ಪಿಡಿಪಿ,ಎಎನ್‌ಸಿ ಹೊರತುಪಡಿಸಿ, ಎಲ್ಲ ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳಿಂದ ಡಿಲಿಮಿಟೇಶನ್ ಆಯೋಗದ ಆಹ್ವಾನ ಸ್ವೀಕಾರ

ಜಮ್ಮು: ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಹೊರತುಪಡಿಸಿ, ಇತರ ಎಲ್ಲ ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳು ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಡಿಲಿಮಿಟೇಶನ್ ಆಯೋಗದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಅದು ನಾಲ್ಕು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ … Continued

ಸಹಕಾರದಿಂದ ಸಮೃದ್ಧಿ: ಮೋದಿ ಸರ್ಕಾರದಿಂದ ಹೊಸ ಸಹಕಾರ ಸಚಿವಾಲಯ ರಚನೆ

ನವದೆಹಲಿ: ಕೇಂದ್ರ ಸರ್ಕಾರವು ಹೊಸದೃಷ್ಟಿಕೋನ ಹೊಂದಿದ ‘ಸಹಕಾರದಿಂದ ಸಮೃದ್ಧಿ’ ಎಂಬ ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ-ನಿರುಪಣೆಗೆ ಚೌಕಟ್ಟು ಒದಗಿಸಲಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಈ ಸಹಕಾರಿ ಸಚಿವಾಲಯವು ಸಹಕಾರಿ ಚಳವಳಿಯಲ್ಲಿ ತೊಡಗಿರುವ ಜನರಿಗೆ ನೆರವಾಗುವುದಕ್ಕೆ ಸಹಕಾರಿಯಾಗಲಿದೆ. … Continued

ತಮಿಳುನಾಡಿನ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳದಿರಲು ಕೇಂದ್ರದ ಭರವಸೆ: ತಮಿಳುನಾಡು ಸಚಿವ

ನವದೆಹಲಿ:ತಮಿಳುನಾಡಿನ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಮತ್ತು ಪೆನ್ನಿಯಾರ್ ಜಲಾನಯನ ಪ್ರದೇಶದ ಮಾರ್ಕಂಡೇಯ ನದಿಯ ಮೇಲಿರುವ ಅಣೆಕಟ್ಟಿನ ಬಗ್ಗೆ ತನಿಖೆ ನಡೆಸಲು ನ್ಯಾಯಮಂಡಳಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ತಿಳಿಸಿದ್ದಾರೆ. ಕೇಂದ್ರ ಸಚಿವರೊಂದಿಗಿನ … Continued

ಮಹತ್ವದ ಸುದ್ದಿ.. ಜೆಇಇ ಮೇನ್‌ -2021 ಪರೀಕ್ಷೆ ವೇಳಾಪಟ್ಟಿ ಪ್ರಕಟ

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆ-2021 ದಿನಾಂಕ ಪ್ರಕಟವಾಗಿದ್ದು, ಜುಲೈ 20ರಿಂದ ಜುಲೈ 25ರ ವರೆಗೆ ಹಾಗೂ ಜುಲೈ 27ರಿಂದ ಆಗಸ್ಟ್​​ 2ರ ವರೆಗೆ ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ. ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ನಮೂನೆಗಳು ಮಂಗಳವಾರದಿಂದಲೇ (ಜುಲೈ 6) … Continued

ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್‌ ಪಡೆದ ನಂತರ ನನ್ನ ದೃಷ್ಟಿ ಮರಳಿ ಬಂತು…ಹೀಗೆ ಹೇಳಿಕೊಂಡ ಮಹಾರಾಷ್ಟ್ರದ ವೃದ್ಧೆ..!

ವಾಶಿಮ್: ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನ ಭಾರತದಾದ್ಯಂತ ಸಂಪೂರ್ಣ ಜಾರಿಯಲ್ಲಿದೆ, ಮತ್ತು ಎಲ್ಲಾ ನಾಗರಿಕರಿಗೆ ಮಾರಕ ವೈರಸ್ ಅನ್ನು ಸೋಲಿಸಲು ಲಸಿಕೆಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.ಕೋವಿಡ್‌-19 ಲಸಿಕೆ ನೀಡಿದ ನಂತರ ಜ್ವರ ಅಥವಾ ದೇಹದ ನೋವಿನಂತಹ ಕೆಲವು ಅಡ್ಡಪರಿಣಾಮಗಳನ್ನು ಅನುಭವಿಸುವುದು ಸಾಮಾನ್ಯವೆಂದು ಪರಿಗಣಿಸಲಾಗಿದ್ದರೂ, ಒಬ್ಬ ಮಹಿಳೆ ಡೋಸ್‌ ತೆಗೆದುಕೊಂಡ ನಂತರ ಅದ್ಭುತವಾದದ್ದನ್ನು ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಝೀ ನ್ಯೂಸ್ … Continued

ಗೋವಿನ ಸಗಣಿಯಿಂದ ಪೇಂಟ್ ತಯಾರಿಕೆ..! : ದೇಶದ ಮೊದಲ ಘಟಕ ಕಾರ್ಯಾರಂಭ..!!

ನವದೆಹಲಿ: ಮಾನವನಿಗೆ ಹಾನಿಯುಂಟು ಮಾಡುವ ರಾಸಯನಿಕಗಳಿದ ಸಿದ್ಧವಾಗುತ್ತಿರುವ ಬಣ್ಣಗಳ ಮಧ್ಯೆ ಸಗಣಿಯಿಂದ ಪೇಂಟ್ ತಯಾರಿಸುವ ಭಾರತದ ಮೊದಲ ಹಾಗೂ ಏಕೈಕ ಖಾದಿ ಪ್ರಾಕೃತಿಕ ಪೇಂಟ್ ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕ ಮಂಗಳವಾರ ಜೈಪುರದಲ್ಲಿ ಕಾರ್ಯಾರಂಭಗೊಂಡಿದೆ. ಖಾದಿ ಪ್ರಾಕೃತಿಕ ಪೇಂಟ್ ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ … Continued

8 ತಿಂಗಳ ನಂತರ ಜೂನ್‌ನಲ್ಲಿ 1 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾದ ಜಿಎಸ್‌ಟಿ ಆದಾಯ ಸಂಗ್ರಹ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಜೂನ್‌ನಲ್ಲಿ ಎಂಟು ತಿಂಗಳಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳಿಗಿಂತ ಕಡಿಮೆಯಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಜೂನ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 92,849 ಕೋಟಿ ರೂ.ಗಳಾಗಿವೆ. ಇದರಲ್ಲಿ ಸಿಜಿಎಸ್‌ಟಿ 16,424 ಕೋಟಿ ರೂ., ಎಸ್‌ಜಿಎಸ್‌ಟಿ 20,397 … Continued

ಭಾರತ, ಇತರ ದೇಶಗಳ ಪ್ರಯಾಣಿಕರ ಮೇಲಿನ ನಿಷೇಧ ತೆಗೆದ ಜರ್ಮನಿ

ನವದೆಹಲಿ: ಕೋವಿಡ್ -19 ರ ಡೆಲ್ಟಾ ರೂಪಾಂತರದಿಂದ ಕೊರೊನಾ ಉಲ್ಬಣ ಕಂಡ ಬ್ರಿಟನ್‌, ಭಾರತ ಮತ್ತು ಇತರ ಮೂರು ದೇಶಗಳ ಹೆಚ್ಚಿನ ಪ್ರಯಾಣಿಕರ ಮೇಲಿನ ನಿಷೇಧವನ್ನು ತೆಗೆದುಹಾಕುವುದಾಗಿ ಜರ್ಮನಿಯ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಜವಾಬ್ದಾರಿಯುತ ಜರ್ಮನ್ ಫೆಡರಲ್ ಸರ್ಕಾರಿ ಸಂಸ್ಥೆ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್, ಭಾರತ, ನೇಪಾಳ, ರಷ್ಯಾ, … Continued

ಈ ವಾರದಲ್ಲಿಯೇ ಮೋದಿ ಸಚಿವ ಸಂಪುಟ ವಿಸ್ತರಣೆ, 20 ಹೊಸ ಮುಖಗಳಿಗೆ ಮಣೆ..?

ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ 20 ಹೊಸ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಹೇಳಾಗುತ್ತಿದೆ ಹಾಗೂ ಜುಲೈ 8 ರಂದು ವಿಸ್ತರಣೆಯಾಗುವ ಸಾಧ್ಯತೆಯಿದೆ ಅಥವಾ  ಈ ವಾರ ನಡೆಯಬಹುದು,ಎಂದು ಹೇಳಾಗುತ್ತಿದ್ದರೂ ಕೆಲವರು ಸಂಸತ್ತಿನ ಅಧಿವೇಶನದ ನಂತರವೂ ನಡೆಯಬಹುದು ಎಂದು ವಿಶ್ಲೇಷಿಸುತ್ತಿದ್ದಾರೆ. ಏತನ್ಮಧ್ಯೆ, ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ … Continued

ಥಾವರ್‌ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲ

ನವದೆಹಲಿ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಪತ್ರಿಕಾ ಪ್ರಕಟಣೆ ಜುಲೈ 6 ರಂದು ತಿಳಿಸಿದೆ. ಕೇಂದ್ರ ಸಚಿವ ಥಾವರ್‌ಚಂದ್ ಗೆಹ್ಲೋಟ್‌ ಅವರನ್ನು ಮಂಗಳವಾರ ಕರ್ನಾಟಕ ರಾಜ್ಯಪಾಲರನ್ನಾಗಿ ಮತ್ತು ಮಂಗುಭಾಯ್ ಛಗನ್‌ಭಾಯ್ ಪಟೇಲ್ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. … Continued