ಮಾ.೧ರಿಂದ ೨ನೇ ಹಂತದ ಲಸಿಕೆ ಆರಂಭ:೬೦ರ ಮೇಲ್ಪಟ್ಟವರಿಗೆ ಉಚಿತ

  ನವ ದೆಹಲಿ: ದೇಶದಲ್ಲಿ ಮಾರ್ಚ್ ೧ರಿಂದ ಎರಡನೇ ಹಂತದ ಕೊವಿಡ್‌ ಲಸಿಕೆ ಹಾಕುವ ಅಭಿಯಾನ ಕೈಗೆತ್ತಿಕೊಳ್ಳಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. 45 ವರ್ಷ ದಾಟಿದ ಅನಾರೋಗ್ಯಪೀಡಿತರು ಮತ್ತು 60 ವರ್ಷ ದಾಟಿದ ಎಲ್ಲಾ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಹಾಕಲು ನಿರ್ಧರಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ … Continued

೧೫೦೦ ಸಮಾವೇಶಗಳು, ೧೫,೦೦೦ ವಾಟ್ಸಾಪ್‌ ಗ್ರುಪ್‌ಗಳು: ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ…!

ನವ ದೆಹಲಿ: ಮುಂಬರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ 1,500 ಕ್ಕೂ ಹೆಚ್ಚು ಬೃಹತ್‌ ಸಮಾವೇಶಗಳು, 15,000 ವಾಟ್ಸಾಪ್ ಗುಂಪುಗಳು ಮತ್ತು ಪಕ್ಷದ ಪ್ರಮುಖ ಮುಖಂಡರು ಶಿಬಿರ ನಡೆಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಪಶ್ಚಿಮ ಬಂಗಾಳದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರ ಪ್ರಕಾರ, ಮತದಾರರನ್ನು ತಲುಪಲು ಕನಿಷ್ಠ 1,500 ದೊಡ್ಡ ಮತ್ತು ಸಣ್ಣ ಸಮಾವೇಶಗಳನ್ನು ನಡೆಸುವಂತೆ ಬಿಜೆಪಿ ಕೇಂದ್ರ … Continued

ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

ಪುದುಚೆರಿ: ಪುದುಚೇರಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಅಲ್ಲಿನ ಮುಖ್ಯಮಂತ್ರಿ ಸ್ಥಾನಕ್ಕೆ ,ವಿ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಪತನವಾದ ಒಂದು ದಿನದ ಬಳಿಕ ಕೇಂದ್ರ ಸರ್ಕಾರ ವಿಧಾನಸಭೆಯನ್ನು ವಿಸರ್ಜಿಸಿ, ರಾಷ್ಟ್ರಪತಿ ಆಡಳಿತ ಜಾರಿ ಮಾಡಿದೆ. ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಬಹುಮತ ಕಳೆದುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಯಾವುದೇ ಪಕ್ಷ ಸರ್ಕಾರ … Continued

ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದ ಪ್ರಕರಣ ಹಿಂತೆಗೆಯಲು ಕೇರಳ ಸರ್ಕಾರ ನಿರ್ಧಾರ: ಚುನಾವಣಾ ಸ್ಟಂಟ್‌ ಎಂದ ಬಿಜೆಪಿ

ರಾಜ್ಯದ ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಕೇರಳದಲ್ಲಿ ಎಡರಂಗ ಸರ್ಕಾರವು ಶಬರಿಮಲೆ ಆಂದೋಲನ ಹಾಗೂ ನಾಗರಿಕ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ಬಿಜೆಪಿಯು ಎಡರಂಗದ ಸರ್ಕಾರದ ಈ ನಿರ್ಧಾರ ಚುನಾವಣಾ ಸ್ಟಂಟ್‌ ಎಂದು ಹೇಳಿದೆ. ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದಂತೆ 50,000 ಕ್ಕೂ ಹೆಚ್ಚು ಜನರ ವಿರುದ್ಧ … Continued

ಡಿಜಿಪಿ ರಾಜೇಶ ದಾಸ ವಿರುದ್ಧ ಲೈಂಗಿಕ ಕಿರುಕುಳ ದೂರಿಗೆ ವಿಚಾರಣೆ ಸಮಿತಿ ರಚನೆ

ಚೆನ್ನೈ; ತಮಿಳುನಾಡು ವಿಶೇಷ ಪೊಲೀಸ್ ಮಹಾನಿರ್ದೇಶಕರು (ಕಾನೂನು ಸುವ್ಯವಸ್ಥೆ) ರಾಜೇಶ್ ದಾಸ್ ಅವರ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ತನಿಖೆಗಾಗಿ ತಮಿಳುನಾಡು ಗೃಹ ಇಲಾಖೆ ಬುಧವಾರ ಆರು ಸದಸ್ಯರ ವಿಚಾರಣಾ ಸಮಿತಿ ರಚಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಯೋಜನೆ ಮತ್ತು ಅಭಿವೃದ್ಧಿ) ಜಯಶ್ರೀ ರಘುನಂದನ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ … Continued

ಬೀದಿ ವ್ಯಾಪಾರಿಗಳ ಸಾಲ ನೀಡಿಕೆ ಪ್ರಕ್ರಿಯೆ ಚುರುಕಿಗೆ ಬ್ಯಾಂಕ್‌ಗಳಿಗೆ ಸಲಹೆ

ಕಳೆದ ವರ್ಷ ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಆರಂಭಿಸಿದ ಯೋಜನೆಯ ಭಾಗವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲವನ್ನು ವಿತರಣೆ ಪ್ರಕ್ರಿಯೆ ನಿಧಾನಗೊಂಡಿದೆ ಎಂದು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬರೆದ ಪತ್ರದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಆರಂಭಿಕ ತಿಂಗಳುಗಳ ಅದ್ಭುತ ಯಶಸ್ಸಿನ ನಂತರ, ಬ್ಯಾಂಕುಗಳ ವಿಲೀನ, ಡಿಸೆಂಬರ್ ಅಂತ್ಯದ ತ್ರೈಮಾಸಿಕದ ಅಂತ್ಯದ ಕಾರಣ ಬ್ಯಾಂಕುಗಳು … Continued

ಪುಣೆ: ಕೊವಿಡ್‌ ಸೋಂಕಿತರಿಗೆ ೨೦೦೦ ಹಾಸಿಗೆ ಕಾಯ್ದಿರಿಸಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ

ಪುಣೆ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗಾಗಿ ೨೦೦೦ದಿಂದ ೩೦೦೦ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಪುಣೆಯ ಖಾಸಗಿ ಆಸ್ಪತ್ರೆಗಳಿಗೆ ಮಹಾನಗರ ಪಾಲಿಕೆ ನಿರ್ದೇಶನ ನೀಡಿದೆ. ಪಿಎಂಸಿ ಆಯುಕ್ತ ವಿಕ್ರಮ್ ಕುಮಾರ್, ಕೊರೊನಾ ರೋಗಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದರು ಖಾಸಗಿ ಆಸ್ಪತ್ರೆಗಳು ತಾವು ಕಾಯ್ದಿರಿಸಿದ ಹಾಸಿಗೆಗಳ ಬಗ್ಗೆ ನಮಗೆ ತಿಳಿಸಲಿದ್ದು, ಅದರ ಪ್ರಕಾರ ಡ್ಯಾಶ್‌ಬೋರ್ಡ್ … Continued

ದೀರ್ಘ ಬಾಳಿಕೆ ಕುನ್ಬಾ ಟೆಂಟ್‌ಗಳ ನಿರ್ಮಾಣಕ್ಕೆ ಪ್ರತಿಭಟನಾಕಾರರ ಸಿದ್ಧತೆ

ದೆಹಲಿ ಗಡಿಗಳಲ್ಲಿ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ರೈತರು ಸದ್ಯಕ್ಕೆ ಹೋರಾಟವನ್ನು ಕೈಬಿಡುವ ಲಕ್ಷಣಗಳು ಕಾಣುತ್ತಿಲ್ಲ. ದೀರ್ಘ ಬಾಳಿಕೆಯ ಕುನ್ಬಾ ಟೆಂಟ್ಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನಷ್ಟು ತಿಂಗಳುಗಳ ಕಾಲ ಪ್ರತಿಭಟನೆಯನ್ನು ಮುಂದುವರೆಸುವ ಉದ್ದೇಶದಿಂದ ಶಾಶ್ವತವೆನ್ನಬಹುದಾದ ಕುನ್ಬಾ ಡೇರೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಪ್ರತಿಯೊಂದು ಕುಟುಂಬಗಳಿಂದ ೨೦೦ ರೂ.ಗಳಿಂದ ೫೦೦ರೂ.ವರೆಗೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ … Continued

ಮೊಟೆರಾ ಕ್ರೀಡಾಂಗಣ ಇನ್ನು ನರೇಂದ್ರ ಮೋದಿ ಕ್ರೀಡಾಂಗಣ

ಅಹ್ಮದಾಬಾದ್‌ನ ಸರ್ದಾರ್‌ ಪಟೇಲ್‌ ಕ್ರೀಡಾಂಗಣಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನರೇಂದ್ರ ಮೋದಿ ಕ್ರೀಡಾಂಗಣ ಎಂದು ನಾಮಕರಣ ಮಾಡಿದ್ದಾರೆ. ಇಂಗ್ಲೆಂಡ್‌-ಭಾರತ ೩ನೇ ಟೆಸ್ಟ್‌ ಆರಂಭಕ್ಕೆ ಮುನ್ನ ಕ್ರೀಡಾಂಗಣದ ಉದ್ಘಾಟನೆ ನಡೆಯಿತು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಕ್ರೀಡಾಂಗಣ 1,10,000 ಜನರ ಸಾಮರ್ಥ್ಯವನ್ನು ಹೊಂದಿದೆ ಆದರೆ ಕೋವಿಡ್ -19 ಪ್ರೋಟೋಕಾಲ್‌ಗೆ ಅನುಗುಣವಾಗಿ ಕೇವಲ 55,000 ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದು … Continued

ಸಂಸತ್ತಿನ ಎದುರು ೪೦ ಲಕ್ಷ ಟ್ರಾಕ್ಟರ್‌ಗಳ ಮೆರವಣಿಗೆ: ಕೇಂದ್ರಕ್ಕೆ ಟಿಕಾಯಿತ್ ಎಚ್ಚರಿಕೆ ‌

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ರೈತರು ೪೦ ಲಕ್ಷ ಟ್ರಾಕ್ಟರ್‌ಗಳೊಂದಿಗೆ ಸಂಸತ್ತಿನ ಮುಂದೆ ಮೆರವಣಿಗೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ರೈತರ ರ್ಯಾಲಿಯಲ್ಲಿ ಮಾತನಾಡಿದ ಟಿಕಾಯತ್‌, ಸಂಸತ್ತಿನ ಎದುರು ಟ್ರಾಕ್ಟರ್‌ಗಳ ಮೆರವಣಿಗೆ ನಡೆಸಲಾಗುವುದು. ಈ ಬಾರಿ ಅದು ಕೇವಲ … Continued