ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ | ರಾಜಕೀಯ ವಿವಾದಕ್ಕೆ ಕಾರಣವಾದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ 5ನೇ ಸಾಲಿನಲ್ಲಿ ಆಸನ ವ್ಯವಸ್ಥೆ

ನವದೆಹಲಿ: ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ “ಐದನೇ ಸಾಲಿನಲ್ಲಿ ಆಸನ ವ್ಯವಸ್ಥೆ” ಮಾಡಿರುವುದು ರಾಜಕೀಯ ವಿವಾದಕ್ಕ ಕಾರಣವಾಗಿದೆ. ಹಾಗೂ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಸರ್ಕಾರ ಗೌರವ ಕೊಡುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ. ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಐದನೇ … Continued

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಹತ್ಯೆ : ರಾತ್ರಿ ಡ್ಯೂಟಿಗೆ ಹೋಗುವ ಮೊದಲು ಕೊನೆಯದಾಗಿ ಆಕೆ ಡೈರಿಯಲ್ಲಿ ಏನು ಬರೆದಿದ್ದರು ಎಂದು ಹೇಳಿದ ತಂದೆ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಡ್ಯೂಟಿಯಲ್ಲಿದ್ದಾಗ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯ ವಿದ್ಯಾರ್ಥಿನಿ ತನ್ನ ವೈಯಕ್ತಿಕ ಡೈರಿಯಲ್ಲಿ ಕೊನೆಯದಾಗಿ ಏನು ಬರೆದಿದ್ದಾರೆ ಎಂಬುದನ್ನು ಆಕೆಯ ತಂದೆ ಬಹಿರಂಗಪಡಿಸಿದ್ದಾರೆ. ಭಯಾನಕ ಘಟನೆಯ ದಿನ ರಾತ್ರಿ ಪಾಳಿಗೆ ಹೊರಡುವ ಮೊದಲು ವೈಯಕ್ತಿಕ ಡೈರಿಯಲ್ಲಿ ತನ್ನ ಮಗಳು ತನ್ನ ಜೀವನದಲ್ಲಿ ತಾನು … Continued

ಟ್ರೈನಿ ವೈದ್ಯರ ಮೇಲೆ ಅತ್ಯಾಚಾರ-ಕೊಲೆ ನಡೆದ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಪ್ರತಿಭಟನೆ ವೇಳೆ ಗುಂಪಿನಿಂದ ದಾಂಧಲೆ, ಹಿಂಸಾಚಾರ; 9 ಜನರ ಬಂಧನ

ಕೋಲ್ಕತ್ತಾ : ಕಳೆದ ವಾರ ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿಯ ಶವ ಪತ್ತೆಯಾದ ನಂತರ ಭುಗಿಲೆದ್ದ ಪ್ರತಿಭಟನೆ ವೇಳೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಕನಿಷ್ಠ ಒಂಬತ್ತು ಜನರನ್ನು ಬಂಧಿಸಲಾಗಿದೆ. ಗುರುವಾರ ಮಧ್ಯರಾತ್ರಿಯ ನಂತರ ಅಪರಿಚಿತ ದುಷ್ಕರ್ಮಿಗಳು ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ … Continued

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವಕ್ಕೆ ಬಿಜೆಪಿ ನಾಯಕಿ- ನಟಿ ಖುಷ್ಬು ರಾಜೀನಾಮೆ

ಚೆನ್ನೈ: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಖ್ಯಾತ ನಟಿ ಖುಷ್ಬು ಸುಂದರ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜೂನ್ 28 ರಿಂದ ಜಾರಿಗೆ ಬರುವಂತೆ ನಟಿ ಖುಷ್ಬು ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಇದು ಹಠಾತ್ ನಿರ್ಧಾರವಲ್ಲ. ನಾನು ಅದರ ಬಗ್ಗೆ ಸ್ವಲ್ಪ ಸಮಯ … Continued

ಜಾತ್ಯತೀತ ನಾಗರಿಕ ಸಂಹಿತೆ ಕಾಲದ ಅಗತ್ಯ : ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಬಲವಾಗಿ ಪ್ರತಿಪಾದಿಸಿದ ಪ್ರಧಾನಿ ಮೋದಿ

ನವದೆಹಲಿ : ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯದ ಬಗ್ಗೆ ಬಲವಾಗಿ ಪ್ರತಿಪಾದನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶವನ್ನು ವಿಭಜಿಸುವ ಕಾನೂನುಗಳಿಗೆ ಆಧುನಿಕ ಸಮಾಜದಲ್ಲಿ ಸ್ಥಾನವಿಲ್ಲ ಮತ್ತು ಅದನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ. “ಸುಪ್ರೀಂಕೋರ್ಟ್ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪದೇ ಪದೇ ಚರ್ಚೆಗಳನ್ನು ನಡೆಸಿದೆ, ಆದೇಶಗಳನ್ನು ನೀಡಿದೆ, … Continued

ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ರಾಹುಲ್ ನವೀನ ನೇಮಕ

ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ.) ಹಂಗಾಮಿ ಮುಖ್ಯಸ್ಥ ರಾಹುಲ್ ನವೀನ ಅವರನ್ನು ಈಗ ಪೂರ್ಣಾವಧಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಹೊರಡಿಸಿದ ಆದೇಶದಲ್ಲಿ ಆದಾಯ ತೆರಿಗೆ ಕೇಡರ್‌ನ 1993-ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ರಾಹುಲ್‌ ನವೀನ ಅವರನ್ನು “ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಇ.ಡಿ. ನಿರ್ದೇಶಕರ ಹುದ್ದೆ … Continued

ಪ್ಯಾರಿಸ್‌ ಒಲಿಂಪಿಕ್ಸ್‌ 2024 ; ಭಾರತದ ಮೇಲ್ಮನವಿ ಅರ್ಜಿ ವಜಾ; ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಇಲ್ಲ

ನವದೆಹಲಿ : 2024ರ ಒಲಿಂಪಿಕ್ಸ್‌ನಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (CAS) ವಜಾಗೊಳಿಸಿದೆ. ಕ್ರೀಡಾ ನ್ಯಾಯಮಂಡಳಿಯ ಹಂಗಾಮಿ ಪೀಠವು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. “2024 ರ ಆಗಸ್ಟ್ 7 ರಂದು ವಿನೇಶ್ ಫೋಗಟ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು … Continued

ವೀಡಿಯೊ | ಧೈರ್ಯ ಅಂದ್ರೆ ಇದಪ್ಪ..: ಪಿಸ್ತೂಲ್‌ ಹಿಡಿದು ಚಿನ್ನದ ಅಂಗಡಿ ಲೂಟಿಗೆ ನುಗ್ಗಿದ್ದ 4 ದರೋಡೆಕೋರರನ್ನು ಹೆದರಿಸಿದ ಒಬ್ಬನೇ ಒಬ್ಬ..!

ಮುಂಬೈ : ಬುಧವಾರ ಥಾಣೆ ನಗರದ ಆಭರಣ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ್ದ ನಾಲ್ವರು ಶಸ್ತ್ರ ಸಜ್ಜಿತ ದರೋಡೆಕೋರರನ್ನು ಕೆಚ್ಚೆದೆಯ ಅಂಗಡಿ ಮಾಲೀಕ ಎದುರಿಸಿ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಅಂಗಡಿಲ್ಲಿ ತಾವೊಬ್ಬರೇ ಇದ್ದರೂ ಹೆದರದೆ ಪಿಸ್ತೂಲು ಹಿಡಿದು ಬಂದಿದ್ದ ನಾಲ್ವರು ದರೋಡೆಕೋರರನ್ನು ಎದುರಿಸಿ ಅವರನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ದರೋಡೆಕೋರರು ಎರಡು ಮೋಟಾರ್ ಸೈಕಲ್‌ಗಳಲ್ಲಿ ಅಂಗಡಿಗೆ ಬಂದಿದ್ದರು. … Continued

542 ಕೆಜಿ ತೂಕ ಕಳೆದುಕೊಂಡ ಅತ್ಯಂತ ತೂಕದ ವ್ಯಕ್ತಿ ಖಾಲಿದ್ ಬಿನ್ ಮೊಹ್ಸೆನ್ ಶಾರಿ…!! ಅದು ಸಾಧ್ಯವಾಗಿದ್ದಾದರೂ ಹೇಗೆ..?

ವಿಶ್ವದಲ್ಲಿ ಜೀವಂತವಾಗಿರುವ ಅತ್ಯಂತ ತೂಕದ ವ್ಯಕ್ತಿ ಎಂದು ಕರೆಯಲ್ಪಡುತ್ತಿದ್ದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಎಂಬ ವ್ಯಕ್ತಿ ಈಗ ಬರೋಬ್ಬರಿ 542 ಕೆಜಿ ತೂಕ ಇಳಿಸಿಕೊಂಡಿದ್ದಾರೆ…! ಇದಕ್ಕಾಗಿ ಸೌದಿ ಅರೇಬಿಯಾದ ಮಾಜಿ ರಾಜ ಅಬ್ದುಲ್ಲಾ ಅವರಿಗೆ ಧನ್ಯವಾದಗಳು…. 2013 ರಲ್ಲಿ, 610 ಕೆಜಿಯಷ್ಟು ತೂಕವಿದ್ದ ಖಾಲಿದ್‌ ಅವರ ಜೀವಕ್ಕೆ ಅಪಾಯವಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ಮತ್ತು ಮೂರು … Continued

ವೀಡಿಯೊ..| ಎರಡು ದೈತ್ಯ ಸಿಂಹಗಳು Vs ಎರಡು ಸಾಕಿದ ನಾಯಿಗಳು : ಅವುಗಳ ಮಧ್ಯೆ ಮನೆಯ ಗೇಟ್ ಮಾತ್ರ…ಮುಂದಾಗಿದ್ದೇನು..?

ರಾತ್ರಿಯ ಸಮಯದಲ್ಲಿ ಎರಡು ಸಿಂಹಗಳು ಮತ್ತು ಎರಡು ಸಾಕು ನಾಯಿಗಳು ಮುಖಾಮುಖಿಯಾದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮನೆಯ ಒಂದು ಗೇಟ್ ಮಾತ್ರ ಅವುಗಳ ಮಧ್ಯೆ ಬೇರ್ಪಟ್ಟಿದೆ. ಸಿಂಹಗಳು ಆಕ್ರಮಣ ಮಾಡುವುದನ್ನು ಕೈಬಿಟ್ಟು ಅಲ್ಲಿಂದ ಹೊರಡುವ ಮೊದಲು ಒಂದು ನಿಮಿಷ ಘರ್ಷಣೆಗಳು ನಡೆದವು. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಯು ಗುಜರಾತಿನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ್‌ … Continued