೨೫ ಸಾವಿರದ ಸಮೀಪ ತಲುಪಿದ ದೇಶದ ದಿನವೊಂದರ ಕೊರೋನಾ ಪ್ರಕರಣಗಳ ಸಂಖ್ಯೆ ..!

ನವದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 24,882 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದು ಈ ವರ್ಷದಲ್ಲಿ ದಿನವೊಂದಕ್ಕೆ ದಾಖಲಾಗಿರುವ ಅತೀ ಹೆಚ್ಚು ಸಂಖ್ಯೆಯ ಪ್ರಕರಣಗಳಾಗಿವೆ. ಇದರಲ್ಲಿ ಮಾಹಾರಷ್ಟ್ರದ ಪ್ರಕರಣಗಳೇ ಅಧಿಕ. ಕಳೆದ ಒಂದು ದಿನದಲ್ಲಿ 140 ಸೋಂಕಿತರುಮೃತಪಟ್ಟಿದ್ದಾರೆ. ಈವರೆಗೆ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 1,13,33,728 … Continued

ತೃಣಮೂಲ ಕಾಂಗ್ರೆಸ್‌ ಸೇರಿದ ಬಿಜೆಪಿ ಮಾಜಿ ನಾಯಕ ಯಶ್ವಂತ ಸಿನ್ಹಾ

ಬಿಜೆಪಿ ಮಾಜಿ ನಾಯಕ ಮತ್ತು ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಮಾಜಿ ಹಣಕಾಸು ಸಚಿವರು ಕೊಲ್ಕತ್ತಾದ ಟಿಎಂಸಿ ಭವನಕ್ಕೆ ಆಗಮಿಸಿ ಔಪಚಾರಿಕವಾಗಿ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ರಾಜ್ಯವು ಬಹು-ಹಂತದ ವಿಧಾನಸಭಾ ಚುನಾವಣೆ ಪ್ರಾರಂಭಿಸುವ ಕೆಲವೇ ವಾರಗಳ ಮೊದಲು ಸಿನ್ಹಾ ಟಿಎಂಸಿ ಸೇರುವ ನಿರ್ಧಾರ ಹೊರಬಿದ್ದಿದೆ. ಅವರು … Continued

ಹಿರೆನ್ ನಿಗೂಢ ಸಾವಿನ ಪ್ರಕರಣ: ನಿ‌ರೀಕ್ಷಣಾ ಜಾಮೀನಿಗೆ ಥಾಣೆ ಕೋರ್ಟಿಗೆ ಅರ್ಜಿ ಸಲ್ಲಿಸಿದ ಸಚಿನ್‌ ವಾಝೆ

ಮುಂಬೈ; ಮನ್ಸುಖ್ ಹಿರೆನ್ ಸಾವಿನ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿ ಬಂದ ನಂತರ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಥಾಣೆಯ ಸೆಷನ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಹಿರೆನ್‌ ಪ್ರಕರಣದಲ್ಲಿ ಆರೋಪ ಕೇಳಿ ಬಂದ ನಂತರ ಅಪರಾಧ ಗುಪ್ತಚರ ಘಟಕದಲ್ಲಿ (ಸಿಐಯು) ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಸಚಿನ್ ವಾಝೆ ಅವರನ್ನು ಮುಂಬೈ … Continued

ಮುಂಬೈ ಸ್ಫೋಟದ ಆರೋಪಿ ಬಳಿ ಸಿಕ್ಕ ಅಂಬಾನಿಗೆ ಬೆದರಿಕೆ ಹೊಣೆ ಸಂದೇಶದ ಮೊಬೈಲ್..!‌

ಇಂಡಿಯನ್‌ ಮುಜಾಹಿದ್ದೀನ್ (ಭಾರತೀಯ ಮುಜಾಹಿದ್ದೀನ್‌) ಮುಖ್ಯಸ್ಥ ಮತ್ತು 2011ರ ಮುಂಬೈ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ತೆಹ್ಸೀನ್ ಅಖ್ತರ್ ಸೇರಿದಂತೆ ನಾಲ್ವರು ಭಯೋತ್ಪಾದಕರು ತಿಹಾರ್ ಜೈಲಿನ ಒಳಗಿನಿಂದ ಸೆಲ್‌ಫೋನ್ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲ ಆಂಗ್ಲ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ಕಳೆದ ತಿಂಗಳು ಮುಂಬೈನ ಮುಖೇಶ್ ಅಂಬಾನಿಯ ನಿವಾಸದ ಹೊರಗೆ ಜೆಲೆಟಿನ್ ತುಂಡುಗಳೊಂದಿಗೆ … Continued

ಮೋದಿ..ನಿಮ್ಮನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ:ಬೈಡೆನ್‌

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ.. ನಿಮ್ಮನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಕ್ವಾಡ್ ರಾಷ್ಟ್ರಗಳ ಮೊದಲ ಸಮ್ಮೇಳನದಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಸ್ವಾಗತಿಸುತ್ತಿದ್ದಂತೆ ಪ್ರಧಾನಿ ಮೋದಿ ಕೂಡ ಅವರನ್ನು ಸ್ವಾಗತಿಸಿದರು. ಕ್ವಾಡ್ ಸಮ್ಮೇಳನದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನಿ ಪ್ರಧಾನಮಂತ್ರಿ … Continued

ವಿಶ್ವದಲ್ಲಿ ಅತ್ಯಧಿಕ ಸಂಪತ್ತು ಹೆಚ್ಚಿಸಿಕೊಂಡ ಗೌತಮ ಅದಾನಿ

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಗಮನಾರ್ಹ ಮೈಲಿಗಲ್ಲು ಸಾಧಿಸಿದ್ದಾರೆ. ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ವಿಶ್ವದ ಅತ್ಯಧಿಕ ಸಂಪತ್ತನ್ನು ಹೆಚ್ಚಿಸಿದವರಲ್ಲಿ ಅವರು ಮೊದಲ ಸ್ತಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕವು ಇಲ್ಲಿಯ ವರೆಗೆ 2021ರಲ್ಲಿ ಅದಾನಿ 16.2 ಶತಕೋಟಿ ಡಾಲರ್‌ ಮೊತ್ತ ಹೆಚ್ಚಿಸಿಕೊಂಡಿದ್ದು, ಅವರ ಒಟ್ಟು ನಿವ್ವಳ ಮೌಲ್ಯವನ್ನು … Continued

ಮಹಾರಾಷ್ಟ್ರ: 16 ಸಾವಿರದ ಸಮೀಪಕ್ಕೆ ಬಂದ ಪ್ರತಿದಿನದ ಕೊರೊನಾ ಪ್ರಕರಣ…!

ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ (ಮಾರ್ಚ್ 12) 15,817 ಹೊಸ ಕೊವಿಡ್‌-19 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 15 ಸಾವಿರ ಕೊವಿಡ್‌-19 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಹಿಂದಿನ ಏಕದಿನದ ಗರಿಷ್ಠ ಏರಿಕೆ ಮಾರ್ಚ್ 11 ರ ಗುರುವಾರ 14,317 ಆಗಿತ್ತು. ದಿನದಲ್ಲಿ 56 ಕೊವಿಡ್‌-19 ಸಾವುಗಳು ದಾಖಲಾಗಿದ್ದು, … Continued

ಆಸ್ಪತ್ರೆಯಿಂದ ವೀಲ್‌ಚೇರ್‌ನಲ್ಲಿಯೇ ಹೊರಬಂದ ಮಮತಾ

ಕೊಲ್ಕತ್ತಾ: ಎರಡು ದಿನಗಳ ಹಿಂದೆ ನಂದಿಗ್ರಾಮದಲ್ಲಿ ಗಾಯಗೊಂಡು ಎಸ್‌ಎಸ್ ಕೆಎಂ ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ವೀಲ್ ಚೇರ್ ನಲ್ಲಿಯೇಅವರು ಹೊರ ಬಂದಿದ್ದಾರೆ. ಮಮತಾ ಬ್ಯಾನರ್ಜಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕಳೆದ ಬುಧವಾರ ನಂದಿಗ್ರಾಮದಲ್ಲಿ ನಡೆದ … Continued

ಕೊಯಮತ್ತೂರಿನಿಂದ ಕಮಲ್‌ ಹಾಸನ್‌ ಸ್ಪರ್ಧೆ

ಚೆನ್ನೈ: ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಮೊದಲ ಬಾರಿಗೆ ಚುನಾವನೆಯಲ್ಲಿ ಸ್ಪರ್ಧಿಸುತ್ತಿದ್ದು, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶುಕ್ರವಾರ (ಮಾ.೧೨) ತಮ್ಮ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ಅಧ್ಯಕ್ಷ ಕಮಲ್ ಹಾಸನ್ , ತಮ್ಮ ತಂದೆ ದಿ. ಶ್ರೀನಿವಾಸನ್ ಅವರನ್ನು … Continued

ಸ್ಕಾನಿಯಾ ಬಸ್ ಹಗರಣ: ಕಂಪನಿಗೂ ನನ್ನ ಕುಟುಂಬಕ್ಕೂ ಸಂಬಂಧವೇ ಇಲ್ಲ ಎಂದ ಗಡ್ಕರಿ

ನವ ದೆಹಲಿ: ಸ್ವೀಡನ್ ಸ್ಕಾನಿಯಾ ಬಸ್ ಹಾಗೂ ಟ್ರಕ್ ತಯಾರಿಕಾ ಕಂಪನಿಗೂ, ತಮ್ಮ ಮಕ್ಕಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಕೇಂದ್ರ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಈ ಆರೋಪಗಳನ್ನು ಖಂಡಿಸಿದ್ದಾರೆ. ಈ ಸಂಬಂಧ ಗಡ್ಕರಿ ಅವರ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಬಂಧ ಗಡ್ಕರಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದ್ದು. … Continued