ಯುಪಿಎಸ್‌ಸಿ ಅಧ್ಯಕ್ಷ ಮನೋಜ ಸೋನಿ ರಾಜೀನಾಮೆ

ನವದೆಹಲಿ; ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಅಧ್ಯಕ್ಷ ಮನೋಜ ಸೋನಿ ಅವರು ಮೇ 2029 ರಲ್ಲಿ ತಮ್ಮ ಅಧಿಕಾರಾವಧಿಯು ಮುಕ್ತಾಯಗೊಳ್ಳುವ ಮೊದಲು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರಸುತ್ತಲಿನ ವಿವಾದಗಳು ಮತ್ತು ಆರೋಪಗಳಿಗೂ ಅವರ ರಾಜೀನಾಮೆಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು … Continued

ಅಂಚೆ ಇಲಾಖೆಯಿಂದ 44,228 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಎಸ್‌ ಎಸ್‌ ಎಲ್‌ ಸಿ ಆದವರೂ ಅರ್ಜಿ ಸಲ್ಲಿಸಬಹುದು…

ದೇಶದ ಅತಿದೊಡ್ಡ ಪೋಸ್ಟಲ್ ನೆಟ್‌ವರ್ಕ್ ಸೇವೆಯಾದ ಇಂಡಿಯಾ ಪೋಸ್ಟ್ (sIndia Post), ಗ್ರಾಮೀಣ ಡಾಕ್ ಸೇವಕ್ (Gramin Dak Sevak) 44,228 ಖಾಲಿ ಹುದ್ದೆಗಳ ನೇಮಕಾತಿಯನ್ನು ಅಧಿಸೂಚನೆಯಲ್ಲಿ ಹೊರಡಿಸಿದೆ. ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ ಹಾಗೂ ಡಾಕ್‌ ಸೇವಕ್‌ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. … Continued

ಕೆಲವರು ʼಸೂಪರ್‌ ಮ್ಯಾನ್‌ʼ ನಂತರ ‘ಭಗವಾನ’, ‘ವಿಶ್ವರೂಪಿ’ ಆಗಲು ಬಯಸ್ತಾರೆ ; ಮೋಹನ ಭಾಗವತ-ಇದು ಮೋದಿ ಮೇಲೆ ಪರೋಕ್ಷ ದಾಳಿ ಎಂದ ಕಾಂಗ್ರೆಸ್

ಗುಮ್ಲಾ : “ಸೂಪರ್‌ಮ್ಯಾನ್” ಆಗಲು ಗುರಿ ಹೊಂದಿದ್ದಾರೆ, ನಂತರ “ದೇವತೆ” (ದೇವರು) “ಭಗವಾನ ” ಮತ್ತು “ವಿಶ್ವರೂಪ” (ಸರ್ವವ್ಯಾಪಿ) ಆಗಲು ಸಹ ಬಯಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ ಭಾಗವತ ಹೇಳಿದ್ದಾರೆ. ಜಾರ್ಖಂಡ್‌ನ ಗುಮ್ಲಾದಲ್ಲಿ ಆರ್‌ಎಸ್‌ಎಸ್ ಸದಸ್ಯ ಅಶೋಕ ಭಗತ್ ನಡೆಸುತ್ತಿರುವ ಲಾಭರಹಿತ ಸಂಸ್ಥೆ ವಿಕಾಸ ಭಾರತಿ ಗುರುವಾರ (ಜುಲೈ 18) … Continued

ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ; ನಾಲ್ವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಗುರುವಾರ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ನ ಹಲವು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಹಾಗೂ ೨೦ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ದಿಬ್ರುಗಢಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಕೆಲವು ಬೋಗಿಗಳು ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಹಳಿತಪ್ಪಿದವು. ಹಿರಿಯ ರೈಲ್ವೇ ಮತ್ತು ಸ್ಥಳೀಯ … Continued

ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

ಮುಂಬೈ: ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ಅವರ ತಾಯಿ ಮನೋರಮಾ ಖೇಡ್ಕರ ಅವರು ಗ್ರಾಮಸ್ಥರ ಗುಂಪಿಗೆ ಬಂದೂಕು ತೋರಿಸಿ ಬೆದರಿಕೆ ಹಾಕುತ್ತಿರುವ ವೀಡಿಯೊಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಇಂದು, ಗುರುವಾರ (ಜುಲೈ ೧೮) ಬೆಳಿಗ್ಗೆ ಆಕೆಯನ್ನು ಬಂಧಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಹಲವು ದಿನಗಳಿಂದ … Continued

ವೀಡಿಯೊ..| ಏರ್ ಇಂಡಿಯಾದ ₹ 22,000 ಉದ್ಯೋಗಕ್ಕೆ 25 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ; ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತದ ಭೀತಿ

ಮುಂಬೈ : ಏರ್ ಇಂಡಿಯಾ ಸಂಸ್ಥೆಯು ಏರ್‌ಪೋರ್ಟ್ ಲೋಡರ್ ಕೆಲಸಕ್ಕಾಗಿ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿದ ಅಪಾಯದ ಭೀತಿ ಸೃಷ್ಟಿಸಿತ್ತು. 2,216 ಹುದ್ದೆಗಳಿಗೆ 25 ಸಾವಿರಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಹಾಜರಾಗಿದ್ದರಿಂದ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿರೀಕ್ಷೆ ಮಾಡದೇ ಇದ್ದ ಏರ್ ಇಂಡಿಯಾ ಸಿಬ್ಬಂದಿ, ಜನಜಂಗುಳಿಯನ್ನು ನಿಯಂತ್ರಿಸಲು ಪರದಾಡಬೇಕಾಯಿತು. … Continued

ಪ್ಯಾರಿಸ್ ಒಲಿಂಪಿಕ್ಸ್ 2024 : ಭಾರತದ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ ; ಅಭಾ ಖತುವಾಗೆ ಇಲ್ಲ ಅವಕಾಶ

ನವದೆಹಲಿ: ಜುಲೈ 26 ರಿಂದ ಪ್ರಾರಂಭವಾಗುವ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) 117 ಕ್ರೀಡಾಪಟುಗಳು ಮತ್ತು 140 ಸಹಾಯಕ ಸಿಬ್ಬಂದಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 140 ಸಹಾಯಕ ಸಿಬ್ಬಂದಿಗಳಲ್ಲಿ 72 ಸದಸ್ಯರನ್ನು ಸರ್ಕಾರದ ವೆಚ್ಚದಲ್ಲಿ ಅನುಮೋದಿಸಲಾಗಿದೆ. ವಿಶ್ವ ಶ್ರೇಯಾಂಕದ ಮೂಲಕ ಗೇಮ್ಸ್‌ಗೆ ಅರ್ಹತೆ ಪಡೆದ ಶಾಟ್‌ಪುಟ್ ಆಟಗಾರ್ತಿ ಅಭಾ ಖತುವಾ … Continued

ಕ್ಷಮಿಸಿ..: ಕಳ್ಳತನ ಮಾಡಿದ್ದು ಖ್ಯಾತ ಸಾಹಿತಿ ಮನೆ ಎಂದು ಗೊತ್ತಾಗಿ ಕದ್ದ ವಸ್ತು ವಾಪಸ್‌ ತಂದಿಟ್ಟು ಪತ್ರ ಬರೆದು ಗೋಡೆಗೆ ಅಂಟಿಸಿ ಹೋದ ಕಳ್ಳ…!

ರಾಯಗಢ : ಅಸಾಮಾನ್ಯ ಘಟನೆಯೊಂದರಲ್ಲಿ ತಾನು ಕಳುವು ಮಾಡಿದ್ದು ಖ್ಯಾತ ಮರಾಠಿ ಬರಹಗಾರನ ಮನೆ ಎಂದು ಗೊತ್ತಾದ ನಂತರ ಕಳ್ಳನೊಬ್ಬ ತಾನು ಕದ್ದ ಎಲ್ಲ ವಸ್ತುಗಳನ್ನು ವಾಪಸ್ ತಂದಿಟ್ಟು, ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು ಗೋಡೆಗೆ ಪತ್ರವೊಂದನ್ನು ಅಂಟಿಸಿ ಹೋದ ಅಪರೂಪದ ಘಟನೆಯೊಂದು ರಾಯಗಡ ಜಿಲ್ಲೆಯ ನೇರಲ್ ಎಂಬಲ್ಲಿ ನಡೆದಿದೆ. ಈ ಕಳ್ಳ ಕಳುವು ಮಾಡಿದ … Continued

ಭೋಜಶಾಲಾ ಸಂಕೀರ್ಣ ನಿರ್ಮಾಣದಲ್ಲಿ ಹಿಂದಿನ ದೇಗುಲಗಳ ಸಾಮಗ್ರಿ ಬಳಕೆ: ಮಧ್ಯಪ್ರದೇಶ ಹೈಕೋರ್ಟ್‌ಗೆ ಎಎಸ್ಐ ಮಾಹಿತಿ

ಭೋಪಾಲ್‌ : ಹಳೆಯ ದೇಗುಲಗಳ ಸಾಮಗ್ರಿಗಳಿಂದ ಪ್ರಸ್ತುತ ಅಸ್ತಿತ್ವದಲ್ಲಿರುವ ಭೋಜಶಾಲಾ ಸಂಕೀರ್ಣ ನಿರ್ಮಾಣವಾಗಿದೆ ಎಂಬುದನ್ನು ತನ್ನ ತನಿಖೆ ಮತ್ತು ಅಧ್ಯಯನ ತಿಳಿಸುತ್ತದೆ ಎಂಬುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮಧ್ಯಪ್ರದೇಶ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ ದೇಗುಲ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ … Continued

ಜಮ್ಮು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಚಕಮಕಿ; ನಾಲ್ವರು ಯೋಧರು ಹುತಾತ್ಮ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೋಮವಾರ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಮೇಜರ್ ಸೇರಿದಂತೆ ನಾಲ್ವರು ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯನ್ನು ದೋಡಾದ ದೇಸಾ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು. ದೇಸಾ … Continued