ಕಾಶ್ಮೀರ : ಎನ್‌ಕೌಂಟರ್‌ ವೇಳೆ 2 ಸೇನಾ ಅಧಿಕಾರಿಗಳು, ಓರ್ವ ಪೊಲೀಸ್‌ ಅಧಿಕಾರಿ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಕರ್ನಲ್, ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕದ ಮೇಜರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪಾಧೀಕ್ಷಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್‌ ಮುಜಾಮಿಲ್ ಭಟ್ ಅವರು ಗುಂಡಿನ ಚಕಮಕಿಯಲ್ಲಿ … Continued

ಉಜ್ವಲಾ ಯೋಜನೆಯಡಿ ದೇಶಾದ್ಯಂತ 75 ಲಕ್ಷ ಉಚಿತ ಎಲ್‌ಪಿಜಿ ಸಂಪರ್ಕ : ಕೇಂದ್ರ ಸರ್ಕಾರ ಒಪ್ಪಿಗೆ

ನವದೆಹಲಿ : ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಅಡಿ ಕೇಂದ್ರ ಸರ್ಕಾರವು ದೇಶಾದ್ಯಂತ 75 ಲಕ್ಷ ಉಚಿತ ಎಲ್‌ಪಿಜಿ ಸಂಪರ್ಕ ನೀಡಲು ಮುಂದಾಗಿದೆ. ಇದಕ್ಕಾಗಿ ತೈಲ ಮಾರಾಟ ಸಂಸ್ಥೆಗಳಿಗೆ 1,650 ಕೋಟಿ ರೂ.ಗಳ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ … Continued

ವಿಶೇಷ ಅಧಿವೇಶನಕ್ಕೆ ಮೊದಲು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಪ್ರಾರಂಭವಾಗುವ ಮೊದಲು ಸೋಮವಾರ ಸಂಜೆ ಸರ್ಕಾರವು ಸರ್ವಪಕ್ಷ ಸಭೆಯನ್ನು ನಡೆಸಲಿದೆ. ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಪ್ರಲ್ಹಾದ ಜೋಶಿ ಅವರು, ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ: ಈ ತಿಂಗಳ 18 ರಿಂದ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ, 17 ರಂದು ಸಂಜೆ 4:30 … Continued

ಕೆಟ್ಟು ನಿಂತಿದ್ದ ಬಸ್ಸಿಗೆ ಹಿಂದಿನಿಂದ ಗುದ್ದಿದ ಲಾರಿ : 11 ಮಂದಿ ಸಾವು, 12 ಮಂದಿಗೆ ಗಾಯ

ಭರತಪುರ: ರಾಜಸ್ಥಾನದ ಭರತಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಬಸ್ಸಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. ಬಸ್ ರಾಜಸ್ಥಾನದ ಪುಷ್ಕರ್‌ನಿಂದ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳುತ್ತಿದ್ದಾಗ ಇಂದು ಬುಧವಾರ ಮುಂಜಾನೆ 4:30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೇತುವೆ ಮೇಲೆ … Continued

17 ವೈದ್ಯರಿಂದ ಕಂಡುಹಿಡಿಯಲಾಗದ 4 ವರ್ಷದ ಮಗುವಿನ ನಿಗೂಢ ಕಾಯಿಲೆಯನ್ನು ಸರಿಯಾಗಿ ಪತ್ತೆಹಚ್ಚಿದ ಚಾಟ್ ಜಿಪಿಟಿ (ChatGPT)…!

17 ವೈದ್ಯರಿಂದ ಕಂಡುಹಿಡಿಯಲು ಸಾಧ್ಯವಾಗದ ಬಾಲಕನ ಕಾಯಿಲೆಯನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಚಾಟ್ ಜಿಪಿಟಿ (ChatGPT) ಕಂಡುಹಿಡಿದಿದೆ…! ತನ್ನ ಮಗನ ಕಾಯಿಲೆ ಪತ್ತೆಯಾಗದ ಕಾರಣ ಬಾಲಕನ ತಾಯಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಚಾಟ್ ಜಿಪಿಟಿ (ChatGPT) ಮೊರೆ ಹೋಗಿದ್ದು, ಅದರ ಮೂಲಕ ತಿಳಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕೋವಿಡ್‌-19 ಸಾಂಕ್ರಾಮಿಕದ ಉತ್ತುಂಗದಲ್ಲಿ, ಕರ್ಟ್ನಿಯ ಎಂಬ ಮಹಿಳೆಯ ನಾಲ್ಕು ವರ್ಷದ ಮಗ … Continued

ಕೇರಳದಲ್ಲಿ ನಿಪಾ ವೈರಸ್ ಪ್ರಕರಣಗಳು ದೃಢ : ಕೇಂದ್ರದಿಂದ ತಜ್ಞರ ತಂಡ ರವಾನೆ

ಕೋಝಿಕ್ಕೋಡ್‌ : ಕೋಝಿಕ್ಕೋಡ್‌ನಲ್ಲಿ ಇಬ್ಬರು ನಿಪಾಹ್ ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿದೆ. ಒಬ್ಬ ವ್ಯಕ್ತಿ ಸೆಪ್ಟೆಂಬರ್ 11 ರಂದು ಸಾವಿಗೀಡಾದರೆ, ಇನ್ನೊಬ್ಬರು ಆಗಸ್ಟ್ 30 ರಂದು ಮೃತಪಟ್ಟಿದ್ದಾರೆ. ಸೋಮವಾರ (ಸೆಪ್ಟೆಂಬರ್ 11) ಮೃತಪಟ್ಟ ವ್ಯಕ್ತಿಯ 9 ವರ್ಷದ ಮಗು ಮತ್ತು 24 ವರ್ಷದ … Continued

ಜಮ್ಮು-ಕಾಶ್ಮೀರ : ಭಯೋತ್ಪಾಕರ ಜೊತೆಗಿನ ಎನ್‌ಕೌಂಟರ್‌ ವೇಳೆ ತನ್ನ ಮೇಲ್ವಿಚಾರಕ ಸೈನಿಕನ ಪ್ರಾಣ ರಕ್ಷಣೆಗಾಗಿ ತನ್ನ ಪ್ರಾಣ ಅರ್ಪಿಸಿದ ಸೇನೆಯ ನಾಯಿ…!

ನವದೆಹಲಿ: ಒಬ್ಬ ಸೈನಿಕನು ಮಾಡಬೇಕೆಂದು ನಿರೀಕ್ಷಿಸುವ ಎಲ್ಲವನ್ನೂ ನಾಯಿ ಮಾಡಿದೆ, ಭಯೋತ್ಪಾದಕ ಶೋಧದ ಕಾರ್ಯಾಚರಣೆ ವೇಳೆ ಕೆಂಟ್ ಎಂಬ ಹೆಸರಿನ ಆರು ವರ್ಷದ ಹೆಣ್ಣು ನಾಯಿ ಭಯೋತ್ಪಾದಕರ ಗುಂಡಿನ ದಾಳಿಯಿಂದ ತನ್ನ ಹ್ಯಾಂಡ್ಲರನನ್ನು ಪಾರು ಮಾಡಿ ತಾನು ಪ್ರಾಣ ಅರ್ಪಿಸಿದೆ… ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ … Continued

ನೂತನ ಸಂಸತ್ ಭವನದ ಸಿಬ್ಬಂದಿಗೆ ಹೊಸ ಸಮವಸ್ತ್ರ

ನವದೆಹಲಿ : ಸೆಪ್ಟೆಂಬರ್ 18ರಿಂದ 22ರ ವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಇದೇ ವೇಳೆ ಸಿಬ್ಬಂದಿಯ ಸಮವಸ್ತ್ರ ಬದಲಾವಣೆಗೂ ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಸಣ್ಣ ಪೂಜೆಯ ಬಳಿಕ ನೂತನ ಸಂಸತ್ ಭವನಕ್ಕೆ ಔಪಚಾರಿಕ ಪ್ರವೇಶ ನಡೆಯಲಿದೆ. ನೂತನ ಸಂಸತ್‌ನಲ್ಲಿ ಹೊಸ … Continued

40% ಹಾಲಿ ಸಂಸದರ ಮೇಲೆ ಕ್ರಿಮಿನಲ್ ಪ್ರಕರಣ, 25% ಸಂಸದರ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣ : ಎಡಿಆರ್ ಡೇಟಾ ; ಯಾವ್ಯಾವ ಪಕ್ಷದಲ್ಲಿ ಪ್ರಮಾಣ ಎಷ್ಟೆಷ್ಟು..?

ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿಯಂತೆ ಸಂಸತ್ತಿನ ಉಭಯ ಸದನಗಳಲ್ಲಿ 40%ರಷ್ಟು ಹಾಲಿ ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಹೇಳಿಕೊಂಡಿದೆ. ಚುನಾವಣಾ ಸಂಬಂಧಿತ ಮಾಹಿತಿಯನ್ನು ವಿಶ್ಲೇಷಿಸುವ ಎನ್‌ಜಿಒ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ಅದರ ಅಸೋಸಿಯೇಷನ್ ನ್ಯಾಷನಲ್ ಎಲೆಕ್ಟೋರಲ್ ವಾಚ್ (NEW) ಈ ವರದಿಯನ್ನು … Continued

ವೀಡಿಯೊ | ನಿಮಗಾಗಿ ನಾವು ಬರುತ್ತಿದ್ದೇವೆ ; ಪ್ರಧಾನಿ ಮೋದಿ ಸೇರಿದಂತೆ ಉನ್ನತ ನಾಯಕರಿಗೆ ಖಲಿಸ್ತಾನಿ ಉಗ್ರರ ಬೆದರಿಕೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿರುದ್ಧ ನಿಷೇಧಿತ ಅಮೆರಿಕ ಮೂಲದ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್‌ಜೆ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಜೀವ ಬೆದರಿಕೆ ಹಾಕಿದ್ದಾನೆ. ಭಾನುವಾರ ಕೆನಡಾದಲ್ಲಿ 5,000-7,000 … Continued