ಕರ್ನಾಟಕದಲ್ಲಿ ಹೊಸದಾಗಿ 1,549 ಕೊರೊನಾ ಸೋಂಕು ದಾಖಲು, ಪಾಸಿಟಿವ್ ರೇಟ್ 1.45%ಕ್ಕೆ ಇಳಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಕೇಸ್ ಸಂಖ್ಯೆಯಲ್ಲಿ ಇಳಿಕೆ ಮುಂದುವರಿದಿದೆ. ಇಂದು, ಗುರುವಾರ ರಾಜ್ಯದಲ್ಲಿ ಹೊಸದಾಗಿ 1,549 ಕೊರೊನಾ ಸೋಂಕು ದಾಖಲಾಗಿವೆ. ಇದೇವೇಳೆ  23 ಜನ ಕೊರೊನಾಗೆ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 5019 ಜನ ಬಿಡುಗಡೆಯಾಗಿದ್ದಾರೆ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 19,761ಕ್ಕೆ ಇಳಿಕೆಯಾಗಿವೆ. ಪಾಸಿಟಿವ್ ರೇಟ್ 1.45%ಗೆ ಇಳಿದಿದೆ. ಬೆಂಗಳೂರಿನಲ್ಲಿ 769 ಕೋವಿಡ್‌ ಪ್ರಕರಣ ದಾಖಲಾದೆ. 7 … Continued

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬರುವ ಶಾಲೆಗಳಲ್ಲೂ ಹಿಜಾಬ್, ಕೇಸರಿ ಶಾಲು, ಸ್ಕಾರ್ಫ್​​ಗೆ ನಿರ್ಬಂಧ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ ಸಂಘರ್ಷದ ಹೊತ್ತಲ್ಲೇ ಸರ್ಕಾರದ ಮತ್ತೊಂದು ಆದೇಶ ಹೊರಬಿದ್ದಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬರುವ ಶಾಲೆಗಳಲ್ಲಿ ಹಿಜಾಬ್‌, ಕೇಸರಿ ಶಾಲು, ಸ್ಕಾರ್ಫ್​​​ ಧರಿಸದಂತೆ ಆದೇಶಿಸಿ ಸುತ್ತೋಲೆ ಹೊರಡಿಸಲಾಗಿದೆ. ಹೈಕೋರ್ಟ್‌ ಮಧ್ಯಂತರ ಆದೇಶದ ನಂತರ ಸರ್ಕಾರ ಈ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅಲ್ಪಸಂಖ್ಯಾತ ಕಲ್ಯಾಣ ಶಾಲೆಗಳಲ್ಲಿ ಹಿಜಾಬ್‌ ನಿಷೇಧಿಸಿ ಆದೇಶಿಸಿದೆ. ‌ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ … Continued

ಪ್ರಜ್ವಲ್ ರೇವಣ್ಣ ಅಕ್ರಮ ಆಸ್ತಿ ಪ್ರಕರಣ: ಹೈಕೋರ್ಟ್‌ ಆದೇಶ ಬದಿಗೆ ಸರಿಸಿದ ಸುಪ್ರೀಂ ಕೋರ್ಟ್‌; ವಿಚಾರಣೆ ನಡೆಸಲು ಸೂಚನೆ

ನವದೆಹಲಿ: ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಅವರ ಅಕ್ರಮ ಆಸ್ತಿ ಗಳಿಸಿದ್ದು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾದ ಅರ್ಜಿಯ ವಿಚಾರಣೆ ನಡೆಸುವಂತೆ ರಾಜ್ಯ ಹೈಕೋರ್ಟ್‌ಗೆ ಸೂಚನೆ ನೀಡಿ ಸುಪ್ರೀಂಕೋರ್ಟ್‌ ಆದೇಶಿಸಿದೆ. ಆಕ್ಷೇಪಾರ್ಹ ಆದೇಶವನ್ನು ಬದಿಗೆ ಸರಿಸಲಾಗಿದ್ದು ಇದೇ ರೀತಿಯ ಇತರ ಮನವಿಗಳ ಜೊತೆಗೆ ವಿಚಾರಣೆ ನಡೆಸಲು ಪ್ರಕರಣವನ್ನು ಮರಳಿಸಲಾಗಿದೆ ಎಂದು … Continued

ಹೈಕೋರ್ಟಿನಲ್ಲಿ ಹಿಜಾಬ್‌ ಪ್ರಕರಣ: ಹಿಜಾಬ್ ನಿಷೇಧವು ಕುರಾನ್ ನಿಷೇಧಕ್ಕೆ ಸಮವಾಗಿದೆ-ಡಾ.ಕುಲಕರ್ಣಿ ವಾದ

ಬೆಂಗಳೂರು: ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಐದನೇ ದಿನವಾದ … Continued

ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್‌ ಪಟ್ಟು: ವಿಧಾನಸಭೆಯಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ..!

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜವನ್ನು ಮುಂದೊಂದು ದಿನ ಕೆಂಪುಕೋಟೆ ಮೇಲೆ ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲೇ ಕಾಂಗ್ರೆಸ್​ ಶಾಸಕರು ತಮ್ಮ ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಸದಸ್ಯರ ಧರಣಿ ನಂತರ ಇಂದು, ಗುರವಾರ ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ ೩ ಗಂಟೆಗೆ ಮುಂದೂಡಿದ … Continued

ಹಿಜಾಬ್‌ ವಿವಾದ: ಬೆಳಗಾವಿಯಲ್ಲಿ ಹೈಡ್ರಾಮಾ, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶಕ್ಕೆ

ಬೆಳಗಾವಿ: ಹಿಜಾಬ್ ಧರಿಸಲು ಅನುಮತಿ ನೀಡದ್ದಕ್ಕೆ ಕೆಲ ಯುವಕರು ಸದಾಶಿವನಗರದ ಲಕ್ಷ್ಮಿ ಕಾಂಪ್ಲೆಕ್ಸ್ ಸಮೀಪದ ವಿಜಯ ಪ್ಯಾರಾಮೆಡಿಕಲ್ ಆಪ್ ಸೈನ್ಸ್ ಕಾಲೇಜು ಬಳಿ ಗುರುವಾರ ಹೈಡ್ರಾಮಾ ನಡೆಸಿ ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ  ಎಂದು ವರದಿಯಾಗಿದೆ. ಕಾಲೇಜಿನ ತರಗತಿಯೊಳಗೆ ಹಿಜಾಬ್ ಗೆ ಅವಕಾಶ ಇಲ್ಲ ಎಂದು ಕಾಲೇಜು … Continued

ಹಿಜಾಬ್ ವಿವಾದ: ಉಡುಪಿ ಕಾಲೇಜಿನಲ್ಲಿ ಡ್ರೆಸ್ ಕೋಡ್ ಪಾಲಿಸದ 60 ವಿದ್ಯಾರ್ಥಿಗಳು ಮನೆಗೆ ವಾಪಸ್

ಉಡುಪಿ: ಉಡುಪಿಯ ಸರ್ಕಾರಿ ಜಿ ಶಂಕರ್ ಸ್ಮಾರಕ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಸುಮಾರು 60 ವಿದ್ಯಾರ್ಥಿನಿಯರು ಗುರುವಾರ ತಮ್ಮ ಹಿಜಾಬ್ ತೆಗೆಸುವಂತೆ ಕಾಲೇಜು ಅಧಿಕಾರಿಗಳು ಸೂಚಿಸಿದ ನಂತರ ಮನೆಗೆ ಮರಳಿರುವುದಾಗಿ ಹೇಳಿದ್ದಾರೆ. ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರೂ ಕಾಲೇಜು … Continued

೪೫ ಸಾವಿರ ಹುದ್ದೆಗಳ ಭರ್ತಿಗೆ ಸರ್ಕಾರ ಪ್ರಕ್ರಿಯೆ ಆರಂಭ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ೪೫ ಸಾವಿರ ಹುದ್ದೆಗಳ ಭರ್ತಿಗೆ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾಪರಿಷತ್‌ನಲ್ಲಿ ಇಂದು, ಗುರುವಾರ ಹೇಳಿದರು. ೧೫ ಸಾವಿರ ಶಿಕ್ಷಕರ ನೇಮಕಾತಿ, ೧೬ ಸಾವಿರ ಪೊಲೀಸರ ನೇಮಕಾತಿ ಹಾಗೂ ಹೈದರಾಬಾದ್-ಕರ್ನಾಟಕದ ವಿವಿಧ ಇಲಾಖೆಗಳ ಸರಿಸುಮಾರು ೧೪ ಸಾವಿರ ಹುದ್ದೆಗಳು ಸೇರಿದಂತೆ ೪೫ ಸಾವಿರ ಹುದ್ದೆಗಳ ಭರ್ತಿಗೆ … Continued

ಏಕ ಮಾಲೀಕತ್ವದ ಪಹಣಿಗೆ ಭೂಪರಿವರ್ತನಾ ಪೂರ್ವ ನಕ್ಷೆಗೆ ವಿನಾಯ್ತಿ ನೀಡಿದ ಸರ್ಕಾರ

ಬೆಂಗಳೂರು: ಈಗ ಏಕ ಮಾಲೀಕತ್ವದ ಪಹಣಿಯಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಭೂಪರಿವರ್ತನೆ ಕೋರಿ ಸಲ್ಲಿಸುವ ಅರ್ಜಿಗೆ ಪೂರ್ವ ನಕ್ಷೆಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದುವರೆಗೆ ಭೂ ಪರಿವರ್ತನೆಗೆ ಕೋರಿ ಸಲ್ಲಿಸಲಾಗುತ್ತಿದ್ದಂತ ಎಲ್ಲಾ ಅರ್ಜಿಗಳಿಗೆ ಭೂ ಪರಿವರ್ತನಾ ಪೂರ್ವ ನಕ್ಷೆ ತಯಾರಿಸಲಾಗುತ್ತಿತ್ತು. ಈ ಕುರಿತು ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು, ಸುತ್ತೋಲೆ ಹೊರಡಿಸಿದ್ದಾರೆ. ಭೂ … Continued

ಮಹತ್ವದ ಸುದ್ದಿ…ಪದವಿ ಪರೀಕ್ಷೆಗಳನ್ನು ಒಂದು ತಿಂಗಳು ಮುಂದೂಡಲು ರಾಜ್ಯದ ವಿವಿಗಳಿಗೆ ಸೂಚನೆ

ಬೆಂಗಳೂರು : ಕೋವಿಡ್‌ ಸೋಂಕು ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಪಾಠ-ಪ್ರವಚನಗಳು ಮುಗಿಯದ ಕಾರಣ ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಎಲ್ಲ ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಉನ್ನತ ಶಿಕ್ಷಣ ಇಲಾಖೆ ವಿಶ್ವ ವಿದ್ಯಾಲಯಗಳಿಗೆ ಸೂಚನೆ ನೀಡಿದೆ. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಅವರು ವಿಶ್ವ ವಿದ್ಯಾಲಯಗಳಿಗೆ ಈ … Continued