ಚಂದ್ರಯಾನ-3 ಉಡಾವಣೆ ಯಶಸ್ವಿ : 40 ದಿನಗಳಲ್ಲಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆ

ಶ್ರೀಹರಿಕೋಟಾ: ಇಡೀ ರಾಷ್ಟ್ರದ ಭರವಸೆಯನ್ನು ಹೊತ್ತು ಭಾರತದ ಚಂದ್ರಯಾನ-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿತು. ಈ ಕಾರ್ಯಾಚರಣೆಯು ಪೂರ್ಣ ಯಶಸ್ವಿಯಾದರೆ, ರಷ್ಯಾ, ಅಮೆರಿಕ ಮತ್ತು ಚೀನಾದ ನಂತರ ಭಾರತವು ಚಂದ್ರನ ಮೇಲೆ ಯಶಸ್ವಿಯಾಗಿ ನಿಯಂತ್ರಿತ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿದೆ. ಎಲ್ಲವೂ ಉತ್ತಮವಾಗಿ ಕಾಣುತ್ತದೆ ಮತ್ತು C-25 ಕ್ರಯೋಜೆನಿಕ್ ಎಂಜಿನ್ 900 ಸೆಕೆಂಡುಗಳ ನಂತರ ಸೆಕೆಂಡಿಗೆ 9.29 … Continued

ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಫ್ರಾನ್ಸ್‌ ದೇಶದ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ನೆಪೋಲಿಯನ್ ಬೋನಪಾರ್ಟೆ ಅವರು ಐದು ಪದವಿ ಒಳಗೊಂಡಿರುವ ಲೀಜನ್ ಆಫ್ ಆನರ್ ಸ್ಥಾಪಿಸಿದರು, ಅದರಲ್ಲಿ ಭಾರತೀಯ … Continued

ವಂಚನೆ ಪ್ರಕರಣ : ಗುಜರಾತ್‌ನ ಮಾಜಿ ಸಚಿವ ವಿಪುಲ್ ಚೌಧರಿಗೆ 7 ವರ್ಷ ಜೈಲು ಶಿಕ್ಷೆ

ಅಹಮದಾಬಾದ್: ವಂಚನೆ ಪ್ರಕರಣದಲ್ಲಿ ಗುಜರಾತ್‌ನ ಮಾಜಿ ಸಚಿವ ಮತ್ತು ದೂಧಸಾಗರ್ ಡೈರಿಯ ಮಾಜಿ ಅಧ್ಯಕ್ಷ ವಿಪುಲ್ ಚೌಧರಿ ಅವರಿಗೆ ಗುಜರಾತ್‌ನ ನ್ಯಾಯಾಲಯವು ಗುರುವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.. ಚೌಧರಿ ಅವರು 2014ರಲ್ಲಿ ಮಹಾರಾಷ್ಟ್ರಕ್ಕೆ ಸರಿಯಾದ ವಿಧಾನಗಳನ್ನು ಅನುಸರಿಸದೆ ಜಾನುವಾರುಗಳ ಆಹಾರವನ್ನು ಪೂರೈಸುವ ಮೂಲಕ ಹೈನುಗಾರಿಕೆಗೆ 22.5 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ … Continued

ವ್ಯಕ್ತಿಯ ಆಕ್ಷೇಪಾರ್ಹ ಫೋಟೋ ಲೀಕ್‌ ಮಾಡಿದ ಆನ್‌ಲೈನ್‌ ಸಾಲ ನೀಡುವ ಕಂಪನಿ : ಹೆಂಡತಿ, ಮಕ್ಕಳೊಂದಿಗೆ ವ್ಯಕ್ತಿ ಆತ್ಮಹತ್ಯೆ

ಭೋಪಾಲ್: ಸಾಲದ ಆ್ಯಪ್ ಕಂಪನಿಯೊಂದು 17 ಲಕ್ಷ ರೂಪಾಯಿ ಪಾವತಿಸುವಂತೆ ಕುಟುಂಬಕ್ಕೆ ಒತ್ತಡ ಹೇರಿದ್ದರಿಂದ ಹಾಗೂ ಆ ವ್ಯಕ್ತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆದುಕೊಂಡು ಆತನ ಸಂಪರ್ಕ ಲಿಸ್ಟ್‌ಗೆ ಆಕ್ಷೇಪಾರ್ಹ ಫೋಟೋವನ್ನು ಸೋರಿಕೆ ಮಾಡಿದ ನಂತರ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಭೋಪಾಲ್‌ನಲ್ಲಿ ನಡೆದಿದೆ. 38 ವರ್ಷದ ವ್ಯಕ್ತಿ ಮತ್ತು … Continued

ತಮ್ಮ ಮೊದಲ ಟೆಸ್ಟ್‌ ಪಂದ್ಯದಲ್ಲೇ ವೆಸ್ಟ್‌ ಇಂಡೀಸ್‌ ವಿರುದ್ಧ ಶತಕ ಸಿಡಿಸಿದ ಭಾರತದ ಯಶಸ್ವಿ ಜೈಸ್ವಾಲ್: ಈ ಸಾಧನೆ ಮಾಡಿದ 17ನೇ ಭಾರತೀಯ

ನವದೆಹಲಿ: ಗುರುವಾರ (ಜುಲೈ 13), ಭಾರತದ ಆರಂಭಿಕ ಬ್ಯಾಟರ್‌ ಆಗಿ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ ಅವರು ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 17ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೆಸ್ಟ್‌ ಇಂಡೀಸ್‌ನ ಅಲ್ಪ 150 ರನ್‌ಗಳಿಗೆ ಉತ್ತರವಾಗಿ ಭಾರತ ಡೊಮಿನಿಕಾದಲ್ಲಿ ನಡೆಯುತ್ತಿರುವ ಡೆಸ್ಟ್‌ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 80 … Continued

ಸಂಸಾರದಲ್ಲಿ ಹುಳಿ ಹಿಂಡಿದ ಟೊಮೆಟೊ..: ಹೆಂಡತಿ ಕೇಳದೆ ಅಡುಗೆಗೆ ಎರಡೇ ಎರಡು ಟೊಮೆಟೊ ಬಳಸಿ ತಪ್ಪು ಮಾಡಿದ ಗಂಡ ; ಮನೆಯನ್ನೇ ಬಿಟ್ಟು ಹೋದಳು ಪತ್ನಿ..!

ಟೊಮೆಟೊ ಬೆಲೆ ಏರಿಕೆಯಿಂದ ಹಲವರ ಜೇಬಿಗೆ ಕತ್ತರಿ ಬಿದ್ದಿದೆ. ಹೆಚ್ಚಿನ ಬೆಲೆಗಳು ಗ್ರಾಹಕರ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ರೆಸ್ಟೋರೆಂಟ್‌ಗಳು, ಆಹಾರ ತಯಾರಕರು ಮತ್ತು ಅದನ್ನು ಹೆಚ್ಚು ಅವಲಂಬಿಸಿರುವ ಇತರ ವ್ಯವಹಾರಗಳಿಗೆ ಸವಾಲುಗಳನ್ನು ಒಡ್ಡಿದೆ. ಆದರೆ ಇದೇ ಟೊಮೆಟೊಗೆ ಸಂಬಂಧಿಸಿದ ವಿಲಕ್ಷಣ ಘಟನೆ ನಡೆದಿರುವುದು ವರದಿಯಾಗಿದೆ. ಮಧ್ಯಪ್ರದೇಶದ ಶಹದೋಲ್‌ನಲ್ಲಿ ಮಹಿಳೆಯೊಬ್ಬಳು ಇದೇ ಟೊಮೆಟೊ ಕಾರಣಕ್ಕೆ ತನ್ನ … Continued

ಸೀಮಾ ಹೈದರ್ ಪಾಕಿಸ್ತಾನಕ್ಕೆ ಹಿಂತಿರುಗದಿದ್ರೆ 26/11 ಮುಂಬೈ ರೀತಿಯ ಭಯೋತ್ಪಾದಕ ದಾಳಿ ಮಾಡ್ತೇವೆ : ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

ಮುಂಬೈ : ಪಬ್‌ ಜಿ ಪ್ರೇಮಿಯೊಂದಿಗೆ ಇರಲು ಭಾರತಕ್ಕೆ ಅಕ್ರಮವಾಗಿ ಬಂದಿರುವ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‌ ತನ್ನ ದೇಶಕ್ಕೆ ಹಿಂತಿರುಗದಿದ್ದರೆ 26/11 ಮುಂಬೈ ಭಯೋತ್ಪಾದಕ ದಾಳಿ ಮಾದರಿಯಲ್ಲೇ ದಾಳಿ ನಡೆಸುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದೆ. ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಂದ ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ … Continued

ಮಸಾಲಾ ದೋಸೆಯೊಂದಿಗೆ ಸಾಂಬಾರ್ ಕೊಡಲಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಗ್ರಾಹಕ : ರೆಸ್ಟೊರೆಂಟಿಗೆ ಶಾಕ್‌ ಕೊಟ್ಟ ತೀರ್ಪು

ಸಾಂಬಾರ್ ಮತ್ತು ಚಟ್ನಿಯನ್ನು ದೋಸೆ ನೀಡುವುದು ಒಂದು ರೀತಿಯ ರೂಢಿಯಾಗಿದೆ. ಆದರೆ ಬಿಹಾರದ ಬಕ್ಸಾರ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ 140 ರೂ. ಬೆಲೆಯ ಸ್ಪೆಷಲ್ ಮಸಾಲಾ ದೋಸೆಯೊಂದಿಗೆ ಸಾಂಬಾರ್ ನೀಡುವ ಬದಲು ಸೂಪ್‌ ಕೊಟ್ಟ ತಪ್ಪಿಗೆ ರೆಸ್ಟೊರೆಂಟ್ ಈಗ 3,500 ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗಿದೆ…! ಗ್ರಾಹಕರು ರೆಸ್ಟೋರೆಂಟ್‌ ಅನ್ನು ನ್ಯಾಯಾಲಯಕ್ಕೆ ಎಳೆದ ನಂತರ ರೆಸ್ಟೋರೆಂಟ್‌ಗೆ 3,500 ರೂ. ದಂಡ … Continued

ಚಂದ್ರಯಾನ 3 ಉಡಾವಣೆಗೂ ಮುನ್ನ ಅದರ ಪ್ರತಿಕೃತಿಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳು

ಚಂದ್ರಯಾನ-3 ಉಡಾವಣೆಗೆ ಮುಂಚಿತವಾಗಿ ದೈವಿಕ ಆಶೀರ್ವಾದ ಪಡೆಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ತಂಡವು ಜುಲೈ 13ರ ಗುರುವಾರ ಬೆಳಿಗ್ಗೆ ತಿರುಪತಿ ವೆಂಕಟಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿತು. ತಮ್ಮೊಂದಿಗೆ ಬಾಹ್ಯಾಕಾಶ ನೌಕೆಯ ಚಿಕಣಿ ಮಾದರಿಯನ್ನು ಹೊತ್ತುಕೊಂಡು ಬಂದಿದ್ದ ತಂಡವು ಯಶಸ್ವಿ ಕಾರ್ಯಾಚರಣೆಗಾಗಿ ತಿರುಪತಿ ದೇವಾಲಯಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿತು. ಸುಮಾರು ಎಂಟು ವಿಜ್ಞಾನಿಗಳ … Continued

ಪ್ರತಿಭಟನೆ ವೇಳೆ ಲಾಠಿ ಚಾರ್ಜ್‌ : ಬಿಜೆಪಿ ನಾಯಕ ಸಾವು, ಹಲವರಿಗೆ ಗಾಯ

ಪಾಟ್ನಾ: ರಾಜ್ಯದಲ್ಲಿ ಶಿಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪಾಟ್ನಾ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದ ಬಿಜೆಪಿ ನಾಯಕರೊಬ್ಬರು ಸಾವಿಗೀಡಾಗಿದ್ದಾರೆ. ವಿವರಗಳ ಪ್ರಕಾರ, ಬಿಜೆಪಿ ಮುಖಂಡ ವಿಜಯಕುಮಾರ ಸಿಂಗ್ ಎಂದು ಗುರುತಿಸಲಾಗಿದ್ದು, ನಗರದ ದಕ್ಬಂಗ್ಲಾ ಚೌರಾಹಾದಲ್ಲಿ ಪ್ರತಿಭಟನೆ ವೇಳೆ ಸಾವಿಗೀಡಾಗಿದ್ದಾರೆ. ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು … Continued