ವಿಚ್ಛೇದನದ ಬಗ್ಗೆ ವಿಡಿಯೊದಲ್ಲಿ ಅಮೀರ್ ಖಾನ್ -ಕಿರಣ್ ರಾವ್ ಮಾತು.. ಈಗ ಟ್ರೆಂಡಿಂಗ್

ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು 15 ವರ್ಷಗಳ ವಿವಾಹದ ನಂತರ ತಮ್ಮ ದಾಂಪತ್ಯದ ವಿಚ್ಛೇದನವನ್ನು ಜುಲೈ 3ರಂದು (ಶನಿವಾರ) ಜಂಟಿ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರು ಭಾನುವಾರ (ಜುಲೈ 4) ಒಟ್ಟಿಗೆ ವೀಡಿಯೊ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಕೈಕೈ ಹಿಡಿದುಕೊಂಡಿದ್ದಾರೆ. ಮಾಜಿ ದಂಪತಿ ತಾವು ಇನ್ನೂ ಒಂದೇ ಕುಟುಂಬದ ಭಾಗವಾಗಿದ್ದೇವೆ … Continued

ಜಮ್ಮು ಡ್ರೋನ್‌ ದಾಳಿ: ಶ್ರೀನಗರದಲ್ಲಿ ಚಾಲಕ ರಹಿತ ವಿಮಾನಗಳಿಗೆ ನಿಷೇಧ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಡ್ರೋನ್‌, ಚಾಲಕ ರಹಿತ ವಿಮಾನ ಹೊಂದುವುದು, ಮಾರಾಟ ಮಾಡುವುದು ಮತ್ತು ಬಳಕೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ವಾರದ ಹಿಂದೆ ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋನ್‌ ದಾಳಿಯಿಂದ ಇಬ್ಬರು ವಾಯಪಡೆಯ ಸಿಬ್ಬಂದಿ ಗಾಯಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ವೈಮಾನಿಕ ಪ್ರದೇಶ ಮತ್ತು ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಸುರಕ್ಷತೆ … Continued

ರಫೇಲ್ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಯಾಕೆ ಸಿದ್ಧವಿಲ್ಲ?: ರಾಹುಲ್ ಗಾಂಧಿ ಆನ್ಲೈನ್ ಸಮೀಕ್ಷೆ

ದೆಹಲಿ: ರಫೇಲ್ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಆನ್‌ಲೈನ್ ಸಮೀಕ್ಷೆಯನ್ನು ನಡೆಸಿದ್ದು, ಮೋದಿ ಸರ್ಕಾರ ಜೆಪಿಸಿ ತನಿಖೆಗೆ ಯಾಕೆ ಸಿದ್ಧವಿಲ್ಲ ಎಂದು ಪ್ರಶ್ನಿಸಿದ್ದಾರೆ. ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಯಾಕೆ ಸಿದ್ಧವಿಲ್ಲ ಎಂಬ ಪ್ರಶ್ನೆಗೆ ರಾಹುಲ್ ನಾಲ್ಕು ಆಯ್ಕೆಯ ಉತ್ತರಗಳನ್ನು ನೀಡಿದ್ದಾರೆ. ಈ … Continued

ಮಾನ್ಸೂನ್ ಅಧಿವೇಶನದುದ್ದಕ್ಕೂ ಸಂಸತ್ತಿನ ಹೊರಗೆ ಪ್ರತಿಭಟನೆ: ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧಾರ

ನವದೆಹಲಿ: ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪ್ರತಿದಿನ ರೈತರ ಸಮೂಹ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಭಾನುವಾರ ಪ್ರಕಟಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಪ್ರತಿನಿಧಿಗಳು, ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವಂತೆ ಒತ್ತಾಯಿಸಿ ಸಂಸತ್ತಿನ ಎಲ್ಲ ಪ್ರತಿಪಕ್ಷಗಳ ಸಂಸದರಿಗೆ ಈ ಬಗ್ಗೆ ಸಂಸತ್ತಿನಲ್ಲಿ ಧ್ವಿ ಎತ್ತಬೇಕು ಹಾಗೂ ಪ್ರತಿಭಟಿಸಬೇಕು … Continued

ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ಭಾರತದ ಅಗ್ರ ಏಳು ನಗರಗಳಲ್ಲಿ ಮನೆ ಮಾರಾಟದಲ್ಲಿ ಶೇ.23 ರಷ್ಟು ಹೆಚ್ಚಳ: ವರದಿ

ಮುಂಬೈ: 2021ರ ಮೊದಲ ಐದು ತಿಂಗಳಲ್ಲಿ ದೇಶದ ಅಗ್ರ ಏಳು ನಗರಗಳಲ್ಲಿ ಮನೆ ಮಾರಾಟವು ಶೇಕಡಾ 23 ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಕೋಲ್ಕತ್ತಾದಲ್ಲಿ ಇದೇ ಅವಧಿಯಲ್ಲಿ ಶೇಕಡಾ 11 ರಷ್ಟು ಕುಸಿತ ಕಂಡಿದೆ ಎಂದು ಪ್ರಾಪ್ ಎಕ್ವಿಟಿ ಬಿಡುಗಡೆ ಮಾಡಿದ ವರದಿಯಲ್ಲಿ ತೋರಿಸಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಪುಣೆ ಕಳೆದ … Continued

ದೇಶದಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಭಾನುವಾರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ 36 ಪೈಸೆ ಮತ್ತು ಡೀಸೆಲ್ 17 ಏರಿಕೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಭಾನುವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಗಳ … Continued

ಆನ್‌ಲೈನ್ ತರಗತಿಗಳಿಗಾಗಿ ಮಹಾರಾಷ್ಟ್ರದ ಗ್ರಾಮದಲ್ಲಿ “ನೆಟ್‌ವರ್ಕ್ ಮರ ಏರುವ ವಿದ್ಯಾರ್ಥಿಗಳು..!

ಗೊಂಡಿಯಾ(ಮಹಾರಾಷ್ಟ್ರ): ದುರ್ಬಲ ಮೊಬೈಲ್ ಇಂಟರ್ನೆಟ್ ಸಂಪರ್ಕವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಆನ್‌ಲೈನ್ ತರಗತಿಗಳಿಗೆ ನಿರಂತರ ನೆಟ್‌ವರ್ಕ್‌ ಹುಡುಕುವ ಸಲುವಾಗಿ “ಮರ ಏರುವಂತೆ ಮಾಡಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಿಗುವುದು ಒಂದು ಸವಾಲಾಗಿದೆ, ಇದು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ನಿರೂಪಣೆಗೆ ವಿರುದ್ಧವಾಗಿದೆ. 18 ಕಿ.ಮೀ ದೂರದಲ್ಲಿರುವ ಅತುಲ್ ಗೊಂಡಲೆ ಎಂಬ … Continued

ಭಾರತದಲ್ಲಿ 43,071 ಹೊಸ ಕೋವಿಡ್ -19 ಪ್ರಕರಣಗಳು ವರದಿ

ನವದೆಹಲಿ: ಭಾರತವು ಒಂದು ದಿನದ 43,071 ಹೊಸ ಕೊರೊನಾ ವೈರಸ್ ಸೋಂಕನ್ನು ಕಂಡಿದ್ದು, ಅದರ ಪ್ರಮಾಣವನ್ನು 3,05,45,433 ಕ್ಕೆ ತಳ್ಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ನವೀಕರಿಸಿದೆ. 955 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,02,005 ಕ್ಕೆ ಏರಿದೆ ಎಂದು ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು 4,85,350 ಕ್ಕೆ ಇಳಿದಿವೆ ಮತ್ತು … Continued

ಕೋವಿಡ್‌ 3 ನೇ ಅಲೆ ವೇಗವಾಗಿ ಹರಡಬಹುದು, ಆದರೆ ಎರಡನೆ ಅಲೆ ಉಲ್ಬಣದಲ್ಲಿ ದಾಖಲಾದ ಅರ್ಧದಷ್ಟು ಪ್ರಕರಣ ನೋಡಬಹುದು: ಸರ್ಕಾರಿ ಸಮಿತಿ ವಿಜ್ಞಾನಿ

ನವದೆಹಲಿ: ಕೊರೊನಾ ವೈರಸ್ಸಿನ ಮೂರನೇ ಅಲೆಯು ಎರಡನೇ ಅಲೆಯ ಉಲ್ಬಣದ ಅವಧಿಯಲ್ಲಿ ದಿನನಿತ್ಯದ ಅರ್ಧದಷ್ಟು ಪ್ರಕರಣಗಳನ್ನು ದಾಖಲಿಸಬಹುದು ಮತ್ತು ಕೋವಿಡ್‌- ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ ಕೋವಿಡ್ 19 ಪ್ರಕರಣಗಳು ಅಕ್ಟೋಬರ್-ನವೆಂಬರ್ ನಡುವೆ ಅದು ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಈ ಬಗ್ಗೆ ವೈಜ್ಞಾನಿಕ ಮಾದರಿ ಮಾಡುವ ಸರ್ಕಾರಿ ಸಮಿತಿಯ ವಿಜ್ಞಾನಿ ಹೇಳಿದ್ದಾರೆ. ಸೂತ್ರ ಮಾದರಿಯೊಂದಿಗೆ ಕೆಲಸ … Continued

ಹರಿಯಾಣದಲ್ಲಿ ಖಾಸಗಿ ಶಾಲೆಗಳಿಗೆ ಸೇಪಡೆಯಾಗದ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು…!

ಹರಿಯಾಣದಲ್ಲಿ ಪ್ರಸಕ್ತ ಶೈಕ್ಷಣಿಕ ಅಧಿವೇಶನ ಪ್ರಾರಂಭವಾಗಿ, ಸುಮಾರು ಮೂರು ತಿಂಗಳಾಗಿದ್ದರೂ, ಖಾಸಗಿ ಶಾಲೆಗಳ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದಿಲ್ಲ ಎಂಉ ಶಾಲಾ ಶಿಕ್ಷಣ ನಿರ್ದೇಶನಾಲಯವು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಿದ್ದು, ಅವರೆಲ್ಲಾ ಶಾಲೆ ತೊರೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದೆ. ಹರಿಯಾಣ ಶಿಕ್ಷಣ ಇಲಾಖೆಗೆ, ಖಾಸಾಗಿ ಶಾಲೆಗಳು ಸಲ್ಲಿಸಿರುವ ದತ್ತಾಂಶಗಳ ಪ್ರಕಾರ, 2021-22 ರ … Continued