ವೇದಿಕೆ ಮೇಲೆಯೇ ಕಾಂಗ್ರೆಸ್ ಶಾಸಕಿ ಮೇಲೆ ಚಾಕುವಿನಿಂದ ಹಲ್ಲೆ

ರಾಜನಂದಗಾಂವ್: ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ಭಾನುವಾರ ಕಾಂಗ್ರೆಸ್ಸಿನ ಮಹಿಳಾ ಶಾಸಕಿ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ ನಂತರ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಖಿಲೇಶ್ವರ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಖುಜ್ಜಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕಿ ಚನ್ನಿ ಚಂದು ಸಾಹು ಅವರು ಸಾರ್ವಜನಿಕ … Continued

ಚಂದ್ರನ ಮೇಲೆ ಇಳಿಯುವ ಮೊದಲು ಚಂದ್ರನ ದಕ್ಷಿಣ ಧ್ರುವ ಭಾಗದ ಚಿತ್ರಗಳನ್ನು ಸೆರೆಹಿಡಿದ ʻಚಂದ್ರಯಾನ-3ʼ

ನವದೆಹಲಿ: ಚಂದ್ರಯಾನ-3ರ ಲ್ಯಾಂಡರ್ ತೆಗೆದ ಚಂದ್ರನ ಇತ್ತೀಚಿನ ಚಿತ್ರಗಳು ಅದರ ದೂರದ ಭಾಗದಲ್ಲಿ ಕೆಲವು ಪ್ರಮುಖ ಕುಳಿಗಳನ್ನು ಗುರುತಿಸಿವೆ. ಬುಧವಾರ ಸಂಜೆ ಇನ್ನೂ ಯಾರೂ ಅನ್ವೇಷಿಸದ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಐತಿಹಾಸಿಕ ಲ್ಯಾಂಡಿಂಗ್‌ಗೆ ಮುಂಚಿತವಾಗಿ ವಿಕ್ರಂ ಲ್ಯಾಂಡರ್ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಕಂಡುಹಿಡಿಯಲು ಸಹಾಯ ಮಾಡಲು ಕೆಲಸ ಮಾಡಿದ ಕ್ಯಾಮರಾದಿಂದ ಈ ಚಿತ್ರಗಳನ್ನು ತೆಗೆಯಲಾಗಿದೆ. … Continued

ಮುಂಬೈ ಸಭೆ ವೇಳೆ ʼಇಂಡಿಯಾʼ ಮೈತ್ರಿಕೂಟದ ಲೋಗೋ ಅನಾವರಣ

ಮುಂಬೈ: ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯುವ ವಿಪಕ್ಷಗಳ ಒಕ್ಕೂಟ-ಇಂಡಿಯಾದ ಸಭೆಯಲ್ಲಿ ಅದರ ಲೋಗೋವನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಹಣಕಾಸು ರಾಜಧಾನಿಯಾದ ಮುಂಬೈನಲ್ಲಿ ವಿಪಕ್ಷಗಳ ಮೈತ್ರಿಕೂಟದ ಮೂರನೇ ಸಭೆಯಲ್ಲಿ 26 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಸರಿಸುಮಾರು 80 ನಾಯಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಪ್ರಸ್ತುತ, … Continued

ಒಂದು ಹನಿ ಸಾರಾಯಿ ಮಾರಾಟ ಮಾಡದೆ ₹ 2,600 ಕೋಟಿ ಗಳಿಸಿದ ತೆಲಂಗಾಣ ಅಬಕಾರಿ ಇಲಾಖೆ…

ಹೈದರಾಬಾದ್: ತೆಲಂಗಾಣದಲ್ಲಿ ರಾಜ್ಯ ಅಬಕಾರಿ ಇಲಾಖೆ ಒಂದೇ ಒಂದು ಬಾಟಲಿ ಮದ್ಯ ಮಾರಾಟ ಮಾಡದೆ ₹ 2639 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. 2,620 ಮದ್ಯದಂಗಡಿಗಳ ಹಂಚಿಕೆಗಾಗಿ ಸುಮಾರು 1.32 ಲಕ್ಷ ಅರ್ಜಿಗಳಿಂದ ₹ 2 ಲಕ್ಷ ಹಿಂದಕ್ಕೆ ನೀಡದ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಸೋಮವಾರ ಜಿಲ್ಲಾವಾರು ಲಾಟರಿ ಎತ್ತುವ ಮೂಲಕ ಅಂಗಡಿಗಳನ್ನು ಮಾರಾಟ ಮಾಡಲಾಗುತ್ತದೆ. ಪರವಾನಗಿ … Continued

ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿಯಲಿರುವ ದಿನಾಂಕ -ಸಮಯ ಪ್ರಕಟಿಸಿದ ಇಸ್ರೋ

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಚಂದ್ರಯಾನ-3 ಆಗಸ್ಟ್ 23 ರ ಸಂಜೆ 06:04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ ಎಂದು ಭಾನುವಾರ ಮಾಹಿತಿ ನೀಡಿದೆ. “ಚಂದ್ರಯಾನ-3 ಆಗಸ್ಟ್ 23ರಂದು 18:04 ಗಂಟೆಗಳ IST ಸುಮಾರಿಗೆ ಚಂದ್ರನ ಮೇಲೆ ಇಳಿಯಲಿದೆ. ಶುಭಾಶಯಗಳು ಮತ್ತು ಸಕಾರಾತ್ಮಕತೆಗೆ ಧನ್ಯವಾದಗಳು! ಒಟ್ಟಿಗೆ ಪ್ರಯಾಣವನ್ನು ಅನುಭವಿಸುವುದನ್ನು ಮುಂದುವರಿಸೋಣ… ಎಂದು … Continued

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ರಚನೆ: ಚುನಾವಣಾ ವರ್ಷದಲ್ಲಿ ಸಚಿನ್ ಪೈಲಟ್‌, ತರೂರ್‌ ಸೇರಿ ಕೆಲವರ ಸೇರ್ಪಡೆ

ನವದೆಹಲಿ: ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಐಕಾನ್ ರಾಜೀವ್ ಗಾಂಧಿ ಅವರ ಜನ್ಮದಿನದಂದು, ಕಾಂಗ್ರೆಸ್‌ ಪಕ್ಷವು ಇಂದು, ಭಾನುವಾರ ತನ್ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯನ್ನು ಪುನರ್ರಚಿಸಿದೆ. ಸಚಿನ್ ಪೈಲಟ್ ಮತ್ತು ಶಶಿ ತರೂರ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಸೇರ್ಪಡೆ ಮಾಡಲಾಗಿದೆ. ಸಚಿನ್ ಪೈಲಟ್, ಶಶಿ ತರೂರ್ (ಕಳೆದ ವರ್ಷ … Continued

ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ದೆಹಲಿ ಅಧಿಕಾರಿಯಿಂದ ಅತ್ಯಾಚಾರ ; ಗರ್ಭಪಾತ ಮಾತ್ರೆಗಳನ್ನು ನೀಡಿದ ಹೆಂಡತಿ : ಪ್ರಕರಣ ದಾಖಲು

ನವದೆಹಲಿ: 2020 ಮತ್ತು 2021ರ ನಡುವೆ ತನ್ನ ಸ್ನೇಹಿತನ ಮಗಳ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಕ್ಕಾಗಿ ಪೋಕ್ಸೊ ಕಾಯ್ದೆಯಡಿ ದೆಹಲಿ ಸರ್ಕಾರಿ ಅಧಿಕಾರಿಯ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹುದ್ದೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಈ ಅಪರಾಧದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆತನ … Continued

ವೀಡಿಯೊ…| ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಪಾದಕ್ಕೆರಗಿ ನಮಸ್ಕರಿಸಿದ ಸೂಪರ್‌ ಸ್ಟಾರ್‌ ರಜನಿಕಾಂತ

ಲಕ್ನೋ : ಸೂಪರ್‌ ಸ್ಟಾರ್‌ ನಟ ರಜನಿಕಾಂತ ಅವರು ಶನಿವಾರ (ಆಗಸ್ಟ್ 20 ) ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಆಗಿದ್ದಾರೆ. ರಜನಿಕಾಂತ ನಟನೆಯ ‘ಜೈಲರ್’ ಸಿನಿಮಾವನ್ನು ಯೋಗಿ ಆದಿತ್ಯನಾಥ ಅವರು ರಜನಿಕಾಂತ ಅವರ ಜೊತೆ ವೀಕ್ಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಭೇಟಿ ವೇಳೆ ಯೋಗಿ ಆದಿತ್ಯನಾಥ ಅವರ ಕಾಲಿಗೆ … Continued

ಕೊನೆಯ ಹಂತದ ಚಂದ್ರನ ಕಕ್ಷೆಯ ಕಾರ್ಯಾಚರಣೆ ಪೂರ್ಣಗೊಳಿಸಿದ ಚಂದ್ರಯಾನ-3 : ಈಗ ಚಂದ್ರನ ಮೇಲೆ ಇಳಿಯುವುದೊಂದೇ ಬಾಕಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳು ಬುಧವಾರ ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆ ಇಳಿಯುವ ನಿರ್ಣಾಯಕ ಹಂತದ ಚಂದ್ರಯಾನ-3 ರ ಎರಡನೇ ಮತ್ತು ಅಂತಿಮ ಡಿ-ಬೂಸ್ಟ್ ಕಾರ್ಯಾಚರಣೆ ಇಂದು, ಭಾನುವಾರ ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಳಿಸಿದೆ. ಡಿ-ಬೂಸ್ಟ್ ಕಾರ್ಯಾಚರಣೆ ವಿಕ್ರಂ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪದ 25 ಕಿಮೀ x 134 ಕಿಮೀ ಕಕ್ಷೆಯಲ್ಲಿ … Continued

ಲಡಾಖ್‌ ಬಳಿ ವಾಹನ ಕಮರಿಗೆ ಉರುಳಿ 9 ಸೇನಾ ಸಿಬ್ಬಂದಿ ಸಾವು

ಲಡಾಖ್‌: ಭಾರತೀಯ ಸೇನಾ ಸಿಬ್ಬಂದಿ ತೆರಳುತ್ತಿದ್ದ ವಾಹನವು ಲೇಹ್‌ ಸಮೀಪದಲ್ಲಿ ಅಪಘಾತಕ್ಕೀಡಾಗಿ 9 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಒಬ್ಬರಿಗೆ ಗಂಭೀರ ಗಾಯವಾಗಿದೆ. ಲೇಹ್‌ನಿಂದ ನ್ಯೋಮಾಗೆ ಬೆಂಗಾವಲು ಪಡೆಯ ಭಾಗವಾಗಿ ಚಲಿಸುತ್ತಿದ್ದ ಎಎಲ್‌ಎಸ್‌ ವಾಹನವು ಕಿಯಾರಿಯಿಂದ 7 ಕಿಮೀ ದೂರದಲ್ಲಿ ಸುಮಾರು ಸಂಜೆ 6:30 ಸುಮಾರಿಗೆ ಸ್ಕಿಡ್ ಆಗಿ ಕಂದಕದಲ್ಲಿ ಬಿದ್ದಿದೆ. ವಾಹನದಲ್ಲಿ 10 ಮಂದಿ … Continued