ತಮಿಳುನಾಡು ಚುನಾವಣೆ: ಡಿಎಂಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಏ.೬ರಂದು ನಡೆಯಲಿದ್ದು, ಡಿಎಂಕೆ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್, ತಾವು ಮತ್ತೊಮ್ಮೆ ಕೊಲತ್ತೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದಾರೆ. ಅವರ ಪುತ್ರ ಉದ್ಯಾನಿಧಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ … Continued

“ಆಂಟಿಲಿಯಾ ಬಳಿ ಸ್ಫೋಟಕ ತುಂಬಿದ್ದ ಎಸ್‌ಯುವಿ ಪತ್ತೆ : ಬೆದರಿಕೆ ಹೊಣೆ ಹೊತ್ತ ಸಂದೇಶದ ಟೆಲಿಗ್ರಾಮ್ ಚಾನೆಲ್ ನಿರ್ವಹಣೆಗೆ ಬಳಸಿದ ಶಂಕಿತ ಮೊಬೈಲ್ ವಶ

ಮುಖೇಶ್ ಅಂಬಾನಿ ಬಾಂಬ್ ಬೆದರಿಕೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ವಿಭಾಗವು ಜೈಲು ಅಧಿಕಾರಿಗಳನ್ನು ಸಂಪರ್ಕಿಸಿ   ಬೆದರಿಕೆಯ ಜವಾಬ್ದಾರಿ ಹೊತ್ತ ಟೆಲಿಗ್ರಾಮ್ ಚಾನೆಲ್ ನಿರ್ವಹಿಸಲು ಬಳಸಲಾಗಿದೆಯೆಂದು ಶಂಕಿಸಲಾಗಿರುವ ಮೊಬೈಲ್ ಫೋನ್ ಅನ್ನು ತಿಹಾರ್ ಜೈಲಿನಿಂದ ವಶಪಡಿಸಿಕೊಂಡಿದೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ಟೆಲಿಗ್ರಾಮ್ ಚಾನೆಲ್ ಮೂಲಕ ಜೈಶ್-ಉಲ್-ಹಿಂದ್ ಎಂಬ ಸಂಘಟನೆಯು ಕಳೆದ ತಿಂಗಳು … Continued

ಖಾಸಗೀಕರಣ-ವಿಲೀನಕ್ಕೆ ವಿರೋಧ: ಮಾರ್ಚ್ 15ರಿಂದ ಎರಡು ದಿನಗಳ ಬ್ಯಾಂಕ್‌ ಮುಷ್ಕರ,

ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳ ಖಾಸಗೀಕರಣಗೊಳಿಸುವ ತೀರ್ಮಾನ ವಿರೋಧಿಸಿ ಮಾರ್ಚ್ 15 ಹಾಗೂ 16ರಂದು ಹಲವಾರು ಬ್ಯಾಂಕ್ ಒಕ್ಕೂಟಗಳು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದು ಬ್ಯಾಂಕ್‌ ವ್ಯವಹಾರಗಳು ವ್ಯತ್ಯಯಗೊಳ್ಳುವ ಸಾದ್ಯತೆಯಿದೆ. ಎಸ್ ಬಿ ಐ ನೇತೃತ್ವದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಈ ಮುಷ್ಕರಕ್ಕೆ ಕರೆ ನೀಡಿದೆ. ಇತ್ತೀಚಿಗೆ ನಡೆದ ಸರ್ಕಾರ ಹಾಗೂ … Continued

ಹಿರೆನ್ ಸಾವಿನ ಪ್ರಕರಣ: ಪೊಲೀಸ್‌ ಅಧಿಕಾರಿ ವಾಝೆ ವರ್ಗ

ಮುಂಬೈ; ಮನ್ಸುಖ್ ಹಿರೆನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಅವರನ್ನು ನಗರ ಪೊಲೀಸರ ನಾಗರಿಕ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಈ ಕುರಿತು ವರದಿ ಮಾಡಿರುವ ಫ್ರಿ ಪ್ರೆಸ್‌ ಜರ್ನಲ್‌, ಪತಿಯ ಅನುಮಾನಾಸ್ಪದ ಸಾವಿನ ಬಗ್ಗೆ ಹಿರೆನ್ … Continued

ಬಿಎಸ್‌ಎನ್‌ಎಲ್ 2023-24ರಿಂದ ಲಾಭಕ್ಕೆ ಬರಬಹುದು: ಸಂಸದೀಯ ಸಮಿತಿ ವರದಿ

ನಷ್ಟದಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ 2023-24ರ ಆರ್ಥಿಕ ವರ್ಷದಿಂದ ಲಾಭಕ್ಕೆ ಬರಬಹುದು ಎಂದು ಸಂಸತ್ತಿನ ಸಮಿತಿ ವರದಿ ತಿಳಿಸಿದೆ. ಬಿಎಸ್‌ಎನಲ್ ಪುನರುಜ್ಜೀವನ ಯೋಜನೆಗಳು ಮತ್ತು ಕಾರ್ಯತಂತ್ರಗಳ ಹೊರತಾಗಿಯೂ ಅದು ಬೆಳವಣಿಗೆ ಸಾಧಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈಗಾಗಲೇ ಸಾರ್ವಜನಿಕ ವಲಯದ ಕಾರ್ಯಾಚರಣೆಯಲ್ಲಿ ಅದು ಲಾಭದಾಯಕ ಸ್ಥಿತಿಗೆ ಬಂದಿದೆ ಎಂದು ವರದಿ ಹೇಳಿದ್ದು, … Continued

`ಸಲಿಂಗಿ’ ಯುವತಿಗೆ ಒತ್ತಾಯದ ಮದುವೆ : ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ನವ ದೆಹಲಿ: ಸಲಿಂಗಿ ಯುವತಿ ನೆರವಿಗೆ ದೆಹಲಿ ಹೈಕೋರ್ಟ್‌ ಬಂದಿದೆ. ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಪೋಷಕರು ಮದುವೆ ಮಾಡಿದ್ದರಿಂದ ಸಲಿಂಗಿ ಮಹಿಳೆ ಆಕೆಯ ಕುಟುಂಬ ಸದಸ್ಯರು ಮತ್ತು ಅತ್ತೆ ಮಾವನಿಂದ ರಕ್ಷಣೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಲಜಪತ್ ನಗರ ಎಸ್ ಎಚ್.ಇ. … Continued

ಕರ್ನಾಟಕ ಸೇರಿ 17 ರಾಜ್ಯಗಳಲ್ಲಿ ‘ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್’ ವ್ಯವಸ್ಥೆ ಕಾರ್ಯಗತ

ನವ ದೆಹಲಿ: ‘ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು’ ಹದಿನೇಳು ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ಈ ಸುಧಾರಣೆಯನ್ನು ಉತ್ತರಾಖಂಡ ಪೂರ್ಣಗೊಳಿಸಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಸುಧಾರಣೆ ಪೂರ್ಣಗೊಳಿಸುವ ರಾಜ್ಯಗಳು ಗ್ರಾಸ್ ಸ್ಟೇಟ್ ಡಿಸ್ಟ್ರಿಕ್ಟ್ ಪ್ರಾಡಕ್ಟ್ (ಜಿಎಸ್ ಡಿಪಿ) ಶೇ.0.25ರಷ್ಟು ಹೆಚ್ಚುವರಿ ಸಾಲ ಪಡೆಯಲು ಅರ್ಹತೆ ಪಡೆಯುತ್ತವೆ. ಇದರ ಪ್ರಕಾರ, ಈ … Continued

ಕೃಷಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ರೈತ ಅಭಿಯಾನ

ನವ ದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲೂ ಅಭಿಯಾನ ನಡೆಸಲು ಮುಂದಾಗಿದ್ದಾರೆ. ಕೃಷಿ ಕಾಯ್ದೆಗಳ ಪರ ಮಾತನಾಡುವವರನ್ನು ಸೋಲಿಸಿ ಎಂದು ಕರೆ ನೀಡಲು ಪಶ್ಚಿಮ ಬಂಗಾಳದಲ್ಲಿ ಅಭಿಯಾನ ನಡೆಸಲಿದ್ದಾರೆ.ಸಂಯುಕ್ತ ಕಿಸಾನ್ ಮೋರ್ಚಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ರೈತ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ … Continued

ಆರೋಪ ಪ್ರತಿಕ್ರಿಯಿಸಲೂ ಅನರ್ಹ : ಟಿಎಂಸಿ ಪತ್ರಕ್ಕೆ ಚುನಾವಣಾ ಆಯೋಗದ ಖಾರವಾದ ಉತ್ತರ

ಕೊಲ್ಕತ್ತಾ: ಮಮತಾ ಬ್ಯಾನರ್ಜಿ ಅವರಿಗೆ ಬುಧವಾರ ಗಾಯದ ಬಗ್ಗೆ ತೃಣಮೂಲ ಕಾಂಗ್ರೆಸ್ ಕಳುಹಿಸಿದ ಪತ್ರಕ್ಕೆ ಚುನಾವಣಾ ಆಯೋಗ ಖಾರವಾದ ಪ್ರತಿಕ್ರಿಯೆ ನೀಡಿದೆ. ಬುಧವಾರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯವಾದ ನಂತರ, ತೃಣಮೂಲ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಕಳುಹಿಸಿತ್ತು, ಈ ಘಟನೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಹೇಳಿದೆ. ಘಟನೆ ನಡೆದಾಗಮುಖ್ಯಮಂತ್ರಿ … Continued

ಮಾನನಷ್ಟ ಮೊಕದ್ದಮೆ: ಜಾಮೀನು ರಹಿತ ವಾರಂಟ್‌ ವಿರುದ್ಧ ಕಂಗನಾ ಮೇಲ್ಮನವಿ

ಮುಂಬೈ: ಚಿತ್ರ ಸಾಹಿತಿ ಜಾವೇದ್ ಅಖ್ತರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಜಾಮೀನು ಸಹಿತ ವಾರಂಟ್ ಪ್ರಶ್ನಿಸಿ ನಟಿ ಕಂಗನಾ ರನೌತ್ ಸೆಷನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿ.ವಿಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಚಿತ್ರ ಸಾಹಿತಿ … Continued