ದಿಶಾ ಪ್ರಕರಣ’ದಲ್ಲಿ ಅತ್ಯಾಚಾರ ಸಂತ್ರಸ್ತೆ ಗುರುತು ಬಹಿರಂಗ: 38 ಬಾಲಿವುಡ್ -ಟಾಲಿವುಡ್ ನಟರ ವಿರುದ್ಧ ದೂರು ದಾಖಲು

ನವದೆಹಲಿ; ಹೈದರಾಬಾದ್‌ ಹೊರವಲಯದಲ್ಲಿ ಪಶುವೈದ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಜೀವಂತ ಸುಟ್ಟು ಹಾಕಿದ ಎರಡು ವರ್ಷಗಳಾಗಿವೆ. ಭಯಾನಕ “ದಿಶಾ ಅತ್ಯಾಚಾರ ಪ್ರಕರಣ” ನಮ್ಮ ನೆನಪಿನಲ್ಲಿ ಇನ್ನೂ ತಾಜಾವಾಗಿದ್ದರೂ, ದೆಹಲಿ ಮೂಲದ ವಕೀಲರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ನೈಜ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ಟಾಲಿವುಡ್ ಮತ್ತು ಬಾಲಿವುಡ್‌ನ 38 ಚಲನಚಿತ್ರ ಸೆಲೆಬ್ರಿಟಿಗಳನ್ನು ಬಂಧಿಸುವಂತೆ … Continued

ದೇವಸ್ಥಾನದ ಆಸ್ತಿ ದೇವರಿಗೆ ಸೇರಿದ್ದು, ಭೂ ದಾಖಲೆಯಲ್ಲಿ ಅರ್ಚಕರ ಹೆಸರು ನಮೂದಿಸುವ ಅಗತ್ಯವಿಲ್ಲ:ಸುಪ್ರೀಂಕೋರ್ಟ್

ನವದೆಹಲಿ: ದೇವಸ್ಥಾನಕ್ಕೆ ಸೇರಿದ ಭೂಮಿಯ ಮಾಲೀಕತ್ವದ ವಿಚಾರಕ್ಕೆ ಬಂದಾಗ ಭೂ ದಾಖಲೆಗಳಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವರ ಹೆಸರು ಮಾತ್ರ ಉಲ್ಲೇಖಕ್ಕೆ ಅರ್ಹ, ಅರ್ಚಕರು ಪೂಜೆ ಮಾಡಲು ಮಾತ್ರ ಸೀಮಿತವಾಗಿರುತ್ತಾರೆ. ದೇವರ ಆಸ್ತಿಯನ್ನು ನಿರ್ವಹಣೆ ಮಾಡುವ ಖಾತರಿದಾರರಾಗಿ ಮಾತ್ರ ಪೂಜಾರಿ/ಅರ್ಚಕರು ಇರಲಿದ್ದಾರೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ನ್ಯಾಯಿಕ ವ್ಯಕ್ತಿಯಾಗಿ (ಜ್ಯೂರಿಸ್ಟಿಕ್‌ ಪರ್ಸನ್‌) ದೇವರೇ … Continued

ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಕಾಮೆಂಟ್ಸ್‌ ಆರೋಪ: ಛತ್ತೀಸ್‌ಗಡ ಸಿಎಂ ಭೂಪೇಶ್ ಬಘೇಲ್ ತಂದೆ ಬಂಧನ

ರಾಯಪುರ: ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದಕುಮಾರ್ ಬಘೇಲ್ ಅವರನ್ನು ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಂಗಳವಾರ ಬಂಧಿಸಲಾಗಿದೆ. ರಾಯಪುರ ಪೊಲೀಸರು ನಂದಕುಮಾರ್ ಬಘೇಲ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ದರು, ಅಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಿಂದೆ, ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ … Continued

ನಾಸಿಕ್‌: ಬಾವಿಯಲ್ಲಿ ಚಿರತೆ-ಬೆಕ್ಕು ಮುಖಾಮುಖಿ.. ಹೆದರದ ಬೆಕ್ಕು.. ಮುಂದೇನಾಯ್ತು.. ಇಲ್ಲಿದೆ ವಿಡಿಯೋ

ಬೆಕ್ಕು ಮತ್ತು ಚಿರತೆ ನಾಸಿಕ್‌ನಲ್ಲಿ ಮುಖಾಮುಖಿಯಾಗಿದ್ದವು. ಉಸಿರುಬಿಗಿ ಹಿಡಿದು ನೋಡಬೇಕಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿರತೆ ಮುಖಾಮುಖಿಯಾದಾಗ ಅದನ್ನು ಬೆಕ್ಕು ಧೈರ್ಯದಿಂದ ಎದುರಿಸಿದೆ. ಚಿರತೆಯು ಬೆಕ್ಕನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದಾಗ ಎರಡೂ ಬಾವಿಗೆ ಬಿದ್ದಿವೆ. 16 ಸೆಕೆಂಡುಗಳ ವಿಡಿಯೋದಲ್ಲಿ, ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತಿರುವಾಗ ಬಾವಿಗೆ ಬಿದ್ದ ಚಿರತೆ ನೀರಿನಿಂದ ಜಿಗಿದು ದಿಢೀರನೆ ಬೆಕಿನತ್ತ ಹಾರಿದೆ. … Continued

ಬರಪೀಡಿತ ಮಧ್ಯಪ್ರದೇಶದ ಹಳ್ಳಿಯಲ್ಲಿ ಮಳೆಗಾಗಿ 6 ಅಪ್ರಾಪ್ತ ಹುಡುಗಿಯರ ಬೆತ್ತಲೆ ಮೆರವಣಿಗೆ..!

ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಳೆ ದೇವರನ್ನು ಮೆಚ್ಚಿಸಲು ಕನಿಷ್ಠ ಆರು ಹುಡುಗಿಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದ್ದು, ಈ ರೀತಿ ಮಾಡಿದರೆ ಬರ-ರೀತಿಯ ಪರಿಸ್ಥಿತಿಯಿಂದ ಪರಿಹಾರ ಸಿಗುತ್ತದೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಬುಂದೇಲ್‌ಖಂಡ್ ಪ್ರದೇಶದ ದಾಮೋಹ್ ಜಿಲ್ಲಾ ಕೇಂದ್ರದಿಂದ 50 ಕಿಮೀ ದೂರದಲ್ಲಿರುವ ಬನಿಯಾ ಗ್ರಾಮದಲ್ಲಿ ಭಾನುವಾರ ನಡೆದ ಘಟನೆ ಕುರಿತು ರಾಷ್ಟ್ರೀಯ ಮಕ್ಕಳ … Continued

ಭಾರತದಲ್ಲಿ 31,222 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು 31,222 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 290 ಸಾವುಗಳನ್ನು ದಾಖಲಿಸಿದೆ.ಇದೇ ಸಮಯದಲ್ಲಿ 42,942 ರೋಗಿಗಳು ಚೇತರಿಸಿಕೊಂಡಿದ್ದಾರೆ,. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳವು 19,688 ಪ್ರಕರಣಗಳು, ಮಹಾರಾಷ್ಟ್ರದ 3,626 ಪ್ರಕರಣಗಳು, ತಮಿಳುನಾಡು 1,556 … Continued

ಹಿಂದೂ-ಮುಸ್ಲಿಮರ ನಡುವೆ ಜಗಳ ತಂದಿದ್ದೇ ಬ್ರಿಟಿಷರು: ಮೋಹನ್ ಭಾಗವತ್

ಮುಂಬೈ: ಹಿಂದೂಗಳು ಮತ್ತು ಮುಸ್ಲಿಮರ ನಡುವೆ ತಪ್ಪು ಕಲ್ಪನೆ ಸೃಷ್ಟಿಸುವ ಮೂಲಕ ಇಬ್ಬರೂ ಕಿತ್ತಾಡುವಂತೆ ಮಾಡಿದವರು ಬ್ರಿಟಿಷರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ. ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳನ್ನು ಭೇಟಿ ಮಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಬ್ರಿಟಿಷರು ಮುಸ್ಲಿಮರಿಗೆ ಬಹುಸಂಖ್ಯಾತ ಹಿಂದೂ … Continued

ರೈತರ ಪ್ರತಿಭಟನೆ: ಸಿಂಘು ಗಡಿ ತೆರವುಗೊಳಿಸಲು ಕೋರಿದ್ದ ಅರ್ಜಿ ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸಿಂಘು ಗಡಿಯಿಂದ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಹರಿಯಾಣದ ಸೋನಿಪತ್ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ. ಪ್ರಯಾಣಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ತೆರವಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಸ್ಥಳೀಯ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ … Continued

ರೈತ ಸಂಘಟನೆಗಳಿಂದ ಸೆಪ್ಟೆಂಬರ್ 27ರಂದು ಭಾರತ್ ಬಂದ್‌: ಕಾಂಗ್ರೆಸ್‌ ಬೆಂಬಲ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳು ಸೆಪ್ಟೆಂಬರ್ 27ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದು, ಈ ಬಂದ್‌ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್‌ ಬಂದ್‌ಗೆ ಬೆಂಬಲ ಘೋಷಣೆ ಮಾಡಿದ್ದು, 300ಕ್ಕೂ ಅಧಿಕ ಸಂಘಟನೆಗಳು ಈಗಾಗಲೇ ಬಂದ್ ಬೆಂಬಲಿಸಿವೆ. … Continued

ಕೋವಿಡ್ -19 ನಿರ್ಬಂಧದಿಂದ ವಿಮಾನ ರದ್ದು: ಏರ್ ಇಂಡಿಯಾ ಪ್ರಯಾಣಿಕರಿಗೆ ಇನ್ನೂ ಮರುಪಾವತಿಸಬೇಕಿದೆ 250 ಕೋಟಿ ರೂ…!

ನವದೆಹಲಿ : ಕೋವಿಡ್ -19 ಪ್ರೇರಿತ ಪ್ರಯಾಣ ನಿರ್ಬಂಧಗಳಿಂದಾಗಿ ಪ್ರಯಾಣಿಕರಿಗೆ ಪ್ರಯಾಣ ಮರುಪಾವತಿಯಾಗಿ ಏರ್ ಇಂಡಿಯಾ ಇನ್ನೂ ಸುಮಾರು 250 ಕೋಟಿ ರೂ. ಮರುಪಾವತಿಸಬೇಕಿದೆ. ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಆದಾಯಕ್ಕೆ”ತೀವ್ರವಾಗಿ ಹೊಡೆತ ಬಿದ್ದಿದ್ದರೂ ಜುಲೈನಿಂದ ಮರುಪಾವತಿ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದು ಏರ್‌ ಲೈನ್‌ ​​ಹೇಳಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಏರ್ … Continued