ಭಾರತದಲ್ಲಿ 26 ಸಾವಿರ ದಾಟಿದ ದಿನವೊಂದರ ಕೊರೊನಾ ಸೋಂಕು..!

ನವ ದೆಹಲಿ: ದೇಶದಲ್ಲಿ ದಿನದಿನವೂ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24ಗಂಟೆಯಲ್ಲಿ 26,291 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. 2020ರ ಡಿಸೆಂಬರ್​ 20ರಂದು 26,624 ಕೊರೊನಾ ಸೋಂಕಿನ ಕೇಸ್​ಗಳು ದಾಖಲಾಗಿದ್ದವು. ಭಾನುವಾರ 25,320 ಪ್ರಕರಣಗಳು ದಾಖಲಾಗಿದ್ದವು. ಸೋಮವಾರ ಸುಮಾರು … Continued

ನಟ ಕಮಲ್ ಹಾಸನ್ ಕಾರಿನ ಮೇಲೆ ದಾಳಿಗೆ ಯತ್ನ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ತುರುಸು ಪಡೆಯುತ್ತಿರುವಾಗಲೇ ಮಕ್ಕಳ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಹಾಗೂ ಖ್ಯಾತ ನಟ ಕಮಲ್ ಹಾಸನ್ ಅವರ ಕಾರಿನ ಮೇಲೆ ಅಪರಿಚಿತರು ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಗಾಂಧಿ ರಸ್ತೆಯಲ್ಲಿ ಕಮಲ್ ಹಾಸನ್ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಅಪರಿಚಿತರು ಕಾರಿನ ಗ್ಲಾಸ್ ಒಡೆಯಲು … Continued

ಮಮತಾಗೆ ಗಾಯ: ದಾಳಿ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿದೆ ಎಂಬ ವರದಿಯನ್ನು ಭಾರತದ ಚುನಾವಣಾ ಆಯೋಗವು ತಳ್ಳಿಹಾಕಿದೆ. ಆಯೋಗ ನೇಮಕ ಮಾಡಿದ್ದ ಪಶ್ಚಿಮ ಬಂಗಾಳದ ಚುನಾವಣಾ ವೀಕ್ಷಕರು ಮತ್ತು ಮುಖ್ಯ ಕಾರ್ಯದರ್ಶಿಯ ವರದಿ ಆಧರಿಸಿ ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ. ಬುಧವಾರ ಸಂಜೆ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ … Continued

ಮಹಾರಾಷ್ಟ್ರ: 16 ಸಾವಿರ ದಾಟಿದ ದಿನವೊಂದರ ಕೊವಿಡ್‌ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ (ಮಾರ್ಚ್ 14) 16,620 ಹೊಸ ಕೊವಿಡ್‌ -19 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 16,000 ಕೊವಿಡ್‌ -19 ಪ್ರಕರಣಗಳು ದಾಖಲಾಗಿವೆ . ಮಾರ್ಚ್ 12 ರ ಶುಕ್ರವಾರ ಈ ವರ್ಷದ ಹಿಂದಿನ ಏಕದಿನದ ಗರಿಷ್ಠ ಏರಿಕೆ 15,817 ಆಗಿತ್ತು. ದಿನದಲ್ಲಿ 50 ಕೊವಿಡ್‌-19 … Continued

ನಾನು ಗಾಯಗೊಂಡ ಹುಲಿ: ಪ್ರಚಾರ ಸಭೆಯಲ್ಲಿ ಗುಡುಗಿದ ಮಮತಾ

ಕೊಲ್ಕತ್ತಾ: ನಾನು ಗಾಯಗೊಂಡ ಹುಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಭಾನುವಾರ ಕೊಲ್ಕತ್ತಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಗಾಲಿಕುರ್ಚಿಯಲ್ಲಿಯೇ ಕುಳಿತು ಪ್ರಚಾರ ಭಾಷಣ ಮಾಡಿದ ಅವರು, ಯಾವುದೇ ಸಂಚು ನಡೆದರೂ ನಾನು ತಲೆ ಬಾಗುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಗಾಯಗಳಾಗಿವೆ. ಆರೋಗ್ಯ ಸರಿಯಿಲ್ಲ. ಆದರೆ ನನ್ನ ಗುರಿ ಬದಲಾಗಿಲ್ಲ. 15 ದಿನಗಳ … Continued

ಪಶ್ಚಿಮ ಬಂಗಾಳ ಚುನಾವಣೆ: ಅಚ್ಚರಿ ನೀಡಿದ ಬಿಜೆಪಿ, ನಾಲ್ವರು ಸಂಸದರಿಗೆ ಟಿಕೆಟ್‌

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯು 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು , ಮೂವರು ಹಾಲಿ ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ. ದಕ್ಷಿಣ ಕೊಲ್ಕತ್ತಾದ ಟೋಲಿಗುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅರೂಪ್ ಬಿಸ್ವಾಸ್ ವಿರುದ್ಧ ಹಾಲಿ ಕೇಂದ್ರ ಸಚಿವ … Continued

ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ್ದಕ್ಕೆ ತಲೆಬೋಳಿಸಿಕೊಂಡ ಕೇರಳ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ…!

ತಿರುವನಂತಪುರಂ: ಕೇರಳದಲ್ಲಿ ವಿಕ್ಷಿಪ್ತ ಘಟನೆ ನಡೆದಿದೆ. ಅದೂ ಕೇರಳ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಿಂದ. ಕೇರಳದ ವಿದಾನಸಭೆಗೆ ಪಕ್ಷವು ಅವರಿಗೆ ಟಿಕೆಟ್‌ ನಿರಾಕಿರಿಸಿದ್ದಕ್ಕೆ ಸಿಟ್ಟುಗೊಂಡಿರುವ ಅವರು, ಇದಕ್ಕೆ ಪ್ರತಿಭಟನಾರ್ಥವಾಗಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ…! ಕೇರಳ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಲತಿಕಾ ಸುಭಾಷ್ ತಿರುವನಂತಪುರಂನ ತಮಗೆ ಟಿಕೆಟ್‌ ನೀಡದ ಕಾರಣ ಪಕ್ಷದ ಕಚೇರಿಯ ಮುಂದೆ ತಲೆ ಬೋಳಿಸಿಕೊಂಡಿದ್ದಾರೆ, ಅಷ್ಟೇ … Continued

ಇಂದಿನಿಂದ ಎರಡು ದಿನಗಳ ಬ್ಯಾಂಕ್‌ ಮುಷ್ಕರ, ೧೦ ಲಕ್ಷ ಸಿಬ್ಬಂದಿ ಪಾಲ್ಗೊಳ್ಳುವ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ಬ್ಯಾಂಕ್‌ಗಳ ಖಾಸಗೀಕರಣ ಹಾಗೂ ವಿಲೀನಗೊಳಿಸುವುದನ್ನು ವಿರೋಧಿಸಿ ಮಾ.೧೫ ಹಾಗೂ ೧೬ರಂದು ಎರಡು ದಿನಗಳ ಕಾಲ ಬ್ಯಾಂಕ್‌ ಮುಷ್ಕರ ನಡೆಯಲಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸೋಮವಾರ ಮತ್ತು ಮಂಗಳವಾರ ಬ್ಯಾಂಕಿಂಗ್ ಸೇವೆಗಳ ಮೇಲೆ ವ್ಯತ್ಯಾಸವಾಗಬಹುದಾಗಿದೆ. ಮಾ.೧೩ ಹಾಗೂ ೧೪ರಂದು ಏರಡನೇ ಶನಿವಾರ ಹಾಗೂ … Continued

ಸಾರಿಗೆ ಸಚಿವಾಲಯದ  ಹೊಸ ಯೋಜನೆ: ಪ್ರವಾಸಿ ವಾಹನಗಳಿಗೆ 30 ದಿನದಲ್ಲಿ ಪರವಾನಿಗೆ

ನವ ದೆಹಲಿ: ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸಿ ಆಪರೇಟರ್ ಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಿಗೆ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ಯೋಜನೆ ಪ್ರಕಟಿಸಿದೆ. ಅಸ್ತಿತ್ವದಲ್ಲಿರುವ ಪರವಾನಿಗೆಗಳು ಕೂಡ ಮುಂದುವರೆಯಲಿವೆ. ದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಪ್ರವಾಸಿ ಆಪರೇಟರ್ ಗಳಿಗೆ … Continued

ರೂಪಾಂತರಿ ಕೊರೊನಾ ಬಾವಲಿಗಳಿಂದ ಬಂದಿರುವ ಸಾಧ್ಯತೆ: ಹೊಸ ಅಧ್ಯಯನದಲ್ಲಿ ಬೆಳಕಿಗೆ

ಕೊರೊನಾ ರೂಪಾಂತರಿ ವೈರಸ್‌ ಬಾವಲಿಗಳಿಂದ ಮನುಷ್ಯರಿಗೆ ಬಂದಿದೆ ಎಂದು ಹೊಸ ಅಧ್ಯಯನವೊಂದು ವರದಿ ಮಾಡಿದೆ. ರೂಪಾಂತರಿ ಸೋಂಕು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಮೊದಲು ಹಾರುವ ಸಸ್ತನಿ ಬಾವಲಿಗಳಲ್ಲಿ ಮೊದಲು ವಿಕಸನಗೊಂಡಿದೆ. ಎಂದು ಪಿಎಲ್‌ಒಎಸ್‌ ಜೀವಶಾಸ್ತ್ರ ಜರ್ನಲ್‌ನಲ್ಲಿ ಪ್ರಕಟಗೊಂಡ ಸಾರ್ಸ್‌-ಕೊವ್‌-೨ ಲೇಖನದಲ್ಲಿ ತಿಳಿಸಲಾಗಿದೆ. ಕೊರೊನಾ ಸೋಂಕಿನಲ್ಲಿ ಆರಂಭದ ೧೧ ತಿಂಗಳುಗಳಲ್ಲಿ ಅತೀ ಕಡಿಮೆ ಆನುವಂಶಿಕ ಬದಲಾವಣೆ … Continued