ಹೊನ್ನಾವರ: ನಾಯಿ ಜೊತೆ ಆಟವಾಡುತ್ತಿದ್ದ ಆರು ವರ್ಷದ ಬಾಲಕ ತೋಟದ ಬಾವಿಗೆ ಬಿದ್ದು ಸಾವು

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವಂದೂರು ಸಮೀಪದ ತೋಟದ ಬಾವಿಯಲ್ಲಿ ಮಗುವೊಂದು ಆಯತಪ್ಪಿ ಬಿದ್ದು ಮೃತಪಟ್ಟ ಧಾರುಣ ಘಟನೆ ಭಾನುವಾರ ನಡೆದ ವರದಿಯಾಗಿದೆ. ಮೃತ ಬಾಲಕನನ್ನು ಹೊನ್ನಾವರ ತಾಲೂಕಿನ ವಂದೂರಿನ ನಾಗಭೂಷಣ ಹೆಗಡೆ (6) ಎಂದು ಗುರುತಿಸಲಾಗಿದೆ. ಈತ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದ. ತಮ್ಮ ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಿದ್ದಾಗ … Continued

ಏಷ್ಯಾದ ಅತಿ ದೊಡ್ಡ ಏರೋ ಶೋ ಫೆಬ್ರವರಿ 13ರಂದು ಬೆಂಗಳೂರಲ್ಲಿ ಆರಂಭ: ಏನನ್ನು ನಿರೀಕ್ಷಿಸಬಹುದು..?

ಬೆಂಗಳೂರು: ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಏಷ್ಯಾದ ಅತಿದೊಡ್ಡ ಏರೋ ಶೋ – ಏರೋ ಇಂಡಿಯಾ 2023 – ಸೋಮವಾರ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇದು ಶುಕ್ರವಾರದವರೆಗೆ ನಡೆಯಲಿದ್ದು, ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಫೆಬ್ರವರಿ 13) ಚಾಲನೆ ನೀಡಲಿದ್ದಾರೆ. ಏರೋ ಇಂಡಿಯಾ 1996 ರಿಂದ ಬೆಂಗಳೂರಿನಲ್ಲಿ 13 … Continued

ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಬೆಂಗಳೂರಿಗೆ ಭೇಟಿ, ನಾಳೆ ಏರೋ ಇಂಡಿಯಾ 2023ಕ್ಕೆ ಚಾಲನೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಇಂದು, ಫೆಬ್ರವರಿ 13ರಂದು ಬೆಳಿಗ್ಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ-2023 ಉದ್ಘಾಟಿಸಲಿರುವ ಪ್ರಧಾನಿ ಇಂದು ಭಾನುವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ನರೇಂದ್ರ ಮೋದಿ ಭಾನುವಾರ ರಾಜಸ್ಥಾನ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಕಾರ್ಯಕ್ರಮ ಮುಗಿಸಿ ಸಂಜೆ 7:40ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಜಭವನದಲ್ಲಿ ವಾಸ್ತವ್ಯ ಮಾಡಲಿರುವ ಪ್ರಧಾನಿ … Continued

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ಸೂಚಿಸಿದ ಯಡಿಯೂರಪ್ಪ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾಳೆ, ಸೋಮವಾರ ನಡೆಯಲಿರುವ ಅಧಿವೇಶನದಲ್ಲಿ ಕುವೆಂಪು ಅವರ ಹೆಸರು ಇಡಲು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 27ರಂದು ಬರುವುದು ಖಚಿತವಾಗಿದೆ. ಅವರೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು … Continued

ರಾಯಚೂರು: ಪತ್ನಿಯ ಶೀಲ ಶಂಕಿಸಿ ಪುಟ್ಟ ಮಕ್ಕಳನ್ನು ಕೊಂದ ತಂದೆ

ರಾಯಚೂರು: ಪತ್ನಿಯ ಅನೈತಿಕ ಸಂಬಂಧ ಶಂಕಿಸಿ ತನ್ನಿಬ್ಬರು ಪುಟ್ಟ ಮಕ್ಕಳನ್ನು ತಂದೆಯೇ ಕತ್ತು ಹಿಸುಕಿ ಕೊಲೆಗೈದ ಘಟನೆ ಜಿಲ್ಲೆಯ ದೇವದುರ್ಗ ಪುರಸಭೆ ವ್ಯಾಪ್ತಿಯ ಜಕ್ಲೇರದೊಡ್ಡಿಯಲ್ಲಿ ಶನಿವಾರ ತಡರಾತ್ರಿ ನಡೆದ ವರದಿಯಾಗಿದೆ. ವರದಿ ಪ್ರಕಾರ, ನಿಂಗಯ್ಯ ಎಂಬಾತ ಮಕ್ಕಳಾದ ಶಿವರಾಜ (5), ರಾಘವೇಂದ್ರ(3) ಎಂಬ ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪತ್ನಿ ಬೇರೆ ವ್ಯಕ್ತಿ … Continued

ಆಂಧ್ರ ರಾಜ್ಯಪಾಲರಾಗಿ ನೇಮಕಗೊಂಡ ದಕ್ಷಿಣ ಕನ್ನಡ ಮೂಲದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ನೇಮಕ : ಇವರು ಐತಿಹಾಸಿಕ ಅಯೋಧ್ಯೆ, ತ್ರಿವಳಿ ತಲಾಖ್ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದರು..

 ನವದೆಹಲಿ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗೌರ್ನರ್‌ ನೇಮಕ ಮಾಡಿದ್ದಾರೆ. ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನೇಮಕ ಮಾಡಲಾಗಿದೆ. ಇವರು ಕನ್ನಡಿಗರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಬೆಳವಾಯಿಯವರು. 2019ರ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ … Continued

ಇಂದು ಮಂತ್ರದ್ರಷ್ಟ ಅರವಿಂದ ಘೋಷ್‌ ಪುಸ್ತಕ ಬಿಡುಗಡೆ

ಹುಬ್ಬಳ್ಳಿ: ಲೋಕಹಿತ ಟ್ರಸ್ಟ್‌ ವತಿಯಿಂದ ಮಂತ್ರದ್ರಷ್ಟ ಅರವಿಂದ ಘೋಷ್‌ ಪುಸ್ತಕ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ಕೇಶವ ಕುಂಜದಲ್ಲಿ ಫೆಬ್ರವರಿ 12ರ ಭಾನುವಾರ ಸಂಜೆ 6:30 ಗಂಟೆಗೆ ನಡೆಯಲಿದೆ. ವಕ್ತಾರರಾಗಿ ಖ್ಯಾತ ಲೇಖಕ ಹಾಗೂ ವಿಮರ್ಶಕ ಡಾ.ಜಿ.ಬಿ.ಹರೀಶ ಆಗಮಿಸಲಿದ್ದಾರೆ. ಹುಬ್ಬಳ್ಳಿ ಲೋಕ ಹಿತ ಟ್ರಸ್ಟ್‌ ಅಧ್ಯಕ್ಷ ಅರವಿಂದರಾವ್‌ ದೇಶಪಾಂಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೇಖಕರು ಹಾಗೂ … Continued

ತುಮಕೂರು : ಭೀಕರ ಅಪಘಾತಕ್ಕೆ ನವದಂಪತಿ ದುರ್ಮರಣ

ತುಮಕೂರು: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ನವದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ಸಂಭವಿಸಿದೆ. ಇಂದು, ಶನಿವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು, ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸಾಫ್ಟ್ ವೇರ್ ಟೆಕ್ಕಿ ದಂಪತಿ ಮೃತಪಟ್ಟಿದ್ದಾರೆ. ಮೃತರನ್ನು ಅರಸಿಕೆರೆ ಮೂಲದ ರಘು(35) ಮತ್ತು … Continued

ಕೆಕೆಆರ್​ಟಿಸಿ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಮತ್ತೊಬ್ಬ ಅಭ್ಯರ್ಥಿಯ ಕಳ್ಳಾಟ ಪತ್ತೆ: ತೂಕ ಹೆಚ್ಚಿಸಿಕೊಳ್ಳಲು ಎರಡು ಕಾಲಿಗೂ ಹಿಟ್ಟು ಅಂಟಿಸಿಕೊಂಡು ಬಂದ ಭೂಪ…!

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್​ಟಿಸಿ) ಡ್ರೈವರ್​ ಕಂ ಕಂಡಕ್ಟರ್​ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾದ್ದರಿಂದ ಅದಕ್ಕಾಗಿ ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಸಂಗತಿ ಬಯಲಾಗುತ್ತಲೇ ಇದೆ. ನಿನ್ನೆ ಶುಕ್ರವಾರ ಇಂಥ ಪ್ರಕರಣಗಳು ಬಹಿರಂಗವಾಗಿತ್ತು. ತಮ್ಮ ತೂಕ ಹೆಚ್ಚಿಸಿಕೊಳ್ಳಲು ಅಭ್ಯರ್ಥಿಗಳು ಪ್ಯಾಂಟ್‌ ಒಳಗೆ ಕಬ್ಬಿಣದ ಪೀಸ್​ಗಳು, ಒಳ ಉಡುಪಲ್ಲಿ ತೂಕದ ಕಲ್ಲು ಇಟ್ಟುಕೊಂಡು … Continued

ಆಲ್ ಖೈದಾ ಜೊತೆ ನಂಟು ಆರೋಪ: ಬೆಂಗಳೂರಿನಲ್ಲಿ ಓರ್ವನ ಬಂಧನ

ಬೆಂಗಳೂರು : ಅಲ್​ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಬೆಂಗಳೂರಿನಲ್ಲಿ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಥಣಿಸಂದ್ರದ ಮಂಜುನಾಥ ನಗರದಲ್ಲಿ ಐಎಸ್ ​ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಶಂಕಿತ ಆರೀಫ್​ ಎಂಬಾತನನ್ನು ಬಂಧಿಸಿದ್ದಾರೆ. ಶಂಕಿತ ಉಗ್ರ ಆರೀಫ್ ಅಲ್​ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕಿಸಲಾಗಿದೆ. … Continued