ಲಾಕ್ಡೌನ್‌ನಲ್ಲಿ ಉದ್ಯೋಗ ಕಳೆದುಕೊಂಡು ಆರ್ಥಿಕ ಒತ್ತಡದಿಂದ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿ

ಹೈದರಾಬಾದ್: ಆರ್ಥಿಕ ಸಮಸ್ಯೆಯಿಂದಾಗಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣು ಬೀಗಿದುಕೊಂಡು ಮೃತಪಟ್ಟ ಮನಕಲಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಸ್ವಾತಿ ಕುಸುಮಾ (32) ಎಂಬವಳೇ ಮೃತ ಮಹಿಳೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸ್ವಾತಿ ಕುಸುಮಾ ಹಾಗೂ ಅವರ ಪತಿ ಸಾಯಿಕುಮಾರ್ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿದ್ದರು. ಇದರಿಂದಾಗಿ ಹಣದ ಸಮಸ್ಯೆ ಉಂಟಾಗಿತ್ತು. … Continued

ಮಾರಾಟದಲ್ಲಿ ಹೊಸ ದಾಖಲೆ ಬರೆದ ಅಸ್ಸಾಂನ ಮನೋಹರಿ ಗೋಲ್ಡ್ ಟೀ ..! ವಿಶ್ವದ ಈ ದುಬಾರಿ ಟೀ ಪೌಡರ್‌ ಪ್ರತಿ ಕೆಜಿ ಬೆಲೆ ಎರಡು ತೊಲೆ ಬಂಗಾರದ ಬೆಲೆಗಿಂತ ಹೆಚ್ಚು..!!

ಗುವಾಹಟಿ: ಇದು ನಂಬಲಸಾಧ್ಯವಾಗಿದೆ, ಆದರೆ ನಂಬಲೇಬೇಕು. ಇಂದು, ಮಂಗಳವಾರ ಗುವಾಹಟಿ ಟೀ ಆಕ್ಷನ್ ಸೆಂಟರ್ (ಜಿಟಿಎಸಿ) ನಲ್ಲಿ ದಿನದ ವಹಿವಾಟಿನಲ್ಲಿ ಟೀ ಪೌಡರ್‌ ಹೊಸ ದಾಖಲೆ ಬರೆದಿದೆ. ಅಸ್ಸಾಂ ಟೀಯ ಹೆಸರಾಂತ ಬ್ರಾಂಡ್‌ನ ಜಿಟಿಎಸಿಯಲ್ಲಿ ಪ್ರತಿ ಕೆಜಿಗೆ 99,999 ರೂ.ಗಳಿಗೆ ಮಾರಾಟವಾಗಿದ್ದು, ಇತಿಹಾಸವನ್ನು ಸೃಷ್ಟಿಸಿದೆ…! ಅಸ್ಸಾಂನ ಪ್ರಸಿದ್ಧ ಮತ್ತು ಅಪರೂಪದ ಚಹಾ “ಮನೋಹರಿ ಗೋಲ್ಡ್ ಟೀ” … Continued

ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ಹೊಣೆ ಹೊತ್ತಿದ್ದ ಪಾಕಿಸ್ತಾನಿ ಉಗ್ರ ಹತ

ಪೂಂಚ್: ಪಾಕಿಸ್ತಾನದ ಉಗ್ರ ಅಬು ಜರಾರ್‌ನನ್ನು ಭಾರತೀಯ ಭದ್ರತಾ ಪಡೆಗಳು ಇಂದು, ಮಂಗಳವಾರ ಹೊಡೆದುರುಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್-ರಜೌರಿ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿಗಳನ್ನು ನಡೆಸುವ ಜವಾಬ್ದಾರಿಯನ್ನು ಜರಾರ್ ವಹಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಪೂಂಚ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಪಾಕಿಸ್ತಾನಿ ಪ್ರಜೆ ಜರಾರ್ ಭದ್ರತಾ ಪಡೆಗಳ … Continued

ಆನ್‌ಲೈನ್ ಗೇಮಿಂಗ್ ಟೋಕನ್‌ ವಿವಾದ: 16 ರ ಬಾಲಕನಿಂದ 12 ವರ್ಷದ ಸೋದರ ಸಂಬಂಧಿ ಹತ್ಯೆ

ಲಡ್ನು:ಆನ್‌ಲೈನ್ ಗೇಮ್‌ಗಳ ರಿಚಾರ್ಜ್ ಟೋಕನ್ ಪಾವತಿ ವಿಚಾರದಲ್ಲಿ ನಡೆದ ಜಗಳದಲ್ಲಿ 16 ವರ್ಷದ ಬಾಲಕನೊಬ್ಬ ತನ್ನ 12 ವರ್ಷದ ಸೋದರ ಸಂಬಂಧಿಯನ್ನೇ ಕತ್ತುಹಿಸುಕಿ ಕೊಲೆ ಮಾಡಿ ಹೊಲದಲ್ಲಿ ಹೂತು ಹಾಕಿರುವ ರಾಜಸ್ಥಾನದ ನಗೌರ್ ಜಿಲ್ಲೆಯ ಲಾಡ್ನುವಿನಲ್ಲಿ ಘಟನೆ ನಡೆದ ಬಗ್ಗೆ ವರದಿಯಾಗಿದೆ. 12 ವರ್ಷದ ಬಾಲಕ ನಾಪತ್ತೆಯಾಗಿರುವ ಕುರಿತು ಆತನ ಚಿಕ್ಕಪ್ಪ ದೂರು ನೀಡಿದ್ದು, ಮೊಬೈಲ್‌ನಲ್ಲಿ … Continued

ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು.. ವಿಜ್ಞಾನಿಗಳಿಂದ ಹೊಸ ಆವಿಷ್ಕಾರ..!.

ಜಪಾನ್ ವಿಜ್ಞಾನಿಗಳು ಕೋವಿಡ್ -19 ವೈರಸ್ ಪತ್ತೆಹಚ್ಚುವ ಅದ್ಭುತ ಫೇಸ್ ಮಾಸ್ಕ್ (Corona Mask Test Covid) ಅಭಿವೃದ್ಧಿಪಡಿಸಿದ್ದಾರೆ…! ಮಾಸ್ಕ್ ಮೇಲೆ ಫ್ಲೋರೊಸೆಂಟ್ ಬೆಳಕಿನಿಂದ ಉಸಿರಾಟದಲ್ಲಿ ಕೊರೊನಾವೈರಸ್ ಪತ್ತೆಯಾಗುತ್ತದೆಯಂತೆ. ಹಾಗೆಂದು ಮಾಸ್ಕ್‌ ಧರಿಸಲು ವಿಶೇಷ ಕೌಶಲ್ಯವೇನೂ ಇಲ್ಲ. ಮಾಸ್ಕ್ ಅನ್ನು ಸಾಮಾನ್ಯ ರೀತಿಯಲ್ಲಿಯೇ ಧರಿಸಿದರಾಯಿತು. ಕೋವಿಡ್-19 ವೈರಸ್‌ನ ಸಕ್ರಿಯತೆಯನ್ನು ಪತ್ತೆಹಚ್ಚಲು ಮಾಸ್ಕ್ ಮೇಲೆ ಕಂಡುಬರುವ ಕಣಗಳನ್ನು … Continued

ನಟ ಅರ್ಜುನ್ ಸರ್ಜಾಗೆ ಕೋವಿಡ್‌ ಸೋಂಕು

ಚೆನ್ನೈ: ನಟ ಅರ್ಜುನ್ ಸರ್ಜಾ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಈ ವಿಷಯವನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ನನಗೆ ಕೋವಿಡ್ ಪಾಸಿಟಿವ್ ಆಗಿದೆ. ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ನಾನು ಐಸೊಲೇಟ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. … Continued

ದೆಹಲಿ-ರಾಜಸ್ಥಾನದಲ್ಲಿ ತಲಾ 4 ಓಮಿಕ್ರಾನ್ ಪ್ರಕರಣಗಳು ದೃಢ..: ಭಾರತದಲ್ಲಿ ಸೋಂಕಿತರ ಸಂಖ್ಯೆ 49ಕ್ಕೆಏರಿಕೆ

ನವದೆಹಲಿ: ದೆಹಲಿಯಲ್ಲಿ ಮತ್ತೆ 4 ಓಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೆಹಲಿಯಲ್ಲಿ ಓಮಿಕ್ರಾನ್​ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಲ್ಲದೆ, ರಾಜಸ್ಥಾನದಲ್ಲಿಯೂ ಮತ್ತೆ 4 ಕೇಸ್​ ದಾಖಲಾಗಿದ್ದು, ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ಏರಿದೆ. ನಿನ್ನೆ ಗುಜರಾತ್​​ನಲ್ಲಿ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್​ ದೃಢಪಟ್ಟಿತ್ತು. … Continued

ಮಗುವಿನ ಅಳು ಸಹಿಸಲಾರದೆ ಗೋಡೆಗೆ ಜಜ್ಜಿ 27 ದಿನದ ಮಗು ಕೊಂದ ತಾಯಿ..!

ಪತ್ತನಂತಿಟ್ಟ: 27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು ಕೊಂದಿದ್ದಕ್ಕಾಗಿ ತಾಯಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅಕಾಲಿಕ ಮಗು ನಿಯಮಿತವಾಗಿ ಅನಾರೋಗ್ಯದಿಂದ ಬಳಲುತ್ತಿತ್ತು ಮತ್ತು ಅವನ ನಿರಂತರ ಅಳುವಿಕೆ 21 ವರ್ಷದ ತಾಯಿಯನ್ನು ಈ ಅಪರಾಧ ಮಾಡಲು ಪ್ರೇರೇಪಿಸಿತು. ಡಿಸೆಂಬರ್ 9 ರಂದು ಈ ಘಟನೆ ಸಂಭವಿಸಿದೆ. ಮಗುವನ್ನು … Continued

ಮಹಾರಾಷ್ಟ್ರದಲ್ಲಿ ಎರಡು ಹೊಸ ಓಮಿಕ್ರಾನ್ ಪ್ರಕರಣಗಳು ವರದಿ, ಸಂಖ್ಯೆ 20ಕ್ಕೆ ಏರಿಕೆ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್ ರೂಪಾಂತರದ ಎರಡು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಸೋಮವಾರ ದೃಢಪಡಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸೋಮವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಲಾತೂರ್‌ನಲ್ಲಿ ಒಂದು ಪ್ರಕರಣ ವರದಿಯಾಗಿದ್ದರೆ, ಇನ್ನೊಂದು ಸೋಂಕು ಪುಣೆಯಿಂದ ವರದಿಯಾಗಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರಿತ ಪ್ರಕರಣಗಳ ಸಂಖ್ಯೆ … Continued

ವಿವಿಗೆ ನೆಹರೂ ಹೆಸರಿಟ್ಟಿರುವಾಗ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೊ ಇದ್ದರೆ ತಪ್ಪೇನಿದೆ: ಕೇರಳ ಹೈಕೋರ್ಟ್ ಪ್ರಶ್ನೆ

ತಿರುವನಂತಪುರಂ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿದಾರರ ಆಕ್ಷೇಪಣೆಯನ್ನು ಕೇರಳ ಹೈಕೋರ್ಟ್‌ ಸೋಮವಾರ ಪ್ರಶ್ನಿಸಿದೆ. ಅರ್ಜಿದಾರರು ಜವಾಹರಲಾಲ್ ನೆಹರೂ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಪೀಠ ವಿಶ್ವವಿದ್ಯಾಲಯಕ್ಕೆ ನೆಹರೂ ಹೆಸರು ಇಡಲಾಗಿದೆ. ಇದು ಲಸಿಕೆ ಪ್ರಮಾಣ ಪತ್ರದಲ್ಲಿ … Continued