ಮದುವೆಯ ನಂತರ ಮಾವ ವಿಧಿಸಿದ ಷರತ್ತಿಗೆ ದಂಗಾಗಿ ಮದುಮಗಳನ್ನೇ ಬಿಟ್ಟು ಹೋದ ವರ…!

ಝಾನ್ಸಿ: ಮದುವೆಯ ನಂತರ ವಧುವಿನ ತಂದೆ ವಿಧಿಸಿದ ಮೂರು ಷರತ್ತಿನಿಂದಾಗಿ ವಿಧಿವತ್ತಾಗಿ ನಡೆದ ಮದುವೆಯೇ ಮುರಿದುಬಿದ್ದಿದೆ…! ವಧುವನ್ನು ಗಂಡನ ಮನೆಗೆ ಕಳುಹಿಸುವ ಸಂದರ್ಭದಲ್ಲಿ ವಧುವಿನ ತಂದೆ ಮೂರು ಷರತ್ತುಗಳನ್ನು ವಿಧಿಸಿದ್ದು ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಯ್ತು.. ಈ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಈ ಷರತ್ತುಗಳನ್ನು ಕೇಳಿ ಮದುಮಗನಷ್ಟೇ ಅಲ್ಲ, ಆತನ ಕುಟುಂಬದವರು ಹಾಗೂ … Continued

ತಮ್ಮ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ಕುಸ್ತಿಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸ್ತಾರೆ: ಸಾಕ್ಷಿ ಮಲಿಕ್

ನವದೆಹಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆ ಉಲ್ಲೇಖಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿದ ನಂತರವೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವುದಾಗಿ ಕುಸ್ತಿಪಟು ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳು ಶನಿವಾರ ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ನಾವು ಏಷ್ಯನ್ ಗೇಮ್ಸ್‌ನಲ್ಲಿ … Continued

ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ಉಪಾಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಲಾಗಿದೆ. ಶರದ್ ಪವಾರ್ ಅವರು 1999 ರಲ್ಲಿ ಪಿ.ಎ. ಸಂಗ್ಮಾ ಅವರ ಜೊತೆ ಸೇರಿ ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದಲ್ಲಿ ಈ ಘೋಷಣೆ ಮಾಡಲಾಯಿತು. ಸುಪ್ರಿಯಾ ಸುಳೆ … Continued

ಪಾಕ್​​ ಏರ್​ಲೈನ್ಸ್​ ಚಿಹ್ನೆ ಇರುವ ವಿಮಾನ ಆಕಾರದ ಬಲೂನ್ ಕಾಶ್ಮೀರದ ಕಥುವಾದಲ್ಲಿ ಪತ್ತೆ…!

ನವದೆಹಲಿ: ಶನಿವಾರ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಪಿಐಎ (ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್) ಲಾಂಛನವನ್ನು ಬರೆದಿರುವ ವಿಮಾನದ ಆಕಾರದ ಬಲೂನ್ ಪತ್ತೆಯಾಗಿದೆ. ಕಪ್ಪು ಬಿಳುಪು ಬಣ್ಣದ ನಿಗೂಢ ಬಲೂನ್ ಕಥುವಾ ಜಿಲ್ಲೆಯ ಹೀರಾನಗರದಲ್ಲಿ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಭದ್ರತಾ ಪಡೆಗಳು ಬಲೂನ್ ಅನ್ನು ವಶಪಡಿಸಿಕೊಂಡಿದ್ದು, ಬಲೂನ್ ಎಲ್ಲಿಂದ ಬಂದವು ಎಂದು ತನಿಖೆ ಮಾಡಲು … Continued

ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೋರ್‌ ಜಾಯ್‌ ಚಂಡಮಾರುತ : ಕರ್ನಾಟಕ ಸೇರಿ 3 ರಾಜ್ಯಗಳಿಗೆ ಮುನ್ನೆಚ್ಚರಿಕೆ

ನವದೆಹಲಿ: ಬಿಪೋರ್‌ಜೋಯ್‌ ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ. ಚಂಡಮಾರುತ ಪರಿಣಾಮ ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಚಂಡಮಾರುತವು ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನಿಂದ ಪಶ್ಚಿಮ-ನೈಋತ್ಯಕ್ಕೆ 640 ಕಿಮೀ … Continued

₹5,551 ಕೋಟಿ ಫೆಮಾ ಉಲ್ಲಂಘನೆಗಾಗಿ ಶಿಯೋಮಿ ಇಂಡಿಯಾದ ಉನ್ನತ ಅಧಿಕಾರಿಗಳು, 3 ಬ್ಯಾಂಕ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಇ.ಡಿ.

ನವದೆಹಲಿ: ₹ 5,551 ಕೋಟಿಯ ಫೆಮಾ ಉಲ್ಲಂಘನೆಗಾಗಿ ಜಾರಿ ನಿರ್ದೇಶನಾಲಯವು ಶಿಯೋಮಿ (Xiaomi) ಟೆಕ್ನಾಲಜಿ ಇಂಡಿಯಾ, ಅದರ ಸಿಎಫ್‌ಒ ಸಮೀರ್ ರಾವ್, ಅದರ ಮಾಜಿ ಎಂಡಿ ಮನು ಜೈನ್ ಮತ್ತು 3 ಬ್ಯಾಂಕ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಕಂಪನಿಯು ₹ 5551.27 ಕೋಟಿ ಮೊತ್ತದ ಅಕ್ರಮ ಹಣ ರವಾನೆಗೆ ಸಂಬಂಧಿಸಿದಂತೆ ನೋಟಿಸ್ … Continued

2000 ನೋಟುಗಳ ವಿನಿಮಯ: ಆರ್‌ಬಿಐ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಯಾವುದೇ ರಿಕ್ವಿಸಿಷನ್ ಸ್ಲಿಪ್ ಮತ್ತು ಐಡಿ ಪುರಾವೆ ಇಲ್ಲದೆ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರ ರಜಾಕಾಲದ ಪೀಠವು ನೋಂದಾವಣೆ ಸಲ್ಲಿಸಿದ ವರದಿಯನ್ನು ಪರಿಶೀಲಿಸಿತು ಮತ್ತು ಈ ವಿಷಯದಲ್ಲಿ … Continued

11 ವಿಧದ ವಿಷಯಗಳನ್ನು ನಿಷೇಧಿಸಲಿರುವ ಡಿಜಿಟಲ್ ಇಂಡಿಯಾ ಬಿಲ್: ಸಚಿವ ರಾಜೀವ ಚಂದ್ರಶೇಖರ

ನವದೆಹಲಿ: ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ ಚಂದ್ರಶೇಖರ ಅವರು ಹೊಸ ಡಿಜಿಟಲ್‌ ಶಾಸನದ ಯೋಜನೆಗಳ ಬಗ್ಗೆ ಹೇಳಿದ್ದಾರೆ, ಇದು ಇಂಟರ್ನೆಟ್ ಅನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಮತ್ತು ದೇಶದಲ್ಲಿ ಹೊಸ ಸೈಬರ್ ಅಪರಾಧಗಳ ಮೇಲೆ ನಿಯಂತ್ರಣದ ಗುರಿಯನ್ನು ಹೊಂದಿದೆ. ಡಿಜಿಟಲ್ ಇಂಡಿಯಾ ಮಸೂದೆಯ ಕುರಿತು ಈ ತಿಂಗಳು ಸಮಾಲೋಚನೆಗಳು ಪ್ರಾರಂಭವಾಗಲಿದ್ದು, ಹೊಸ … Continued

‘ಮೂಢನಂಬಿಕೆ’ …: ಒಡಿಶಾದ ರೈಲು ಅಪಘಾತದಲ್ಲಿ ಮೃತಪಟ್ಟವರ ಶವ ಇಟ್ಟ ಶಾಲಾ ಕಟ್ಟಡ ನೆಲಸಮ ಮಾಡುತ್ತಿರುವ ಆಡಳಿತ….!

ಕಳೆದ ವಾರ ಒಡಿಶಾದ ಬಾಲಸೋರ್‌ನ ಬಹನಾಗಾದಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಇರಿಸಲಾಗಿದ್ದ ಶಾಲಾ ಕಟ್ಟಡವನ್ನು ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳು ಕೆಡವಲು ಪ್ರಾರಂಭಿಸಿದ್ದಾರೆ. ಇದು ತಾತ್ಕಾಲಿಕ ಶವಾಗಾರವಾಗಿ ಕಾರ್ಯನಿರ್ವಹಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಶಾಲಾ ಕಟ್ಟಡವನ್ನು ಕೆಡಹುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಬಹನಾಗಾ ಹೈಸ್ಕೂಲ್‌ನಿಂದ ಸುಮಾರು 100 ಮೀಟರ್ ದೂರದಲ್ಲಿ ಚೆನ್ನೈಗೆ … Continued

ವಾಟ್ಸಾಪ್‌ನಲ್ಲಿ ಶರದ್ ಪವಾರ್‌ಗೆ ಬೆದರಿಕೆ : ಗೃಹ ಸಚಿವರ ಮಧ್ಯಸ್ಥಿಕೆ ಕೋರಿದ ಸಂಸದೆ ಸುಪ್ರಿಯಾ ಸುಳೆ

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಅವರು ಗುರುವಾರ ತಮ್ಮ ವಾಟ್ಸಾಪ್‌ನಲ್ಲಿ ತಮ್ಮ ತಂದೆ ಶರದ್ ಪವಾರ್‌ಗೆ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಿದ್ದಾರೆ. ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ನೇತೃತ್ವದ ಎನ್‌ಸಿಪಿ ಕಾರ್ಯಕರ್ತರ ನಿಯೋಗ ಮುಂಬೈ ಪೊಲೀಸ್ ಮುಖ್ಯಸ್ಥ ವಿವೇಕ ಫನ್ಸಾಲ್ಕರ ಅವರನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಿದೆ. … Continued