ಬಾದಲ್‌ ಮೇಲೆ ದಾಳಿ: ಕಾಂಗ್ರೆಸ್‌ ಶಾಸಕ ಸೇರಿ ೬೦ ಜನರ ಮೇಲೆ ಎಫ್‌ಐಆರ್‌

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರ ಬೆಂಗಾವಲು ಕಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ರಮಿಂದರ್ ಸಿಂಗ್ ಅವ್ಲಾ, ಅವರ ಪುತ್ರ ಮತ್ತು ಹೆಸರಿಸದ ಇತರ 60 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್ ಮತ್ತು ಎಸ್‌ಎಡಿ ಪಕ್ಷದ ಕಾರ್ಯಕರ್ತರ ನಡುವೆ ದೊಡ್ಡ ಘರ್ಷಣೆಗಳು ಸಂಭವಿಸಿದ ಕೆಲವೇ ಗಂಟೆಗಳ … Continued

ವ್ಯಾಟ್ಸಪ್‌ ನೂತನ ಖಾಸಗಿ ನೀತಿ: ಕೇಂದ್ರದ ನಿಲುವು ಕೇಳಿದ ಹೈಕೋರ್ಟ್‌

ದೆಹಲಿ: ವ್ಯಾಟ್ಸಪ್‌ನ ನೂತನ ಖಾಸಗಿ ನೀತಿ ಕುರಿತು ತನ್ನ ನಿಲುವು ತಿಳಿಸುವಂತೆ  ದೆಹಲಿ ಹೈ ಕೋರ್ಟ್‌‌   ಕೇಂದ್ರ ಸರಕಾರಕ್ಕೆ ಸೂಚಿಸಿದೆ. ವ್ಯಾಟ್ಸಪ್‌ ಬಳಕೆದಾರರು   ತಮ್ಮ ವೈಯಕ್ತಿಕ ಮಾಹಿತಿಯನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕೆಂಬ ನೀತಿಯನ್ನು ಖಂಡಿಸಿ ಸಲ್ಲಿಸಲಾದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದೆ.  

ದೇಶದ ರಕ್ಷಣೆ ವಿಚಾರದಲ್ಲಿ ನಮ್ಮ ಸಂಕಲ್ಪ ದೃಢ:ರಾಜನಾಥ

ಬೆಂಗಳೂರು:  ಕೆಲ ನರೆಹೊರೆಯ ರಾಷ್ಟ್ರಗಳ ಗಡಿರೇಖೆ ಬದಲಿಸುವ ದುರದೃಷ್ಟಕರ ಪ್ರಯತ್ನಗಳಿಗೆ ಭಾರತ ಸಾಕ್ಷಿಯಾಗಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗಿನ ದೀರ್ಘಕಾಲದ ಗಡಿರೇಖೆ ಉಲ್ಲೇಖಿಸಿ ಹೇಳಿದರು. ಬೆಂಗಳೂರಿನಲ್ಲಿ ದ್ವೈವಾರ್ಷಿಕ ಏರೋ ಇಂಡಿಯಾ-೨೦೨೧ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು  ಗಡಿ ವಿಚಾರದಲ್ಲಿ  ಜಾಗರೂಕವಾಗಿದೆ ಮತ್ತು ದೇಶದ ಜನರು ಹಾಗೂ ದೇಶದ  ಸಮಗ್ರತೆಯನ್ನು … Continued

ಪಿಎಸ್‌ ಬ್ಯಾಂಕುಗಳ ಖಾಸಗೀಕರಣಕ್ಕೆ ಮುನ್ನುಡಿ..?

ಮುಂಬೈ: ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಖಾಸಗೀಕರಣ ಆರಂಭವಾದಂತೆ ತೊರುತ್ತಿದೆ. ಕೇಂದ್ರ ಸರ್ಕಾರವು ಒಂದು ಸಾಮಾನ್ಯ ವಿಮಾ ಕಂಪನಿಯ ಹೊರತಾಗಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತನ್ನ ಪಾಲನ್ನು ತ್ಯಜಿಸಲಿದೆ ಎಂದು  ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ.  ಇದಲ್ಲದೆ, ಐಡಿಬಿಐ ಬ್ಯಾಂಕಿನ ಹೂಡಿಕೆ ಪ್ರಕ್ರಿಯೆ  ಮುಂದಿನ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಸರ್ಕಾರವು ಖಾಸಗೀಕರಣಗೊಳಿಸಲು … Continued

ರೈತರ ಪ್ರತಿಭಟನೆ:ರಾಜ್ಯಸಭೆಯಲ್ಲಿ ಚರ್ಚೆಗೆ ೫ ತಾಸು ನಿಗದಿ

ನವ ದೆಹಲಿ: ದೇಶದಲ್ಲಿ ನಡೆಯುತ್ತಿರುವ   ರೈತರ ಪ್ರತಿಭಟನೆ ಬಗ್ಗೆ ಸಂಬಂಧ ಪಟ್ಟ ಪಕ್ಷಗಳು ಪ್ರಸ್ತಾಪಿಸುವಂತೆ ಮತ್ತು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಐದು ತಾಸು ಸಮಯಾವಕಾಶ ನೀಡುವುದಕ್ಕೆ ರಾಜ್ಯಸಭೆಯಲ್ಲಿ ಬುಧವಾರ ಸರ್ಕಾರ ಮತ್ತು ವಿರೋಧ ಪಕ್ಷಗಳ ಸದಸ್ಯರು ಸಹಮತಕ್ಕೆ ಬಂದಿದ್ದಾರೆ. ಆದರೂ, ರೈತರ ಪ್ರತಿಭಟನೆ, ನೂತನ ಕೃಷಿ ಕಾಯ್ದೆ ಬಗ್ಗೆ ಚರ್ಚೆ ಆರಂಭವಾಗುವ ಮುನ್ನ ಸದನದಲ್ಲಿದ್ದ … Continued

ದೇಶದಲ್ಲಿ ೧೧,೦೩೯ ಜನರಿಗೆ ಕೊರೋನಾ ಪಾಸಿಟಿವ್‌, ೧೧೦ ಸಾವು

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ  11,039 ಹೊಸ  ಕೊರೋನಾ ವೈರಸ್ಪ್ರ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ  ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಬುಧವಾರ ಬೆಳಿಗ್ಗೆ ತಿಳಿಸಿದೆ. ಇದರೊಂದಿಗೆ ಪ್ಯಾನ್-ಇಂಡಿಯಾ ಒಟ್ಟಾರೆ ಪ್ರಕರಣ 1,07,77, 284 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಮೂಕವಾಗುತ್ತಿದ್ದು, ದೇಶದಲ್ಲಿ ಒಟ್ಟಾರೆ   1,60,057 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ. ಈ … Continued

ಸೇತುವೆ ನಿರ್ಮಿಸಬೇಕೇ ಹೊರತು ಗೋಡೆಗಳನ್ನಲ್ಲ:ರಾಹುಲ್‌

ನವ ದೆಹಲಿ: ದೆಹಲಿ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನ ಸ್ಥಳದಲ್ಲಿ ಪೊಲೀಸರು  ಬ್ಯಾರಿಕೇಡ್‍ಗಳು ಮತ್ತು ರಸ್ತೆ ತಡೆಗಳನ್ನು ನಿರ್ಮಿಸುತ್ತಿರುವುದನ್ನು  ಕಾಂಗ್ರೆಸ್‌ ನಾಯಕ   ರಾಹುಲ್ ಗಾಂಧಿ ಖಂಡಿಸಿದ್ದಾರೆ. , ಕೇಂದ್ರ ಸರ್ಕಾರ ರೈತರ ನಡುವೆ ಸೇತುವೆಗಳನ್ನು ನಿರ್ಮಿಸಬೇಕೇ  ಹೊರತು ಈ ರೀತಿ ಗೋಡೆಗಳನ್ನು ನಿರ್ಮಿಸುವುದಲ್ಲ ಎಂದು ರಾಹುಲ್‌ ಹೇಳಿದ್ದಾರೆ. ದೆಹಲಿ ಗಡಿ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ … Continued

ದಕ್ಷಿಣ ಏಶಿಯಾ ರಾಷ್ಟ್ರಗಳ ಜೊತೆ ಪ್ರತಿ ಮಿಲಿಯನ್‌ಗೆ ಸಾವಿನ ಹೋಲಿಕೆ ಸೂಕ್ತವಲ್ಲ

ನವ ದೆಹಲಿ: ಪ್ರತಿ ದಶ ಲಕ್ಷ ಜನಸಂಖ್ಯೆಗೆ ದಕ್ಷಿಣ ಏಷ್ಯಾದ ಇತರ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗಿಂತ ಹೆಚ್ಚಿನ COVID-19 ಸಂಬಂಧಿತ ಸಾವುಗಳು ವರದಿಯಾಗಲು  ಅನೇಕ ಅಂಶಗಳು ಕಾರಣವಾಗಿರಬಹುದು ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ವೈವಿಧ್ಯಮಯ ಭೌಗೋಳಿಕತೆ, ಪ್ರಕರಣದ ವ್ಯಾಖ್ಯಾನಗಳು,  ಪರೀಕ್ಷೆ ಮತ್ತು ವರದಿ ಮಾಡುವ ಪ್ರೋಟೋಕಾಲ್‌ಗಳಂತಹ ಅಂಶಗಳು ಇರುವುದರಿಂದ  ಎಂದು ಆರೋಗ್ಯ ಸಚಿವ … Continued

ಹರ್ಯಾಣ:ಟೋಲ್‌ ಪ್ಲಾಜಾಗಳಲ್ಲಿ ರೈತರ ಧರಣಿ

ಚಂಡಿಗಡ: ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಬೆಂಬಲವಾಗಿ   ಮಂಗಳವಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಧರಣಿ ನಡೆಸಿದರು. ಹಿಸಾರ್ ಬಳಿಯ ಹಿಸಾರ್-ಸಿರ್ಸಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲ್ಯಾಂಡ್ರಿ ಟೋಲ್ ಪ್ಲಾಜಾದಲ್ಲಿ, ಸಾವಿರಾರು ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಸುದೀರ್ಘ ಯುದ್ಧಕ್ಕೆ ಪ್ರತಿಜ್ಞೆ ಮಾಡಿದರು. ಈ ಸಭೆಯಲ್ಲಿ ರೈತ ಮುಖಂಡರಾದ ಅಶೋಕ್ ಧವಾಲೆ, … Continued

ಘರ್ಷಣೆ: ಅಕಾಲಿ ದಳ ಮುಖಂಡ ಬಾದಲ್‌ ಕಾರಿಗೆ ಹಾನಿ

ಚಂಡಿಗಡ: ಮಂಗಳವಾರ ಪಂಜಾಬ್‌ನ ಜಲಾಲಾಬಾದ್‌ನಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಇದರಲ್ಲಿ ಎಸ್‌ಎಡಿ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾದಲ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರೂ, ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.ಫೆಬ್ರವರಿ 14 ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು … Continued