ಅಫ್ಘಾನಿಸ್ತಾನದ ಕುರಿತಾದ ಎನ್‌ಎಸ್‌ಎ ಮಟ್ಟದ ಮಾತುಕತೆಗೆ ಹಾಜರಾಗದ ಪಾಕಿಸ್ತಾನದ ನಿರ್ಧಾರ ‘ದುರದೃಷ್ಟಕರ, ಆದರೆ ಆಶ್ಚರ್ಯಕರವಲ್ಲ’: ಭಾರತ

ನವದೆಹಲಿ: ಅಫ್ಘಾನಿಸ್ತಾನದ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರರ ​​(ಎನ್‌ಎಸ್ಎ) ಮಟ್ಟದ ಮಾತುಕತೆಗೆ ಸೇರದ ಪಾಕಿಸ್ತಾನದ ನಿರ್ಧಾರವನ್ನು ಭಾರತ ಶುಕ್ರವಾರ ಖಂಡಿಸಿದೆ ಮತ್ತು ಇಸ್ಲಾಮಾಬಾದ್‌ನ ನಡೆ ‘ದುರದೃಷ್ಟಕರ, ಆದರೆ ಆಶ್ಚರ್ಯಕರವಲ್ಲ’ ಎಂದು ಹೇಳಿದೆ. ಸಭೆಗೆ ಸೇರದಿರುವ ಪಾಕಿಸ್ತಾನದ ನಿರ್ಧಾರವು ಇಸ್ಲಾಮಾಬಾದ್‌ನ ‘ಅಫ್ಘಾನಿಸ್ತಾನವನ್ನು ತನ್ನ ರಕ್ಷಿತ ರಾಷ್ಟ್ರವಾಗಿ ನೋಡುವ ಮನಸ್ಥಿತಿಯನ್ನು’ ಪ್ರತಿಬಿಂಬಿಸುತ್ತದೆ ಎಂದು ನವದೆಹಲಿ ನಂಬುತ್ತದೆ ಎಂದು ಸರ್ಕಾರಿ … Continued

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ: ತನಿಖೆಯಿಂದ ಸಮೀರ್ ವಾಂಖೇಡೆ ತೆಗೆದದ್ದು ಕೇವಲ ಆರಂಭ’ ಎಂದ ಸಚಿವ ನವಾಬ್ ಮಲಿಕ್

ಮುಂಬೈ: ಆರ್ಯನ್ ಖಾನ್ ಒಳಗೊಂಡ ಕ್ರೂಸ್ ಡ್ರಗ್ಸ್‌ ಪ್ರಕರಣದಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರನ್ನು ಬದಲಾಯಿಸಿದ ನಂತರ “ಇನ್ನೂ ಬಹಳಷ್ಟು ಮಾಡಬೇಕಾಗಿದೆ” ಎಂದು ಮಹಾರಾಷ್ಟ್ರ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಶುಕ್ರವಾರ ಪ್ರತಿಪಾದಿಸಿದ್ದಾರೆ. ನವಾಬ್ ಮಲಿಕ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ, … Continued

ಆರ್ಯನ್ ಖಾನ್ ಡ್ರಗ್ಸ್‌ ಪ್ರಕರಣ: ತನಿಖೆ ವಹಿಸಿಕೊಂಡ ದೆಹಲಿ ಎನ್‌ಸಿಬಿ, ಸಮೀರ್ ವಾಂಖೇಡೆ, ಇತರರಿಂದ ಸಹಕಾರ

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಶುಕ್ರವಾರ ಮುಂಬೈ ಘಟಕದ ಉಸ್ತುವಾರಿ ಸಮೀರ್ ವಾಂಖೇಡೆ ಅವರನ್ನು ಕಾರ್ಡೆಲಿಯಾ ಕ್ರೂಸ್ ಶಿಪ್ ಮಾದಕ ದ್ರವ್ಯ ಪತ್ತೆ ಪ್ರಕರಣದಿಂದ ಸ್ಥಳಾಂತರಿಸಿದೆ. ಆದಾಗ್ಯೂ, ‘ತೆಗೆದುಹಾಕಲಾಗಿದೆ’ ಎಂಬುದು ಬಲವಾದ ಪದವಾಗಿದೆ ಎಂದು ವಾಂಖೇಡೆ ಹೇಳಿದ್ದಾರೆ ಮತ್ತು ಎನ್‌ಸಿಬಿಯ ಮುಂಬೈ ಘಟಕದ ವಲಯ ನಿರ್ದೇಶಕರಾಗಿ ತಾವು ಮುಂದುವರಿದಿರುವುದಾಗಿ ಅವರು ಹೇಳಿದರು. ಆರ್ಯನ್ ಖಾನ್ … Continued

ಬೈಕ್​ನಲ್ಲಿ ತೆರಳುತ್ತಿದ್ದಾಗ ಸ್ಫೋಟಗೊಂಡ ಪಟಾಕಿ: ಅಪ್ಪ-ಮಗನ ದೇಹಗಳು ಛಿದ್ರ…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪುದುಚೇರಿ: ಪುಚೇರಿ ಸಮೀಪ ದೀಪಾವಳಿಯಂದು ನಡೆದ ಭೀಕರ ಘಟನೆಯಲ್ಲಿ ಗುರುವಾರ ಪಟಾಕಿ ತುಂಬಿದ್ದ ಸ್ಕೂಟರ್ ಸ್ಫೋಟಗೊಂಡಿದ್ದರಿಂದ ಒಬ್ಬ ವ್ಯಕ್ತಿ ಮತ್ತು ಆತನ ಏಳು ವರ್ಷದ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದು ತಮಿಳುನಾಡಿನ ಕೊಟ್ಟಕುಪ್ಪಂ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಲೈನೇಸನ್ ಮತ್ತು ಅವರ ಮಗ ಪ್ರದೀಪ್ ಕೂನಿಮೇಡು ಗ್ರಾಮಕ್ಕೆ ಸ್ಕೂಟರಿನಲ್ಲಿ ಪಟಾಕಿ ತೆಗೆದುಕೊಂಡು ಪ್ರಯಾಣಿಸುತ್ತಿದ್ದಾಗ ಸ್ಫೋಟ … Continued

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್‌ ಪಡೆದ ನವಜೋತ್ ಸಿಂಗ್ ಸಿಧು

ಚಂಡೀಗಡ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಒಂದು ತಿಂಗಳ ನಂತರ ನವಜೋತ್ ಸಿಂಗ್ ಸಿಧು ಇಂದು (ಶುಕ್ರವಾರ) ತಮ್ಮ ರಾಜೀನಾಮೆ ಹಿಂಪಡೆದಿರುವುದಾಗಿ ಪ್ರಕಟಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಾನು ರಾಜೀನಾಮೆಯನ್ನು ವಾಪಸ್ ಪಡೆಯುವುದಾಗಿ ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದೇನೆ. ನಾನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ಮುಂದುವರೆಯಲಿದ್ದೇನೆ ಎಂದು … Continued

ಕೇದಾರನಾಥದಲ್ಲಿ 12 ಅಡಿ ಎತ್ತರದ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಉತ್ತರಾಖಂಡದ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡಿ, 12 ಅಡಿ ಎತ್ತರದ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆಯು 35 ಟನ್‌ಗಳಷ್ಟು ತೂಗುತ್ತದೆ ಮತ್ತು ಇದನ್ನು ಮೈಸೂರು ಮೂಲದ ಶಿಲ್ಪಿಗಳು ಕ್ಲೋರೈಟ್ ಸ್ಕಿಸ್ಟ್‌ನಿಂದ ತಯಾರಿಸಿದ್ದಾರೆ, … Continued

ಭಾರತದಲ್ಲಿ 12,729 ಹೊಸ ಕೋವಿಡ್ -19 ಪ್ರಕರಣಗಳು ದಾಖಲು..ನಿನ್ನೆಗಿಂತ 1.2% ಕಡಿಮೆ

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 12,729 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಗುರುವಾರ ವರದಿಯಾದ ಪ್ರಮಾಣಕ್ಕಿಂತ 1.2 ಶೇಕಡಾ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ತಾಜಾ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಪ್ರಕರಣದ ಸಂಖ್ಯೆ 3,43,33,754 ಕ್ಕೆ ಏರಿದೆ. ಕಳೆದ 24 … Continued

ಭಾರತ- ನ್ಯೂಜಿಲೆಂಡ್ ಟೆಸ್ಟ್ ಸರಣಿ: ಟ್ರೆಂಟ್ ಬೌಲ್ಟ್, ಗ್ರಾಂಡ್‌ಹೋಮ್ ಇಲ್ಲದ 15 ಸದಸ್ಯರ ನ್ಯೂಜಿಲೆಂಡ್ ತಂಡ ಪ್ರಕಟ

ನವದೆಹಲಿ: ಆತಿಥೇಯ ಭಾರತ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ಗುರುವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊದಲ ಟೆಸ್ಟ್ ಕಾನ್ಪುರದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಡಿಸೆಂಬರ್ 3 ರಿಂದ ಮುಂಬೈನಲ್ಲಿ ನಡೆಯಲಿದೆ. ಕೇನ್ ವಿಲಿಯಮ್ಸನ್ ತಂಡದ ನಾಯಕರಾಗಿದ್ದು, ಟೆಸ್ಟ್ ಸ್ಪಿನ್ನರ್ ರಚಿನ್ ರವೀಂದ್ರ ನವೆಂಬರ್ 25 ರಿಂದ ನಡೆಯಲಿರುವ ಸರಣಿಯಲ್ಲಿ ಪಾದಾರ್ಪಣೆ … Continued

ಬಿಹಾರದ ಎರಡು ಜಿಲ್ಲೆಗಳಲ್ಲಿ ಕಳ್ಳಬಟ್ಟಿ ಸೇವನೆಯಿಂದ 24 ಜನರ ಸಾವು

ಪಾಟ್ನಾ: ಕಳ್ಳಬಟ್ಟಿ ಸೇವಿಸಿ ಬಿಹಾರದ ಗೋಪಾಲ್​ಗಂಜ್ ಜಿಲ್ಲೆಯಲ್ಲಿ 16 ಹಾಗೂ ಪಶ್ಚಿಮ ಚಂಪಾರಣ್‌ ಜಿಲ್ಲೆಯಲ್ಲಿ 8 ಸೇರಿದಂತೆ ಒಟ್ಟು 24 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವು ಜನರು ಅಸ್ವಸ್ಥಗೊಂಡಿದ್ದಾರೆ. ಬಿಹಾರದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದ್ದರೂ ಈ ದುರ್ಘಟನೆ ಸಂಭವಿಸಿದ್ದು, ಪಶ್ಚಿಮ ಚಂಪಾರಣ್ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಬೆಟ್ಟಯಾ ಸಮೀಪದ ತೆಲ್ಹುವಾ ಗ್ರಾಮದಲ್ಲಿ ನವೆಂಬರ್ 4 ರಂದು … Continued

ಕಾನ್ಪುರದಲ್ಲಿ ಇಂದು ಮತ್ತೆ 30 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಪತ್ತೆ..!

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದು (ನವೆಂಬರ್ 4) ಮತ್ತೆ 30 ಜನರಿಗೆ ಝಿಕಾ ವೈರಸ್​ ಪತ್ತೆ ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ ಝಿಕಾ ವೈರಸ್​ ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆ ಆಗಿದೆ. ಬುಧವಾರ (ನವೆಂಬರ್ 3) ವಾಯುಪಡೆಯ ಆರು ಸಿಬ್ಬಂದಿಯೂ ಸೇರಿದಂತೆ ಜಿಲ್ಲೆಯ 25 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿತ್ತು. ಝಿಕಾ ವೈರಸ್ ಸೋಂಕು ಸೊಳ್ಳೆಗಳಿಂದ … Continued