ಅಯೋಧ್ಯೆಯ ʼಭಗವಾನ್‌ ರಾಮಲಲ್ಲಾʼನ ಚಿತ್ರ ಇರುವ ವಿಶ್ವದ ಮೊದಲ ಅಂಚೆ ಚೀಟಿ ಬಿಡುಗಡೆ ಮಾಡಿದ ಲಾವೋಸ್‌ ದೇಶ…!

ನವದೆಹಲಿ : ಅಯೋಧ್ಯೆಯ ಶ್ರೀರಾಮ ಲಲ್ಲಾ ಒಳಗೊಂಡ ಅಂಚೆ ಚೀಟಿಯನ್ನು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ (ಲಾವೊ ಪಿಡಿಆರ್) ಬಿಡುಗಡೆ ಮಾಡಿದ್ದು, ಹಿಂದೂ ದೇವರನ್ನು ಒಳಗೊಂಡ ಅಂಚೆಚೀಟಿ ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶವಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ ಅವರು ಲಾವೋಸ್‌ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು … Continued

ಪ್ಯಾರಿಸ್ ಒಲಿಂಪಿಕ್ಸ್ 2024 : ಭಾರತಕ್ಕೆ ಮೊದಲ ಪದಕ ಗೆದ್ದ ಶೂಟರ್‌ ಮನು ಭಾಕರ್‌

ಪ್ಯಾರಿಸ್‌ : ಭಾನುವಾರ (ಜುಲೈ 28) ಪ್ಯಾರಿಸ್‌ ಒಲಿಂಪಿಕ್ ನಲ್ಲಿ ಶೂಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಪ್ಯಾರಿಸ್‌ನ ಚಟೌರೊಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ಹರಿಯಾಣದ 22 ವರ್ಷ ವಯಸ್ಸಿನ ಮನು ಬಾಕರ್‌ ಅವರು ಮಹಿಳೆಯರ 10 ಮೀಟರ್ ಏರ್‌ ಪಿಸ್ತೂಲ್ ಫೈನಲ್ ನಲ್ಲಿ ಮೂರನೇ ಸ್ಥಾನ … Continued

ಸುಲ್ತಾನಪುರ ಸಂಸದ ನಿಶಾದ್‌ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮೇನಕಾ ಗಾಂಧಿ

ಲಕ್ನೋ : ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸುಲ್ತಾನಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಸಮಾಜವಾದಿ ಪಕ್ಷದ ಸಂಸದ ರಾಮ ಭುವಲ್‌ ನಿಶಾದ್‌ ಅವರ ಆಯ್ಕೆ ಸಿಂಧುತ್ವ ಪ್ರಶ್ನಿಸಿ ಬಿಜೆಪಿಯ ಮಾಜಿ ಸಂಸದೆ ಮೇನಕಾ ಗಾಂಧಿ ಅಲಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನಿಶಾದ್ ವಿರುದ್ಧ 43,174 ಮತಗಳ ಅಂತರದಿಂದ ಸೋತ ಮೇನಕಾ ಗಾಂಧಿ ಅವರು ಶನಿವಾರ ನ್ಯಾಯಾಲಯದ ನೋಂದಣಿಗೆ ಚುನಾವಣಾ … Continued

ದೆಹಲಿಯ ಐಎಎಸ್ ಕೋಚಿಂಗ್ ಸೆಂಟರ್‌ ನೆಲಮಾಳಿಗೆಯಲ್ಲಿ ನೀರು ನುಗ್ಗಿ 3 ಯುಪಿಎಸ್‌ ಸಿ ವಿದ್ಯಾರ್ಥಿಗಳು ಸಾವು

ನವದೆಹಲಿ : ಪಶ್ಚಿಮ ದಿಲ್ಲಿಯ ಜನಪ್ರಿಯ ಕೋಚಿಂಗ್‌ ಸೆಂಟರ್‌ನ ನೆಲಮಾಳಿಗೆಯಲ್ಲಿ ಹಠಾತ್‌ ನೀರು ನುಗ್ಗಿದ ಪರಿಣಾಮ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರ ನಗರದ ರಾವ್ ಅವರ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯು ಶನಿವಾರ ಸಂಪೂರ್ಣವಾಗಿ ಜಲಾವೃತಗೊಂಡಿರುವುದನ್ನು ದೃಶ್ಯಗಳು ತೋರಿಸಿವೆ. ಶನಿವಾರ ರಾತ್ರಿ 7:19 ಕ್ಕೆ … Continued

ಒಂಬತ್ತು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ; ಮೈಸೂರಿನ ವಿಜಯಶಂಕರ ಮೇಘಾಲಯದ ನೂತನ ರಾಜ್ಯಪಾಲ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತಡರಾತ್ರಿ ಒಂಬತ್ತು ರಾಜ್ಯಗಳಿಗೆ ಗವರ್ನರ್‌ಗಳನ್ನು ನೇಮಿಸಿದ್ದಾರೆ. ಅವರ ನೇಮಕಾತಿಯ ದಿನಾಂಕಗಳು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುತ್ತವೆ ಎಂದು ಹೇಳಿದ್ದಾರೆ. ಮೈಸೂರಿನ ಮಾಜಿ ಲೋಕಸಭಾ ಸದಸ್ಯ ಸಿ.ಎಚ್. ವಿಜಯಶಂಕರ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅವರು ಹುಣಸೂರು ಕ್ಷೇತ್ರದ ಶಾಸಕ ಹಾಗೂ ಮೈಸೂರಿನ ಸಂಸದರಾಗಿಯೂ ಸೇವೆ … Continued

ನೀತಿ ಆಯೋಗದ ಸಭೆಯಲ್ಲಿ ಮಾತನಾಡುವಾಗ ನನ್ನ ಮೈಕ್‌ ಮ್ಯೂಟ್‌ ಎಂದು ಮಮತಾ ಆರೋಪ ; ಅದು ಸುಳ್ಳು ಎಂದ ಪಿಐಬಿ ಫ್ಯಾಕ್ಟ್‌ ಚೆಕ್‌

ನವದೆಹಲಿ: ಶನಿವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನೀಡಿಲ್ಲ ಹಾಗೂ ತಾನು ಮಾತನಾಡುವಾಗ ಮೈಕ್‌ ಸ್ವಿಚ್‌ ಆಫ್‌ ಮಾಡಲಾಗಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿರುವ ಆರೋಪ ಸುಳ್ಳು ಎಂದು ಪಿಐಬಿ ಫ್ಯಾಕ್ಟ್‌ ಚೆಕ್‌ (PIB Fact Check) ಹೇಳಿದೆ. ಪಿಐಬಿ … Continued

ಪೊಲೀಸರ ಕಂಡು ಪೊಲೀಸರೇ ಪರಾರಿ…! ಪೊಲೀಸರಿಂದ ಪೊಲೀಸರ ಬಂಧನ…!!

ವಾರಾಣಸಿ : ಬಿಹಾರದ ಗಡಿಯಲ್ಲಿ ಟ್ರಕ್ ಚಾಲಕರಿಂದ ಅಕ್ರಮವಾಗಿ ಹಣ ಸುಲಿಗೆ ವಿರುದ್ಧದ ಬೃಹತ್ ಕಾರ್ಯಾಚರಣೆಯಲ್ಲಿ, ಉತ್ತರ ಪ್ರದೇಶ ಸರ್ಕಾರ ಗುರುವಾರ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 18 ಜನರನ್ನು ಬಂಧಿಸಿದ್ದು, ಮೂವರು ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ. ಎಡಿಜಿ ವಾರಾಣಸಿ ಮತ್ತು ಡಿಐಜಿ ಅಜಂಗಢ್ ನೇತೃತ್ವದ ಜಂಟಿ ತಂಡಗಳು ಬಲ್ಲಿಯಾದಲ್ಲಿನ ನರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ … Continued

ನೀತಿ ಆಯೋಗದ ಸಭೆಗೆ ವಿಪಕ್ಷಗಳ 7 ಸಿಎಂಗಳು ಗೈರು : ಅಸಮಾಧಾನದಿಂದ ಅರ್ಧದಲ್ಲೇ ಎದ್ದು ಹೋದ ಮಮತಾ ಬ್ಯಾನರ್ಜಿ

ನವದೆಹಲಿ : ಇಂದಿನಿಂದ(ಜುಲೈ 27) ನಡೆಯುತ್ತಿರುವ ನೀತಿ ಆಯೋಗದ ೯ನೇ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ತಾರತಮ್ಯದ ಆರೋಪ ಹೊರಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಭೆಯಿಂದ ಅರ್ಧದಲ್ಲೇ ಎದ್ದು ಹೊರಬಂದಿದ್ದಾರೆ. ನನಗೆ ಮಾತನಾಡಲು ಸಮಯ ನೀಡಲಿಲ್ಲ ಹಾಗೂ ನನ್ನ ಮೈಕ್ ಅನ್ನು ಆಫ್ ಮಾಡಲಾಯಿತು ಎಂದು ಸಭೆಯಿಂದ ಹೊರಬಂದ ನಂತರ … Continued

ಶಿರೂರು ಗುಡ್ಡ ಕುಸಿತ | ನದಿಯಲ್ಲಿ ಟ್ರಕ್ ಇರುವಿಕೆ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ತಜ್ಞ ಕಂಪನಿ; ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಆಗಮನ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರುಬಳಿ ಗುಡ್ಡ ಕುಸಿತದ ದುರಂತದಲ್ಲಿ ಗಂಗಾವಳಿ ನದಿ ನೀರಿನಲ್ಲಿ ಮಣ್ಣಿನ ಅಡಿ ಸಿಲುಕಿರುವ ಕೇರಳದ ಲಾರಿ, ಮತ್ತಿತರ ವಾಹನಗಳು ಮತ್ತು ನಾಪತ್ತೆಯಾದವರ ಮೂವರ ಪತ್ತೆಗೆ ನದಿ ನೀರಿನಲ್ಲಿ ಶೋಧ ಕಾರ್ಯಾಚರಣೆ 12 ನೇ ದಿನವೂ ಮುಂದುವರಿದಿದೆ. ಪತ್ತೆಗಾಗಿ ದೆಹಲಿಯ ಕ್ವಿಕ್‌ಪೇ ಪ್ರೈವೇಟ್ ಲಿಮಿಟೆಡ್‌ ನಡೆಸಿದ ದ್ರೋಣ್‌ … Continued

ಜೈಲಿನಿಂದ ಹೊರಬಂದ ನಂತರ ಬೆಂಬಲಿಗರೊಂದಿಗೆ ಮೆಗಾ ರ್‍ಯಾಲಿ ನಡೆಸಿದ ಗ್ಯಾಂಗ್‌ಸ್ಟರ್‌ : ಮತ್ತೆ ಬಂಧಿಸಿದ ಪೊಲೀಸರು

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನ ಕುಖ್ಯಾತ ಗ್ಯಾಂಗ್‌ಸ್ಟರ್‌ ನನ್ನು ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಬೆತೆಲ್ ನಗರದಿಂದ ಅಂಬೇಡ್ಕರ ಚೌಕದ ವರೆಗೆ ಬೆಂಬಲಗರೊಂದಿಗೆ ಮೆಗಾ ರ್ಯಾಲಿ ನಡೆಸಿದ ವೀಡಿಯೊ ವೈರಲ್ ಆದ ನಂತರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಜುಲೈ 23 ರಂದು, ಗ್ಯಾಂಗ್‌ಸ್ಟರ್‌ ಹರ್ಷದ್ ಪಾಟಣಕರ್ ಜೈಲಿನಿಂದ ಬಿಡುಗಡೆಯಾದ … Continued