ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಜಂಟಿಯಾಗಿ ನಾಸಾ-ಇಸ್ರೋ ಅಭಿವೃದ್ಧಿ

ಬೆಂಗಳೂರು: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಜೊತೆ ಇಸ್ರೋ ಜಂಟಿ ಭೂ ವೀಕ್ಷಣಾ ಉಪಗ್ರಹ ಕಾರ್ಯಾಚರಣೆಗಾಗಿ ಅತಿ ಹೆಚ್ಚು ರೆಸಲ್ಯೂಶನ್ ಹೊಂದಿರುವ ಚಿತ್ರಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಅಭಿವೃದ್ಧಿಪಡಿಸಿದೆ. ನಾಸಾ-ಇಸ್ರೋ ಎಸ್ಎಆರ್ (ನಿಸಾರ್) ಭೂಮಿಯ ವೀಕ್ಷಣೆಗಾಗಿ ಡ್ಯುಯಲ್-ಫ್ರೀಕ್ವೆನ್ಸಿ ಎಲ್ ಮತ್ತು ಎಸ್-ಬ್ಯಾಂಡ್ ಎಸ್ಎಆರ್ ಜಂಟಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿವೆ. “ನಮ್ಮ ಗ್ರಹದ ಮೇಲ್ಮೈಯಲ್ಲಿ … Continued

“ಇತನಾ ಗುಸ್ಸಾ ಕ್ಯೋಂ, ದೀದಿ?: ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಹಾಡು

ಇತನಾ ಗುಸ್ಸಾ ಕ್ಯೋಂ, ದೀದಿ?(ಇಷ್ಟೊಂದು ಕೋಪ ಏಕೆ, ದೀದಿ), ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಹೊಸ ಪ್ರಚಾರದ ಜಾಹೀರಾತು. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮನ್ನು ‘ರಾವಣ’, ‘ರಾಕ್ಷಸ’, ದೈತ್ಯ ಮತ್ತು ‘ಗೂಂಡಾ’ ಎಂದು ಕರೆದಿದ್ದಕ್ಕೆ ಕೊಲ್ಕತ್ತಾದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಇತನಾ ಗುಸ್ಸಾ ಕ್ಯೋಂ ದೀದಿ (ಇಷ್ಟೊಂದು ಕೋಪ … Continued

ಜೆಇಇ-ಮೇನ್ಸ್‌ ಫಲಿತಾಂಶ ಪ್ರಕಟ: ಆರು ವಿದ್ಯಾರ್ಥಿಗಳಿಗೆ ನೂರಕ್ಕೆ ೧೦೦ ಅಂಕ…!

ಸ್ಪರ್ಧಾತ್ಮಕ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್ಸ್‌ ಫಲಿತಾಂಶವನ್ನು ಸೋಮವಾರ ಪ್ರಟಿಸಲಾಗಿದ್ದು, ಆರು ಅಭ್ಯರ್ಥಿಗಳು ನೂರಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ, ನೂರಕ್ಕೆ ನೂರು ಅಂಕ ಪಡೆದಿ ವಿದ್ಯಾರ್ಥಿಗಳು ದೆಹಲಿಯ ಪ್ರವರ್ ಕಟಾರಿಯಾ ಮತ್ತು ರಂಜಿಮ್ ಪ್ರಬಲ್ ದಾಸ್, ಚಂಡೀಗಡದ ಗುರಮೃತ್ ಸಿಂಗ್, ರಾಜಸ್ಥಾನದ ಸಾಕೇತ್ ಝಾ, ಮಹಾರಾಷ್ಟ್ರದ ಸಿದ್ಧಾಂತ್ ಮುಖರ್ಜಿ ಮತ್ತು ಗುಜರಾತ್‌ನ ಅನಂತ್ ಕೃಷ್ಣ ಕಿಡಂಬಿ. … Continued

ಟೈಮ್ಸ್ ನೌ-ಸಿ ವೋಟರ್‌ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಂಎಂಸಿ ಮತ್ತೆ ಅಧಿಕಾರಕ್ಕೆ, ಬಿಜೆಪಿಯೂ ಅದರ ಹಿಂದೆಯೇ ..!

  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ-ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಸಮೀಕ್ಷೆ ಪ್ರಕಾರ, 294 ಸದಸ್ಯರ ವಿಧಾನಸಭೆಯಲ್ಲಿ ಟಿಎಂಸಿ ಸುಮಾರು 146 ರಿಂದ 162 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, 2016 ರ ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿಯವರ ಪಕ್ಷವು ಗೆದ್ದ … Continued

ಟೈಮ್ಸ್‌ ನೌ-ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಮತದಾರ ಜೈ…

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಗೆಲುವು ಸಾಧಿಸಲಿದೆ ಎಂದು ಟೈಮ್ಸ್ ನೌ-ಸಿ ವೋಟರ್‌ ಸಮೀಕ್ಷೆ ಸೋಮವಾರ ಭವಿಷ್ಯ ನುಡಿದಿದೆ. ಅವರ ಚುನಾವಣಾ ಪೂರ್ವ ಸಮೀಕ್ಷೆಯ ಸಮೀಕ್ಷೆಯ ಪ್ರಕಾರ, ಡಿಎಂಕೆ ಮೈತ್ರಿಕೂಟವು 158 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎಐಎಡಿಎಂಕೆ ಮೈತ್ರಿಕೂಟವು 65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ. ನಟ- ರಾಜಕಾರಣಿ ಕಮಲ್ … Continued

ಚುನಾವಣೆ ಹೊಸ್ತಿಲಲ್ಲಿ ಮತ್ತೆ ಐವರು ಟಿಎಂಸಿ ಶಾಸಕರು ಬಿಜೆಪಿಗೆ ಸೇರ್ಪಡೆ…!

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಸಮೀಪಿಸತ್ತಿದ್ದಂತೆಯೇ ಮಮತಾ ಬ್ಯಾನರ್ಜಿಗೂ ತಲೆನೋವು ಜಾಸ್ತಿಯಾಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿಯೇ ಪಕ್ಷದ ಐವರು ಶಾಸಕರು ತೃಣಮೂಲ ಕಾಂಗ್ರೆಸ್‌ ತೊರೆದು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ಸೇರಿದ್ದಾರೆ. ಅದೂ ಪ್ರಧಾನಿ ಮೋದಿ ನಡೆಸಿದ ಮಹಾ ಸಾವೇಶದ ಮಾರನೇ ದಿನವೇ..! ಟಿಎಂಸಿಯ ಐವರು ಶಾಸಕರು ಸೋಮವಾರ ಬಿಜೆಪಿ ಸೇರಿದ್ದು, … Continued

ಮಹಿಳಾ ದಿನ: ಕೃಷಿ ಕಾಯ್ದೆ ವಿರೋಧಿಸಿ ಹೋರಾಟಕ್ಕೆ ಧುಮುಕಿದ ಸಾವಿರಾರು ಮಹಿಳೆಯರು

ನವ ದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಮಸೂದೆಗಳ ವಿರುದ್ಧ ಸಾವಿರಾರು ಮಹಿಳಯರು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪಾಲ್ಗೊಂಡರು. ರೈತರು ಕಳೆದ 102 ದಿನಗಳಿಂದ ವ್ಯಾಪಕ ಹೋರಾಟ ನಡೆಸುತ್ತಿದ್ದಾರೆ. ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸೋಮವಾರ ಅಂತರಾಷ್ಟ್ರೀಯ ಮಹಿಳಾ … Continued

42, 848 ರಕ್ಷಣಾ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್

ನವ ದೆಹಲಿ: ಈವರೆಗೆ ಒಟ್ಟಾರೆ, 42 848 ರಕ್ಷಣಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ ಸೋಮವಾರ ತಿಳಿಸಿದ್ದಾರೆ. ಭೂಸೇನೆಯಲ್ಲಿ 32,690 ಕೋವಿಡ್-19 ಪಾಸಿಟಿವ್ ಪ್ರಕರಣಗಳಿದ್ದು, ಶೇ. 0.24 ರಷ್ಟು ಮರಣ ಪ್ರಮಾಣವಿದೆ. ಭಾರತೀಯ ವಾಯುಪಡೆ ಮತ್ತು ನೌಕಪಡೆಯಲ್ಲಿ ಕ್ರಮವಾಗಿ 6,554 ಮತ್ತು 3,604 ಕೋವಿಡ್ ಪಾಸಿಟಿವ್ … Continued

ವಿದೇಶಿ ಕಂಪನಿಗಳೊಂದಿಗೆ ರಕ್ಷಣಾ ಉತ್ಪನ್ನಗಳ ಜಂಟಿ ಉತ್ಪಾದನೆಗೆ 44 ಕಂಪನಿಗಳಿಗೆ ಎಫ್‌ಡಿಐ ಅನುಮೋದನೆ

ನವ ದೆಹಲಿ; ವಿದೇಶಿ ಕಂಪನಿಗಳೊಂದಿಗೆ ರಕ್ಷಣಾ ಉತ್ಪನ್ನಗಳ ಜಂಟಿ ಉತ್ಪಾದನೆಗೆ ಸಾರ್ವಜನಿಕ ವಲಯದ ಘಟಕಗಳು ಸೇರಿದಂತೆ ಒಟ್ಟು 44 ಭಾರತೀಯ ಕಂಪನಿಗಳಿಗೆ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅನುಮೋದನೆ ದೊರೆತಿದೆ ಎಂದು ರಕ್ಷಣಾ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಸೋಮವಾರ ತಿಳಿಸಿದ್ದಾರೆ. ಇಲ್ಲಿಯ ವರೆಗೆ, ದೇಶದಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಸುಮಾರು … Continued

ಅತ್ಯಾಚಾರ ಆರೋಪಿ ಪ್ರಕರಣ; ನಾವು ಹೇಳಿದ್ದೇ ಬೇರೆ, ವರದಿಯಾಗಿದ್ದೇ ಬೇರೆ-ತಪ್ಪು ವರದಿಗೆ ಸುಪ್ರೀಂ ಕೋರ್ಟ್ ಅಸಮಾಧಾನ‌

ನವದೆಹಲಿ: ಮಹಿಳೆಯರ ಬಗ್ಗೆ ತಮಗೆ ಅತ್ಯಂತ ಹೆಚ್ಚಿನ ಗೌರವವಿದೆ ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರನ್ನು ಒಳಗೊಂಡ ಪೀಠ, ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ವಾರದ ವಿಚಾರಣೆಯೊಂದನ್ನು ‘ಸಂಪೂರ್ಣ ತಪ್ಪಾಗಿ ವರದಿ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಅತ್ಯಾಚಾರ ಸಂತ್ರಸ್ತೆಯನ್ನು ನೀವು ಮದುವೆಯಾಗುತ್ತೀರಾ ಎಂದು ನಾವು ಆರೋಪಿಯನ್ನು ಆರೋಪಿ ನೀಡಿದ … Continued