ಬಜೆಟ್ 2024 ರಲ್ಲಿ ‘ಏಂಜೆಲ್ ತೆರಿಗೆ’ ರದ್ದು: ʼಏಂಜೆಲ್ ತೆರಿಗೆ’ ಎಂದರೇನು..?

ನವದೆಹಲಿ : ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ದೇಶದಲ್ಲಿ ನಾವೀನ್ಯತೆಯನ್ನು ಬೆಂಬಲಿಸುವ ಪ್ರಯತ್ನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರ್ಮನ್ ಅವರು ಮಂಗಳವಾರ ʼಏಂಜೆಲ್ ತೆರಿಗೆʼಯನ್ನು ರದ್ದುಗೊಳಿಸಿದ್ದಾರೆ. “ಸ್ಟಾರ್ಟ್‌ಅಪ್‌ಗಳಲ್ಲಿನ ಎಲ್ಲಾ ವರ್ಗದ ಹೂಡಿಕೆದಾರರಿಗೆ ಸರ್ಕಾರವು ʼಏಂಜೆಲ್ ತೆರಿಗೆʼಯನ್ನು ರದ್ದುಗೊಳಿಸುತ್ತದೆ” ಎಂದು ಹಣಕಾಸು ಸಚಿವರು ಪ್ರಕಟಿಸುವ ಮೂಲಕ ಹೊಸ ವ್ಯವಹಾರಗಳನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿದರು. … Continued

ಕೇಂದ್ರ ಬಜೆಟ್‌ 2024 : ಮುದ್ರಾ ಸಾಲದ ಮಿತಿ ಎರಡು ಪಟ್ಟು ಹೆಚ್ಚಳ…ಯುವಜನತೆಗೆ ಗುಡ್‌ನ್ಯೂಸ್… ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು…

ನವದೆಹಲಿ: ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳ (ಎಂಎಸ್ಎಂಇ) ಬೆಳವಣಿಗೆಗಾಗಿ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರದ 2024-25ರ ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ದೇಶದಲ್ಲಿ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಗಾತ್ರದ ಕೈಗಾರಿಕೆಗಳ ಬೆಳವಣಿಗೆ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ … Continued

ಕೇಂದ್ರ ಬಜೆಟ್‌ 2024 : ಚಿನ್ನ-ಬೆಳ್ಳಿ, ಮೊಬೈಲ್‌ ಫೋನ್-ಚಾರ್ಜರ್‌ ಬೆಲೆ ಇಳಿಕೆ, ಹೊಸ ತೆರಿಗೆ ಪದ್ಧತಿಯಲ್ಲಿ 17,500 ರೂ. ಉಳಿತಾಯ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ ಏಳನೇ ಬಜೆಟ್‌ ಮತ್ತು ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸಿದ್ದು, ಉದ್ಯೋಗ ಸೃಷ್ಟಿ, ಯುವಕರ ಕೌಶಲ್ಯಾಭಿವೃದ್ಧಿ ಮತ್ತು ಮಧ್ಯಮ ವರ್ಗದ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ. 1 ಗಂಟೆ 40 ನಿಮಿಷಗಳ ಅವಧಿಯ ತನ್ನ ಬಜೆಟ್ ಭಾಷಣದಲ್ಲಿ, ಸೀತಾರಾಮನ್ ಹೊಸ ತೆರಿಗೆ … Continued

ಕೇಂದ್ರ ಬಜೆಟ್‌ 2024 : ಕೃಷಿ ವಲಯಕ್ಕೆ ಬಂಪರ್ ಕೊಡುಗೆ…ಕೆಲಸಕ್ಕೆ ಸೇರುವವರಿಗೆ ಗುಡ್‌ನ್ಯೂಸ್‌…ಮೊದಲ ಬಾರಿ ಉದ್ಯೋಗಿಗಳಿಗೆ ಹೆಚ್ಚುವರಿ ಪಿಎಫ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಸೇರಿದಂತೆ ಒಂಬತ್ತು ಆದ್ಯತೆಗಳ ಬಗ್ಗೆ ವಿವರಿಸಿದ್ದಾರೆ. ಮುಂದಿನ 2 ವರ್ಷಗಳಲ್ಲಿ 1 ಕೋಟಿ ರೈತರಿಗೆ ನೈಸರ್ಗಿಕ ಕೃಷಿಗೆ ನೆರವು ನೀಡಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಅವರು ತಿಳಿಸಿದ್ದಾರೆ. “ಹೆಚ್ಚಿನ … Continued

ನಾಳೆ ಕೇಂದ್ರ ಬಜೆಟ್ 2024 ಮಂಡನೆ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಿಂದ ಪ್ರಮುಖ ನಿರೀಕ್ಷೆಗಳೇನು…?

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ  23ರಂದು ಬೆಳಿಗ್ಗೆ 11 ಗಂಟೆಗೆ  ‘ಮೋದಿ 3.0’ ಸರ್ಕಾರದ ಮೊದಲ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಸತತ ಮೂರನೇ ಅವಧಿಯ ಎನ್‌ಡಿಎ ಸಮ್ಮಿಶ್ರ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳು ಮತ್ತು ಇತರ ವಿಷಯಗಳ ಜೊತೆಗೆ ಭಾರತದಲ್ಲಿ ವ್ಯಾಪಾರ-ವ್ಯವಾಹರದಲ್ಲಿನ … Continued

ಕಾಂವಡ್ ಯಾತ್ರೆ ಮಾರ್ಗದಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ: ಕಾಂವಡ್ ಯಾತ್ರೆಯ ಸಂದರ್ಭದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ. ಈ ಸಂಬಂಧ ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಜೊತೆಗೆ ಕಾಂವಡ್ ಯಾತ್ರೆ ನಡೆಯುವ ಉಳಿದ ರಾಜ್ಯಗಳಿಗೆ ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್ ಮತ್ತು ಎಸ್‌.ವಿ.ಎನ್. … Continued

ಆರ್‌ ಎಸ್‌ ಎಸ್‌ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಇದ್ದ ನಿಷೇಧ ವಾಪಸ್ : ಕಾಂಗ್ರೆಸ್ ಖಂಡನೆ

ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ದಶಕಗಳ ಹಿಂದೆ ಜಾರಿಗೊಳಿಸಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಈ ಕುರಿತು ಕಳೆದ ವಾರವೇ ಆದೇಶ ಹೊರಡಿಸಿದ್ದು, ಆರ್‍ಎಸ್‍ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಲು ಇದ್ದ ನಿಷೇಧ ಹಿಂಪಡೆಯಲಾಗಿದೆ ಎಂದು ಸರ್ಕಾರದ ಉನ್ನತ … Continued

ಮ್ಯಾನ್ಮಾರ್‌ ನಿಂದ ಭಾರತದ ಮಿಜೋರಾಂಗೆ ಅಡಕೆ ಕಳ್ಳಸಾಗಣೆ ; ಸಿಬಿಐ ತನಿಖೆಗೆ ಗುವಾಹತಿ ಹೈಕೋರ್ಟ್ ಆದೇಶ

ಐಜ್ವಾಲ್ :  ಮ್ಯಾನ್ಮಾರ್‌(ಬರ್ಮಾ)ನಿಂದ ಮಿಜೋರಾಂಗೆ ಅಡಕೆ ಕಳ್ಳಸಾಗಣೆ ನಡೆಯುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಗುವಾಹತಿ ಹೈಕೋರ್ಟ್‌ನ ಐಜ್ವಾಲ್ ಪೀಠವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ರುವಾಟ್‌ಫೆಲಾ ನು ಎಂದು ಜನಪ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತ ವನ್ರಾಮ್‌ ಚುವಾಂಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ … Continued

ಕೇರಳದಲ್ಲಿ ನಿಫಾ ಸೋಂಕಿತ ಪ್ರಕರಣ ಪತ್ತೆ

ತಿರುವನಂತಪುರಂ: ನೆರೆರಾಜ್ಯ ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ನಿಫಾ ವೈರಸ್ ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಚಾರ್ಜ್ ಪ್ರತಿಕ್ರಿಯೆ ನೀಡಿದ್ದು, 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ … Continued

ನೀಟ್‌-ಯುಜಿ ಮರುಪರೀಕ್ಷೆ ಫಲಿತಾಂಶ : ಹರಿಯಾಣದ ಕೇಂದ್ರದಲ್ಲಿ 720ಕ್ಕೆ 720 ಅಂಕ ಪಡೆದಿದ್ದ ಎಲ್ಲ 6 ಅಭ್ಯರ್ಥಿಗಳ ಕಳಪೆ ಸಾಧನೆ…!

ನವದೆಹಲಿ : ಹರಿಯಾಣದ ನೀಟ್‌ (NEET) ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು, ಕಳೆದ ತಿಂಗಳು ಅಲ್ಲಿನ ಆರು ವಿದ್ಯಾರ್ಥಿಗಳು 720 ಅಂಕಗಳಿಗೆ 720 ಅಂಕಗಳನ್ನು ಪಡೆದ ನಂತರ ದೇಶದ ಗಮನ ಸೆಳೆದಿದ್ದರು. ಆದರೆ ಸುಪ್ರೀಂ ಕೋರ್ಟ್ ಆದೇಶದ ನಂತರ ಜೂನ್ 24 ರಂದು ನಡೆದ ಮರುಪರೀಕ್ಷೆಯಲ್ಲಿ ಈ ನೀಟ್ ಪರೀಕ್ಷಾ ಕೇಂದ್ರದ ಈ ಆರು ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗೂ … Continued