40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಪರಿಗಣಿಸಿ: ಜಿನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ

ನವದೆಹಲಿ: ಕೋವಿಡ್ -19 ವಿರುದ್ಧ ಬೂಸ್ಟರ್ ಲಸಿಕೆ ಡೋಸ್‌ನ ಬೇಡಿಕೆಗಳ ಮಧ್ಯೆ, ಭಾರತದ ಉನ್ನತ ಜೀನೋಮ್ ವಿಜ್ಞಾನಿಗಳು 40 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಬೂಸ್ಟರ್ ಡೋಸ್ ಅನ್ನು “ಪರಿಗಣಿಸಬಹುದು” ಎಂದು ಹೇಳಿದ್ದಾರೆ. ಲಸಿಕೆ ಹಾಕದ ಅಪಾಯದಲ್ಲಿರುವ ಜನರಿಗೆ ಲಸಿಕೆ ನೀಡುವುದು ಮತ್ತು 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಪರಿಗಣಿಸುವುದು, ಇದನ್ನು … Continued

ಕಾಂಗ್ರೆಸ್‌ಗೆ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಸೇರ್ಪಡೆ

ಚಂಡೀಗಢ: ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಶುಕ್ರವಾರ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಮತ್ತು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸೇರುವ ಮುನ್ನ ಮೂಸ್ ವಾಲಾ ಎರಡು ವಾರಗಳ ಹಿಂದೆ ತಮ್ಮ ‘ಸೆಟಿಸ್ಫೈ ಎಂಬ ಅಲ್ಬಂ ಬಿಡುಗಡೆ ಮಾಡಿದ್ದರು. ಮೂಸೆವಾಲಾ ಅವರ ತಂದೆ ನಿವೃತ್ತ ಸರ್ಕಾರಿ … Continued

ಚಲಿಸುತ್ತಿದ್ದ ರೈಲಿನಿಂದ ಮಹಿಳೆಯರ ಜಂಪ್.. ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರು..! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೋಲ್ಕತ್ತಾ: ಪ್ರಜ್ಞಾವಂತಿಕೆ ಮತ್ತು ಧೈರ್ಯವನ್ನು ಪ್ರದರ್ಶಿಸಿದ ಘಟನೆಯಲ್ಲಿ, ಪಶ್ಚಿಮ ಬಂಗಾಳದಲ್ಲಿ ರೈಲಿಗೆ ಸಿಲುಕುತ್ತಿದ್ದ ಮಹಿಳೆಯನ್ನುರೈಲ್ವೆ ಪೊಲೀಸ್‌ ತಪ್ಪಿಸಿದ್ದಾನೆ. ವರದಿಯ ಪ್ರಕಾರ, ಆರ್‌ಪಿಎಫ್ ಅಧಿಕಾರಿ ಬಬ್ಲು ಕುಮಾರ್ ಅವರನ್ನು ಪಶ್ಚಿಮ ಬಂಗಾಳದ ಪುರುಲಿಯಾ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ರೈಲು ಮತ್ತು ಪ್ಲಾಟ್‌ಫಾರ್ಮ್ ಅಂತರದ ನಡುವೆ ಜಾರಿ ಬಿದ್ದಿದದ್ದಾರೆ. ಇದನ್ನು ಬಬ್ಲು … Continued

ನಾಳೆ ಒಡಿಶಾ, ಆಂಧ್ರ ಪ್ರದೇಶಕ್ಕೆ ಅಪ್ಪಳಿಸಲಿದೆ ಜವಾದ್ ಚಂಡಮಾರುತ; ಇಂದಿನಿಂದಲೇ ಹೈ ಅಲರ್ಟ್

ನವದೆಹಲಿ: ಒಡಿಶಾ, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಿಗೆ ನಾಳೆ (ಶನಿವಾರ) ಜವಾದ್ ಚಂಡಮಾರುತ ಅಪ್ಪಳಿಸಲಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಮಳೆ ತೀವ್ರಗೊಳ್ಳಲಿದ್ದು, ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಸಂಜೆ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಜವಾದ್ ಚಂಡಮಾರುತವು ರೂಪುಗೊಳ್ಳಲಿದ್ದು, ಶನಿವಾರ ಬೆಳಿಗ್ಗೆ ಆಂಧ್ರ ಪ್ರದೇಶದ … Continued

ನಾವು ಪಾಕಿಸ್ತಾನದಲ್ಲಿ ಕೈಗಾರಿಕೆಗಳನ್ನು ನಿಷೇಧಿಸಬೇಕೆಂದು ನೀವು ಬಯಸುತ್ತೀರಾ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಪ್ರಶ್ನೆ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಪಾಕಿಸ್ತಾನ ಕಾರಣ ಎಂದು ವಾದಿಸಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪಾಕಿಸ್ತಾನ ಕೈಗಾರಿಕೆಗಳ ನಿಷೇಧವನ್ನು ನೀವು ಬಯಸುತ್ತೀರಾ ಎಂದು ಪ್ರಶ್ನಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಉತ್ತರ ಪ್ರದೇಶದ ಕೈಗಾರಿಕೆಗಳು ಕಾರಣವಲ್ಲ. ಬದಲಿಗೆ ಪಾಕಿಸ್ತಾನದಿಂದ ಬರುತ್ತಿರುವ ಕಲುಷಿತ ಗಾಳಿಯಿಂದ … Continued

ಐಎಂಎಫ್​ನ ಉನ್ನತ ಹುದ್ದೆಗೆ ಏರಿದ ಮೈಸೂರು ಮೂಲದ ಗೀತಾ ಗೋಪಿನಾಥ್

ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ((IMF))ಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಗೀತಾ ಗೋಪಿನಾಥ್ ಅವರಿಗೆ ಬಡ್ತಿ ನೀಡುವುದರ ಜತೆಗೆ ಮಹತ್ವದ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಇದಾದ ನಂತರ ಈಗ ಗೀತಾ ಈ ಸಂಸ್ಥೆಯಲ್ಲಿ ವಿಶೇಷ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕದ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ಅಂತಾರಾಷ್ಟ್ರೀಯ … Continued

ಡಿಸೆಂಬರ್ 16, 17ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ ಬ್ಯಾಂಕ್‌ ಒಕ್ಕೂಟಗಳು

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ಒಂಬತ್ತು ಒಕ್ಕೂಟಗಳ ಸಂಸ್ಥೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಡಿಸೆಂಬರ್ 16 ಮತ್ತು 17ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ಮಹೇಶ್ ಮಿಶ್ರಾ ಗುರುವಾರ ಮಾತನಾಡಿ, ಸರ್ಕಾರವು ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ … Continued

ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅಮಾನತು, ಶಿಸ್ತು ಕ್ರಮಕ್ಕೆ ಚಾಲನೆ

ಮುಂಬೈ: ಹಫ್ತಾ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ಅಮಾನತುಗೊಳಿಸಿದೆ. ಅವರ ವಿರುದ್ಧ ಇರುವ ‘ಕೆಲವು ಅಕ್ರಮಗಳು ಹಾಗೂ ಲೋಪಗಳ’ ಆರೋಪದ ಮೇಲೆ ಅವರ ವಿರುದ್ಧ ಶಿಸ್ತು ಕ್ರಮ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೆಂಬರ್ 12 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ … Continued

ಕೇವಲ ಮಣ್ಣು 65 ಗಿಡಮೂಲಿಕೆ ಸಸ್ಯಗಳಿಂದ 200-ಚದರ ಅಡಿ ಮನೆ ನಿರ್ಮಿಸಿದ ಕೇರಳದ ಶಿಲ್ಪಿ…!

ತಿರುವನಂತಪುರಂ: ವೃತ್ತಿಯಲ್ಲಿ ಶಿಲ್ಪಿಯಾಗಿರುವ ಸಿಲಾ ಸಂತೋಷ್ ಈಗ 200 ಚದರ ಅಡಿ ವಿಸ್ತೀರ್ಣದ ಸಂಪೂರ್ಣ ಮಣ್ಣಿನಿಂದ ಕೂಡಿದ ಹಾಗೂ 65 ಗಿಡಮೂಲಿಕೆಗಳ ಸಸ್ಯಗಳನ್ನು ಬೆರೆಸಿದ ವಿಶಿಷ್ಟವಾದ ಮನೆ ನಿರ್ಮಿಸಿದ್ದಾರೆ…! ಕೇರಳದ ರಾಜಧಾನಿಯಿಂದ ಸುಮಾರು 100 ಕಿಮೀ ದೂರದಲ್ಲಿರುವ ಅಡೂರಿನಲ್ಲಿ ಅವರ ಆತ್ಮೀಯ ಸ್ನೇಹಿತ ಜಾಕೋಬ್ ತಂಕಚನ್ ಅವರ ಐದು ಎಕರೆ ಕೃಷಿ ಭೂಮಿಯಲ್ಲಿ ಮನೆ ಇದೆ. … Continued

‘ಓಮಿಕ್ರಾನ್’ ಶೀರ್ಷಿಕೆಯ 60 ವರ್ಷದ ಹಿಂದಿನ ಚಲನಚಿತ್ರದ ಪೋಸ್ಟರ್‌ ಹಂಚಿಕೊಂಡ ಆನಂದ್ ಮಹೀಂದ್ರಾ..!

ನವದೆಹಲಿ: ಕೊರೊನಾ ವೈರಸ್​ ಇಡೀ ಜಗತ್ತನ್ನು ಬಿಟ್ಟು ಬಿಡದೆ ಕಾಡುತ್ತಿದೆ. ದಿನಕಳೆದಂತೆ ಕೊವಿಡ್​ನ ಹೊಸಹೊಸ ರೂಪಾಂತರಿಗಳು ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚುತ್ತಿದೆ. ಹೊಸ ರೂಪಾಂತರಿಗಳಿಂದ ಈ ವೈರಸ್​ ಬಗೆಗಿನ ಅಧ್ಯಯನ ಕ್ಲಿಷ್ಟವಾಗುತ್ತ ಸಾಗಿದೆ. ಈಗ ಓಮಿಕ್ರಾನ್​ ರೂಪಾಂತರಿ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಕರ್ನಾಟಕಕ್ಕೂ ಕಾಲಿಟ್ಟಿದೆ. ವಿಶೇಷವೆಂದರೆ ಈ ಹೆಸರಿನಲ್ಲಿ ಸಿನಿಮಾ ಬಹಳ ಹಿಂದೆಯೇ ಬಂದಿತ್ತು..! 1963ರಲ್ಲಿ ಬಂದ … Continued