ತಿಪಟೂರು: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಲ್ಲಿ ಮುಳುಗಿ ಸಾವು

ತುಮಕೂರು: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಎಂ. ಮಂಜುನಾಥ ನಗರದಲ್ಲಿ ನಡೆದ ವರದಿಯಾಗಿದೆ. ಸೋಮವಾರ (ನಿನ್ನೆ) ಮಧ್ಯಾಹ್ನದ ವೇಳೆ ಮನೆಯಿಂದ ಬಟ್ಟೆಗಳನ್ನು ತುಂಬಿಕೊಂಡು ಕಟ್ಟೆಯ ಬಳಿ ತೊಳೆದುಕೊಂಡು ಬರಲು ಅತ್ತೆ- ಸೊಸೆ ಹೋಗಿದ್ದಾರೆ. ಆದರೆ, 3 ಗಂಟೆ ಸುಮಾರಿಗೆ ಸೊಸೆ ನೀರಿಗೆ ಬಿದ್ದಿದ್ದಾರೆ. ಸೊಸೆಯನ್ನು … Continued

ಏರೋ ಇಂಡಿಯಾ 2023 : HLFT-42 ಯುದ್ಧ ವಿಮಾನದ ಹಿಂಬದಿಯಲ್ಲಿದ್ದ ಹನುಮಂತನ ಚಿತ್ರ ತೆಗೆದ ಹೆಚ್‌ಎಎಲ್

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಂದು, ಮಂಗಳವಾರ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023ರಲ್ಲಿ ತಮ್ಮ ವಿಮಾನವೊಂದರಲ್ಲಿದ್ದ ಹನುಮಂತನ ಸ್ಟಿಕ್ಕರ್ ತೆಗೆದುಹಾಕಿದೆ. ಆಂತರಿಕ ಚರ್ಚೆಯ ನಂತರ ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲದ ಕಾರಣ ಅದನ್ನು ತೆಗೆದುಹಾಕಲು ನಿರ್ಧರಿಸಿಸಲಾಗಿದೆ ಎಂದು ಹೇಳಲಾಗಿದೆ. ಏರೋ ಇಂಡಿಯಾ 2023 ರ ಮೊದಲ ದಿನದಂದು, HAL ತನ್ನ ಸೂಪರ್ಸಾನಿಕ್ ತರಬೇತುದಾರ … Continued

ಕೊಡಗು: ಇಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

  ಕೊಡಗು: 24 ತಾಸಿನೊಳಗೆ ಇಬ್ಬರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಇಂದು, ಮಂಗಳವಾರ (ಫೆ.14) ಪೊನ್ನಂಪೇಟೆ ತಾಲೂಕಿನ ನಾಣಚ್ಚಿಗೇಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕೆಲವು ದಿನಗಳಿಂದ ಕೊಡಗಿನಲ್ಲಿ ಜನರು ನರಭಕ್ಷಕ ಹುಲಿಯ ಭಯದಲ್ಲಿ ಜನರು ಓಡಾಡುತ್ತಿದ್ದರು. ಇದೀಗ ಆ ಹುಲಿ ಸೆರೆಯಾಗಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. … Continued

ಚೆಕ್‌ ಬೌನ್ಸ್‌ ಪ್ರಕರಣ: ದೂರುದಾರರಿಗೆ ₹1.38 ಕೋಟಿ ಪಾವತಿಸಲು ಶಾಸಕ ಕುಮಾರಸ್ವಾಮಿಗೆ ವಿಶೇಷ ನ್ಯಾಯಾಲಯದ ಆದೇಶ, ತಪ್ಪಿದರೆ ಜೈಲುಶಿಕ್ಷೆ

ಬೆಂಗಳೂರು: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಬಿಜೆಪಿಯ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಸೋಮವಾರ ಘೋಷಿಸಿದೆ. ಅಲ್ಲದೇ, ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟಾರೆ ₹1.38 ಕೋಟಿಯನ್ನು ದೂರುದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶ ಮಾಡಿದೆ. … Continued

ಬೆಳಗಾವಿ: ನೇಣು ಬಿಗಿದುಕೊಂಡು ಕೆಎಎಸ್ ಅಧಿಕಾರಿ ಪತಿ ಆತ್ಮಹತ್ಯೆ

ಬೆಳಗಾವಿ : ಹಿಡಕಲ್ ಡ್ಯಾಮ್ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟಿ ಅವರ ಪತಿ ಸೋಮವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎಫ್‌ ಡಿಎ (ಕಂದಾಯ ನಿರೀಕ್ಷಕ) ಜಾಫರ್ ಪೀರಜಾದೆ ಎಂಬುವವರು ಆತ್ಮಹತ್ಯೆಗೆ ಶರಣಾದವರು. ಅಣ್ಣನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಕಾರಣ … Continued

ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ-ಉಕ್ಕಿನ ಕಾರ್ಖಾನೆ ಮುಚ್ತೇವೆ: ಕೇಂದ್ರ ಸರ್ಕಾರದ ಉತ್ತರ

ನವದೆಹಲಿ: ಚುನಾವಣೆ ಸನಿಹದಲ್ಲಿ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಮುಚ್ಚುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದ್ದೇವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದೆ. ಈ ಬಗ್ಗೆ ಕರ್ನಾಟಕ ಮೂಲದವರೇ ಆದ ರಾಜ್ಯಸಭಾ … Continued

ಕರ್ನಾಟಕ ವಿಧಾನಸಭೆ ಚುನಾವಣೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಎಸ್‌ ಡಿಪಿಐ ಅಭ್ಯರ್ಥಿ

ಮಂಗಳೂರು: ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಪುತ್ತೂರಿನ ಅಭ್ಯರ್ಥಿಯಾಗಿ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಯನ್ನು ಹೆಸರಿಸಿದೆ. ಆರೋಪಿ ಶಾಫಿ ಬೆಳ್ಳಾರೆ ಎನ್‌ಐಎ ಕಸ್ಟಡಿಯಲ್ಲಿದ್ದಾನೆ.ಕಳೆದ ವರ್ಷ ಜುಲೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಮುಖಂಡನ ಹತ್ಯೆಯಲ್ಲಿ ಶಾಫಿ ಬೆಳ್ಳಾರೆ … Continued

ಕೊಡಗು: ಹುಲಿ ದಾಳಿಗೆ ಮತ್ತೊಬ್ಬ ಕಾರ್ಮಿಕ ಸಾವು, 24 ತಾಸಿನಲ್ಲಿ ಇದು 2ನೇ ಪ್ರಕರಣ

ಮಡಿಕೇರಿ: 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿ(Tiger Attack)ಗೆ ಸಿಲುಕಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಹುಲಿ ದಾಳಿಗೆ ಸೋಮವಾರ ಬೆಳಿಗ್ಗೆ ಕೊಡಗು ಹಾಗೂ ಕೇರಳ ಗಡಿಭಾಗದ ಪಲ್ಲೇರಿ ಗ್ರಾಮದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕೃಷಿ ಕಾರ್ಮಿಕ ರಾಜು (75) ಎಂದು ಗುರುತಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ. … Continued

ಬೆಂಗಳೂರು: ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನ ಉದ್ಘಾಟಿಸಿದ ಪ್ರಧಾನಿ ; ಇದು ‘ಶತಕೋಟಿ ಅವಕಾಶಗಳಿಗೆ ರನ್‌ ವೇ’ ಎಂದು ಬಣ್ಣಿಸಿದ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾರತದ ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನದ 14ನೇ ಆವೃತ್ತಿ ಏರೋ ಇಂಡಿಯಾ- 2023 ಅನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ, ಪ್ರಧಾನ ಮಂತ್ರಿಗಳು ‘ಮೇಕ್ ಇನ್ ಇಂಡಿಯಾ’ ಅಭಿಯಾನ ಉತ್ತೇಜಿಸಿದರು. ಐದು ದಿನಗಳ ಈ ಕಾರ್ಯಕ್ರಮದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನಗಳು ಮತ್ತು ಏರೋಸ್ಪೇಸ್ ಮತ್ತು ರಕ್ಷಣಾ … Continued

ಹುಲಿ ದಾಳಿಗೆ ಹದಿಹರೆಯದ ಕಾರ್ಮಿಕ ಸಾವು

ಮಡಿಕೇರಿ: ನರಭಕ್ಷಕ ಹುಲಿ ದಾಳಿಗೆ ಸಿಲುಕಿ ಹದಿಹರೆಯದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಕೊಡಗು-ಕೇರಳ ಗಡಿಭಾಗವಾದ ಚೂರಿಕಾಡು ಬಳಿ ನಡೆದ ವರದಿಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಕಾರ್ಮಿಕ ಚೇತನ್ (18) ಹುಲಿ ದಾಳಿಗೆ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನದ ವೇಳೆ ಈತ ಕಾಫಲಿ ಪ್ಲಾಂಟ್‌ನಲ್ಲಿ ತನ್ನ ದೈನಂದಿನ ಕೆಲಸದಲ್ಲಿ ನಿರತನಾಗಿದ್ದಾಗ ತೋಟದಲ್ಲಿದ್ದ ಹುಲಿ … Continued