ಕುಮಟಾ: ದಿವಗಿ ಶ್ರೀ ರಾಮಾನಂದ ಅವಧೂತರು ಭಗವದೈಕ್ಯ

ಕುಮಟಾ:ಕುಮಟಾ: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಸದ್ಗುರು ಶ್ರೀ ರಾಮಾನಂದ ಸ್ವಾಮಿ ಅವಧೂತರು ಶನಿವಾರ ರಾತ್ರಿ ೯ ಗಂಟೆಗೆ ಭಗವದೈಕ್ಯರಾದರು.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ೯೮ನೇ ವಯಸ್ಸಿನಲ್ಲಿ  ಇಹಲೋಕ ತ್ಯಜಿಸಿದ್ದಾರೆ. ಅಪಾರ ಭಕ್ತ ವೃಂದದವರನ್ನು ಶೋಕಸಾಗದಲ್ಲಿ ಮುಳುಗಿಸಿದ್ದಾರೆ.ಭಾನುವಾರ ಶ್ರೀಗಳ ಅಂತ್ಯಕ್ರಿಯೆ (ಸಮಾಧಿ)  ಧಾರ್ಮಿಕ ವಿಧಿ-ವಿದಾನಗಳ ಮೂಲಕ ನೆರವೇರಿಸಲಾಗುತ್ತದೆ. (ಪೂರ್ವಾಶ್ರಮದ ಹೆಸರು ರಾಮಚಂದ್ರ … Continued

ಕೋವಿಡ್​ ವಿರುದ್ಧದ ಹೋರಾಟ ಮುಗಿದಿಲ್ಲ, ಎಲ್ಲರೂ ಲಸಿಕೆ ಪಡೆಯರಿ:75ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನದ ಭಾಷಣದಲ್ಲಿ ರಾಷ್ಟ್ರಪತಿ ಕೋವಿಂದ

ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್‌ ಅನೇಕ ತಲೆಮಾರುಗಳ ಹೋರಾಟದ ಕನಸು ಸ್ವಾತಂತ್ರ್ಯವಾಗಿತ್ತು. ಹೋರಾಟಗಾರ ತ್ಯಾಗ, ಹೋರಾಟದ ಫಲವಾಗಿ ಇಲ್ಲಿವರೆಗೂ ನಾವು ಸಾಗಿದ್ದು, ಅವರ ಬಲಿದಾನ ಸ್ಮರಿಸೋಣ ಎಂದರು. ಕೋವಿಡ್​ ಕುರಿತು ಮಾತನಾಡಿದ ಅವರು ಎರಡನೇ ಅಲೆ ಭೀಕರತೆಗೆ ಅನೇಕರು ತಮ್ಮ ಪ್ರೀಪಾತ್ರರನ್ನು ಕಳೆದುಕೊಂಡರು. ನಿಮ್ಮ ಜೊತೆ ನಾವುದ್ದೇವೆ ಎಂದು … Continued

ಹಿಮಾಚಲ ಪ್ರದೇಶ ಕಿನ್ನೌರ್ ಭೂಕುಸಿತ: ಮೃತರ ಸಂಖ್ಯೆ 24ಕ್ಕೆ ಏರಿಕೆ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕ ಏರಿದೆ. ಈ ದುರ್ಘಟನೆಯಲ್ಲಿ ಕಲ್ಲು ಹಾಗೂ ಮಣ್ಣಿನ ಅವಶೇಷಗಳಡಿ ಈಗಲೂ 10ಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಈ ದುರಂತದಲ್ಲಿ 13 ಜನರನ್ನು ರಕ್ಷಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಸ್ … Continued

ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ: ಸೇನೆಯ 6 ಯೋಧರಿಗೆ ಶೌರ್ಯ ಚಕ್ರ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಶೌರ್ಯ ಪ್ರದರ್ಶಿಸಿದ ಭಾರತೀಯ ಸೇನೆಯ 6 ಯೋಧರಿಗೆ ಈ ಸಲದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗುತ್ತಿದೆ. ಈ ಯೋಧರು ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹೋರಾಡಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದ ತಂಡದ ಭಾಗವಾಗಿದ್ದರು ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿ ಕುಮಾರ್ … Continued

ಭಾರತದ 75ನೇ ಸ್ವಾತಂತ್ರ್ಯೋತ್ಸವ: 7500 ಚದರ್​ ಅಡಿ ರಾಷ್ಟ್ರಧ್ವಜ ದೇಶಕ್ಕೆ ಅರ್ಪಿಸಲಿರುವ ಪಶ್ಚಿಮ ಬಂಗಾಳ ರಾಜ್ಯಪಾಲ

ನವದೆಹಲಿ: ಆಗಸ್ಟ್​ 15ರಂದು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್ಕರ್​ ಅವರು 7500 ಚದರ್​ ಅಡಿಯಷ್ಟು ವಿಶಾಲವಾದ ರಾಷ್ಟ್ರಧ್ವಜವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್​​ನಲ್ಲಿ, ಭಾರತೀಯ ಪ್ರವಾಸೋದ್ಯಮ ಮತ್ತು ಡಾರ್ಜಲಿಂಗ್​​ನ ಹಿಮಾಲಯ ಪರ್ವತಾರೋಹಣ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ, … Continued

ಮೊಮ್ಮಗ ಸಾವು: ಸಂತಾಪ ಸೂಚಿಸಲು ಬಂದ ನೆರೆಮನೆಯವರ ಮೇಲೆಯೇ ಅಜ್ಜನಿಂದ ಗುಂಡಿನ ದಾಳಿ, 6 ಜನರಿಗೆ ಗಾಯ..!

ಗ್ವಾಲಿಯರ್: ಮೊಮ್ಮಗನ ಸಾವಿಗೆ ಸಂತಾಪ ಸೂಚಿಸಲು ಬಂದಿದ್ದ ನೆರೆಮನೆಯವರ ಮೇಲೆಯೇ ವೃದ್ಧರೊಬ್ಬರು ಗುಂಡಿನ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬಂದೋಲಿ ಗ್ರಾಮದಲ್ಲಿ ಶನಿವಾರ ನಡೆದ ಬಗ್ಗೆ ವರದಿಯಾಗಿದೆ. ಪರ್ಮಲ್ ಸಿಂಗ್ ಪರಿಹಾರ್ (60) ಎಂಬಾತನೇ ಗುಂಡಿನ ದಾಳಿ ನಡೆಸಿದ ವ್ಯಕ್ತಿಯಾಗಿದ್ದಾರೆ. ಘಟನೆ ಬಳಿಕ ವ್ಯಕ್ತಿ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ … Continued

ಹಿಮಾಚಲ ಕಿನ್ನೌರ್ ಭೂ ಕುಸಿತ: ಸಾವಿನ ಸಂಖ್ಯೆ 20ಕ್ಕೆ ಏರಿಕೆ

ಕಿನ್ನೌರ್‌: ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಭೂಕುಸಿತ ಸಂಭವಿಸಿದ ಸ್ಥಳದಿಂದ ಇನ್ನೂ ಮೂರು ಶವಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ 20 ಕ್ಕೆ ತಲುಪಿದೆ. ದುರದೃಷ್ಟಕರ ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರಿದಿದ್ದರೂ ಸಹ ಇನ್ನೂ ಸುಮಾರು 20 ಜನರು ನಾಪತ್ತೆಯಾಗಿದ್ದಾರೆ. ವಿಶೇಷ ಕಾರ್ಯದರ್ಶಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸುದೇಶ್ ಮೊಖ್ತಾ, ಶನಿವಾರ ಬೆಳಿಗ್ಗೆ ಒಂದು … Continued

ಮೋದಿ ಮಹತ್ವದ ಘೋಷಣೆ: ಆಗಸ್ಟ್ 14 -ವಿಭಜನೆ ಭಯಾನಕ ಸ್ಮರಣೆ ದಿನವಾಗಿ ಆಚರಣೆಯ ಘೋಷಣೆ

ನವದೆಹಲಿ: ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುಂಚಿತವಾಗಿ ಆಗಸ್ಟ್ 14 ಅನ್ನುವಿಭಜನ್ ವಿಭಿಶಿಕಾ ಸ್ಮೃತಿ ದಿವಸ (ವಿಭಜನೆಯ ಭಯಾನಕ ಸ್ಮರಣೆ) ಎಂದು ಆಚರಿಸಲಾಗುವುದು ಎಂದು ಘೋಷಿಸಿದರು. ಪಾಕಿಸ್ತಾನ ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14 ರಂದು ಆಚರಿಸುತ್ತದೆ. ವಿಭಜನೆಯ … Continued

ಭಾನುವಾರ ವರದಿಯಾದ ಕೋವಿಡ್ -19 ದೈನಂದಿನ ಪ್ರಕರಣಗಳಲ್ಲಿ ಐದು ರಾಜ್ಯಗಳ ಪಾಲು ಶೇ.84.02..!

ನವದೆಹಲಿ: ಭಾರತವು 38,667 ಹೊಸ ಕೋವಿಡ್ -19 ಪ್ರಕರಣಗಳನ್ನು ಶನಿವಾರ ವರದಿ ಮಾಡಿದೆ, ಕಳೆದ 24 ಗಂಟೆಗಳಲ್ಲಿ 478 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ದೇಶಾದ್ಯಂತ ಒಟ್ಟು ಚೇತರಿಕೆ 3,13,38,088 ಆಗಿದ್ದು, ಸಕ್ರಿಯ ಪ್ರಕರಣಗಳು 3,87,673 ರಷ್ಟಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 35,743 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸಕ್ರಿಯ … Continued