ಏಕತಾ ಪ್ರತಿಮೆಗೆ ೫೦ ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ

ಅಹಮದಾಬಾದ್: ಗುಜರಾತ್‍ನ ನರ್ಮದಾ ಜಿಲ್ಲಾಯ ಕೆವಾಡಿಯಾದಲ್ಲಿ ಇರುವ ಏಕತಾ ಪ್ರತಿಮೆ ಉದ್ಘಾಟನೆಯ ನಂತರ ಈವರೆಗೆ 50 ಲಕ್ಷ ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪ್ರತಿಮೆ ಅಂತರರಾಷ್ಟ್ರೀಯ ಪ್ರವಾಸಿಗರನ್ನೂಸೆಳೆಯುತ್ತಿದ್ದು, ಎಲ್ಲಾ ವಯಸ್ಸಿನವರಿಗೆ ಆಕರ್ಷಣೆ ಕೇಂದ್ರಬಿಂದುವಾಗಿದೆ ಎಂದು ಗುಜರಾತ್‍ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ ಮತ್ತು ಪರಿಸರ) ರಾಜೀವ್ ಗುಪ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ವಿಶ್ವದ … Continued

ನೋಟಾಕ್ಕೆ ಹೆಚ್ಚು ಮತ ಬಿದ್ರೆ ಮರುಚುನಾವಣೆ: ಕೇಂದ್ರದ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್

ನವ ದೆಹಲಿ: ಚುನಾವಣೆಯಲ್ಲಿ ನೋಟಾಕ್ಕೆ ಹೆಚ್ಚುಮತಗಳು ಬಂದಿದ್ದರೆ ಆ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ  ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಚುನಾವಣೆ ಆಯೋಗಕ್ಕೆ ನೋಟಿಸ್‌ ನೀಡಿದ್ದು, ಈ ಕುರಿತು ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ. ಸೋಮವಾರ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ … Continued

ಕೊವಿಡ್: ಮಾ.೧೭ರಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ

ನವ ದೆಹಲಿ: ದೇಶದ ಕೋವಿಡ್ -೧೯ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮಾ.೧೭ (ಬುಧವಾರ) ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಎರಡನೇ ತರಂಗದ ಭೀತಿ ಮತ್ತು ರಾಜ್ಯ ಸರ್ಕಾರಗಳು ಸಮಯಕ್ಕಿಂತ ಮುಂಚಿತವಾಗಿಯೇ ಇದಕ್ಕೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಭೆ ನಡೆಸಲಾಗುತ್ತದೆ. ಕಳೆದ ೨೪ ಗಂಟೆಗಳಲ್ಲಿ, … Continued

ದೆಹಲಿ ಬಾಟ್ಲಾ ಎನ್‌ಕೌಂಟರ್‌ ಪ್ರಕರಣ: ಉಗ್ರ ಅರಿಜ್‌ ಖಾನಗೆ ಮರಣದಂಡನೆ

    ನವ ದೆಹಲಿ: 2008 ರ ಬಾಟ್ಲಾ ಹೌಸ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮತ್ತು ಇತರ ಅಪರಾಧಗಳಿಗಾಗಿ ದೆಹಲಿ ನ್ಯಾಯಾಲಯ ಸೋಮವಾರ ಉಗ್ರ ಅರಿಜ್ ಖಾನ್ ಅವರಿಗೆ ಮರಣದಂಡನೆ ವಿಧಿಸಿದೆ.ನ್ಯಾಯಾಲಯವು ಈ ಪ್ರಕರಣವನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಹೇಳಿದೆ. ಇದಕ್ಕೂ ಮೊದಲು, ಖಾನ್ ಗೆ ಪೊಲೀಸರು … Continued

ಎರಡು ವರ್ಷದಿಂದ 2,000 ನೋಟು ಮುದ್ರಿಸಿಲ್ಲ; ಸರ್ಕಾರ

ನವ ದೆಹಲಿ: ಭಾರತದ ಅತಿ ಹೆಚ್ಚು ಮುಖಬೆಲೆಯ ನೋಟುಗಳ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ 2,000 ಮುಖಬೆಲೆಯ ನೋಟುಗಳನ್ನ ಮುದ್ರಿಸಲಾಗಿಲ್ಲ ಎಂದು ಸರ್ಕಾರ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದೆ. 2018ರ ಮಾರ್ಚ್ 30ರಂದು 3,362 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದು, ಕ್ರಮವಾಗಿ ಶೇ.3.27 ಮತ್ತು ಶೇ.37.26ರಷ್ಟು ಚಲಾವಣೆಯಲ್ಲಿವೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ … Continued

ಈ ವರ್ಷ ಒಂದೇ ಬಾರಿ ʼನೀಟ್‌ ಪರೀಕ್ಷೆʼ

ನವ ದೆಹಲಿ: 2021ರ ಪರೀಕ್ಷೆಯನ್ನ ನಡೆಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ದಿನಾಂಕವನ್ನ ಪ್ರಕಟಿಸಿದ ಕೆಲವೇ ದಿನಗಳಲ್ಲಿ, ಈ ವರ್ಷ ಕೇವಲ ಒಂದು ಬಾರಿ ಮಾತ್ರ ನೀಟ್‌ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸೋಮವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಪೋಖ್ರಿಯಾಲ್, ‘2021ರಲ್ಲಿ ನೀಟ್ (ಯುಜಿ) … Continued

ಸಂಜನಾ ಗಣೇಶನ್ -ಭಾರತದ ವೇಗಿ ಬುಮ್ರಾ ಮದುವೆ

ಕ್ರಿಕೆಟಿಗ ಬುಮ್ರಾ ನವ ದೆಹಲಿ: ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ, ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಗೋವಾದಲ್ಲಿ ಮದುವೆಯಾಗಿದ್ದಾರೆ. ವಿವಾಹ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬುಮ್ರಾ ತಮ್ಮ ಮದುವೆ ಪೋಟೋಗಳನ್ನು ಹಂಚಿಕೊಂಡಿದ್ದಾರೆ. 27 ವರ್ಷದ ಬುಮ್ರಾ, ‘ಪ್ರೀತಿಯ ಜತೆಗೆ ನಾವಿಬ್ಬರು ಜತೆಯಾಗಿ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ. ಇಂದು ನಮ್ಮ ಬದುಕಿನ ಅತ್ಯಂತ ಸಂತೋಷದ … Continued

ಗ್ರಾಹಕರೇ ಗಮನಿಸಿ: ಏ.1ರಿಂದ ಈ ಬ್ಯಾಂಕುಗಳ ಹಳೆ ಚೆಕ್ – ಪಾಸ್‌ ಪುಸ್ತಕ ರದ್ದಾಗಲಿದೆ

ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಕಳೆದ ವರ್ಷ ವಿಲೀನಗೊಂಡಿವೆ. ಈ ಬ್ಯಾಂಕುಗಳ ಚೆಚೆಕ್ ಪುಸ್ತಕ ಹಾಗೂ ಪಾಸ್‌ ಪುಸ್ತಕ‌ಗಳನ್ನು ಈಗಲೂ ಬಳಸುತ್ತಿದ್ದಾರೆ. ಆದರೆ ಬ್ಯಾಂಕ್‌ ವಿಲೀನಗೊಂಡ ಒಂದು ವರ್ಷದ ನಂತರ ಅಂದರೆ ಏಪ್ರಿಲ್ 1, … Continued

ಹೊಸ ಡ್ರೈವಿಂಗ್ ಲೈಸೆನ್ಸಿಗೆ ಅರ್ಜಿ ಸಲ್ಲಿಸುವವರಿಗೆ ಹೊಸ ನಿಯಮ ಬರಲಿದೆ

ನವ ದೆಹಲಿ : ಹೊಸ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸುವವರು ಈ ವರ್ಷದ ನವೆಂಬರಿನಿಂದ ಡ್ರೈವಿಂಗ್ ಟೆಸ್ಟ್ ಗೆ ತೆರಳುವ ಒಂದು ತಿಂಗಳ ಮುನ್ನ ಸುರಕ್ಷಿತ ಡ್ರೈವಿಂಗ್ ಪ್ರಾಕ್ಟೀಸ್ ಬಗ್ಗೆ ಆನ್ ಲೈನ್ ವಿಡಿಯೋ ಟ್ಯುಟೋರಿಯಲ್ ನೋಡಬೇಕಿದೆ.ಇಂತಹದ್ದೊಂದು ಉಪಕ್ರಮಕ್ಕೆಸಾರಿಗೆ ಸಚಿವಾಲಯವು ಮುಂದಾಗಿದೆ. ಈ ವಿಡಿಯೋ ಟ್ಯಟೋರಿಯಲ್ ನಲ್ಲಿ ಅಜಾಗರೂಕ ಚಾಲನೆಯಿಂದ ಬಾಧಿತರಾದವರ ಕುಟುಂಬ ಸದಸ್ಯರ ಸಂದರ್ಶನ … Continued

ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರೇ ಕಾರಣ: ಸಿಎಂ ಪಳನಿಸ್ವಾಮಿ ನೇರ ಆರೋಪ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರಾದ ಎಂ. ಕರುಣಾನಿಧಿ ಹಾಗೂ ಸ್ಟಾಲಿನ್‌ ಕಾರಣಕರ್ತರು ಎಂದು ಆರೋಪಿಸಿದ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ, ಡಿಎಂಕೆ ಮುಖಂಡರಿಗೆ ಜಯಲಲಿತಾ ಅವರ ಆತ್ಮ ತಕ್ಕ ಶಿಕ್ಷೆ ನೀಡುತ್ತದೆ ಎಂದು ಹೇಳಿದ್ದಾರೆ. ಜಯಲಲಿತಾ ೨೦೧೫ರಲ್ಲಿ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದರೂ ಡಿಎಂಕೆ ಮುಖಂಡರು ಮೇಲ್ಮನವಿ ಸಲ್ಲಿಸಿದ್ದರಿಂದ ಜಯಲಲಿತಾ ಖಿನ್ನತೆಗೊಳಗಾದರು. ಜಯಲಲಿತಾ ಸಾವಿಗೆ ಕಾರಣರಾದ … Continued