19-ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಳಿಕೆ….

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಕಡಿತಗೊಳಿಸಿವೆ. ದೆಹಲಿಯಲ್ಲಿ 100 ರೂಪಾಯಿ ಸಮೀಪ ಇಳಿಕೆಯಾಗಿದೆ. ಅದೇ ಸಮಯದಲ್ಲಿ, ಇತರ ಮಹಾನಗರಗಳಲ್ಲಿ ಸುಮಾರು 93 ರೂಪಾಯಿಗಳ ಕಡಿತವನ್ನು ಮಾಡಲಾಗಿದೆ. ಈಗ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ 1680 ರೂ.ಗಳಿಗೆ ಲಭ್ಯವಿರುತ್ತದೆ, ಇದುವರೆಗೆ 1780 ರೂ.ಗಳ ದರವಿತ್ತು. ಈ … Continued

ಭೂಮಿಯ ಕಕ್ಷೆಯಿಂದ ಹೊರಟು ಚಂದ್ರನ ಕಡೆಗೆ ಪ್ರಯಾಣ ಆರಂಭಿಸಿದ ಚಂದ್ರಯಾನ-3 ಬಾಹ್ಯಾಕಾಶ ನೌಕೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಚಂದ್ರಯಾನ 3 – ಚಂದ್ರನ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಟ್ರಾನ್ಸ್‌ಲೂನಾರ್ ಕಕ್ಷೆಗೆ ಸೇರಿಸಿದೆ. “ಚಂದ್ರಯಾನ-3 ಭೂಮಿಯ ಸುತ್ತ ತನ್ನ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಚಂದ್ರನ ಕಡೆಗೆ ಹೋಗುತ್ತದೆ. ISTRAC ನಲ್ಲಿ ನಡೆಸಿದ ಯಶಸ್ವಿ ಪೆರಿಜಿ-ಫೈರಿಂಗ್, ಇಸ್ರೋ (ISRO) ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ಲೂನಾರ್ ಕಕ್ಷೆಯಲ್ಲಿ ಇಟ್ಟಿದೆ. ಚಂದ್ರಯಾನ-3 … Continued

ಥಾಣೆಯಲ್ಲಿ ಸೇತುವೆ ನಿರ್ಮಾಣಕ್ಕೆ ಬಳಸುವ ಗಿರ್ಡರ್ ಲಾಂಚರ್ ಕುಸಿದು 16 ಮಂದಿ ಸಾವು

ಮುಂಬೈ: ಥಾಣೆಯಲ್ಲಿ ಸಮೃದ್ಧಿ ಎಕ್ಸ್‌ಪ್ರೆಸ್ ಹೆದ್ದಾರಿಯ ಮೂರನೇ ಹಂತದ ನಿರ್ಮಾಣದಲ್ಲಿ ಬಳಸಲಾದ ಗಿರ್ಡರ್ ಲಾಂಚರ್ ಯಂತ್ರವು ಕುಸಿದು ಬಿದ್ದು ಕನಿಷ್ಠ 16 ಜನರು ಸಾವಿಗೀಡಾಗಿದ್ದಾರೆ ಮತ್ತು 4 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ನಸುಕಿನ ಜಾವ ಈ ಅಪಘಾತ ಸಂಭವಿಸಿದೆ. ಥಾಣೆಯ ಸರ್ಲಾಂಬೆ ಗ್ರಾಮದ ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಪಘಾತ ಸಂಭವಿಸಿದೆ. ಮೃತರ ಹೊರತಾಗಿ … Continued

ಆಗಸ್ಟ್ ತಿಂಗಳಲ್ಲಿ ಮಳೆ ಮೇಲೆ ʼಎಲ್ ನಿನೊʼ ಪರಿಣಾಮ ಬೀರಬಹುದು: ಐಎಂಡಿ

ನವದೆಹಲಿ : ಜುಲೈನಲ್ಲಿ ಅಧಿಕ ಮಳೆಯ ನಂತರ ಭಾರತವು ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಸಾಮಾನ್ಯ ಮಳೆಯನ್ನು ದಾಖಲಿಸುವ ನಿರೀಕ್ಷೆಯಿದೆ. ಎಲ್ ನಿನೋ ಮತ್ತು ಇತರ ಪ್ರತಿಕೂಲ ಪರಿಸ್ಥಿತಿಗಳು ಆಗಸ್ಟ್‌ ತಿಂಗಳಲ್ಲಿ ಮಳೆಯನ್ನು ನಿಗ್ರಹಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ. ಮಾನ್ಸೂನ್ ಋತುವಿನಲ್ಲಿ ಮಳೆಯ ಶೇಕಡ 30 ರಷ್ಟು ಮಳೆ ಆಗಸ್ಟ್ ತಿಂಗಳಲ್ಲಿ … Continued

ಹರಿಯಾಣದ ನೂಹ್‌ನಲ್ಲಿ ಧಾರ್ಮಿಕ ಮೆರವಣಿಗೆ ವೇಳೆ ಹಿಂಸಾಚಾರ, ಇಬ್ಬರು ಗೃಹರಕ್ಷಕರು ಸಾವು, 10 ಪೊಲೀಸರಿಗೆ ಗಾಯ : ಇಂಟರ್ನೆಟ್ ಸ್ಥಗಿತ

ಮೇವಾತ್‌ : ಹರಿಯಾಣದ ಮೇವಾತ್ ಪ್ರದೇಶದಲ್ಲಿ ಸೋಮವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕರು ಮೃತಪಟ್ಟಿದ್ದು, 10 ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರದಿಂದಾಗಿ ಗುರುಗ್ರಾಮ್ ಬಳಿಯ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ಸುಮಾರು 2,500 ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಪೊಲೀಸರು … Continued

5 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ವೀಕ್ಷಕರ ನೇಮಕ

ನವದೆಹಲಿ: ಕಾಂಗ್ರೆಸ್ ಹೈ ಕಮಾಂಡ್ ಸೋಮವಾರ ಚುನಾವಣೆ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಚುನಾವಣಾ ವೀಕ್ಷಕರನ್ನು ನೇಮಕ ಮಾಡಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, ರಾಜಸ್ಥಾನಕ್ಕೆ ಮಧುಸೂಧನ ಮಿಸ್ತ್ರಿ ಅವರನ್ನು ಹಿರಿಯ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೆ, ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪಕ್ಷದ ಪ್ರಧಾನ … Continued

ತನ್ನ ಕಪಾಳಕ್ಕೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಪುರಸಭೆ ಸದಸ್ಯ : ಹಾಗೆ ಮಾಡಿದ್ದಕ್ಕೆ ಕಾರಣ ನೀಡಿದ ಕೌನ್ಸಿಲರ್‌ | ವೀಕ್ಷಿಸಿ

ಅನಕಾಪಲ್ಲಿ: ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದ ಕಾರಣಕ್ಕೆ ಅನಕಾಪಲ್ಲಿ ಜಿಲ್ಲೆಯ ಕೌನ್ಸಿಲರ್‌ ಒಬ್ಬರು ಸೋಮವಾರ ಚಪ್ಪಲಿಯಿಂದ ತಮಗೆ ತಾವೇ ಕಪಾಳಮೋಕ್ಷ ಮಾಡಿಕೊಂಡ ಘಟನೆ ನಡೆದಿದೆ..! ನರಸೀಪಟ್ಟಣ ಪುರಸಭೆಯ (ವಾರ್ಡ್ 20) ಕೌನ್ಸಿಲರ್ ಮುಲಪರ್ತಿ ರಾಮರಾಜು ಅವರು ಕೌನ್ಸಿಲ್ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಈ ಕೃತ್ಯದ ವೀಡಿಯೊ ವೈರಲ್ ಆಗಿದೆ. ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿ … Continued

ಬೇರೆಡೆಯೂ ಇಂತಹ ಘಟನೆಗಳು ನಡೆದಿವೆ ಎಂದು ಮಣಿಪುರದ ಮಹಿಳೆಯರ ವಿರುದ್ಧದ ಘಟನೆ ಸಮರ್ಥಿಸಲಾಗದು: ಸುಪ್ರೀಂ ಕೋರ್ಟ್

ನವದೆಹಲಿ: ಮಣಿಪುರ ಹಿಂಸಾಚಾರ ಮತ್ತು ವೈರಲ್ ವೀಡಿಯೋ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳನ್ನು ಪ್ರಸ್ತಾಪಿಸಿದ ವಕೀಲರಾದ ಬಾನ್ಸುರಿ ಸ್ವರಾಜ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮಣಿಪುರದ ವೈರಲ್ ವೀಡಿಯೊ ಪ್ರಕರಣದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಕೋಮು ಮತ್ತು ಪಂಥೀಯ ಕಲಹಗಳಲ್ಲಿ ಮಹಿಳೆಯರ ವಿರುದ್ಧ … Continued

ನಾಯಿಯಾಗಿ ರೂಪಾಂತರಗೊಳ್ಳಲು 12 ಲಕ್ಷ ರೂ. ಖರ್ಚು ಮಾಡಿದ ಜಪಾನಿನ ವ್ಯಕ್ತಿ : ನಾಯಿಯ ರೂಪದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ | ವೀಕ್ಷಿಸಿ

ಟೊಕೊ ಎಂಬ ಜಪಾನಿನ ವ್ಯಕ್ತಿ ಕಸ್ಟಮ್-ನಿರ್ಮಿತ ಕೋಲಿ ಕಾಸ್ಟ್ಯೂಮ್‌ಗಾಗಿ $14,000 ( 12 ಲಕ್ಷ ರೂ.)ಕ್ಕಿಂತ ಹೆಚ್ಚು ಖರ್ಚು ಮಾಡಿ ತನ್ನನ್ನು ತಾನು ನಾಯಿ ಆಗಿ ಪರಿವರ್ತಿಸಿಕೊಂಡಿದ್ದಾರೆ. ಆತನಿಗಾಗಿ ನಾಯಿಯ ವಿಶೇಷ ಉಡುಪನ್ನು ತಯಾರಿಸಲು 40 ದಿನಗಳನ್ನು ತೆಗೆದುಕೊಂಡರು. ಅದು ಮನುಷ್ಯನಿಗೆ “ಪ್ರಾಣಿಯಾಗುವ” ಕನಸನ್ನು ನನಸಾಗಿಸಲು ಸಹಾಯ ಮಾಡಿದೆ. ವ್ಯಕ್ತಿ ತನ್ನ ಯು ಟ್ಯೂಬ್ ಚಾನೆಲ್‌ನಲ್ಲಿ … Continued

ಗಡಿಯಾಚೆಗಿನ ಮತ್ತೊಂದು ಪ್ರೇಮಕಥೆ : ಭಾರತದ ಫೇಸ್ಬುಕ್ ಪ್ರೇಮಿ ಮದುವೆಯಾಗಲು ಶ್ರೀಲಂಕಾದಿಂದ ಬಂದ ಯುವತಿ..

ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆಯಲ್ಲಿ, ಶ್ರೀಲಂಕಾದ ಯುವತಿಯೊಬ್ಬಳು ಆಂಧ್ರಪ್ರದೇಶದ ತನ್ನ ಆರು ವರ್ಷದಿಂದ ಫೇಸ್‌ಬುಕ್ ಸ್ನೇಹಿತನಾಗಿರುವವನನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾಳೆ. ಶ್ರೀಲಂಕಾದ 25 ವರ್ಷದ ಯುವತಿ ಶಿವಕುಮಾರಿ ವಿಘ್ನೇಶ್ವರಿ ಜುಲೈ 20 ರಂದು ವಿ ಕೋಟಾದ ದೇವಸ್ಥಾನದಲ್ಲಿ ತನ್ನ ಫೇಸ್‌ಬುಕ್ ಸ್ನೇಹಿತ ಲಕ್ಷ್ಮಣ (28) ರೊಂದಿಗೆ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ. 2017 ರಲ್ಲಿ ಫೇಸ್‌ಬುಕ್‌ನಲ್ಲಿ ಮೊದಲ ಬಾರಿಗೆ … Continued