ಭಾರತಕ್ಕೆ ೯೭.೨ ಮಿಲಿಯನ್‌ ಕೊರೊನಾ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆಯ ಕೋವಾಕ್ಸ್ ಉಪಕ್ರಮದಿಂದ ವಿತರಣೆಯ ಮೊದಲ ಹಂತದಲ್ಲಿ, ಭಾರತ 97.2 ಮಿಲಿಯನ್ ಡೋಸ್‌ ಕೊವಿಡ್‌-೧೯ ಲಸಿಕೆಗಳನ್ನು ಸ್ವೀಕರಿಸಲು ಭಾರತ ಸಜ್ಜಾಗಿದೆ. ಈ ತಿಂಗಳ ಆರಂಭದಲ್ಲಿ 337.2 ಮಿಲಿಯನ್ ಡೋಸ್‌ಗಳನ್ನು ವಿತರಿಸಲು ಯೋಜಿಸುತ್ತಿದ್ದು, ಈವರೆಗೆ ಸುಮಾರು 2 ಬಿಲಿಯನ್ ಲಸಿಕೆಗಳ ವಿತರಣೆಯಾಗಿದೆ. ಮಧ್ಯಂತರ ವಿತರಣಾ ಮುನ್ಸೂಚನೆಯ ಪ್ರಕಾರ, ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿ ದೇಶಗಳಿಗೆ ಪ್ರಮಾಣವನ್ನು … Continued

ರಾಜೀವ ಹಂತಕರ ಬಿಡುಗಡೆ ವಿಷಯ: ತಮಿಳುನಾಡು ರಾಜಕೀಯದಲ್ಲಿ ಮತ್ತೆ ಮುನ್ನೆಲೆಗೆ

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಬಿಜೆಪಿ ಹಾಗೂ ಕೇಂದ್ರದ ಮೇಲೆ ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಒತ್ತಡ ಹೆಚ್ಚಾಗುತ್ತಿದೆ. ರಾಜೀವ ಗಾಂಧಿ ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನ ಆಡಳಿತಾರೂಢ ಪಕ್ಷವಾದ ಎಐಎಡಿಎಂಕೆ ಪಕ್ಷ ಕೇಂದ್ರದ ಬಿಜೆಪಿ ನೇತೃತ್ವದ ಪಕ್ಷವನ್ನು ಒತ್ತಾಯಿಸುತ್ತಿದ್ದು, ಇದರಿಂದ ರಾಜಕೀಯವಾಗಿ … Continued

ಭಾರತದಲ್ಲಿ 12,408 ಕೊರೋನಾ ಪ್ರಕರಣಗಳು

ನವ ದೆಹಲಿ: ಕಳೆದ ೨೪ ತಾಸಿನಲ್ಲಿ ಭಾರತವು 12,408 ಕೊರೋನಾ ಪ್ರಕರಣಗಳನ್ನು ದಾಖಲಿಸಿದೆ ಹಾಗೂ ಕೊರೋನಾ 120 ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. ಭಾರತದಲ್ಲಿ ಈಗ 1,51,460 ಸಕ್ರಿಯ ಪ್ರಕರಣಗಳಿವೆ. 15,853 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜನವರಿ 16 ರಿಂದ 4,959,445 ಜನರಿಗೆ ಲಸಿಕೆ … Continued

ಮಹಾರಾಷ್ಟ್ರ ಸ್ಪೀಕರ್ ಸ್ಥಾನಕ್ಕೆ ನಾನಾ ಪಟೋಲೆ ರಾಜೀನಾಮೆ

ಮುಂಬೈ: ಕಾಂಗ್ರೆಸ್ ರಾಜ್ಯ ಘಟಕದ ಮುಂದಿನ ಮುಖ್ಯಸ್ಥರಾಗಿ ಆಯ್ಕೆಯಾಗಲಿರುವ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ನಾನಾ ಪಟೋಲೆ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಟೋಲ್ ತಮ್ಮ ರಾಜೀನಾಮೆಯನ್ನು ಉಪ ಸ್ಪೀಕರ್ ನರ್ಹರಿ ಝಿರ್ವಾಲ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ವಿಧಾನಸೌಧ ಮೂಲಗಳು ತಿಳಿಸಿವೆ. ಭಂಡಾರ ಜಿಲ್ಲೆಯ ಸಕೋಲಿಯ ಶಾಸಕ ಪಟೋಲೆ ಅವರು ಶೀಘ್ರದಲ್ಲೇ ಕಂದಾಯ ಸಚಿವ ಬಾಲಾಸಾಹೇಬ್ … Continued

ದೇಶದ ಜನಸಂಖ್ಯೆ ಕೊರೋನಾದಿಂದ  ಇನ್ನೂ ಸಂಪೂರ್ಣ ಮುಕ್ತವಾಗಿಲ್ಲ:ಸರ್ವೆ

ನವ ದೆಹಲಿ: ಕೊರೋನಾ ವೈರಸ್ ವಿರುದ್ಧ ಭಾರತವು ದಾಖಲೆಯ ಚೇತರಿಕೆ ದರವನ್ನು ಸಾಧಿಸಿದರೂ, ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ಅದಕ್ಕೆ ಗುರಿಯಾಗುತ್ತಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಮೂರನೇ ಸಿರೊಸರ್ವೆ ಬಹಿರಂಗಪಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಹಂಚಿಕೊಂಡ ಕೇಂದ್ರ ಆರೋಗ್ಯ ಸಚಿವಾಲಯ, ಮೂರನೇ ರಾಷ್ಟ್ರೀಯ ಸೆರೊ ಸರ್ವೇ ಡಿಸೆಂಬರ್ … Continued

ಬ್ಯಾಂಕ್‌ ಹಗರಣ: ಚೋಕ್ಸಿ, ಗೀತಾಂಜಲಿ ಗ್ರುಪ್‌ನ ೧೪.೪೫ ಕೋಟಿ ರೂ. ಅಟ್ಯಾಚ್‌

ಮುಂಬೈ: ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಮೆಹುಲ್‌ ಚೋಕ್ಸಿಗೆ ಸೇರಿದ ಗೀತಾಂಜಲಿ ಗ್ರೂಪ್‌ನ 14.45 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಅಟ್ಯಾಚ್‌ ಮಾಡಿದೆ. ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಸೋದರಳಿಯ ನೀರವ್ ಮೋದಿಯವರೊಂದಿಗೆ ಸೇರಿ 15,600 ಕೋಟಿ ರೂ.ಗಳ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈನ ಚೋಕ್ಸಿಯ ಸ್ಥಿರಾಸ್ತಿ … Continued

ರೈತರ ಪ್ರತಿಭಟನೆ ನಿಭಾಯಿಸಿದ ರೀತಿಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ನವ ದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ನಿಭಾಯಿಸಿದ ರೀತಿಯ ಬಗ್ಗೆ ಪ್ರತಿಪಕ್ಷಗಳು ಗುರುವಾರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು ಬಿಜೆಪಿ ಮಂತ್ರಿಗಳು ಕೇವಲ ಸ್ವಗತವನ್ನು ನಂಬುತ್ತಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು. ರೈತರ ಪ್ರತಿಭಟನೆ ನಿಭಾಯಿಸಲು ಕಂದಕಗಳನ್ನು ತೆಗೆಯಲಾಗಿದೆ, ಮುಳ್ಳುತಂತಿಗಳನ್ನು ಹಾಕಲಾಗಿದೆ ಮತ್ತು ರೈತರನ್ನು ಗೆಲ್ಲಲು ಸೇತುವೆಗಳನ್ನು … Continued

ಅಯೋಧ್ಯ ರಾಮಂದಿರ ಕಾಮಗಾರಿ ವೀಕ್ಷಣೆಗೆ ಅವಕಾಶವಿಲ್ಲ

ಅಯೋಧ್ಯ: ಸುರಕ್ಷತಾ ಕಾರಣಗಳಿಗಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯವನ್ನು ವೀಕ್ಷಿಸಲು ರಾಮ ಭಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಕ್ರೇನ್‌ಗಳು ಹಾಗೂ ದೊಡ್ಡ ಕಲ್ಲು ಪುಡಿ ಮಾಡುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ … Continued

ಕೊವಿಡ್‌ ರೋಗಿಗಳಲ್ಲಿ ಮಾರಣಾಂತಿಕ ಶಿಲೀಂಧ್ರ ಸೋಂಕು ಪತ್ತೆ..!

ಭಾರತದ ಹಲವಾರು ಕೊವಿಡ್‌-೧೯ ರೋಗಿಗಳಲ್ಲಿ ಮಾರಣಾಂತಿಕ ಶಿಲೀಂಧ್ರ ಸೋಂಕು ತಗುಲಿರುವುದು ವರದಿಯಾಗಿದೆ ಭಾರತದ COVID-19 ರೋಗಿಗಳಲ್ಲಿ ಮುಕೋರ್ಮೈಕೋಸಿಸ್ ಎಂಬ ಅಪರೂಪದ ಕಪ್ಪು ಶಿಲೀಂಧ್ರ ಸೋಂಕಿನ ಪ್ರಕರಣಗಳ ಹೆಚ್ಚಳವನ್ನು ವೈದ್ಯರು ವರದಿ ಮಾಡುತ್ತಿದ್ದಾರೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ತೀವ್ರವಾದ ಮಧುಮೇಹದಂತಹ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಚಿಕಿತ್ಸೆ ನೀಡದೆ ಬಿಟ್ಟರೆ ಅದು ಜೀವಕ್ಕೆ ಮಾರಕವಾಗಬಹುದಾಗಿದೆ. ಚಿಕಿತ್ಸೆಗಾಗಿ … Continued

ತೇಜಸ್‌ ನಿರ್ಮಾಣ ಅವಲೋಕಕ್ಕೆ ವಾಯುಸೇನೆ ತಂಡ

ಬೆಂಗಳೂರು: ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ಉತ್ಪಾದಿಸುವ ಯುದ್ಧವಿಮಾನ ತೇಜಸ್‌ ನಿಗದಿತ ಸಮಯದಲ್ಲಿ ರೂಪಗೊಳ್ಳುವ ದಿಸೆಯಲ್ಲಿ ಭಾರತೀಯ ವಾಯುಸೇನೆ ಉಪ ಮುಖ್ಯಸ್ಥರ ನೇತೃತ್ವದಲ್ಲಿ ಸಂಯೋಜಿತ ಪ್ರಾಜೆಕ್ಟ್‌ ಅವಲೋಕನ ತಂಡವನ್ನು ರಚಿಸಲು ವಾಯುಸೇನೆ ಮುಂದಾಗಿದೆ. ಗುಣಮಟ್ಟದ ಯುದ್ಧ ವಿಮಾನ ನೀಡುವ ದಿಸೆಯಲ್ಲಿ ತೇಜಸ್ ನಿರ್ಮಾಣದ ಸಂದರ್ಭದಲ್ಲಿ ಅವಶ್ಯಕ ಮಾರ್ಪಾಡುಗಳನ್ನು  ಮಾಡಲು ಸ್ಟೇಕ್‌ ಹೋಲ್ಡರ್‌ಗಳ ದ್ವೈವಾರ್ಷಿಕ ಅವಲೋಕನಕ್ಕೆ ಅವಕಾಶ ಕಲ್ಪಿಸಲು … Continued