ಫೆ.೬ರಂದು ರೈತರಿಂದ ಹೆದ್ದಾರಿ ಬಂದ್‌

ನವ ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಗಾಜಿಪುರ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನಾ ಆಂದೋಳನ ಮುಂದುವರೆದಿದ್ದು,  ಫೆಬ್ರವರಿ 6ರಂದು ದೇಶಾದ್ಯಂತ ಹೆದ್ದಾರಿ ಬಂದ್ ಮಾಡಿ  ಪ್ರತಿಭಟನೆ ನಡೆಸಲಿದ್ದಾರೆ. ಸ್ವರಾಜ್ ಇಂಡಿಯಾ ಸಂಘಟನೆಯ ಯೋಗೇಂದ್ರ ಯಾದವ್ ಮತ್ತು ಇತರ ರೈತ ನಾಯಕರು ಈ ಕುರಿತು ಮಾಹಿತಿ ನೀಡಿದ್ದು,  … Continued

ಪೆಟ್ರೋಲ್‌ ಬೆಲೆ ಏರಿಕೆ: ತಮ್ಮದೇ ಸರ್ಕಾರದ ವಿರುದ್ಧ ಸ್ವಾಮಿ ಕಿಡಿ

ನವ ದೆಹಲಿ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರದ ತಮ್ಮದೇ ರ್ಕಾರದ ವಿರುದ್ಧ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಿಡಿಕಾರಿದ್ದಾರೆ. ಪೆಟ್ರೋಲ್ ಬೆಲೆ ವಿಷಯಕ್ಕಾಗಿ ಕೇಂದ್ರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಭಾರತ ಹಾಗೂ ನೆರೆ ರಾಷ್ಟ್ರಗಳಲ್ಲಿನ ಪೆಟ್ರೋಲ್ ಬೆಲೆಯನ್ನು ಹೋಲಿಕೆ ಮಾಡಿರುವ … Continued

ರಾಜ್ಯಸಭೆ: ರೈತ ಹೋರಾಟದ ಚರ್ಚೆಗೆ ವಿಪಕ್ಷಗಳ ಪಟ್ಟು

ನವ ದೆಹಲಿ: ಮೂರು ಹೊಸ ಕೃಷಿ ಮಸೂದೆಗಳ ಬಗ್ಗೆ ರೈತರು ನಡೆಸುತ್ತಿರುವ  ಪ್ರತಿಭಟನೆ ಕುರಿತು ಚರ್ಚೆ ಕೈಗೊಳ್ಳುವಂತೆ  ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮಂಗಳವಾರ  ರಾಜ್ಯಸಭೆಯಲ್ಲಿ ತೀವ್ರವಾಗಿ ಒತ್ತಾಯಿಸಿದ್ದರಿಂದ    ರಾಜ್ಯಸಭಾ ಕಲಾಪ  ಮುಂದೂಡಲಾಗಿದೆ. ಬೆಳಿಗ್ಗೆ 10: 30 ರ ವರೆಗೆ ಸದನವನ್ನು ಮೊದಲು ಸುಮಾರು 10 ನಿಮಿಷಗಳ ಕಾಲ ಮುಂದೂಡಲಾಯಿತು. ಸದನವು ಮತ್ತೆ … Continued

ಆಂಧ್ರ: ಟಿಡಿಪಿ ರಾಜ್ಯಾಧ್ಯಕ್ಷರ ಬಂಧನ

ಹೈದರಾಬಾದ್: ಬೆದರಿಕೆ ಪ್ರಕರಣದಲ್ಲಿ ಪೊಲೀಸರು ಟಿಡಿಪಿ ರಾಜ್ಯಾಧ್ಯಕ್ಷ ಹಾಗೂ  ಶಾಸಕ ಕೆ ಅಚನ್ನೈದು ಅವರನ್ನು ಬಂಧಿಸಿದ್ದು, ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ನಿಮ್ಮಡಾ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.  ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ   ಟಿಡಿಪಿ ರಾಜ್ಯಾಧ್ಯಕ್ಷರನ್ನು ಬಂಧಿಸಲಾಗಿದೆ. ತಮ್ಮ ಸರ್ಪಂಚ್ ಅಭ್ಯರ್ಥಿಗೆ ಬೆದರಿಕೆ ಹಾಕಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದೆ. ಅಚನ್ನೈದು ಅವರನ್ನು ಮಂಗಳವಾರ ಬೆಳಿಗ್ಗೆ ಅವರ ನಿಮ್ಮಡಾ … Continued

೧೩೦.೫೭ ಕೋಟಿ ರೂ.ಆಸ್ತಿ ಅಟ್ಯಾಚ್‌ ಮಾಡಿದ ಇಡಿ

ಹೈದರಾಬಾದ್‌ : ಜಾರಿ ನಿರ್ದೇಶನಾಲಯವು 130.57 ಕೋಟಿ ರೂ.ಮೌಲ್ಯದ ಆಸ್ತಿ  ಲಗತ್ತಿಸಿದೆ. ಇದರಲ್ಲಿ 41 ಸ್ಥಿರ ಆಸ್ತಿಗಳಾದ ಮುಸದ್ದಿಲಾಲ್ ಜೆಮ್ಸ್ ಮತ್ತು ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್  ಹಗರಣದಲ್ಲಿ ಭಾಗಿಯಾಗಿದೆ. 18.69 ಕೋಟಿ ರೂ.ಗಳ ವಹಿವಾಟಿನಲ್ಲಿ ಷೇರು ರೂಪದಲ್ಲಿ ಚಲಿಸಬಲ್ಲ ಆಸ್ತಿಗಳು ಮತ್ತು ಷೇರು ಮಾರುಕಟ್ಟೆಯಲ್ಲಿ   0.63 ಕೋಟಿ  ರೂ.ಗಳ ರೂಪದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು … Continued

ರೈತರ ಆಂದೋಳನ:ಇಂದು ಸರ್ವಪಕ್ಷಗಳ ಸಭೆ ಕರೆದ ಪಂಜಾಬ್‌ ಸಿಎಂ

ಚಂಡಿಗಡ: ಕೃಷಿ ಕಾನೂನುಗಳ ಕುರಿತಂತೆ ದೇಶದ  ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಆಂದೋಳನ ಹಾಗೂ ಬೆಳವಣಿಗೆಗಳ ಹಿನ್ನೆಲೆಯಲ್ಲಿ  ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ನಂತರ ಪೊಲೀಸರು ಪ್ರಕರಣ ದಾಖಲಿಸಿರುವ  ರೈತರ ಪರವಾಗಿ ವಾದ ಮಂಡಿಸಲು ಪಂಜಾಬ್‌ ಸರ್ಕಾರ  70 ವಕೀಲರ ತಂಡವನ್ನು ನಿಯೋಜಿಸಿದೆ ಎಂದು … Continued

ಬಜೆಟ್: ಆ‌ರೋಗ್ಯ ಕ್ಷೇತ್ರಕ್ಕೆ ದುಪ್ಪಟ್ಟು ಅನುದಾನ

ನವ ದೆಹಲಿ:ಆರೋಗ್ಯ ಕ್ಷೇತ್ರಕ್ಕೆ  ಕಳೆದ ಆರ್ಥಿಕ ವರ್ಷಕ್ಕಿಂತ ದುಪ್ಪಟ್ಟು ಅನುದಾನ   ನಿಗದಿ ಮಾಡಿರುವುದಾಗಿ ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್ ಹೇಳಿದ್ದಾರೆ. 2021-22ನೇ ಸಾಲಿಗೆ ಕೇಂದ್ರ ಸರ್ಕಾರ  ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ರೂ.ಗಳನ್ನು ನೀಡಿದೆ. ಆತ್ಮನಿರ್ಭರ್ ಆರೋಗ್ಯ ಯೋಜನೆಯ ಹೊಸ ಕಾರ್ಯಕ್ರಮಗಳಿಗೆ 64180 ಕೋಟಿ ರೂ.ಗಳನ್ನು ಮುಂದಿನ ಆರು ವರ್ಷಗಳಿಗೆ ನಿಗದಿಪಡಿಸಲಾಗಿದೆ. ರಾಷ್ಟ್ರೀಯ … Continued

250 ಟ್ವಿಟರ್‌ ಖಾತೆಗಳು ಬಂದ್‌..

ನವ ದೆಹಲಿ: ಟ್ವಿಟರ್ ಸೋಮವಾರ ಅನೇಕ ಖಾತೆಗಳನ್ನು ತಡೆಹಿಡಿದಿದೆ. ಸುಮಾರು 100 ಟ್ವಿಟ್ಟರ್ ಖಾತೆಗಳನ್ನು ಮತ್ತು 150 ಟ್ವೀಟ್‌ಗಳನ್ನು ನಿರ್ಬಂಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿ) ಟ್ವಿಟರ್‌ಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ದೃ  ಪಡಿಸಿವೆ. ಮೂರು ಕೃಷಿ ಕಾನೂನು ಕುರಿತಂತೆ ವಿವಾದಾತ್ಮಕ ಹ್ಯಾಶ್‌ಟ್ಯಾಗ್ ಬಳಸುತ್ತಿದೆ ಮತ್ತು ಜನವರಿ 30 ರಂದು  ಬೆದರಿಸುವ … Continued

ಕೇಂದ್ರ ಸರ್ಕಾರದ ಬಜೆಟ್‌ಗೆ ಸಿಪಿಐ ವಿರೋಧ

ಬೆಂಗಳೂರು: ಕೇಂದ್ರ ಸರ್ಕಾರವು  ಮಂಡಿಸಿದ  ೨೦೨೧-೨೨ನೇ ಸಾಲಿನ ಬಜೆಟ್‌  ಜನಸಮಾನ್ಯರ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೊರಿಸಿದೆ ಎಂದು ಸಿಪಿಐ ಪಕ್ಷ ಹೇಳಿದೆ. ಈ ಬಜೆಟ್ ಜನ-ವಿರೋಧಿ ಹಾಗೂ ನಿರಾಶಾದಾಯಕವಾಗಿದೆ, ಸರ್ಕಾರದ ದುಷ್ಟ ಆರ್ಥಿಕ ನೀತಿಗಳಿಂದಾಗಿ ಮತ್ತು ಕೋವಿಡ್-೧೯ನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸದೇ ಹೋದ ಕಾರಣ, ನಿರುದ್ಯೋಗ ಹೆಚ್ಚಾಗಿದ್ದು ಸಾವಿರಾರು ಜನರು ಬೀದಿಪಾಲಾಗಿದ್ದಾರೆ, ಸರ್ಕಾರದ ತೆರಿಗೆ ಹೆಚ್ಚಳದ … Continued

7 ಜವಳಿ ಪಾರ್ಕ್ ಸ್ಥಾಪನೆ

ನವ ದೆಹಲಿ: ಮುಂದಿನ ಮೂರು ವರ್ಷಗಳಲ್ಲಿ  ದೇಶಾದ್ಯಂತ  7 ಜವಳಿ ಪಾರ್ಕ್ ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು   ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಬಜೆಟ್ ಮಂಡನೆ ಮಾಡಿ,  ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವ ರೀತಿಯಲ್ಲಿ ದೇಶಾದ್ಯಂತ 7 ಜವಳಿ ಪಾರ್ಕ್ಗಳನ್ನು ಮಾಡಲಾಗುವುದು,   ಉತ್ಪಾದನಾ ಕ್ಷೇತ್ರಕ್ಕೆ 1.94 ಕೋಟಿ ರೂ.   ಅನುದಾನ ನೀಡುತ್ತಿದ್ದು ಜವಳಿ ಪಾರ್ಕ್ ಗಳು … Continued