ವೀಡಿಯೊ..| ಟ್ರಂಪ್‌ ಮೇಲೆ ಗುಂಡಿನ ದಾಳಿ ; ಆರೋಪಿಯ ʼಸ್ಕೂಲ್ ಶೂಟಿಂಗ್ ಕ್ಲಬ್ʼ ಸೇರುವ ಪ್ರಯತ್ನ ವಿಫಲ..ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ 20 ವರ್ಷದ ವ್ಯಕ್ತಿ ತನ್ನ ಪ್ರೌಢಶಾಲೆಯ ರೈಫಲ್ ತಂಡ ಸೇರಲು ಪ್ರಯತ್ನಿಸಿದ್ದ, ಆದರೆ ʼತೀರ ಕೆಟ್ಟದಾದʼ ಶಾಟ್ ಹೊಡೆದಿದ್ದಕ್ಕೆ ಎಂದು ಆತನನ್ನು ತಿರಸ್ಕರಿಸಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ, ಈತ ವಿಶ್ವದ ಅತಿದೊಡ್ಡ ಹಣ ವ್ಯವಸ್ಥಾಪನಾ ಕಂಪನಿ ʼಬ್ಲ್ಯಾಕ್‌ರಾಕ್ ಇಂಕ್‌ʼನ 2022ರ … Continued

ಜಗನ್ನಾಥ ದೇವರ ‘ದೈವಿಕ ಕೃಪೆ’ಯಿಂದ ಡೊನಾಲ್ಡ್ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ : ಇಸ್ಕಾನ್ ಉಪಾಧ್ಯಕ್ಷ

ನವದೆಹಲಿ: ಜಗನ್ನಾಥ ದೇವರ ದೈವಿಕ ಕೃಪೆಯಿಂದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಹೇಳಿದೆ. “ಇದು ದೈವಿಕ ಹಸ್ತಕ್ಷೇಪವಾಗಿದೆ. ಸರಿಯಾಗಿ 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಜಗನ್ನಾಥ ರಥಯಾತ್ರೆ ಉತ್ಸವ ನಡೆಯಲು ಸಹಾಯ ಮಾಡಿದ್ದರು. ಇಂದು … Continued

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ವಧುವಿನ ತಂದೆ-ತಾಯಿಗೆ ಕಪಾಳಮೋಕ್ಷ ಮಾಡಿದ ವರ..! ಪೊಲೀಸರನ್ನು ಕರೆಸಿದ ವಧು…!!

ವರನೊಬ್ಬ ಕುಡಿದ ಮತ್ತಿನಲ್ಲಿ ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತಕ್ಷಣವೇ ವಧು ಪೊಲೀಸರಿಗೆ ಕರೆ ಮಾಡಿ ವರನನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾಳೆ. ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದ್ದು, ಅಂಜಲಿ (18) ಎಂಬಾಕೆ ದಿಲೀಪ (25) ಎಂಬಾತನನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದ ವೇಳೆ ವರ ದಿಲೀಪ … Continued

X ನಲ್ಲಿ 100 ಮಿಲಿಯನ್ ಫಾಲೋವರ್‌ ಗಳ ಗಡಿ ದಾಟಿದ ಮೋದಿ ; Xನಲ್ಲಿ ಟಾಪ್ 10 ಫಾಲೋವರ್ಸ್‌ ಹೊಂದಿರುವವರ ಪಟ್ಟಿ…

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್‌’ (ಟ್ವಿಟರ್‌) ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ ಸಂಖ್ಯೆ 100 ಮಿಲಿಯನ್ (10 ಕೋಟಿ) ದಾಟಿದೆ. ಈ ಮೂಲಕ ಮೋದಿ ಅವರು ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದವರಲ್ಲಿ ಜಾಗತಿಕವಾಗಿ ಏಳನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ, ವಿಶ್ವದ ರಾಜಕೀಯ ನಾಯಕರ … Continued

ವಿಂಬಲ್ಡನ್ 2024: ನೇರ ಸೆಟ್‌ಗಳಲ್ಲಿ ನೊವಾಕ್ ಜೊಕೊವಿಕ್ ಸೋಲಿಸಿ ಸತತ 2ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್

ಭಾನುವಾರ ನಡೆದ ವಿಂಬಲ್ಡನ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕಾರಝ್ ಅವರು ಸೆರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು 6-2 6-2 7-6(4) ನೇರ್‌ ಸೆಟ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿದ್ದಾರೆ. ಈ ಎರಡು ವಿಂಬಲ್ಡನ್ ಪ್ರಶಸ್ತಿ, 2022 ರಲ್ಲಿ ಅವರ ಯುಎಸ್ ಓಪನ್ ಗೆಲುವು ಮತ್ತು ಕಳೆದ ತಿಂಗಳು ಅವರ ಫ್ರೆಂಚ್ ಓಪನ್ … Continued

ಕ್ಯಾನ್ಸರ್ ಪೀಡಿತ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ ಗಾಯಕ್ವಾಡಗೆ ಆರ್ಥಿಕ ನೆರವು ಪ್ರಕಟಿಸಿದ ಬಿಸಿಸಿಐ

ನವದೆಹಲಿ: ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಾರತದ ತಂಡದ ಮಾಜಿ ಮುಖ್ಯ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದೆ. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ್ವಾಡ್‌ ಅವರಿಗೆ ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಮಂಡಳಿಯ … Continued

ತಮಿಳುನಾಡು ಬಿಎಸ್ ಪಿ ರಾಜ್ಯಾಧ್ಯಕ್ಷನ ಹತ್ಯೆ ಪ್ರಕರಣದ ಆರೋಪಿಯ ಎನ್ಕೌಂಟರ್‌

ಚೆನ್ನೈ: ತಮಿಳುನಾಡು ಬಿಎಸ್ ಪಿ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್ ಕೌಂಟರನಲ್ಲಿ ಸಾಯಿಸಿದ್ದಾರೆ. ಆರ್ಮ್ ಸ್ಟ್ರಾಂಗ್ ಅವರನ್ನು ಹತ್ಯೆ ಮಾಡಲು ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆಯಲೆಂದು ಪೊಲೀಸರು ಆರೋಪಿ ಕೆ.ತಿರುವೆಂಗಡಂನೊಂದಿಗೆ ಮಾಧವರಂ ಬಳಿಯ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ … Continued

ವೀಡಿಯೊ..| ಮದುವೆಯಲ್ಲಿ ಊಟ-ತಿಂಡಿ ಕಡಿಮೆಯಾಯ್ತೆಂದು ದೊಣ್ಣೆ-ಕುರ್ಚಿಗಳಿಂದ ಹೊಡೆದಾಡಿಕೊಂಡ ವಧು-ವರನ ಕುಟುಂಬದವರು..!

ಮದುವೆಯಲ್ಲಿ ಜಗಳ, ಹೊಡೆದಾಟಗಳು ಈಗ ಹೊಸ ರೂಢಿ ಎಂಬಂತೆ ತೋರುವಷ್ಟು ನಡೆಯುತ್ತಿವೆ. ಸುದ್ದಿ ಮತ್ತು ವೈರಲ್ ವೀಡಿಯೊಗಳಲ್ಲಿ ಮದುವೆ ವೇಳೆ ಆಹಾರದ ಕೊರತೆಯಿಂದ ಹಿಡಿದು ಬಿರಿಯಾನಿಯಲ್ಲಿ ಕೋಳಿ ಮಾಂಸದ ಕೊರತೆ ವರೆಗೂ ವಿವಿಧ ಕಾರಣಗಳಿಗಾಗಿ ಜಗಳ-ವಾಗ್ವಾದ ನೋಡಬಹುದು. ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದ ಇತ್ತೀಚಿನ ಘಟನೆಯೊಂದು ಈ ತರಹದ ಪ್ರವೃತ್ತಿಗಳಿಗೆ ಹೊಸ ಸೇರ್ಪಡೆಯಾಗಿದೆ. ವಿವಾಹ ಸಮಾರಂಭದಲ್ಲಿ, … Continued

ವಿಧಾನಸಭೆ ಉಪಚುನಾವಣೆ ಫಲಿತಾಂಶ: ಬಹುತೇಕ ಆಡಳಿತ ಪಕ್ಷಕ್ಕೆ ಮಣೆ ; ಇಂಡಿಯಾ ಮೈತ್ರಿಕೂಟ 10, ಬಿಜೆಪಿ 2 ಸ್ಥಾನಗಳಲ್ಲಿ ಜಯ

ನವದೆಹಲಿ: ಜುಲೈ 10 ರಂದು ಏಳು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ಮತದಾರರು ಆಡಳಿತಾರೂಢ ಪಕ್ಷಗಳಿಗೆ ಮಣೆ ಹಾಕಿದ್ದಾರೆ. ಏಳು ರಾಜ್ಯಗಳ 13 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 10 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ ಪಕ್ಷ ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. … Continued

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಬಗ್ಗೆ ನಕಲಿ ಪೋಸ್ಟ್ : ಯೂ ಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲು

ಮುಂಬೈ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಕುರಿತು ‘ಎಕ್ಸ್‌’ನಲ್ಲಿ (ಟ್ವಿಟರ್‌) ನಕಲಿ ಸಂದೇಶವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಯೂ ಟ್ಯೂಬರ್‌ ಧ್ರುವ ರಾಠಿ ವಿರುದ್ಧ ಮಹಾರಾಷ್ಟ್ರದ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಸೈಬರ್ ಪೊಲೀಸ್ ಇಲಾಖೆಯ ಪ್ರಕಾರ, @dhruvrahtee ಹ್ಯಾಂಡಲ್ ಹೊಂದಿರುವ ಎಕ್ಸ್‌ ಖಾತೆಯಲ್ಲಿ … Continued