ಮಹಾರಾಷ್ಟ್ರದಲ್ಲಿ ೧೪ ಸಾವಿರ ದಾಟಿದ ಪ್ರತಿದಿನದ ಕೊರೊನಾ ಸೋಂಕು..!

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ೨೪ ತಾಸಿನಲ್ಲಿ 14,317 ಹೊಸ ಕೊವಿಡ್‌ -19 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 14,317 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ.ಇದೇ ಮೊದಲು ಈ ವರ್ಷದ ಹಿಂದಿನ ಏಕೈಕ ಪ್ರತಿದಿನದ ಉಲ್ಬಣವು ಮಾರ್ಚ್ 10ರ ಬುಧವಾರ 13,659 ಆಗಿತ್ತು. ದಿನದಲ್ಲಿ 57 ಕೊರೊನಾ ಸಂಬಂಧಿ … Continued

ಕೊರೊನಾ ಲಸಿಕೆ : ಒಂದು ಡೋಸ್‌ʼಗೆ 200 ರೂಪಾಯಿಗಿಂತ ಕಮ್ಮಿಯಾಗುವ ಸಾಧ್ಯತೆ

ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲಾದ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ ಲಸಿಕೆಯ ಬೆಲೆಯನ್ನ ಮರು ಪರಿಷ್ಕರಣೆ ಮಾಡಲಾಗಿದೆ ಎಂದು ಒಕ್ಕೂಟದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರ ತಿಳಿಸಿದ್ದಾರೆ. ‘ಪ್ರತಿ ಡೋಸಿಗೆ ಗಣನೀಯವಾಗಿ ಕಡಿಮೆ ಇರುವ ಬೆಲೆಯನ್ನ ನಾವು ಮರು ಪರಿಷ್ಕರಣೆ ಮಾಡಿದ್ದೇವೆ’ ಎಂದು ಕಾರ್ಯದರ್ಶಿ ಹೊಸ ಬೆಲೆಯನ್ನು ಬಹಿರಂಗಪಡಿಸದೆ ಹೇಳಿದರು. ಆದರೆ, ಸರ್ಕಾರ ಲಸಿಕೆಗಳನ್ನ … Continued

ರವನೀತ್ ಸಿಂಗ್ ಬಿಟ್ಟು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

ನವ ದೆಹಲಿ: ರವನೀತ್ ಸಿಂಗ್ ಬಿಟ್ಟು ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಸಂಸತ್ ಬಜೆಟ್ ಅಧಿವೇಶನದಲ್ಲಿ ಅಧೀರ್ ರಂಜನ್ ಚೌಧುರಿ ಅವರ ಬದಲು ಬಿಟ್ಟು ಅವರು ಕಾಂಗ್ರೆಸ್ ಮುಖಂಡನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಬಂಗಾಳದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಅವರು ಮುಂದಿನ ಎರಡು ತಿಂಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ … Continued

ಶಾಸಕಿಯರಿಂದ ತಾವು ಕುಳಿತಿದ್ದ ಟ್ರ್ಯಾಕ್ಟರ್ ಎಳೆಸಿದ ಕಾಂಗ್ರೆಸ್‌ ನಾಯಕ ಹೂಡಾ…!

ಕಾಂಗ್ರೆಸ್ ನಾಯಕರೊಬ್ಬರ ಅತರೇಕದ ವರ್ತನೆ ಈಗ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ತಮ್ಮ ಅನುಚಿತ ವರ್ತನೆ ಮೂಲಕ ಸುದ್ದಿಯಲ್ಲಿದ್ದಾರೆ. ಭೂಪಿಂದರ್ ಸಿಂಗ್ ಹೂಡಾ ಅವರು ತಾವು ಕುಳಿತಿದ್ದ ಟ್ರ್ಯಾಕ್ಟರ್ ಎಳೆಯಲು ಮಹಿಳಾ ಶಾಸಕಿಯರನ್ನು ಬಳಸಿಕೊಂಡಿದ್ದಾರೆ ಎನ್ನುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರವ್ಯಾಪಿ ಚರ್ಚೆಗೂ ಕಾರಣವಾಗಿದೆ. ಈ ವಿದ್ಯಮಾನವನ್ನು … Continued

ಚೀನಾ ಭಾರತದ ನೆಲದಲ್ಲಿನ ‘ಅಪ್ರಚೋದಿತ ಆಕ್ರಮಣಕಾರ’ ಎಂದು ಘೋಷಿಸಲು ಪ್ರಧಾನಿಗೆ ಸ್ವಾಮಿ ಒತ್ತಾಯ

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಚೀನಾದೊಂದಿಗಿನ ಬಿರುಕನ್ನು ಭಾರತೀಯ ಆಡಳಿತ ಹೇಗೆ ನಿಭಾಯಿಸಿದೆ ಎಂಬುದರ ಬಗ್ಗೆ ಟೀಕೆ ಮಾಡಿದ್ದಾರೆ. ಉಭಯ ದೇಶಗಳು ಸೈನ್ಯ ನಿಷ್ಕ್ರಿಯಗೊಳಿಸುವ ಪ್ರಯತ್ನಗಳಲ್ಲಿ ತೊಡಗಿರುವಾಗ ಈಗ, ಸ್ವಾಮಿ ಅವರು ಚೀನಾವನ್ನು ಅಪ್ರಚೋದಿತ ಆಕ್ರಮಣಕಾರ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ಮೋದಿ ಈಗ ಬಹಿರಂಗವಾಗಿ ಮತ್ತು ಸ್ಪಷ್ಟವಾಗಿ, ಚೀನಾವನ್ನು … Continued

ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ: ಜೈಶ್-ಉಲ್-ಹಿಂದ್ ಟೆಲಿಗ್ರಾಮ್ ಚಾನೆಲ್ ರಚಿಸಿದ್ದು ತಿಹಾರ್ ಜೈಲ್‌ ಪ್ರದೇಶದಲ್ಲಿ…!

ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳಿಂದ ತುಂಬಿದ ಎಸ್ಯುವಿಯನ್ನು ಇರಿಸಿದ್ದು ತಾನು ಎಂದು ಹೇಳಿದ್ದ ಜೈಶ್-ಉಲ್-ಹಿಂದ್ ಸಂಘಟನೆ ಟೆಲಿಗ್ರಾಮ್ ಚಾನೆಲ್ ಅನ್ನು ದೆಹಲಿಯ ತಿಹಾರ್ ಜೈಲ್‌ ಪ್ರದೇಶದಲ್ಲಿ ರಚಿಸಲಾಗಿದೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. . ಈ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು … Continued

ಮಮತಾ ಗಾಯಗೊಂಡ ಘಟನೆ ‘ಅಪಘಾತ, ದಾಳಿ ಅಲ್ಲ’: ಚುನಾವಣಾ ಆಯೋಗಕ್ಕೆ ಪೊಲೀಸ್ ವರದಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ನಂತರ ಗಾಯಗೊಂಡ ಘಟನೆ ಅಪಘಾತವಾಗಿದೆ ಎಂದು ಪೊಲೀಸರು ಚುನಾವಣಾ ಆಯೋಗಕ್ಕೆ ಗುರುವಾರ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಇದು ತನ್ನ ಮೇಲೆ ನಡೆದಿದ್ದ ಹಲ್ಲೆ ಎಂದು ಹೇಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದೆ. ತೃಣಮೂಲ ಕಾಂಗ್ರೆಸ್ ಸದಸ್ಯರು … Continued

ಲಿಂಗಾನುಪಾತ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಹೆಚ್ಚು ಕುಸಿತ..!

  ನವ ದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ಲಿಂಗಾನುಪಾತದ ನಿಯತಾಂಕವು ಕಳವಳಕಾರಿಯಾಗಿದೆ. ಬಿಹಾರ, ಕರ್ನಾಟಕ, ಒಡಿಶಾ ಮತ್ತು ಉತ್ತರಾಖಂಡ ರಾಜ್ಯವೂ ಕುಸಿತ ಕಂಡಿವೆ. ಈ ಮಧ್ಯೆ ಕಡಿಮೆ ಎಸ್‌ಆರ್‌ಬಿ ಹೊಂದಿರುವ ರಾಜ್ಯಗಳಾದ ರಾಜಸ್ಥಾನ ಮತ್ತು ಹರಿಯಾಣವನ್ನು ಲಿಂಗಾನುಪಾತದ ನಿಯತಾಂಕದಲ್ಲಿ ಸುಧಾರಣೆ ದಾಖಲಿಸಿದ್ದಕ್ಕಾಗಿ ಶ್ಲಾಘಿಸಲಾಗಿದೆ. 1,000 ಗಂಡುಮಕ್ಕಳ ಜನನಗಳಿಗೆ ಜನಿಸಿದ ಹೆಣ್ಣುಮಕ್ಕಳ ಸಂಖ್ಯೆ ಎಂದು ಅಳೆಯಲಾಗುತ್ತದೆ, ಇದು … Continued

ಏ.೧ರಿಂದ ಕೇಂದ್ರದಿಂದ ಹೊಸ ವೇತನ ಸಂಹಿತೆ ಕಾಯ್ದೆ ಜಾರಿಗೆ: ವೇತನ, ಪಿಎಫ್, ಗ್ರಾಚ್ಯುಟಿಯಲ್ಲಿ ಬದಲಾವಣೆ 

ನವ ದೆಹಲಿ : ಕೇಂದ್ರ ಸರ್ಕಾರ ಹೊಸ ವೇತನ ಸಂಹಿತೆ ಮಸೂದೆ 2021 ಅಥವಾ ಹೊಸ ಕಾರ್ಮಿಕ ಕಾನೂನು 2021ರ ಏಪ್ರಿಲ್ 1ರಿಂದ ಜಾರಿಗೆ ತರಲು ಮುಂದಾಗಿದೆ. ಇದು ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ವೇತನ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಮೇಲೆ ಪರಿಣಾಮ ಬೀರಲಿದೆ. ಹೊಸ ವೇತನ ಸಂಹಿತೆ ಮಸೂದೆ 2021 ನ್ನು ಜಾರಿಗೆ … Continued

ಮಮತಾ ಗಾಯಗೊಂಡ ಘಟನೆ: ತನಿಖೆಗೆ ಒತ್ತಾಯಿಸಿ ಚುನಾವಣಾ ಆಯೋಗದ ಮುಂದೆ ಬಿಜೆಪಿ-ಟಿಎಂಸಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿಗಾಗ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗೆ ಸಂಬಂಧಿಸಿದಂತೆ ಈಗ ಆಡಳಿತಾರೂಢ ತೃಣಮೂಲ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ದೊಡಡ್ಡ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಬಿಜೆಪಿ ಮತ್ತು ಟಿಎಂಸಿ ಎರಡೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಈ ಘಟನೆ ಬಗ್ಗೆ ಹೆಚ್ಚಿನ ತನಿಖೆಗೆ ಒತ್ತಾಯಿಸಿವೆ. ಜೊತೆಗೆ ಎರಡೂ ಪಕ್ಷಗಳು ಈಗ ಚುನಾವಣಾ … Continued