ಪಶ್ಚಿಮ ಬಂಗಾಳ : ತನ್ನ ಕೆಂಪು ಟೀ ಶರ್ಟ್ ಬೀಸುತ್ತ ಎಚ್ಚರಿಕೆ ಸಂದೇಶ ರವಾನಿಸಿ ಸಂಭಾವ್ಯ ರೈಲು ಅಪಘಾತ ತಡೆದ 12 ವರ್ಷದ ಬಾಲಕ…!

ಗಮನಾರ್ಹವಾದ ಧೈರ್ಯ ಹಾಗೂ ಸಮಯಪ್ರಜ್ಞೆಯ ಪ್ರದರ್ಶನದಲ್ಲಿ, ಪಶ್ಚಿಮ ಬಂಗಾಳದಲ್ಲಿ 12 ವರ್ಷದ ಬಾಲಕನೊಬ್ಬ ಸಂಭಾವ್ಯ ರೈಲು ಅಪಘಾತವನ್ನು ತಡೆದಿದ್ದಾನೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ಈ ಘಟನೆ ನಡೆದಿದ್ದು, ಬಾಲ ಹೀರೋ ಮುರ್ಸಲೀನ್ ಶೇಖ್ ಅಪಘಾತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಮುರ್ಸಲೀನ್ ರೈಲ್ವೇ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ವಲಸೆ … Continued

ತಮಿಳುನಾಡು: ಕಾವೇರಿ ನೀರು ಬಿಡುವಂತೆ ಒತ್ತಾಯಿಸಿ ತಿರುಚ್ಚಿ ರೈತರಿಂದ ಬಾಯಿಯಲ್ಲಿ ಸತ್ತ ಇಲಿಗಳನ್ನು ಹಿಡಿದುಕೊಂಡು ಪ್ರತಿಭಟನೆ | ವೀಡಿಯೊ

ತಿರುಚಿರಾಪಳ್ಳಿ: ಕಾವೇರಿ ನೀರು ಬಿಡುವಂತೆ ಒತ್ತಾಯಿಸಿ ತಮಿಳುನಾಡು ರೈತರ ಗುಂಪೊಂದು ತಿರುಚಿರಾಪಳ್ಳಿಯಲ್ಲಿ ಸತ್ತ ಇಲಿಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಣೆ ಕೃಷಿಕರ ಸಂಘದ (ದೇಸಿಯ ತೆನ್ನಿಂತಿಯ ನಾತಿಗಳ ಇನೈಪ್ಪು ವಿವಸಾಯಿಗಳ ಸಂಗಮ) ಆಶ್ರಯದಲ್ಲಿ ಕಾವೇರಿ ನದಿ ಮುಖಜ ಭೂಮಿಗೆ ಸೇರಿದ ರೈತ ಅಯ್ಯಕಣ್ಣು ನೇತೃತ್ವದಲ್ಲಿ … Continued

ವೀಡಿಯೊ…; ಪಶ್ಚಿಮ ಬಂಗಾಳದ ರೈಲ್ವೇ ಕಚೇರಿಯಲ್ಲಿ ಕಂಪ್ಯೂಟರ್ ಬಳಸುತ್ತಿರುವ ʼಮಂಗʼ : ದಂಗಾದ ಇಂಟರ್ನೆಟ್ | ವೀಕ್ಷಿಸಿ

ಮನುಷ್ಯರು ಮತ್ತು ಮಂಗಗಳ ನಡುವೆ ಅನೇಕ ಸಾಮ್ಯತೆಗಳಿವೆ. ಈಗಿನ ಜಗತ್ತಿನಲ್ಲಿ, ಮಾನವರು ಕ್ರಮೇಣ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿರುವಾಗ, ಕೋತಿಗಳು ಸಹ ಪ್ರವೃತ್ತಿಯನ್ನು ಅನುಸರಿಸಲು ಪ್ರಯತ್ನಿಸುತ್ತಿವೆ. ಇದಕ್ಕೆ ಕಾಕತಾಳೀಯ ಎಂಬಂತೆ ಕಂಪ್ಯೂಟರ್ ಅನ್ನು ಬಳಸಲು ಪ್ರಯತ್ನಿಸುತ್ತಿರುವ ಮಂಗನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಕಿರು ವೀಡಿಯೊದಲ್ಲಿ ಕೋತಿ ಕಂಪ್ಯೂಟರ್ ಮುಂದೆ ಕುಳಿತು, ಪೇಪರ್‌ಗಳನ್ನು … Continued

ಹೊಸ ಕಾರಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ ದಕ್ಷಿಣ ಕೊರಿಯಾದ ರಾಯಭಾರಿ | ವೀಕ್ಷಿಸಿ

ನವದೆಹಲಿ: ಭಾರತದಲ್ಲಿನ ಕೊರಿಯನ್ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮದಲ್ಲಿ ಹೊಸ ವೀಡಿಯೊವನ್ನು ಪೋಸ್ಟ್ ಮಾಡಿದೆ. ರಾಯಭಾರಿಯ ಕಾರಿಗೆ ಭಾರತೀಯ ಸಂಪ್ರದಾಯದಂತೆ ಪೂಜೆ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹ್ಯುಂಡೈ ಜೆನೆಸಿಸ್ ಜಿವಿ 80 ಎಂಬ ಹೊಸ ಕಾರನ್ನು ರಾಯಭಾರಿಯ ಹೊಸ ವಾಹನವಾಗಿ ಗೊತ್ತುಪಡಿಸಲಾಗಿದೆ ಮತ್ತು ಈ ಕಾರಿಗೆ ಭಾರತದ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಲಾಯಿತು. ವೀಡಿಯೊವನ್ನು ಸೆಪ್ಟೆಂಬರ್ … Continued

ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ಎಐಎಡಿಎಂಕೆ

ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ನಂತರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆಗಿನ ತನ್ನ ಸಂಬಂಧವನ್ನು ಎಐಎಡಿಎಂಕೆ ಮುರಿದುಕೊಂಡಿದೆ. ಬಿಜೆಪಿಯು ಎಐಎಡಿಎಂಕೆಯ ಮಾಜಿ ನಾಯಕರ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡುತ್ತಿದೆ ಎಂದು ಅದು ಹೇಳಿದೆ. ಎಐಎಡಿಎಂಕೆಯ ಹಿರಿಯ ನಾಯಕರು ದೆಹಲಿಯಲ್ಲಿ ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರನ್ನು … Continued

ಐಫೋನ್ 15 ಖರೀದಿಸಿದರೆ ಆರು ತಿಂಗಳು ಫ್ರೀ ಪ್ಲಾನ್ ಘೋಷಿಸಿದ ರಿಲಯನ್ಸ್ ಜಿಯೋ…

ಹೊಸದಾಗಿ ಲಾಂಚ್ ಆಗಿರುವ ಆಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ. ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ 2,394 ರೂ.ಗಳ ಮೌಲ್ಯದ ಆರು ತಿಂಗಳ ಪ್ಲಾನ್ ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ … Continued

ಭಾರತ-ಕೆನಡಾ ಬಿಕ್ಕಟ್ಟು : ಕೆನಡಾ ಅಧಿಕಾರಿಗಳ ಆದೇಶ, ಭಾರತದ ರಾಜತಾಂತ್ರಿಕರ ಕೊಲ್ಲಲು ಕರೆ ನೀಡಿದ್ದ ಪೋಸ್ಟರ್‌ಗಳ ತೆರವು

ಕೆನಡಾದ ಸರ್ರೆಯ ಗುರುದ್ವಾರದ ಮುಂದೆ  ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವ ಬೆದರಿಕೆಯ ಬರಹ ಹೊಂದಿದ್ದ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಮೂಲಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ ನಂತರ ಭಾರತ-ಕೆನಡಾದ ಮಧ್ಯದ ಸಂಬಂಧಗಳು ಹದಗೆಡುತ್ತಿರುವ ಮಧ್ಯೆ ಸ್ಥಳೀಯ ಅಧಿಕಾರಿಗಳು ಸೂಚನೆಯಂತೆ ಈ ಬೆಳವಣಿಗೆ ಸಂಭವಿಸಿದೆ. … Continued

ಏಷ್ಯನ್ ಗೇಮ್ಸ್: ಮತ್ತೊಂದು ಚಿನ್ನದ ಪದಕ ಗೆದ್ದ ಭಾರತ

ಹ್ಯಾಂಗ್ ಝೂ : ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಚಿನ್ನ ಗೆದ್ದಿದೆ. ಭಾರತದ ಮಹಿಳಾ ಕ್ರಿಕೆಟ್‌ ತಂಡ ಶ್ರೀಲಂಕಾವನ್ನು ಸೋಲಿಸಿ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿತು. ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಉತ್ತಮ … Continued

ವಯನಾಡಿನಿಂದಲ್ಲ, ನನ್ನ ವಿರುದ್ಧ ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸಿ: ರಾಹುಲ್ ಗಾಂಧಿಗೆ ಸವಾಲು ಹಾಕಿದ ಓವೈಸಿ

ಹೈದರಾಬಾದ್‌ : ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಾಹುಲ್ ಗಾಂಧಿಗೆ ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ. ಭಾನುವಾರ (ಸೆಪ್ಟೆಂಬರ್ 24) ಹೈದರಾಬಾದಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಹೈದರಾಬಾದ್‌ನಿಂದ ಸ್ಪರ್ಧಿಸಿ ವಯನಾಡಿನಿಂದ ಅಲ್ಲ ಎಂದು ಅವರು ರಾಹುಲ್ ಗಾಂಧಿಯವರ ಕೇರಳದ ಲೋಕಸಭಾ ಕ್ಷೇತ್ರವನ್ನು ಉಲ್ಲೇಖಿಸಿ ಹೇಳಿದ್ದಾರೆ. ರಾಹುಲ್‌ ಗಾಂಧಿಗೆ ಬಹಿರಂಗ ಸವಾಲು … Continued

ಏಷ್ಯನ್ ಗೇಮ್ಸ್ 2023 ​; 10 ಮೀಟರ್ ಏರ್ ರೈಫಲ್ ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ಶೂಟರ್​ ತಂಡ

ನವದೆಹಲಿ: ಭಾರತದ ಪುರುಷರ 10 ಮೀಟರ್ ಏರ್ ರೈಫಲ್ ತಂಡವು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಗೆಲ್ಲುವ ಮೂಲಕ ವಿಶ್ವ ದಾಖಲೆ ಮುರಿಯುವ ಮೂಲಕ ರಾಷ್ಟ್ರಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ರುದ್ರಾಂಕ್ಷಾ ಬಾಳಾಸಾಹೇಬ ಪಾಟೀಲ, ದಿವ್ಯಾಂಶ ಸಿಂಗ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನು ಒಳಗೊಂಡ ತಂಡವು ಭಾರತದ … Continued