5 ದಿನ ಭಾರೀ ಮಳೆ ಸಾಧ್ಯತೆ: ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ಚುರುಕಾಗಿರುವ ಹಿನ್ನೆಲೆ ರಾಜ್ಯದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿಗೂ ಹವಮಾನ ಇಲಾಖೆ ಅಲರ್ಟ್ ನೀಡಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯಾತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿಗೆ ಮುಂಗಾರು … Continued

3ಡಿ-ಪ್ರಿಂಟಿಂಗ್‌ ತಂತ್ರಜ್ಞಾನದ ಮೂಲಕ ಭಾರತದ ಮೊದಲ ಅಂಚೆ ಕಚೇರಿ ಬೆಂಗಳೂರಿನಲ್ಲಿ ಒಂದು ತಿಂಗಳಲ್ಲಿ ನಿರ್ಮಾಣ…!

ಬೆಂಗಳೂರು: ಭಾರತದ ಮೊದಲ 3ಡಿ-ಪ್ರಿಂಟಿಂಗ್‌ ತಂತ್ರಜ್ಞಾನದ ಅಂಚೆ ಕಚೇರಿ ಶೀಘ್ರದಲ್ಲೇ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ನೂತನ ಅಂಚೆ ಕಚೇರಿ ಕಟ್ಟಡವನ್ನು 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದ್ದು, ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪೋಸ್ಟ್ ಆಫೀಸ್ ಕಟ್ಟಡವನ್ನು ಎಲ್ & ಟಿ ನಿರ್ಮಿಸುತ್ತಿದ್ದು, ಇದು ಪ್ರಸ್ತುತ ಭಾರತದಲ್ಲಿ … Continued

ಭೂಕಬಳಿಕೆ ತಿದ್ದುಪಡಿ ಕಾಯ್ದೆಗೆ ಸಚಿವ ಸಂಪುಟ ಒಪ್ಪಿಗೆ: ಗ್ರಾಮೀಣ ಪ್ರದೇಶ ವ್ಯಾಪ್ತಿಯಿಂದ ಹೊರಕ್ಕೆ,ರೈತರಿಗೆ ರಿಲೀಫ್‌

ಬೆಂಗಳೂರು: ಭೂಕಬಳಿಕೆ ಕಾಯ್ದೆ ಇನ್ನು ಮುಂದೆ ನಗರ ಪ್ರದೇಶಗಳಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಮಾಂತರ ಪ್ರದೇಶವನ್ನು ಆ ವ್ಯಾಪ್ತಿಯಿಂದ ಹೊರಗಿಡಲು ‘ಸೆಕ್ಷನ್‌ 2 ಡಿ’ಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ತಿದ್ದುಪಡಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ತಿದ್ದುಪಡಿಯಿಂದಾಗಿ ಗ್ರಾಮೀಣ … Continued