ಮೇಘಾಲಯ ಸಿಎಂ ಮನೆಗೆ ಪೆಟ್ರೋಲ್‌ ಬಾಂಬ್‌ ಎಸೆತ: ಭುಗಿಲೆದ್ದ ಹಿಂಸಾಚಾರ ಗೃಹ ಸಚಿವ ರಾಜೀನಾಮೆ

ಶಿಲ್ಲಾಂಗ್‌: ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಖಾಸಗಿ ನಿವಾಸಕ್ಕೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ವಾಹನಗಳಲ್ಲಿ ಬಂದಿರುವ ದಾಳಿಕೋರರು ಪೆಟ್ರೋಲ್‌ ತುಂಬಿದ್ದ ಎರಡು ಬಾಟಲಿಗಳನ್ನು ಸಂಗ್ಮಾ ಅವರ ಖಾಸಗಿ ಆವರಣಕ್ಕೆ ಎಸೆದು ಪರಾರಿಯಾಗಿದ್ದಾರೆ. ಒಂದನ್ನು ಮನೆಯ ಮುಂಭಾಗಕ್ಕೂ, ಮತ್ತೊಂದು ಬಾಟಲಿಯನ್ನು ಮನೆಯ ಹಿಂಭಾಗಕ್ಕೆ ಎಸೆಯಲಾಗಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ. … Continued

ಭಾರತದಲ್ಲಿ 32,937 ಹೊಸ ಕೋವಿಡ್ -19 ಪ್ರಕರಣಗಳು ದಾಖಲು..ಕೇರಳದ ಪಾಲು 56.42% ..!

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು 32,937 ಹೊಸ ಕೋವಿಡ್ -19 ಪ್ರಕರಣಗಳನ್ನು ಮತ್ತು 417 ಸಾವುಗಳನ್ನು ದಾಖಲಿಸಿದೆ. ಸೋಮವಾರ ಬೆಳಿಗ್ಗೆ 8 ರ ಹೊತ್ತಿಗೆ, ಭಾರತದ ಸಕ್ರಿಯ ಪ್ರಕರಣ 3,81,947 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 35,909 ರೋಗಿಗಳು ಚೇತರಿಸಿಕೊಂಡಿದ್ದುಸಕ್ರಿಯ ಪ್ರಕರಣಗಳು 3,389 … Continued

ಧೋನಿ’ ಭೇಟಿಗಾಗಿ 1400 ಕಿಮೀ ನಡೆದುಕೊಂಡೇ ಬಂದ ಅಭಿಮಾನಿ..!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್‌ ಎಂ. ಎಸ್. ಧೋನಿ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿ ಒಂದು ವರ್ಷವಾದರೂ ಧೋನಿ ಕ್ರೇಜ್ ಅಭಿಮಾನಿಗಳಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ. ಆದರೆ ಇಲ್ಲೊಬ್ಬ ಅಭಿಮಾನಿ ಇದ್ದಾರೆ. ಅವರು ಮಹೇಂದ್ರ ಸಿಂಗ್ ಗಾಗಿ ಬರೋಬ್ಬರಿ 1400 ಕಿಮೀ ನಡೆದುಕೊಂಡ ಬಂದ ಅಪ್ಪಟ ಅಭಿಮಾನಿ. ಅಚ್ಚರಿ ಎನಿಸಿದರೂ ಇದು ಸತ್ಯ..ಈತನ ಹೆಸರು ಅಜಯ್ … Continued

ಅಫಘಾನಿಸ್ತಾನ ಬಿಕ್ಕಟ್ಟು : ಕಾಬೂಲ್‌ನಿಂದ 129 ಜನರ ಹೊತ್ತ ಏರ್ ಇಂಡಿಯಾ ವಿಮಾನ ದೆಹಲಿಗೆ

ಕಾಬೂಲ್: ಅಫಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಬಿಗಿ ಹಿಡಿತ ಸಾಧಿಸಿದ್ದು, ಕಾಬೂಲ್‌ ನಗರದ ಹೊರವಲಯವನ್ನು ಪ್ರವೇಶಿಸಿದ್ದಾರೆ. ಇದರ ಬೆನ್ನಲ್ಲೇ 129 ಪ್ರಯಾಣಿಕರನ್ನೊಳಗೊಂಡ ಏರ್ ಇಂಡಿಯಾ ವಿಮಾನವು ಕಾಬೂಲ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಿದೆ. ಈ ಮಧ್ಯೆ,ಬೆಳವಣಿಗೆ ನಡೆದಿದ್ದು, ಶಾಂತಿಯತವಾಗಿ ಅಧಿಕಾರ ಹಸ್ತಾಂತರಿಸಲು ಚರ್ಚಸಿಉವ ಸಲುವಾಗಿ ಹಿರಿಯ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಸೇರಿದಂತೆ ಅಫಘಾನಿಸ್ತಾನದ ಸರ್ಕಾರಿ ನಿಯೋಗವು ತಾಲಿಬಾನ್ … Continued

ಸಂಸತ್ತು-ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆಗಳಾಗುತ್ತಿಲ್ಲ: ಸಿಜೆಐ ರಮಣ ವಿಷಾದ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಸಂಸತ್ತಿನ ಕಾರ್ಯನಿರ್ವಹಣೆಯನ್ನು ಇಂದು ಪ್ರಬಲವಾಗಿ ಟೀಕಿಸಿದರು, ಕಾನೂನುಗಳ ಮೇಲಿನ ಚರ್ಚೆಗಳ ಕೊರತೆಯನ್ನು ಕೇಂದ್ರೀಕರಿಸಿದರು. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆ ಕೊರತೆಯಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕಲವಳ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್‌ನ ಬಾರ್‌ ಅಸೋಸಿಯೇಷನ್‌, ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ 75ನೇ … Continued

ಪುಲ್ವಾಮಾದಲ್ಲಿ ರಾಷ್ಟ್ರಧ್ವಜ ಹಾರಿಸಿದ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಬುರ್ಹಾನ್ ವಾನಿಯ ತಂದೆ

ಶ್ರೀನಗರ: ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ ಭಾನುವಾರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಶಾಲೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುಜಾಫರ್ ವಾನಿ, ಟ್ರಾಲ್‌ನ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸಿದರು. ದಕ್ಷಿಣ … Continued

ಕೇಂದ್ರ ಸರ್ಕಾರದಿಂದ ಸ್ವಸಹಾಯ ಸಂಘಗಳಿಗೆ `ಇ-ಕಾಮರ್ಸ್’ ಮಾರುಕಟ್ಟೆ ಸೌಲಭ್ಯ: ಮಹಿಳೆಯರಿಗೆ ಸಿಹಿಸುದ್ದಿ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಿಹಿಸುದ್ದಿ ನೀಡಿದ್ದು, ಸ್ವಸಹಾಯ ಸಂಘಗಳಿಂದ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಕಾರ್ಮಸ್ ವೇದಿಕೆ ಸೃಷ್ಟಿಸಿಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು (ಶನಿವಾರ) 75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ … Continued

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 56.76 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ: ಕೇಂದ್ರ ಸರ್ಕಾರ

ನವದೆಹಲಿ; ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 56.76 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ತಿಳಿಸಿದೆ. ಈವರೆಗೆ ಕೇಂದ್ರವು ರಾಜ್ಯಗಳಿಗೆ 56,76,14,390 ಲಸಿಕೆ ಡೋಸ್‌ ಪೂರೈಸಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದ ಒಟ್ಟು 3,03,90,091 ಡೋಸ್ ಕೋವಿಡ್ ಲಸಿಕೆಗಳಿವೆ ಎಂದು ಹೇಳಿದೆ. … Continued

ಸೈನಿಕ ಶಾಲೆಗಳಲ್ಲಿ ಇನ್ಮುಂದೆ ಬಾಲಕಿಯರಿಗೂ ಪ್ರವೇಶ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಇನ್ನುಮುಂದೆ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಬಾಲಕಿಯರಿಗೂ ಪ್ರವೇಶ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಪ್ರಸ್ತುತ 33 ಸೈನಿಕ ಶಾಲೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಮಿಜೊರಾಮ್ ನಲ್ಲಿ … Continued

75 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ: ಹೊಸ ಭಾರತಕ್ಕಾಗಿ 100 ಲಕ್ಷ ಕೋಟಿ ರೂಪಾಯಿಗಳ ಗತಿ ಶಕ್ತಿ ಯೋಜನೆ ಘೋಷಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕೋವಿಡ್ -19 ಸಾಂಕ್ರಾಮಿಕ, ಲಸಿಕೆಗಳು, ಆತ್ಮನಿರ್ಭರ ಭಾರತ್, ಸಣ್ಣ ರೈತರ ಕಲ್ಯಾಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಭಾರತದ ಒಲಿಂಪಿಕ್ಸ್ ಕಾರ್ಯಕ್ಷಮತೆ ಬಗ್ಗೆ ಮಾತನಾಡಿದರು. ಸತತ ಎಂಟನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, … Continued